ಗ್ರಹಗಳಲ್ಲಿ ಪ್ರಭಾವಶಾಲಿಯಾದ ಸೂರ್ಯನು ಜನವರಿ 15 ರಂದು ರಾತ್ರಿ 7.52ರ ಸಮಯಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಜನವರಿ 14 ಮದ್ಯಾಹ್ನ 1.25 ರಿಂದ ಜನವರಿ 15 ರಂದು ಬೆಳಿಗ್ಗೆ 11.52ರವರೆಗೆ ಮಕರ ಸಂಕ್ರಾಂತಿಯ ಶುಭ ಮುಹೂರ್ತವಾಗಿ ಆಚರಿಸಲಾಗುತ್ತದೆ. 

ಉತ್ತರಾಯಣದ ಸಂಕ್ರಮಣ ಕಾಲ ಸಂಕ್ರಾಂತಿ

- ಈ ದಿನ ದಾನ ಮಾಡಿದರೆ ನೂರು ಪಟ್ಟು ಹೆಚ್ಚು ಪ್ರತಿಫಲ ಸಿಗುತ್ತದೆ. ಈ ದಿನ ಸೂರ್ಯನ ಉತ್ತರಾಯಣ ಆರಂಭವಾಗುತ್ತದೆ. ಮಕರ ಸಂಕ್ರಾಂತಿ ದಿನ ಎಳ್ಳನ್ನು ದಾನವಾಗಿ ನೀಡಿದರೆ ಅಥವಾ ಎಳ್ಳಿನಿಂದ ತಯಾರಿಸಿದ ತಿಂಡಿಯನ್ನು ಸೇವಿಸುವುದು ಉತ್ತಮ. ಇದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಸಂಕ್ರಾಂತಿ ದಿನ ಎಳ್ಳು ತಿನ್ನುವುದರ ಹಿಂದೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ. 

- ಶಾಸ್ತ್ರಗಳ ಅನುಸಾರ ಮಕರ ಸಂಕ್ರಾಂತಿ ದಿನ ಸೂರ್ಯ ದೇವ ಧನು ರಾಶಿಯಿಂದ ಮಕರ ರಾಶಿ ಪ್ರವೇಶಿಸುತ್ತಾನೆ. ಶನಿ ಮಕರ ರಾಶಿಯ ದೇವನಾಗಿರುತ್ತಾನೆ. ಶನಿ ಸೂರ್ಯನ ಮಗನಾಗಿದ್ದರೂ ತಂದೆಯೊಂದಿಗೆ ಶತ್ರುತ್ವ ಹೊಂದಿರುತ್ತಾನೆ. ಆದುದರಿಂದ ಶನಿ ಸೂರ್ಯನಿಗೆ ಯಾವುದೇ ರೀತಿ ಕಷ್ಟ ಕೊಡಬಾರದು ಎಂದು ಈ ದಿನ ಎಳ್ಳು ದಾನ ಮಾಡಲಾಗುತ್ತದೆ. 

- ವೈಜ್ಞಾನಿಕವಾಗಿ ನೋಡಿದರೆ ಎಳ್ಳು ಸೇವನೆ ಮಾಡಿದರೆ ಶರೀರ ಬಿಸಿಯಾಗಿರುತ್ತದೆ. ಜೊತೆಗೆ ಇದರ ಎಣ್ಣೆಯಿಂದ ದೇಹಕ್ಕೆ ತೇವಾಂಶ ಸಿಗುತ್ತದೆ. ಚಳಿಗಾಲದಲ್ಲಿ ದೇಹದ ತಾಪಮಾನ ಇಳಿಯುತ್ತದೆ. ಈ ಸಮಯದಲ್ಲಿ ವಾತಾವರಣದೊಂದಿಗೆ ದೇಹದ ಸಮತೋಲನ ಕಾಯ್ದುಕೊಳ್ಳಲು ಎಳ್ಳು ತಿನ್ನುವುದು ಒಳ್ಳೆಯದು. ಎಳ್ಳಿನಲ್ಲಿ ಸತು, ಮೆಗ್ನಿಷಿಯಂ, ಕಬ್ಬಿಣಾಂಶ, ಮ್ಯಾಂಗನೀಸ್, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಬಿ1 ಮೊದಲಾದ ಪೌಷ್ಟಿಕಾಂಶಗಳಿವೆ. ಆದುದರಿಂದ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

ಸಂಕ್ರಾಂತಿ: ಎಳ್ಳು ಬೆಲ್ಲ ಮಾಡುವುದು ಹೇಗೆ?