Asianet Suvarna News Asianet Suvarna News

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಜಾತಕ ನೋಡಿಸಿದಾಗ ವಧು/ವರನ ನಡುವೆ ವಿವಾಹ ಗುಣಗಳು ಏರ್ಪಡುವುದಿಲ್ಲ, ಹೊಂದಾಣಿಕೆಯಾಗುವುದಿಲ್ಲ, ಕೆಲವು ದೋಷಗಳಿಂದ ವೈವಾಹಿಕ ಜೀವನದಲ್ಲಿ ಸುಖಪ್ರಾಪ್ತಿಯಾಗುವುದಿಲ್ಲ ಎಂಬ ಅಂಶಗಳನ್ನು ತಿಳಿದುಕೊಳ್ಳಬಹುದು. ಇಲ್ಲಿ ಗುರುಗ್ರಹದ ಪ್ರಭಾವ, ಶುಕ್ರನ ಸ್ಥಿತಿಗತಿ ಹಾಗೂ ಮಂಗಳ ಗ್ರಹದ ಪರಿಣಾಮ ಏನೆನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. 

These planets are main for matching Kundali!
Author
Bangalore, First Published Apr 5, 2020, 4:50 PM IST
  • Facebook
  • Twitter
  • Whatsapp

ವಿವಾಹಕ್ಕೆ ಮೊದಲು ಜಾತಕವನ್ನು ನೋಡಿಸುವುದು ಏತಕ್ಕೆ? ಜಾತಕದಲ್ಲಿ ಮುಂದಿನ ಜೀವನ ಹೇಗಿರುತ್ತೆ ಎಂದು ತಿಳಿದುಕೊಳ್ಳಬಹುದೇ ಎಂದೆಲ್ಲ ಪ್ರಶ್ನೆಗಳು ಎದುರಾಗಬಹುದು. ಆದರೆ, ವಿವಾಹಪೂರ್ವ ಜಾತಕದಲ್ಲಿ ಏನೆಲ್ಲ ನೋಡಲಾಗುವುದು? ಯಾವ ಗ್ರಹ ಇದ್ದರೆ ಒಳ್ಳೆಯದು ಮತ್ತು ಕೆಟ್ಟದ್ದು? ಅವುಗಳಿಂದ ಅನುಕೂಲವೋ, ಅನನುಕೂಲವೋ ಎಂಬ ಗೊಂದಲಗಳಿಗೆ ಜಾತಕದಲ್ಲಿ ಉತ್ತರ ಸಿಗುತ್ತದೆ. ಹೀಗಾಗಿ ಸುಖೀ ದಾಂಪತ್ಯಕ್ಕೆ ಯಾವ ಗ್ರಹಗಳು ಪೂರಕ ಹಾಗೂ ಮಾರಕ ಎಂಬ ವಿವರ ಇಲ್ಲಿದೆ. 

ಗುರುಗ್ರಹದ ಪಾತ್ರ
ಮೊದಲು ಗಂಡು-ಹೆಣ್ಣಿನ ಜಾತಕವನ್ನು ಹೋಲಿಕೆ ಮಾಡಲಾಗುತ್ತದೆ. ಅಲ್ಲಿ ಇವರ ನಡುವೆ ಸುಖೀ ದಾಂಪತ್ಯದ ಗುಣಗಳಿವೆಯೇ ಎಂಬುದನ್ನು ಮೊದಲು ಕಾಣಲಾಗುತ್ತದೆ. ಸುಖವಾಗಿರಲು ಗುರುಗ್ರಹದ ಪಾತ್ರ ಪ್ರಮುಖವಾಗಿರುತ್ತದೆ. ಆದರೆ, ಪಾಪಗ್ರಹದ ಪ್ರಭಾವದಿಂದ ಗುರು ಮುಕ್ತಿಹೊಂದಿದ್ದರೆ ಮಾತ್ರ ಸುಖೀ ಸಂಸಾರ ಪ್ರಾಪ್ತಿಯಾಗುತ್ತದೆ. ಇಲ್ಲದಿದ್ದರೆ ಯಾವಾಗಲೂ ಜಗಳ, ತಾಪತ್ರಯಗಳು ನಿಮ್ಮಲ್ಲಿ ಕಂಡುಬರುತ್ತಲೇ ಇರುತ್ತದೆ. ಗುರುವಿನ ಶುಭದೃಷ್ಟಿ ಸಪ್ತಮ ಮನೆಯಲ್ಲಿದ್ದರೆ ಕಷ್ಟ, ತಾಪತ್ರಯಗಳಿದ್ದರೂ ಬೇರೆ ಬೇರೆಯಾಗುವಂತಹ ಸ್ಥಿತಿ ಬರುವುದಿಲ್ಲ. ಅಂದರೆ ಗುರುವಿನ ಶುಭದೃಷ್ಟಿ ಉಚ್ಛವಾಗಿದ್ದರೆ ಇಂಥವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಗುರುವು ದಾಂಪತ್ಯ ಜೀವನದ ಅಡೆತಡೆಗಳನ್ನು ದೂರ ಮಾಡುವುದರ ಜತೆಗೆ ಸಂತಾನಕಾರಕ ಗ್ರಹವೂ ಆಗಿದೆ. 

