ಓದಲ್ಲಿ ಮುಂದಿರಬೇಕಾ? ಕರಿಯರ್ ಯಶಸ್ಸಿಗೆ ವಾಸ್ತು ಟಿಪ್ಸ್...
ಓದಿನಲ್ಲಿ ಮತ್ತು ಕರಿಯರ್‌ನಲ್ಲಿ ಸದಾ ಮುಂದಿರಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಅಸೆ ಆಕಾಂಕ್ಷೆಗಳು ಈಡೇರುವುದಿಲ್ಲ. ಇದಕ್ಕೆ ವಾಸ್ತು ದೋಷ ಕಾರಣ ಇರಬಹುದು. ಆ ವಾಸ್ತು ದೋಷಗಳು ಯಾವುವು?
ಜೀವನದಲ್ಲಿ ಪ್ರತಿಯೊಬ್ಬರೂ ಒಂದೊಂದು ಕನಸಿರುತ್ತದೆ. ಅದರಲ್ಲಿ ಮುಖ್ಯವಾಗಿ ಓದಿನಲ್ಲಿ ಸದಾ ಮುಂದಿರಬೇಕು, ಕರಿಯರ್‌ನಲ್ಲಿ ಮಹತ್ತರವಾದುದನ್ನು ಸಾಧಿಸಬೇಕು ಎಂದಾಗಿರುತ್ತದೆ. ಈ ಕನಸು ನನಸಾಗಿಸುವಲ್ಲಿ, ಹಲವು ಅಡೆತಡೆಗಳಿರುತ್ತವೆ. ನಿಮಗೆ ಇಲ್ಲೀವರೆಗೆ ಕರಿಯರ್‌ನಲ್ಲಿ ಸಫಲತೆ ಸಿಗದಿದ್ದರೆ ಅದಕ್ಕೆ ಕೆಲವೊಂದು ವಾಸ್ತು ದೋಷ ಕಾರಣವಿರಬಹುದು. ಅವುಗಳ ಬಗ್ಗೆ ತಿಳಿದುಕೊಂಡು ನಿವಾರಿಸಿಕೊಂಡು, ಸಫಲತೆ ಕಂಡುಕೊಳ್ಳಿ.
ಮನೆ ಉತ್ತರ ದಿಕ್ಕಿನಲ್ಲಿ ದೊಡ್ಡ ದೊಡ್ಡ ವಸ್ತುಗಳನ್ನಿಡಬೇಡಿ. ಬದಲಾಗಿ ಪಾತ್ರೆಯಲ್ಲಿ ನೀರು ತುಂಬಿಸಿಡಿ. ಜೊತೆಗೆ ಸರಸ್ವತಿ ಫೋಟೋ ಅಥವಾ ಸಫಲತೆ ಹೊಂದಿದ ವ್ಯಕ್ತಿಯ ಫೋಟೋ ಇಡಿ. ಇದರಿಂದ ನಿಮಗೆ ಪ್ರೇರಣೆ ದೊರೆಯುತ್ತದೆ. ಇಂಥ ಮೂರ್ತಿಗಳನ್ನು ಸ್ಟಡಿ ಟೇಬಲ್ ಮೇಲಿಡುವುದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಸಫಲತೆ ದೊರೆಯುತ್ತದೆ ಉತ್ತರ ದಿಕ್ಕು ಕರಿಯರ್ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.
ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!
ಹೆಚ್ಚಾಗಿ ತಲೆ ದಿಂಬಿನ ಕೆಳಗೆ ಪುಸ್ತಕ ಇಟ್ಟು ಮಲಗುತ್ತೇವೆ. ನಿಮಗೂ ಇಂಥ ಅಭ್ಯಾಸವಿದ್ದರೆ ಅದನ್ನು ಬಿಟ್ಟು ಬಿಡಿ. ನಿಮ್ಮ ಈ ಅಭ್ಯಾಸ ಕರಿಯರ್ ಮೇಲೆ ಪ್ರಭಾವ ಬೀರುತ್ತದೆ. ಪೇಪರ್, ಪುಸ್ತಕ ಯಾವುದನ್ನೇ ಆಗಲಿ ತಲೆ ಬಳಿ ಅಥವಾ ಕೆಳಗಿಟ್ಟು ಮಲಗಿದರೆ ಕರಿಯರ್ ಮೇಲೆ ಮಾತ್ರವಲ್ಲ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ನವಿಲು ಗರಿ ನಕರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಇದನ್ನು ಮನೆಯಲ್ಲಿ ಇಡುವುದು ಶುಭ. ಪೂಜೆ ಕೋಣೆಯಲ್ಲಿ ಅಥವಾ ಮಕ್ಕಳ ಓದುವ ಕೋಣೆಯಲ್ಲೂ ಇದನ್ನು ಇಡಬಹುದು. ಇದು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕರಿಸುತ್ತದೆ.
ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...