Asianet Suvarna News Asianet Suvarna News

ಕಲ್ಯಾಣ ರಾಮನ ಕಲ್ಯಾಣ ಚರಿತೆ

‘ನೀನೊಬ್ಬನೇ ನಮ್ಮೆಲ್ಲರ ಸ್ವಾಮಿ, ನೀವು ಪರಮಸ್ವತಂತ್ರ, ಜಗತ್ತಿನ ಆದಿಯಲ್ಲಿ ಅಂತ್ಯದಲ್ಲಿ ಇರುವವನೂ ನೀನೊಬ್ಬನೇ, ಸರ್ವನಿಯಾಮಕನೂ ಸಹ ನೀನೊಬ್ಬನೇ. ನಿನ್ನ ಆಜ್ಞೆಯಿಂದಲೇ ಇಂದಿನ ಮುಂದಿನ ಚತುಮುರ್ಖರು ಜಗತ್ತನ್ನು ಸೃಷ್ಠಿ ಮಾಡುತ್ತಾರೆ. ವರಬಲದಿಂದ ದೃಪ್ತರಾದ ರಾವಣ-ಕುಂಭಕರ್ಣರು ಸಮಸ್ತ ಜಗತ್ತನ್ನೇ ಹಿಂಸೆಪಡಿಸುತ್ತಿದ್ದಾರೆ. ಸಮಸ್ತ ಜಗತ್ತಿಗೆ ಶತ್ರುಗಳಾಗಿದ್ದಾರೆ.ಅವರನ್ನು ಸಂಹಾರ ಮಾಡಲು ನೀನು ಮಾನವನಾಗಿ ಅವತರಿಸಬೇಕು’. ಸಕಲ ದೇವತೆಗಳ ಪ್ರಾರ್ಥನೆಯನ್ನು ಸ್ವೀಕರಿಸಿದ ಜಗನ್ನಾಥನು ‘ಹಾಗೆಯೇ ಆಗಲಿ’ ಎಂಬ ವರವನ್ನಿತ್ತನು.

Story of Lord Rama you must know on this Ramanavami Occasion dpl
Author
Bangalore, First Published Apr 21, 2021, 10:14 AM IST

-ಡಾ.ಸುಬಧೇಂದ್ರ ತೀರ್ಥ ಶ್ರೀಪಾದಂಗಳವರು

ವರಾಹದೇವರಿಂದ ಹಿರಣ್ಯಾಕ್ಷ ಸತ್ತ, ನರಸಿಂಹದೇವರಿಂದ ಹಿರಣ್ಯಕಶಿಪು ಸತ್ತ. ಈಗ ಅವರಿಬ್ಬರು ಪುಲಸ್ತ್ಯನ ಮಗನಾದ ವಿಶ್ರಾವಸುವಿನ ಮಕ್ಕಳಾಗಿ ಹುಟ್ಟಿದ್ದಾರೆ. ರಾವಣ, ಕುಂಭಕರಣ ಎಂಬ ಹೆಸರು ಪಡೆದಿದ್ದಾರೆ. ಇವರು ಹಿಂದೆ ಜಯ-ವಿಜಯರಾಗಿದ್ದಾಗಲೇ ಶ್ರೀಹರಿಯಿಂದ ಅವಧ್ಯತ್ವಾವರವನ್ನು ಪಡೆದಿದ್ದರು. ಹಿರಣಾಕ್ಷ್ಯ, ಹಿರಣ್ಯಕಶಿಪು ಜನ್ಮದಲ್ಲಿ ಅವಧ್ಯತ್ವಾವರವನ್ನು ಪಡೆದಿದ್ದರು. ಈಗ ಪುನಃ ಬ್ರಹ್ಮ ದೇವರ ವರವನ್ನು ಪಡೆದಿದ್ದಾರೆ. ಅಜೇಯರಾಗಿದ್ದಾರೆ ಮತ್ತು ಅವಧ್ಯರಾಗಿದ್ದಾರೆ.