ವಿವಾಹ ವಿಳಂಬಕ್ಕೇನು ಕಾರಣ?
ಜಾತಕದಲ್ಲಿ ಗುರು ಪೀಡಿತನಾಗಿದ್ದರೆ ಮೊದಲು ವಿವಾಹ ವಿಳಂಬವಾಗಲಿದೆ. ಇದರ ಜತೆಗೆ ವಿವಾಹ ಆದ ಮೇಲಾದರೆ ಸಂತಾನ ಪ್ರಾಪ್ತಿ ಮೇಲೂ ಪರಿಣಾವನ್ನುಂಟು ಮಾಡುತ್ತದೆ. ಸಂತಾನ ಫಲವೂ ಸಹ ಸರಿಯಾದ ಸಮಯಕ್ಕೆ ಆಗದಿದ್ದರೆ ಅದನ್ನು ಸುಖೀ ದಾಂಪತ್ಯ ಜೀವನ ಅಲ್ಲ ಎಂದೇ ಜಾತಕ (ಕುಂಡಲಿ) ಮೂಲಕ ನಿರ್ಧರಿಸಲಾಗುತ್ತದೆ. ಮದುವೆ ನಂತರ ಮೊದಲು ಜಾತಕದಲ್ಲಿ ಹುಡುಕುವ ಅಂಶವೇ ಸಂತಾನಪ್ರಾಪ್ತಿ ಯೋಗ. ಗುರು ಪಾಪಗ್ರಹದ ಪ್ರಭಾವದಲ್ಲಿದ್ದರೂ ಅಥವಾ ಪಾಪಗ್ರಹದ ರಾಶಿಯಲ್ಲಿ ಕುಳಿತಿದ್ದರೂ ಅಂಥವರ ದಾಂಪತ್ಯದಲ್ಲಿ ಅನೇಕ ಪ್ರಕಾರದ ಸಮಸ್ಯೆಗಳು ಎದುರಾಗುವ ಸಂಭವ ಇದೆ. 

ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ಶುಕ್ರದೆಸೆ ಸಿಗುವುದೇ?
ಇಲ್ಲಿ ಪ್ರಮುಖವಾಗಿ ನಿಮ್ಮ ಜಾತಕದಲ್ಲಿ ಶುಕ್ರ ಗ್ರಹದ ಪ್ರಭಾವ ಯಾವ ರೀತಿ ಇದೆ ಎಂಬುದು ಮುಖ್ಯವಾಗುತ್ತದೆ. ಶುಕ್ರನನ್ನು ವಿವಾಹಕಾರಕ ಎಂದು ಕರೆಯಲಾಗುತ್ತದೆ. ವೈವಾಹಿಕ ಸುಖಪ್ರಾಪ್ತಿಗೆ ಜಾತಕದಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿರುವುದು ಅವಶ್ಯಕ. ಇಬ್ಬರ ಜಾತಕದಲ್ಲೂ ಶುಕ್ರನು ಪೂರ್ಣಪ್ರಮಾಣದಲ್ಲಿ ಪಾಪಪ್ರಭಾವದಿಂದ ಮುಕ್ತಿಹೊಂದಿದ್ದರೆ ಮದುವೆಯ ನಂತರದ ಸಂಬಂಧ ಸುಖವಾಗಿರುತ್ತದೆ. ಇದರ ಜೊತೆಜೊತೆಗೆ ಶುಕ್ರನು ಪೂರ್ಣವಾಗಿ ಶುಭವಾಗಿರುವುದು ಅವಶ್ಯಕ. 

ಶುಕ್ರ ಅಶುಭನಾಗಿದ್ದರೆ ಪರಸಂಬಂಧ ಸಾಧ್ಯತೆ!
ಒಂದು ಜಾತಕದಲ್ಲಿ ಶುಕ್ರನು ಯಾವುದೇ ರೀತಿಯ ಅಶುಭ ಸ್ಥಿತಿಯಲ್ಲಿದ್ದರೆ ಪತಿ ಅಥವಾ ಪತ್ನಿಯ ಸಂಬಂಧದಲ್ಲಿ ಬಿರುಕು ಮೂಡಿ ಇನ್ನೊಂದು ಸಂಬಂಧದತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿರುತ್ತದೆ. ಇದಕ್ಕಾಗಿ ಶುಕ್ರ ಶುಭ ಸ್ಥಾನದಲ್ಲಿರುವುದು ದಾಂಪತ್ಯ ಜೀವನದಲ್ಲಿ ತುಂಬ ಮುಖ್ಯವಾಗುತ್ತದೆ. ಜತೆಗೆ ಸುಖವೂ ನೆಲೆಸುತ್ತದೆ. 

