ಆತ್ಮ, ಭೂತ, ಪ್ರೇತ ಇಲ್ಲವೇ ಇಲ್ಲ ಎನ್ನುವವರಿದ್ದಾರೆ. ಇನ್ನು ಕೆಲವರು ದೇವರಿದ್ದಾನೆ ಎಂದ ಮೇಲೆ ಕೆಟ್ಟ ಶಕ್ತಿಗಳೂ ಇರಬಹುದೆನ್ನುತ್ತಾರೆ. ಹೌದು ಕೆಲವೊಂದೆಡೆ ಕೆಟ್ಟ ಶಕ್ತಿಯೂ ಇರುತ್ತವೆ. ಅದರ ಅನುಭವವಾದರೂ ಅದು ನಮ್ಮ ಭ್ರಮೆ ಎಂದು ಸುಮ್ಮನಿರುತ್ತೇವೆ. ಒಂದು ವೇಳೆ ಮನೆಯಲ್ಲಿ ಇರುವಾಗ ಈ ಅನುಭವ ಉಂಟಾದರೆ ಅಲ್ಲಿ ಕೆಟ್ಟ ಶಕ್ತಿ ಇರಬಹುದು...

ಬ್ಯುಸಿನೆಸ್‌ನ ಶ್ರೇಯಸ್ಸಿಗೆ ಆಫೀಸಲ್ಲಿರಲಿ ಇದು!

- ನೀವು ಬಂದು ಕುಳಿತಾಗ ತಾಪಮಾನ ಚೆನ್ನಾಗಿದ್ದು ಒಮ್ಮೇಲೆ ತಾಪಾಮಾನ ಕಡಿಮೆಯಾಗಿ ಚಳಿಯಿಂದ ನಡುಗಲು ಆರಂಭಿಸಿದರೆ ಅದು ಕೆಟ್ಟ ಶಕ್ತಿ ಇರಬಹುದು. ಇಲ್ಲವೇ ನಿಮಗೆ ಚಳಿ ಜ್ವರ ಆರಂಭವಾಗಿರಲೂ ಬಹುದು ಗಮನಿಸಿಸಿಕೊಳ್ಳಿ. 

- ಯಾರೂ ಇಲ್ಲದಿದ್ದರೂ ನಿಮ್ಮನ್ನು ಯಾರು ಬಂದು ಸ್ಪರ್ಶಿಸಿದಂತೆ ಭಾಸವಾದರೆ, ಯಾರೋ ಹಿಂದೆ ಬಂದು ನಿಂತ ಅನುಭವ ಆದರೆ ಕೆಟ್ಟ ಶಕ್ತಿ ಇದೆ. 

- ಪ್ರಾಣಿಗಳಿಗೆ ಬೇಗ ಕೆಟ್ಟ ಶಕ್ತಿ ಸುಳಿವು ಸಿಗುತ್ತದೆ. ಒಂದು ವೇಳೆ ರಾತ್ರಿ ನಾಯಿ ಸುಮ್ಮನೆ ಬೊಗಳಲು ಆರಂಭಿಸಿದರೆ, ಬೆಕ್ಕು ಕೆಟ್ಟದಾಗಿ ಏನಾದರೂ ಮಾಡಿದರೆ ಗಮನವಿರಲಿ. 

ಮನೆಯಲ್ಲಿರುವ ಈ ವಸ್ತುಗಳನ್ನು ಕೂಡಲೇ ಸ್ವಚ್ಛಗೊಳಿಸಿ!

- ಸುಮ್ಮನೆ ಕುಳಿತು ನೋಡುತ್ತಿದ್ದಾಗ ಯಾರೋ ನಿಮ್ಮನ್ನು ನೋಡುತ್ತಿದ್ದಾರೆ ಎಂದೆನಿಸಿದರೆ, ಕಣ್ಣಿಗೇನೂ ಕಾಣಿಸದೇ ಹೋದರೆ...

- ಕೆಲವು ವಸ್ತುಗಳು ಯಾರ ಬಲವೂ ಇಲ್ಲದೆ  ಅತ್ತಿಂದಿತ್ತ ಸಾಗಿದರೆ, ಒಮ್ಮೆಲೇ ವಸ್ತುಗಳೇ ಕಾಣೆಯಾದರೆ...

- ಮನೆ ಕಿಟಕಿ ಮೇಲೆ, ಗೋಡೆ ಮೇಲೆ ಕೈಗಳ ಗುರುತು ತನ್ನಷ್ಟಕ್ಕೇ ಮೂಡುವುದು. ಕೆಲವೊಮ್ಮೆ ಪ್ರಾಣಿಗಳ ಹೆಜ್ಜೆ ಗುರುತು ಇರಬಹುದು. ಅದನ್ನು ಖಚಿತಪಡಿಸಿ ಕೆಟ್ಟ ಶಕ್ತಿಯ ಪ್ರಭಾವವೇ ಎಂಬುದನ್ನು ತಿಳಿಯಿರಿ. 

- ಗಾಜಿನ ವಸ್ತುಗಳ ಮೇಲೆ ಯಾರದೋ ಆಕೃತಿ ಕಾಣುವುದು ಅಥವಾ ಕಿಟಕಿ ಆಚೆ ಬದಿ ಯಾರೋ ನಿಂತಂತೆ ಭಾಸವಾಗುವುದು.

ಸೂರ್ಯ ರಶ್ಮಿ ಮೈ ತಾಕಿದರೆ ಚೆನ್ನ: ಬಂಗಾರದ ಬೆಳಕೇ ನೈಜ ಚಿನ್ನ!

- ಒಮ್ಮೆಲೇ ಹಿಂದಿನಿಂದ ಯಾರೋ ಬಂದು ನೂಕಿದಂತಾಗಿ ಬೀಳುವುದು ಅಥವಾ ಎದುರಲ್ಲಿ ಏನೂ ಇರದಿದ್ದರೂ ಕಾಲು ಎಡವಿ ಬೀಳುವುದು. 
 
ಈ ರೀತಿಯ ಯಾವುದೇ ಅನುಭವ ಆದರೆ ಅಲ್ಲಿ ಕೆಟ್ಟ ಶಕ್ತಿಗಳ ಆಟ ಇದೆ. ಆದರೆ ಎಲ್ಲ ಸಂದರ್ಭದಲ್ಲೂ ಇದು ನಿಜ ಎಂದು ಹೇಳಲಾಗುವುದಿಲ್ಲ.  ಕೆಲವೊಮ್ಮೆ ಅದು ನಿಮ್ಮ ಒಳ ಮನಸಿನ ಭಯವೂ ಇರಬಹುದು ಅಥವಾ ವೈಜ್ಞಾನಿಕ ಕಾರಣವೂ ಇರಬಹುದು. ಆದುದರಿಂದ ಮೊದಲಿಗೆ ಘಟನೆ ಬಗ್ಗೆ ಖಚಿತ ಪಡಿಸಿಕೊಂಡು ನಂತರ ಭೂತ, ಪ್ರೇತ, ಕೆಟ್ಟ ಶಕ್ತಿ ಬಗ್ಗೆ ಗಮನ ಹರಿಸಿ.