Asianet Suvarna News Asianet Suvarna News

ಫಾರ್ಮುಲಾ 1 ಕಾರಿಗಿಂತ ವೇಗ- ಮಹೀಂದ್ರ ಹೈಪರ್ ಕಾರು ಅನಾವರಣ!

ಫಾರ್ಮುಲಾ 1 ರೇಸ್ ಕಾರಿಗಿಂತ ವೇಗ ಹೊಂದಿರುವ ನೂತನ ಫಿನನ್‌ಫರಿನಾ ಬ್ಯಾಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರು ಅನಾವರಣ ಮಾಡಲಾಗಿದೆ. ಇಟಲಿ ಮೂಲದ ಪಿನನ್‌ಫರಿನಾ ಕಂಪನಿ ಮಹೀಂದ್ರ ಒಡೆತನದಲ್ಲಿದೆ. ಮಹೀಂದ್ರ ಮುತುವರ್ಜಿ ವಹಿಸಿ ಬಿಡುಗಡೆ ಮಾಡಿರುವು ಈ ಕಾರಿನ ವಿಶೇಷತೆ ಇಲ್ಲಿದೆ.

Mahindra owned Pinanfarina unveils battista electric hyper car in Geneva motor show
Author
Bengaluru, First Published Mar 6, 2019, 2:40 PM IST

ಜಿನೆವಾ(ಮಾ.06): ಭಾರತದ ಮಹೀಂದ್ರ ಕಂಪನಿ ಮಾಲೀಕತ್ವದ ಪಿನಿನ್‌ಫರಿನಾ ಕಂಪನಿ ನೂತನ ಬ್ಯಾಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರು ಅನಾವಣ ಮಾಡಿದೆ. ಇಟಲಿ ಮೂಲದ ಪಿನಿನ್‌ಫರಿನಾ ಅನಾವರಣ ಮಾಡಿರುವ ಈ ನೂತನ ಕಾರು ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗ ಹಾಗೂ ಅತ್ಯಂತ ಬಲಿಷ್ಠ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Mahindra owned Pinanfarina unveils battista electric hyper car in Geneva motor show

ಇದನ್ನೂ ಓದಿ: ಸಾವಿರಾರು ವಾಹನಗಳು ಗುಜರಿಗೆ!: ಯಾಕೆ? ಯಾವ ವಾಹನಗಳು ಇಲ್ಲಿದೆ ಮಾಹಿತಿ!

ಜಿನೆವಾ ಮೋಟಾರ್ ಶೋನಲ್ಲಿ ಪಿನಿನ್‌ಫರಿನಾ ಕಂಪೆನಿ ಬ್ಯಾಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರು ಬಿಡುಗಡೆ ಮಾಡಿದೆ. ಫಾರ್ಮುಲಾ 1 ರೇಸ್ ಕಾರಿನ ಗರಿಷ್ಠ ವೇಗ 402 ಕಿ.ಮೀ. ಆದರೆ ಪಿನಿನ್‌ಫರಿನಾ  ಬ್ಯಾಟಿಸ್ಟಾ ಕಾರಿನ ಗರಿಷ್ಠ ವೇಗ 483Kmph ಎಂದು ಕಂಪನಿ ಹೇಳಿಕೊಂಡಿದೆ.

Mahindra owned Pinanfarina unveils battista electric hyper car in Geneva motor show

ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಹೊಂದಿರುವ ಬ್ಯಾಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರು ಹೊಸ ಕ್ರಾಂತಿ ಮಾಡಲಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ವಿಶೇಷತೆ ಕುರಿತು ಮಾಲೀಕ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. 

 

 

ಇದನ್ನೂ ಓದಿ: ಏರ್ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗೆ ಚೆಕ್ ವಿತರಿಸಿದ ಗೃಹ ಸಚಿವ!

ಉತ್ತರ ಅಮೆರಿಕಾ, ಯುರೋಪ್, ಮಿಡಲ್ ಈಸ್ಟ್, ಏಷ್ಯಾ ಸೇರಿದಂತೆ ಪ್ರಮುಖ ದೇಶಗಳಲ್ಲಿ ಪಿನನ್‌ಫರಿನಾ ಲಭ್ಯವಿದೆ. ಸದ್ಯ 150 ಕಾರು ಬ್ಯಾಟಿಸ್ಟಾ ಕಾರು ಉತ್ಪಾದನೆ ಮಾಡಲಾಗಿದೆ. 2015ರಲ್ಲಿ ಮಹೀಂದ್ರ ಮೋಟಾರ್ಸ್,  ಇಟಲಿ ಮೂಲದ ಪಿನನ್‌ಫರಿನಾ ಕಂಪನಿಯನ್ನ ಖರೀದಿಸಿತು. ಸರಿಸುಮಾರು 400 ಕೋಟಿ ರೂಪಾಯಿ ನೀಡಿ ಫಿನನ್‌ಫರಿನಾ ಕಂಪನಿಯನ್ನು ಮಹೀಂದ್ರ ತೆಕ್ಕೆಗೆ ತೆಗೆದುಕೊಂಡಿದೆ.

Follow Us:
Download App:
  • android
  • ios