ಕೂತಲ್ಲೇ ಸಂಗಾತಿ ಬಗ್ಗೆ ಚಿಂತಿಸುವ ಈ ರಾಶಿಯವರು Life partner ಆದ್ರೆ ಲೈಫ್‌ ಸೂಪರ್!

ಮಂಗಳವಾಗಲಿ ವೈವಾಹಿಕ ಜೀವನ
ಮದುವೆ ವಿಚಾರದಲ್ಲಿ ಜಾತಕ ನೋಡುವಾಗ ಮಂಗಳ ಗ್ರಹದ ಸ್ಥಿತಿ ಬಗ್ಗೆ ತಿಳಿಯಲೇಬೇಕು. ಅದಿಲ್ಲದಿದ್ದರೆ ಏನು ನೋಡಿದರೂ ಅಪೂರ್ಣ. ಮಂಗಳ ಯಾವ ಮನೆಯಲ್ಲಿದ್ದು, ಯಾವ ಗ್ರಹದ ದೃಷ್ಟಿ ಇದರ ಮೇಲೆ ಇದೆ. ಯಾವುದರ ಜೊತೆ ಸಹಯೋಗವಿದೆ ಎಂಬುದು ಮುಖ್ಯವಾಗುತ್ತದೆ. ಇದನ್ನು ಸರಿಯಾಗಿ ನೋಡದಿದ್ದರೆ ಮುಂದಿನ ವೈವಾಹಿಕ ಜೀವನ ಬಲುಕಷ್ಟ. ಮಂಗಳನ ಸಹಯೋಗವಿದ್ದರೆ ಮಾಂಗಲಿಕ (ಕುಜದೋಷ, ಅಂಗಾರಕ ದೋಷ, ಮಂಗಳಗ್ರಹ ದೋಷ) ಎಂದು ಕರೆಯಲಾಗುತ್ತದೆ. ಆದರೆ, ಹೀಗಿದ್ದಾಗ ಅದೇ ಯೋಗದ ವರ/ವಧುವೇ ಬೇಕಾಗುತ್ತಾರೆ. ಜಾತಕದಲ್ಲಿ ಮಂಗಳನು ಲಗ್ನದಲ್ಲಿ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ ಮತ್ತು ದ್ವಾದಶ ಮನೆಯಲ್ಲಿದ್ದರೆ ಅಂಥವರು ಮಾಂಗಲಿಕ ದೋಷಕ್ಕೊಳಪಟ್ಟಿರುತ್ತಾರೆ. ಇದೆಲ್ಲವೂ ಇದ್ದೂ ಮಂಗಳ ಗ್ರಹದ ಕಾರಣದಿಂದಾಗಿ ವೈವಾಹಿಕ ಜೀವನದ ಸುಖಸಮೃದ್ಧಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸುಮಾರು ಬಾರಿ ಜಾತಕದಲ್ಲಿ ಮಾಂಗಲಿಕ ಯೋಗವಿದ್ದರೂ ಬೇರೆ ಗ್ರಹಗಳ ಯೋಗದಿಂದ ಇದರ ಅಶುಭತೆ ಕಡಿಮೆಯಾಗುತ್ತದೆ. ಇದನ್ನೆಲ್ಲ ಪೂರ್ತಿ ತಿಳಿದುಕೊಳ್ಳಬೇಕು.

9 ನಿಮಿಷ ದೀಪ ಬೆಳಗಿಸುವ ಮಹತ್ವ ತಿಳಿಸಿದ ದೈವಜ್ಞ ಸೋಮಯಾಜಿ

ಕೆಲವರು ಜಾತಕದಲ್ಲಿ ಮಾಂಗಲಿಕ ಯೋಗ ಇದೆ ಎಂದರೆ ಅಶುಭ ಎಂದು ಪರಿಗಣಿಸಿ ಅಂಥಹ ವಧು/ವರನ ಜತೆ ಸಂಬಂಧಕ್ಕೆ ಮುಂದಾಗುವುದಿಲ್ಲ. ಆದರೆ, ಇಷ್ಟು ಹೆದರುವ ಅವಶ್ಯಕತೆ ಇಲ್ಲ. ಮದುವೆಯಾದ ಮೇಲೆ ಹೊಸ ಜೀವನ ಪ್ರಾರಂಭವಾಗುತ್ತದೆ. ಹೀಗಾಗಿ ಜಾತಕದ ದೋಷಗಳ ಬಗ್ಗೆ ಯಾವುದೇ ರೀತಿಯ ಸಂಶಯಗಳನ್ನು ಇಟ್ಟುಕೊಳ್ಳದೇ ಸಂಬಂಧಗಳನ್ನು ಮಾಡಿಕೊಳ್ಳಬೇಕು. ಒಂದು ವೇಳೆ ಅನುಮಾನಗಳಿದ್ದರೆ ಮೊದಲೇ ಬಗೆಹರಿಸಿಕೊಳ್ಳಬೇಕು.

Follow Us:
Download App:
  • android
  • ios