ಈ ವರಗಳ ಬಲದಿಂದ ಅವರ ಅಹಂಕಾರ ಮುಗಿಲೆತ್ತರಕ್ಕೆ ಮುಟ್ಟಿದೆ. ನಿರಂತರ ದೇವತೆಗಳನ್ನು ಪೀಡಿಸುವುದೇ ಇವರೀರ್ವರ ಹವ್ಯಾಸವಾಗಿದೆ. ಇವರ ಉಪದ್ರವವನ್ನು ತಾಳಲಾರದೇ ಸಕಲ ದೇವತೆಗಳು ಬ್ರಹ್ಮ ದೇವರನ್ನು ಮೊರೆಹೊಕ್ಕಿದ್ದಾರೆ. ಬ್ರಹ್ಮ ದೇವರು ರುದ್ರಾದಿದೇವತೆಗಳೆಲ್ಲರನ್ನು ಕರೆದುಕೊಂಡು ಕ್ಷೀರಸಾಗರದಲ್ಲಿ ಪವಡಿಸಿದ ಶೇಷಶಾಯಿಯನ್ನು ಮೊರೆಹೊಕ್ಕಿದ್ದಾರೆ.

ಮಧುಕೈಟಭರು ಶ್ರೀಮಾತೆಯಿಂದ ಇಚ್ಛಾಮರಣ ವರ ಪಡೆದಿರುವುದು ಶ್ರೀಹರಿಗೆ ತಿಳಿಯುವುದು

‘ನೀನೊಬ್ಬನೇ ನಮ್ಮೆಲ್ಲರ ಸ್ವಾಮಿ, ನೀವು ಪರಮಸ್ವತಂತ್ರ, ಜಗತ್ತಿನ ಆದಿಯಲ್ಲಿ ಅಂತ್ಯದಲ್ಲಿ ಇರುವವನೂ ನೀನೊಬ್ಬನೇ, ಸರ್ವನಿಯಾಮಕನೂ ಸಹ ನೀನೊಬ್ಬನೇ. ನಿನ್ನ ಆಜ್ಞೆಯಿಂದಲೇ ಇಂದಿನ ಮುಂದಿನ ಚತುಮುರ್ಖರು ಜಗತ್ತನ್ನು ಸೃಷ್ಠಿ ಮಾಡುತ್ತಾರೆ. ವರಬಲದಿಂದ ದೃಪ್ತರಾದ ರಾವಣ-ಕುಂಭಕರ್ಣರು ಸಮಸ್ತ ಜಗತ್ತನ್ನೇ ಹಿಂಸೆಪಡಿಸುತ್ತಿದ್ದಾರೆ. ಸಮಸ್ತ ಜಗತ್ತಿಗೆ ಶತ್ರುಗಳಾಗಿದ್ದಾರೆ.ಅವರನ್ನು ಸಂಹಾರ ಮಾಡಲು ನೀನು ಮಾನವನಾಗಿ ಅವತರಿಸಬೇಕು’.

Story of Lord Rama you must know on this Ramanavami Occasion dpl

ಸಕಲ ದೇವತೆಗಳ ಪ್ರಾರ್ಥನೆಯನ್ನು ಸ್ವೀಕರಿಸಿದ ಜಗನ್ನಾಥನು ‘ಹಾಗೆಯೇ ಆಗಲಿ’ ಎಂಬ ವರವನ್ನಿತ್ತನು.

ಅದಿತಿ-ಕಶ್ಯಪರು ಈಗ ದಶರಥ-ಕೌಸಲ್ಯೆಯಾಗಿ ಅವತರಿಸಿದ್ದಾರೆ. ಭಗವಂತನು ಅವರಿಬ್ಬರಲ್ಲಿ ಶ್ರೀರಾಮ ಎಂಬ ಹೆಸರಿನಿಂದ ಅವತರಿಸಿದ್ದಾನೆ. ಭಗವಂತನ ಆಜ್ಞೆಯಂತೆ ಸಕಲದೇವತೆಗಳ ಸಮೂಹವು ಸಾವಿರಾರು ಕಪಿಗಳಾಗಿ ಜನಿಸಿದ್ದಾರೆ. ಅಂಜನಾ-ಕೇಸರಿಯಲ್ಲಿ ವಾಯುದೇವರು ಹನುಮಂತನಾಗಿ, ಇಂದ್ರದೇವರು ವಾಲಿಯಾಗಿ, ಸೂರ್ಯನು ಸುಗ್ರೀವನಾಗಿ, ಯಮಧರ್ಮನು ಜಾಂಬವಂತನಾಗಿ ಅವತರಿಸಿದ್ದಾರೆ. ಹೀಗೆ ಒಬ್ಬೊಬ್ಬ ದೇವತೆಗಳು ಒಂದೊಂದು ರೂಪದಿಂದ ಅವತರಿಸಿ ಶ್ರೀರಾಮನ ಕೈಂಕರ್ಯಕ್ಕೆ ಸಿದ್ಧರಾಗುತ್ತಿದ್ದಾರೆ. ಶೇಷನು ಲಕ್ಷ್ಮಣನಾಗಿ, ಕಾಮನು ಭರತನಾಗಿ, ಅನಿರುದ್ಧನು ಶತ್ರುಜ್ಞನಾಗಿ ಅವತರಿಸಿದ್ದಾರೆ. ಅವರಲ್ಲಿ ಭಗವಂತನು ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಈ ಮೂರು ರೂಪಗಳಿಂದ ಅವಿಷ್ಟನಾಗಿದ್ದಾನೆ. ಸಾಕ್ಷಾತ್‌ ಲಕ್ಷ್ಮೇದೇವಿಯು ಜನಕರಾಜನ ಯಜ್ಞಭೂಮಿಯಲ್ಲಿ ನೇಗಿಲ ಸಾಲಿನಿಂದ ಪ್ರಾದುರ್ಭೂತಳಾಗಿದ್ದಾಳೆ.ಆದರೂ ಜನಕನ ಮಗಳೆಂದೇ ಪ್ರಸಿದ್ಧಳಾಗಿದ್ದಾಳೆ.

