ಹಬ್ಬ ಮತ್ತು ಖುಷಿ ಸಂದರ್ಭದಲ್ಲಿ ಸ್ನೇಹಿತರಿಗೆ ಉಡುಗೊರೆ ನೀಡುವುದು ಒಂದು ಸಂಪ್ರದಾಯ. ಆದರೆ ಯಾವ ಗಿಫ್ಟ್ ನೀಡುವುದು ಎಂಬ ಯೋಚನೆ ತಲೆಯಲ್ಲಿ ಇದ್ದೇ ಇರುತ್ತದೆ. ವಾಸ್ತು ಪ್ರಕಾರ ವೈಜ್ಞಾನಿಕ ಆಧಾರದ ಮೇಲೆ ಕೆಲವು ವಸ್ತುಗಳು ಉತ್ತಮ ಎಂದು ಹೇಳಲಾಗುತ್ತದೆ. ಆ ವಸ್ತುಗಳಲ್ಲಿ ಪಾಸಿಟಿವ್ ಶಕ್ತಿಯೂ ಇರುತ್ತದೆ. ಅಂಥ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಶುಭ. 
  
ಆನೆ ಮೂರ್ತಿ

ಆನೆಯ ಆಯುಷ್ಯ ಹೆಚ್ಚು. ಅದು ಯಾವಾಗಲೂ ಸಕಾರಾತ್ಮಕ ಶಕ್ತಿಯಿಂದ ಆವೃತವಾಗಲು ಇಷ್ಟ ಪಡುತ್ತದೆ. ಬಿಸಿ ಮತ್ತು ನಕಾರಾತ್ಮಕ ಶಕ್ತಿಯಿಂದ ಕೋಪಗೊಳ್ಳುತ್ತದೆ. ಎಲ್ಲಿ ಆನೆ ಇರುತ್ತದೋ ಅಲ್ಲಿ ಸ್ಥಿರತೆ ಇರುತ್ತದೆ ಹಾಗೂ ಪ್ರಗತಿ ಉಂಟಾಗುತ್ತದೆ. ಯಾವುದಾದರೂ ಉತ್ತಮ ಶುಭ ಸಮಾರಂಭದಂದು ಉಡುಗೊರೆಯಾಗಿ ಜೋಡಿ ಆನೆಯನ್ನು ನೀಡಿದರೆ ಶುಭ. ಆನೆ ಚಿನ್ನ, ಬಿಳ್ಳಿ , ಹಿತ್ತಾಳೆ ಅಥವಾ ಮರದ ಆನೆಯನ್ನೂ ನೀಡಬಹುದು. 

ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ

ಏಳು ಕುದುರೆ

ಕುದುರೆ ಶಕ್ತಿಯ ಪ್ರತೀಕ. ಏಳು ಕುದುರೆ ಸೂರ್ಯನ ರಥದ ಪ್ರತೀಕ. ಇದು ಏಳು ಬಣ್ಣಗಳ ಸೂರ್ಯನ ಕಿರಣಗಳನ್ನು ಪ್ರತಿನಿಧಿಸುತ್ತದೆ. ಏಳು ಕುದುರೆಯ ಜೋಡಿಯನ್ನು ನೀಡುವುದು ಫೆಂಗ್ ಶುಯಿಯಲ್ಲಿ ಶುಭ.  ಏಳು ಬಿಳಿ ಕುದುರೆಯ ಶೋ ಪೀಸ್ ಅಥವಾ ಫೋಟೋ ಗಿಫ್ಟ್ ನೀಡಿದರೆ ಅಥವಾ ಪಡೆದರೆ ಲಾಭ ಹೆಚ್ಚು. 

ಎರಡೂ ಕಡೆ ಮುಖವಿರುವ ಗಣಪತಿ

ಎರಡು ಕಡೆ ಮುಖವಿರುವ ಗಣಪತಿ ಮೂರ್ತಿಯನ್ನು ಉಡುಗೊರೆಯಾಗಿ ನೀಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಶಮನವಾಗುತ್ತದೆ. ಈ ಮೂರ್ತಿಯನ್ನು ನೀಡುವುದರಿಂದ ಅಥವಾ ಉಡುಗೊರೆಯಾಗಿ ಪಡೆದುಕೊಳ್ಳುವುದರಿಂದ ಶುಭ. 

ಮನೆಯಲ್ಲಿ ಇವಿದ್ದರೆ ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರ್ತಾಳೆ!

ಮಣ್ಣಿನಿಂದ ಮಾಡಿದ ವಸ್ತು

ಮಣ್ಣಿನಿಂದ ಮಾಡಿದ ಎಲ್ಲಾ ರೀತಿಯ ವಸ್ತುಗಳು, ಶೋ ಪೀಸ್ ಗಿಫ್ಟ್ ನೀಡಿದರೆ ಶುಭ. ಮಣ್ಣಿನಲ್ಲಿರುವ ಫಲವತ್ತತೆಯ ಶಕ್ತಿ ಸುತ್ತಲೂ ಸಕಾರಾತ್ಮಕತೆಯನ್ನು ಹರಡಿಸುತ್ತದೆ. ಆದುದರಿಂದ ಇಂತಹ ಗಿಫ್ಟ್ ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. 

ಬೆಳ್ಳಿ ವಸ್ತುಗಳು

ಬೆಳ್ಳಿಗೆ ಜ್ಯೋತಿಷ್ಯ ಮತ್ತು ವಾಸ್ತುವಿನಲ್ಲಿ ಹೆಚ್ಚಿನ ಮಹತ್ವ. ಬೆಳ್ಳಿಯಲ್ಲಿ ರೋಗದ ವಿರುದ್ಧ ಹೋರಾಡುವ ಶಕ್ತಿ ಇದೆ. ಜೊತೆಗೆ ಸ್ಕಿನ್‌ಗೆ ಸಂಬಂಧಿಸಿದ ಸಮಸ್ಯೆಯೂ ದೂರವಾಗಿಸುತ್ತದೆ. ಬೆಳ್ಳಿ ಸಮೃದ್ಧಿಯ ಜೊತೆಗೆ ಆರೋಗ್ಯವನ್ನೂ ವೃದ್ಧಿಸುತ್ತದೆ. ಶಾಸ್ತ್ರಗಳ ಅನುಸಾರ ಬೆಳ್ಳಿಯನ್ನು ನೀಡುವುದು ಮತ್ತು ಪಡೆಯುವುದು ಮಂಗಳ. ಅದಕ್ಕಾಗಿ ಬೆಳ್ಳಿ ನಾಣ್ಯ ಅಥವಾ ದೀಪ ನೀಡಲಾಗುತ್ತದೆ. 

ಹೀಗಾದ್ರೆ ಮನೆಯಲ್ಲಿ ಏನೋ ಕೆಟ್ಟ ಶಕ್ತಿ ಇದೆ ಎಂದರ್ಥ?