2026ರ ಕುರಿತು ಬಾಬಾ ವಂಗಾ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಈ ವರ್ಷ ಕೃತಕ ಬುದ್ಧಿಮತ್ತೆಯು (Baba Vanga Prediction 2026) ಮನುಷ್ಯರನ್ನು ಮೀರಿ ಬೆಳೆಯಲಿದ್ದು, ಅನೂಹ್ಯವಾದ ಅಪಾಯವನ್ನು ತರಲಿದೆ ಎಂದು ಅವರು ಎಚ್ಚರಿಸಿದ್ದಾರೆ. 

ಬಾಬಾ ವಂಗಾ ಬಗ್ಗೆ ನಿಮಗೆ ಗೊತ್ತೇ ಇದೆ. 2026 ವರ್ಷ ಸಮೀಪಿಸುತ್ತಿರುವಂತೆ ಬಾಬಾ ವಂಗಾ ಭವಿಷ್ಯವಾಣಿಗಳು ಸದ್ದು ಮಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಆಕೆ ಪ್ರಾಕೃತಿಕ ವಿಕೋಪಗಳ ಬಗ್ಗೆ ಹೇಳಿರುವುದರ ಜೊತೆಜೊತೆಗೇ, ಮನುಷ್ಯರಿಂದಲೇ ಸೃಷ್ಟಿಯಾದ ಯಂತ್ರಗಳು ಮನುಷ್ಯರನ್ನೇ ನಿಷ್ಕ್ರಿಯರನ್ನಾಗಿಸಲಿವೆ ಎಂದು ಹೇಳಿದ್ದೂ ಸದ್ದು ಮಾಡುತ್ತಿವೆ. ಆಕೆ ಹೇಳಿದ್ದೇನು ಎಂಬುದರ ಬಗ್ಗೆ ವಿಜ್ಞಾನ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗ ಎಲ್ಲೆಡೆ ಎಐ (ಕೃತ ಬುದ್ಧಿಮತ್ತೆ) ರೋಬೋಟ್‌ಗಳು ತಲೆ ಎತ್ತುತ್ತಿವೆ. ಆಕೆ ಇದರ ಬಗ್ಗೆ ಹೇಳಿರಬಹುದು ಎಂಬುದು ಹೆಚ್ಚಿನವರ ಊಹೆ.

ಮಾನವನನ್ನು ಮೀರಿಸುವ ಯಂತ್ರಗಳು

ಈಗಾಗಲೆ ಎಐ ಇಡೀ ವಿಶ್ವದ ನಿದ್ದೆಗಡಿಸಿದೆ. ಅದರಲ್ಲೂ 2026ರಲ್ಲಿ ಎಐ ಮಾನವರನ್ನು ಹಿಂದಿಕ್ಕಿ ಬುದ್ದಿವಂತಿಕೆಯಲ್ಲಿ ಮುಂದೆ ಸಾಗಲಿವೆ ಎಂಬುದು ವಂಗಾ ಭವಿಷ್ಯವಾಣಿ. ಅವರ ಪ್ರಕಾರ ಮಾನವನ ಜಾಗದಲ್ಲಿ ಅಥವಾ ಹಲವು ಕೆಲಸಗಳಲ್ಲಿ ಕೃತಕ ಯಂತ್ರಗಳು ಓಡಾಡಲಿವೆ. ಇದರಿಂದ ಕೋಟ್ಯಂತರ ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಮಾತ್ರವಲ್ಲ ಮುಂದೊಂದು ದಿನ ಈ ಯಂತ್ರಗಳು ಮನುಷ್ಯನ ಆಡಳಿತವನ್ನೂ ನಿರಾಕರಿಸಲಿವೆ. ಮನುಷ್ಯನನ್ನು ಮೀರಿ ಹೋಗುವ ಪ್ರಯತ್ನ ಇವು ಮಾಡಲಿವೆ. ಇದನ್ನು ಮನುಷ್ಯರು ಎದುರಿಸಿದರೆ ಮಾನವರನ್ನೇ ಇವು ಬುಲ್‌ಡೋಜರ್‌ನಂತೆ ತಮ್ಮಿಷ್ಟದಂತೆ ಕೆಡವಿಕೊಂಡು ಮುಂದುವರಿಯಲಿವೆ ಎಂದು ಮಾನವಕುಲಕ್ಕೆ ಮುನ್ನೆಚ್ಚರಿಕೆಯಾಗುವಂಥ ಮಾತುಗಳನ್ನು ಹೇಳಿದ್ದಾಳೆ. ಎಐಯ ಬೆಳವಣಿಗೆಯನ್ನು ನೋಡುತ್ತಿದ್ದರೆ ಆಕೆ ಹೇಳುತ್ತಿರುವುದರಲ್ಲಿ ಹೆಚ್ಚಿನ ವಿಷಯಗಳು 2026ರಲ್ಲಿ ನಿಜವಾಗಲಿವೆ ಎಂದು ಕಾಣುತ್ತದೆ.