ವಿಶ್ವಾಮಿತ್ರರಿಂದ ಶ್ರೀರಾಮನ ಆಹ್ವಾನ

ವಿಶ್ವಾಮಿತ್ರ ಋುಷಿಗಳು ತಮ್ಮ ಯಜ್ಞವನ್ನು ರಕ್ಷಣೆ ಮಾಡಲು ಶ್ರೀರಾಮಚಂದ್ರನೊಬ್ಬನೇ ಸಮರ್ಥನಾಗಿದ್ದಾನೆಂದು ನಿರ್ಣಯಿಸಿದರು. ಒಲ್ಲದ ಮನದಿಂದ ದಶರಥನು ರಾಮ-ಲಕ್ಷ್ಮಣರನ್ನು ವಿಶ್ವಾಮಿತ್ರರ ಜೊತೆ ಕಳುಹಿಸಿಕೊಟ್ಟನು. ವಿಶ್ವಾಮಿತ್ರ ಋುಷಿಗಳು ರಾಮಲಕ್ಷ್ಮಣರನ್ನು ಕರೆದುಕೊಂಡು ತಮ್ಮ ಸಿದ್ಧಾಶ್ರಮಕ್ಕೆ ತೆರಳಿದರು.

Story of Lord Rama you must know on this Ramanavami Occasion dpl

ವಿಶ್ವಾಮಿತ್ರ ಋುಷಿಗಳನ್ನು ಅನುಗ್ರಹ ಮಾಡುವ ದೃಷ್ಟಿಯಿಂದ ಲಕ್ಷ್ಮಣಸಹಿತನಾದ ಶ್ರೀರಾಮಚಂದ್ರನು ಅವರಿಂದ ಅಸ್ತ್ರಗಳ ಉಪದೇಶವನ್ನು ಪಡೆದುಕೊಂಡನು. ತಾಟಕಿಯನ್ನು ಒಂದೇ ಬಾಣದಿಂದ ಅನಾಯಾಸವಾಗಿ ಕೊಂದು, ರುದ್ರವರದಿಂದ ಅವಧ್ಯನಾದ ಸುಬಾಹುವನ್ನು ಸಂಹಾರ ಮಾಡಿದನು . ವಿಶ್ವಾಮಿತ್ರರ ಯಜ್ಞವು ನಿರಾತಂಕವಾಗಿ ಸಮಾಪ್ತವಾಯಿತು. ಇದೇ ಸಮಯದಲ್ಲಿ ಶುಭವಾರ್ತೆಯು ದಿಕ್ಕು ದಿಕ್ಕುಗಳಲ್ಲಿ ಹರಡುತ್ತಿತ್ತು. ‘ವಿದೇಹರಾಜನಾದ ಜನಕನು ತನ್ನ ಮಗಳಾದ ಸೀತೆಯ ಸ್ವಯಂವರವನ್ನು ಏರ್ಪಾಟು ಮಾಡಿದ್ದಾನೆ’ ಎಂಬ ಘೋಷಣೆ ಪ್ರತಿಧ್ವನಿಸುತ್ತಿತ್ತು. ಅದನ್ನು ಕೇಳಿದ ಶ್ರೀರಾಮಚಂದ್ರನು ವಿಶ್ವಾಮಿತ್ರರನ್ನು ಹಿಂಬಾಲಿಸುತ್ತ ಆ ಜನಕರಾಜನ ಪಟ್ಟಣದತ್ತ ಹೊರಟನು.

