Asianet Suvarna News Asianet Suvarna News

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

ಕೆಲವೊಂದು ಗಿಡಗಳೂ ಮನುಷ್ಯ ಮತ್ತು ಅವನ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಯಾವೆಲ್ಲ ಗಿಡಗಳನ್ನು ಮನೆಯಲ್ಲಿ ನೆಡಬೇಕು ಹಾಗೂ ಎಲ್ಲಿ, ಯಾವ ದಿಕ್ಕಿನಲ್ಲಿ ನೆಡಬೇಕು ಅನ್ನೋದನ್ನು ನೀವು ತಿಳಿದುಕೊಂಡಿರಬೇಕು. 

5 feng shui trees for financial benefit
Author
Bangalore, First Published Jun 21, 2019, 12:48 PM IST
  • Facebook
  • Twitter
  • Whatsapp

ಮನೆಯಲ್ಲಿ ಅದೃಷ್ಟ ತುಂಬಿರಬೇಕು ಎಂದಾದರೆ ಮನೆಯಲ್ಲಿ ಫೆಂಗ್ ಶುಯಿಗೆ ಸಂಬಂಧಿಸಿದ ಗಿಡಗಳನ್ನು ನೆಡಬೇಕು. ಇದರಿಂದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಧನಲಾಭ ಉಂಟಾಗುತ್ತದೆ. ವಾಸ್ತು ಮತ್ತು ಫೆಂಗ್‌ಶುಯಿ ಅನುಸಾರ ಯಾವೆಲ್ಲಾ ಗಿಡ ನೆಡಬಹುದು ನೋಡೋಣ... 

ಫೆಂಗ್ ಶುಯಿ: ನಿಂಬೆ ಹಣ್ಣಿನ ಬಣ್ಣಕ್ಕೂ ಇದೆ ವಾಸ್ತು ನಂಟು

ಮನಿ ಪ್ಲಾಂಟ್ 

ಗುಡ್ ಲಕ್ ಪ್ಲಾಂಟ್ ಲಿಸ್ಟ್‌ನಲ್ಲಿ ಮನಿ ಪ್ಲಾಂಟ್ ಹೆಸರು ಮುಖ್ಯ. ಈ ಗಿಡ ಆರ್ಥಿಕ ಸುಖ ಸಮೃದ್ಧಿಯ ಪ್ರತೀಕ. ಫೆಂಗ್ ಶುಯಿ ಅನುಸಾರ ಈ ಗಿಡದಿಂದ ಸಕಾರಾತ್ಮಕ ಶಕ್ತಿ ಹೊರ ಹೊಮ್ಮುತ್ತದೆ. ಇದು ಸೌಭಾಗ್ಯ ಮತ್ತು ಸಫಲತೆಯ ಸಂಕೇತವೂ ಹೌದು. ಮನಿ ಪ್ಲಾಂಟ್ ಬೆಳೆಯುತ್ತಾ ಹೋದಂತೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಇದನ್ನು ಕುಬೇರ ದಿಕ್ಕು ಎಂದು ಕರೆಯಲ್ಪಡುವ ಮನೆಯ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಇಡಬೇಕು. 

ವಾಸ್ತು ಗಿಡ 

ಹಸಿರು ಬಣ್ಣದ ಬಿದಿರಿನ ಗಿಡ ಅಥವಾ ವಾಸ್ತು ಗಿಡವನ್ನು ಕೆಂಪು ಬಣ್ಣದ ದಾರದಲ್ಲಿ ಕಟ್ಟಬೇಕು. ಇದನ್ನು ಮನೆಯಲ್ಲಿಟ್ಟರೆ ಶುಭ. ಇದರಿಂದ ಕೇವಲ ಆರ್ಥಿಕ ಸ್ಥಿತಿ ಮಾತ್ರ ಉತ್ತಮವಾಗೋದಲ್ಲ, ಬದಲಾಗಿ ಮನೆಯ ಸದಸ್ಯರ ವಯಸ್ಸೂ ಹೆಚ್ಚುತ್ತದೆ. ಇದನ್ನು ಮನೆಯಲ್ಲಿಟ್ಟರೆ ನೆಗೆಟಿವ್ ಎನರ್ಜಿ ದೂರವಾಗುತ್ತದೆ. 

ಬ್ಯುಸಿನೆಸ್‌ನ ಶ್ರೇಯಸ್ಸಿಗೆ ಆಫೀಸಲ್ಲಿರಲಿ ಇದು!

ಲಿಲ್ಲಿ

ಫೆಂಗ್ ಶುಯಿ ಅನುಸಾರ ಲಿಲ್ಲಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಜನರ ನಡುವೆ ಪ್ರೀತಿ, ಸೌಹಾರ್ದತೆ ಮತ್ತು ಖುಷಿ ಹೆಚ್ಚುತ್ತದೆ. ಗಾಢ ಬಣ್ಣವುಳ್ಳ ಎಲೆ ಮತ್ತು ಬಿಳಿ ಹೂವುಗಳನ್ನು ಹೊಂದಿದ ಲಿಲ್ಲಿ ಗಿಡ ಸೌಭಾಗ್ಯ ವರ್ಧಕವೂ ಹೌದು. 

ರಬ್ಬರ್ ಪ್ಲಾಂಟ್ 

ಈ ಗಿಡವನ್ನು ಮನೆಯ ವೆಲ್ತ್ ಏರಿಯಾದಲ್ಲಿ ಇಡಬೇಕು. ಅಂದರೆ ಮನೆಯ ಯಾವ ಜಾಗದಲ್ಲಿ ನೀವು ಹಣವನ್ನು ಇಡುತ್ತೀರಿ ಆ ಜಾಗದಲ್ಲಿ ದುಂಡಗಿನ ಆಕಾರದ ಎಲೆಗಳುಳ್ಳ ಗಿಡ ನೆಟ್ಟರೆ ಶುಭ. ಇದು ಧನವನ್ನು ವೃದ್ಧಿಸುತ್ತದೆ. 

ಜಗಳ ಆಡೋದ್ ಬಿಟ್ಹಾಕಿ, ಚೆನ್ನಾಗಿ ಲೈಫ್ ಲೀಡ್ ಮಾಡಲು ಹೀಗ್ ಮಾಡಿ!

ಝೆಡ್ ಪ್ಲಾಂಟ್ 

ವೃತ್ತಾಕಾರದ ಎಲೆಗಳನ್ನು ಹೊಂದಿರುವ ಝೆಡ್ ಪ್ಲಾಂಟ್ ಮನೆಯಲ್ಲಿಟ್ಟರೆ ಶುಭ.  ಫೆಂಗ್ ಶುಯಿ ಅನುಸಾರ ಇದನ್ನು ಆಫೀಸಿನಲ್ಲಿಟ್ಟರೆ ಧನ ಲಾಭ. ಜೊತೆಗೆ ಸುಖ ಸಮೃದ್ಧಿಯಾಗುತ್ತದೆ. ಇದನ್ನು ಮನೆಯ ಬಾಗಿಲಿನ ಬಳಿ ಇಟ್ಟರೆ ಉತ್ತಮ.

Follow Us:
Download App:
  • android
  • ios