ವಾಸ್ತು ಪ್ರಕಾರ ಮನೆಯಲ್ಲಿ ಏನಿರಬೇಕು? ಏನಿರಬಾರದು ಅನ್ನೋ ಯೋಚನೆ ನಿಮಗಿದ್ದರೆ ಇಲ್ಲಿದೆ ಬೆಸ್ಟ್ ಟಿಪ್ಸ್.  ಈ ಆರು ವಸ್ತುಗಳನ್ನು ಮನೆಯಲ್ಲಿ ಸರಿಯಾದ ಸ್ಥಾನದಲ್ಲಿಟ್ಟರೆ ಎಲ್ಲಾ ಸಮಸ್ಯೆಗಳೂ ದೂರವಾಗುತ್ತವೆ. ಜೊತೆಗೆ ಲಕ್ಷ್ಮಿಯೂ ಮನೆಯಲ್ಲಿ ನೆಲೆಸಿರುತ್ತಾಳೆ, ಅಂದರೆ ಮನೆಯಲ್ಲಿ  ಪರಿಸ್ಥಿತಿ ಉತ್ತಮವಾಗಿ, ಸಂಪತ್ತು ವೃದ್ಧಿಯಾಗುತ್ತದೆ. 

ಹೀಗೆಲ್ಲಾ ಆದ್ರೆ ಮನೆಯಲ್ಲಿ ನೆಗಟಿವ್ ಎನರ್ಜಿ ಇದೆ ಎಂದರ್ಥ

ಹನುಮಂತನ ಮೂರ್ತಿ: ಮನೆಯ ನೈಋತ್ಯ ಭಾಗದಲ್ಲಿ ಹನುಮಂತನ ಪಂಚಸ್ವರೂಪ ಮೂರ್ತಿ ಅಥವಾ ಫೋಟೋ ಇಟ್ಟು ನಿಯಮಿತವಾಗಿ ಪೂಜಿಸಿ. ಇದರಿಂದ ಮನೆಯಲ್ಲಿ ಧನ - ಸಂಪತ್ತು ಸದಾ ತುಂಬಿರುತ್ತದೆ. 
ಲಕ್ಷ್ಮಿ: ಮನೆಯ ಮುಖ್ಯ ದ್ವಾರದಲ್ಲಿ ಧನ ದೇವತೆ ಲಕ್ಷ್ಮಿ, ಕುಬೇರನ ಫೋಟೋ ಅಥವಾ ಸ್ವಸ್ತಿಕ ಚಿಹ್ನೆ ಹಾಕಿ. ಇದರಿಂದ ಹಣ ಯಾವತ್ತೂ ಕರಗೋಲ್ಲ.
ವಾಸ್ತು ದೇವತೆ: ಮನೆಯಲ್ಲಿ ವಾಸ್ತು ದೇವತೆ ಫೋಟೋ ಇಡೋದರಿಂದ ಮನೆಯ ಎಲ್ಲ ವಾಸ್ತು ದೋಷವೂ ನಿವಾರಣೆಯಾಗಿ, ಆರ್ಥಿಕ ಅಭಿವೃದ್ಧಿಯಾಗುತ್ತದೆ. 
ಪಿರಮಿಡ್: ಮನೆಯ ಯಾವ ಭಾಗದಲ್ಲಿ ಜನರು ಹೆಚ್ಚು ಸಮಯ ಕಳೆಯುತ್ತಾರೋ, ಅಲ್ಲಿ ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದ ಪಿರಮಿಡ್ ಇರಿಸಿ. ಇದರಿಂದ ಮನೆಯ ಸದಸ್ಯರ ಆದಾಯ ಹೆಚ್ಚುತ್ತದೆ. 


ಕಂಚಿನ ಆಮೆ: ಕಂಚಿನ ಆಮೆ ಮತ್ತು ಮೀನು ಮನೆಯಲ್ಲಿ ಇಡೋದರಿಂದ ಮನೆಗೆ ಶುಭವಾಗುತ್ತದೆ. ಇದರಿಂದ ಮನೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುತ್ತದೆ. 


ಮಣ್ಣಿನ ಮಡಿಕೆ: ಮನೆಯ ಉತ್ತರ ಭಾಗದಲ್ಲಿ ನೀರಿನಿಂದ ತುಂಬಿದ  ಮಣ್ಣಿನ ಮಡಿಕೆ ಇಡಿ. ಇದರಿಂದ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಉಂಟಾಗುವುದಿಲ್ಲ. ಆದರೆ ಯಾವತ್ತೂ ನೀರಿನ ಮಡಿಕೆ ಖಾಲಿಯಾಗದಂತೆ ನೋಡಿಕೊಳ್ಳಿ.