ರಾಮಾಯಣವೆಂಬ ವೇದದಲ್ಲಿ ರಾಮನೆಂಬ ಪರಬ್ರಹ್ಮ

ತಮ್ಮ ರಾಜ್ಯಕ್ಕೆ ಆಗಮಿಸಿದ ಅವರನ್ನು ಕಂಡು ಜನಕನಿಗೆ ಅಪಾರ ಆನಂದವಾಯಿತು. ತನ್ನ ಮಗಳಿಗೆ ಅನುರೂಪನಾದ ವರ ಇವನೊಬ್ಬನೇ ಎಂಬುದಾಗಿಯೂ ತಿಳಿದುಬಿಟ್ಟನು. ಅದೇ ಸಂದರ್ಭದಲ್ಲಿ ವಿಶ್ವಾಮಿತ್ರ ಋುಷಿಗಳು ಶ್ರೀರಾಮಚಂದ್ರನನ್ನು ನಿನ್ನ ಅಳಿಯನನ್ನಾಗಿ ಸ್ವೀಕರಿಸು ಎಂದು ಹೇಳಿದರು. ಆಗ ಜನಕರಾಜನು ಭಕ್ತಿಯಿಂದ ವಿಶ್ವಾಮಿತ್ರರ ಮುಂದೆ ಹೀಗೆ ಪ್ರಾರ್ಥಿಸುತ್ತಾನೆ : ಯಾರಿಂದಲೂ ಎತ್ತಲು ಸಾಧ್ಯವಾಗದ ಆಯುಧವನ್ನು ನಾನು ರುದ್ರದೇವರಿಂದ ಪಡೆದುಕೊಂಡಿದ್ದೇನೆ. ರುದ್ರದೇವರನ್ನು ಬಿಟ್ಟು ಬೇರೆ ಯಾರಿಂದಲೂ ಅದು ಅಲುಗಾಡಿಸಲು ಕೂಡ ಸಾಧ್ಯವಿಲ್ಲ. ಈ ಧನುಸ್ಸನ್ನು ಎತ್ತಿ ಬಿಲ್ಲಿಗೆ ಹೆದೆ ಏರಿಸುವವನಿಗೆ ನನ್ನ ಕನ್ಯೆಯನ್ನು ಕೊಡುತ್ತೇನೆ’ ಎಂಬುದಾಗಿ ಪ್ರತಿಜ್ಞೆ ಮಾಡಿರುತ್ತೇನೆ. ದೈತ್ಯ, ದಾನವ, ಯಕ್ಷ, ರಾಕ್ಷಸರೆಲ್ಲರೂ ಬಂದು ಈ ಧನುಸ್ಸನ್ನು ಎತ್ತಲು ಪ್ರಯತ್ನ ಪಟ್ಟಿದ್ದಾರೆ. ರಾವಣನೂ ಕೂಡ ಧನುಸ್ಸನ್ನು ಎತ್ತಿಬಿಡುತ್ತೇನೆ ಎಂಬ ಅಹಂಕಾರದಿಂದ ಆಗಮಿಸಿದ್ದನು. ಆದರೆ ಧನುಸ್ಸನ್ನು ಎತ್ತಲು ಹೋಗಿ ಬೆವರಿಹೋದನು. ಎಲ್ಲ ರಾಜರು ಅಸಮರ್ಥರಾಗಿ ಇಲ್ಲಿಂದ ಹೊರಟು ಹೋಗಿದ್ದಾರೆ. ನನ್ನ ಈ ಮನೋಭಿಲಾಷೆಯನ್ನು ಪೂರೈಸಿ ರಾಮಚಂದ್ರನು ನನ್ನ ಮಗಳನ್ನು ಸ್ವೀಕರಿಸಿ ಉದ್ಧರಿಸಲಿ. ಇವನು ಅಳಿಯನಾಗಬೇಕೆಂಬುದೇ ನನ್ನ ಹೆಬ್ಬಯಕೆ’’.

