ಮುಂಬೈ(ಅ.07): ಮಹೀಂದ್ರ ಮೋಟಾರ್ಸ್ ಮುಖ್ಯಸ್ಥ ಆನಂದ್ ಮಹೀಂದ್ರ ಇದೀಗ ನೂತನ TUV 300 ಪ್ಲಸ್ ಕಾರನ್ನ ತಮ್ಮ ಕಾರು ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ. ಈ ನೂತನ ಕಾರಿನ ಮುಂದೆ ಫೋಟೋ ತೆಗೆದು ಟ್ವಿಟರ್‌ನಲ್ಲಿ ಅಪ್‌ಲೋಡ್ ಕೂಡ ಮಾಡಿದ್ದಾರೆ.

ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದೇ ತಡ, ಹಲವರು ತಮ್ಮ ಕುತೂಹಲವನ್ನ ಕೇಳಿದ್ದಾರೆ. ಆದರೆ ಹೀಗೆ ಬಂದ ಪ್ರಶ್ನೆಗಳಿಗೆ ಆನಂದ್ ಮಹೀಂದ್ರ ತಕ್ಕ ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದಾರೆ.

 

 

ಆನಂದ್ ಮಹೀಂದ್ರ ತಮ್ಮ ಒಡಾಟಕ್ಕೆ ಆಡಿ, ಬೆಂಟ್ಲಿ ಅಥವಾ ಬೆಂಝ್ ಕಾರು ಬಳಸುತ್ತಿದ್ದಾರೆ ಅಂದುಕೊಂಡೆ ಎಂದು ಒರ್ವ ಟ್ವೀಟ್ ಮಾಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್, ತಾನು ಮಹೀಂದ್ರ ಕಾರು ಹೊರತು ಪಡಿಸಿ ಇತರ ಯಾವುದೇ ಕಾರು ಬಳಸಿಲ್ಲ ಎಂದಿದ್ದರು.

 

 

ಅಷ್ಟಕ್ಕೆ ಸುಮ್ಮನಾಗದ ಕೆಲವರು ನಿಮ್ಮ ಫೋಟೋ ಪಕ್ಕದಲ್ಲಿ ಫೋಕ್ಸ್‌‍ವ್ಯಾಗನ್ ಕಾರು ನಿಂತಿದೆ. ಅದು ಯಾರದು ಎಂದಿದ್ದಾರೆ. ಈ ಪ್ರಶ್ನೆಗೆ ಆನಂದ್ ಮಹೀಂದ್ರ ತಕ್ಕ ತಿರುಗೇಟು ನೀಡಿದ್ದಾರೆ. ರಸ್ತೆ ನನ್ನ ತಂದೆಯದ್ದಲ್ಲ ಅನ್ನೋ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಾಹೀರಾತು ಡೈಲಾಗ್ ಹೇಳಿದ್ದಾರೆ.

 

 

ರಸ್ತೆ ನನ್ನ ತಂದೆಯದ್ದಲ್ಲ ಅನ್ನೋ ಪ್ರತಿಕ್ರಿಯೆ ಮೂಲಕ ಪರೋಕ್ಷವಾಗಿ ಉತ್ತರ ಹೇಳಿದ್ದಾರೆ. ಆನಂದ್ ಮಹೀಂದ್ರ ಟ್ವೀಟ್ ಟ್ರೆಂಡ್ ಆಗುತ್ತಿದ್ದಂತೆ, ಪ್ರಶ್ನೆ ಕೇಳಿದಾದ ಟ್ವೀಟ್ ಡೀಲೀಟ್ ಮಾಡಿದ್ದಾನೆ.