ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಹೆಲ್ತ್ ಈಸ್ ವೆಲ್ತ್. ಅರೋಗ್ಯ ಚೆನ್ನಾಗಿರಲು ಜೀವನಶೈಲಿ ಚೆನ್ನಾಗಿರಬೇಕು, ಜೊತೆಗೆ ಫೆಂಗ್ ಶುಯಿಯನ್ನು ಸಹ ಪಾಲಿಸಬೇಕು. ಫೆಂಗ್ ಶುಯಿ ಅನುಸಾರ ಕೆಲವು ವಸ್ತುಗಳನ್ನು ಮನೆಯಲ್ಲಿಟ್ಟರೆ ಉತ್ತಮ. ಯಾವ ಲಕ್ಕಿ ಚಾರ್ಮನ್ನು ಮನೆಯಲ್ಲಿಟ್ಟರೆ ಅರೋಗ್ಯ ಉತ್ತಮವಾಗಿರುತ್ತದೆ ಹಾಗೂ ಯಾವುದೇ ಸಮಸ್ಯೆ ಬರೋದಿಲ್ಲ ಅನ್ನೋದನ್ನು ನೋಡೋಣ... 

For good health keep this lucky charm at home

ಫೆಂಗ್ ಶುಯಿ ಅನುಸಾರ ಆಮೆ ದೀರ್ಘಾಯುಷ್ಯದ ಪ್ರತೀಕ. ಇದರ ಪ್ರತಿಮೆಯನ್ನು ಮನೆಯಲ್ಲಿ ಇಡೋದರಿಂದ ಆಯುಷ್ಯ ವೃದ್ಧಿಯಾಗುತ್ತದೆ. ಜೊತೆಗೆ ಶುಭವಾಗುತ್ತದೆ. 

ಆಯ್ಕೆ ಹೇಗೆ? 

ಮಾರ್ಕೆಟ್‌ನಲ್ಲಿ ಹಲವಾರು ವಿಧದ ಆಮೆ ಮೂರ್ತಿ ಸಿಗುತ್ತದೆ. ಆದರೆ ಲೋಹದ ಆಮೆ ತುಂಬಾ ಉತ್ತಮ ಹಾಗೂ ಸೌಭಾಗ್ಯಶಾಲಿ. ಆದುದರಿಂದ ಲೋಹದಿಂದ ಮಾಡಿದ ಆಮೆಯ ಮೂರ್ತಿಯನ್ನೇ ಖರೀದಿಸಿ. 

ಏನೋ ಕಳೆದುಕೊಂಡ ಭಾವವೇ? ಮನೆ ಹೀಗಿಟ್ಟಕೊಂಡ್ರೆ ಸರಿ ಹೋಗುತ್ತೆ...

ಆಮೆಯ ಮಹತ್ವ 

ಫೆಂಗ್ ಶುಯಿ ಅನುಸಾರ ಮನೆಯಲ್ಲಿ ಆಮೆ ಮೂರ್ತಿಯನ್ನು ಇಡೋದರಿಂದ ಸದಸ್ಯರ ಆಯುಷ್ಯ ವೃದ್ಧಿಯಾಗುತ್ತದೆ. ಜೊತೆಗೆ ಸೌಭಾಗ್ಯ ವೃದ್ಧಿಯಾಗುತ್ತದೆ. ಮನೆಯಲ್ಲಿ ಮತ್ತು ಕಚೇರಿಯಲ್ಲಿ ಈ ಮೂರ್ತಿ ಇದ್ದರೆ ಶುಭ ಲಾಭ.

ಎಲ್ಲಿ ಇಡೋದು? 

ಲೋಹದಿಂದ ಮಾಡಿದ ಪ್ರತಿಮೆಯನ್ನೂ ನೀರಿನಿಂದ ತುಂಬಿದ ಒಂದು ಬೌಲಿನಲ್ಲಿ ಹಾಕಿಡಿ. ಈ ಬೌಲನ್ನು ಮನೆಯ ಉತ್ತರ ದಿಕ್ಕಿನಲ್ಲಿಡಿ. ಫೆಂಗ್ ಶುಯಿ ಅನುಸಾರ ಮನೆಯಲ್ಲಿ ಆಮೆಯನ್ನು ಇಡಲು ಉತ್ತರ ದಿಕ್ಕು ಶುಭ. 

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

ಎಲ್ಲಿ ಇಡಬಾರದು? 

ಮನೆಯ ಉತ್ತರ ದಿಕ್ಕಿನಲ್ಲಿ ಬೆಡ್ ರೂಮ್ ಇದ್ದರೆ ಅಲ್ಲಿ ಆಮೆಯನ್ನು ನೀರಿನಲ್ಲಿ ಹಾಕಿಡಬೇಡಿ. ಫೆಂಗ್‌ಶುಯಿನಲ್ಲಿ ಬೆಡ್‌ರೂಮಲ್ಲಿ ನೀರಿಡುವುದು ಅಶುಭ. 

Latest Videos
Follow Us:
Download App:
  • android
  • ios