ಜನಕನ ಮಾತುಗಳನ್ನು ಕೇಳಿ ಮಂದಹಾಸದಿಂದ ಕೂಡಿದ ವಿಶ್ವಾಮಿತ್ರರು ‘ತಥಾಸ್ತು’ ಎಂದರು. ಜನಕರಾಜನ 500 ಮಂದಿ ಸೇವಕರು ಶೇಷನ ದೇಹದಂತಿರುವ ಆ ಧನುಸ್ಸನ್ನು ಎಳೆದುಕೊಂಡು ಬಂದರು. ಸಭಾಮಧ್ಯದಲ್ಲಿ ಧನುಸ್ಸು ಶೋಭಾಯಮಾನವಾಗಿ ಕಾಣಿಸುತ್ತಿತ್ತು. ರಾಮಚಂದ್ರನು ಗುರುಗಳಾದ ವಿಶ್ವಾಮಿತ್ರರಿಗೆ ನಮಿಸಿ, ಮಂದಹಾಸ ಬೀರುತ್ತಾ ಧನುಸ್ಸಿರುವ ಕಡೆ ನಡೆದು ಹೋದನು. ನಸುನಗುತ್ತಲೇ ಎಡಗೈಯಿಂದ ಧನುಸ್ಸನ್ನು ಅನಾಯಾಸವಾಗಿ ಎತ್ತಿ ಹೆದೆ ಏರಿಸಿದನು. ಐರಾವತವು ಕಬ್ಬಿನ ಕೋಲನ್ನು ಹೇಗೆ ಅನಾಯಾಸವಾಗಿ ಮುರಿದು ಹಾಕುತ್ತದೋ ಅದರಂತೆ ರುದ್ರದೇವರ ಧನುಸ್ಸನ್ನು ಶ್ರೀರಾಮಚಂದ್ರನು ಅನಾಯಾಸವಾಗಿ ಮುರಿದು ಬಿಟ್ಟನು.

ಪಂಚಾಂಗ : ಸಂತಾನ ಸಪ್ತಮಿಯಂದು ಕೃಷ್ಣನ ಮಂತ್ರ ಜಪಿಸುವುದರಿಂದ ಫಲಪ್ರದವಾಗುವುದು

ಸೀತೆಯು ಎಂದೂ ಬಾಡದ ಕಮಲದ ಮಾಲೆಯನ್ನು ಕೈಗಳಲ್ಲಿ ಹಿಡಿದು ಅತ್ಯಂತ ಮನೋಹರವಾದ ಪುಟ್ಟಹೆಜ್ಜೆಗಳನ್ನು ಇಡುತ್ತಾ ಕಮಲದಂತೆ ಕಣ್ಣುಗಳಿಂದ ಭೂಮಿಯನ್ನು ನೋಡುತ್ತಾ ಮೆಲ್ಲ ಮೆಲ್ಲನೆ ಶ್ರೀರಾಮಚಂದ್ರನ ಬಳಿಗೆ ಬಂದು ಆ ಕಮಲದ ಮಾಲೆಯನ್ನು ಶ್ರೀರಾಮಚಂದ್ರನ ಹೆಗಲಿಗೆ ಹಾಕಿ ಪಕ್ಕದಲ್ಲಿ ನಿಂತಳು. ಮುಂದೆ, ಅಗ್ನಿಯಲ್ಲಿ ವಿಧಿವತ್ತಾಗಿ ವಿವಾಹಹೋಮವು ನಡೆಯಿತು. ಸೀತಾರಾಮರ ಕಲ್ಯಾಣ ಮಹೋತ್ಸವವನ್ನು ಕಾಣಲು ಗಗನ ಮಾರ್ಗದಲ್ಲಿ ಸಕಲದೇವತೆಗಳು ವಿಮಾನಗಳ ಸಮೂಹಗಳಿಂದ ಆಗಮಿಸಿದ್ದರು. ಗಗನದಿಂದ ದೇವತೆಗಳ ಪಟಹಗಳು, ಶಂಖಧ್ವನಿಗಳು, ಭೇರಿಮೃದಂಗಗಳು ಮೊಳಗಿದವು. ಗಂಧರ್ವರು ಹಾಡಿದರು. ಅಪ್ಪರೆಯರು ನರ್ತನಮಾಡಿದರು. ಹೇಗೆ ಹಿಂದೆ ಲಕ್ಷ್ಮೀಸ್ವಯಂವರದಲ್ಲಿ ದೇವತೆಗಳ ಸಮಾಗಮವಾಗಿತ್ತೋ ಅದೇ ರೀತಿಯಲ್ಲಿ ಸೀತಾಸ್ವಯಂವರದಲ್ಲೂ ಸಕಲದೇವತೆಗಳ ಸಮಾಗಮವಾಯಿತು:

ಪ್ರಗೃಹ್ಯ ಪಾಣಿಂ ಚ ನೃಪಾತ್ಮಜಾಯಾ

ರರಾಜ ರಾಜೀವಸಮಾನನೇತ್ರಃ

Follow Us:
Download App:
  • android
  • ios