2026ರಲ್ಲಿ ಮೊದಲ ಬಾರಿಗೆ ಮಾನವರಿಗೆ ಏಲಿಯನ್ ಕುರಿತಾದ ದೊಡ್ಡ ಸಾಕ್ಷಿ ಅಥವಾ ಮಾಹಿತಿ ಸಿಗಬಹುದು ಎಂದು ಅವರು ಹೇಳಿದ್ದಾರೆ. 2026ರ ನವೆಂಬರ್‌ನಲ್ಲಿ ಅನ್ಯಗ್ರಹ ಜೀವಿಗಳ ಕುರಿತಾದ ದೊಡ್ಡ ವಿಚಾರವೊಂದು ತಿಳಿದುಬರಲಿದೆ ಎಂದಿದ್ದಾರೆ. ಅವರ ಈ ಹೇಳಿಕೆ ಬಹಳ ಚರ್ಚೆ ಹುಟ್ಟುಹಾಕಿದೆ. 2026ರಲ್ಲಿ ಹಲವು ರೀತಿಯ ನೈಸರ್ಗಿಕ ವಿಕೋಪಗಳ ಕುರಿತಾಗಿ ಅವರು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ದ್ವೀಪರಾಷ್ಟ್ರಗಳ ಪಾಲಿಗೆ 2026ರ ಬಹಳ ನೋವಿನ ವರ್ಷವಂತೆ. ಹಲವು ಬಾರಿ ಭೂಕಂಪನಗಳು ಸಂಭವಿಸುವುದಾಗಿ ಅವರು ಹೇಳಿದ್ದಾರೆ. ಹಾಗೆ ಹಲವು ಜ್ವಾಲಾಮುಖಿಗಳು ಆಗಸದೆತ್ತರಕ್ಕೆ ಚಿಮ್ಮಲಿವೆ ಎಂದಿದ್ದಾರೆ. ಹಲವು ವರ್ಷದಿಂದ ಸುಪ್ತ ಸ್ಥಿತಿಯಲ್ಲಿರುವ ಜ್ವಾಲಾಮುಖಿ ಸ್ಫೋಟವು ಹಲವು ರೀತಿಯಾಗಿ ಅನಾಹುತಗಳ ತರಲಿವೆ ಎಂದಿದ್ದಾರೆ.

ಬಲ್ಗೇರಿಯಾದ ಭವಿಷ್ಯಗಾರ್ತಿಯಾದ ಬಾಬಾ ವಂಗಾ ಅವರು ತಮ್ಮ ಜೀವಿವಾವಧಿಯಲ್ಲಿ (1911 - 1996) ಹೇಳಿದ ಅನೇಕ ವಿಚಾರಗಳು ಈಗಲೂ ನಿಜವಾಗುತ್ತಿವೆ. ಬಾಬಾ ವಂಗಾ ಎಂಬ ಹೆಸರಿನ ವೆಂಜೇರಿಯಾ ಪಾಂಡೇವಾ ಗುಶ್ಟೆರೊವಾ ಅವರು 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಆದರೆ, ಅಲ್ಲಿಂದ ಅವರು ತಮ್ಮಲ್ಲಿನ ಅತೀಂದ್ರಿಯ ಶಕ್ತಿಗಳಿಂದ ಭವಿಷ್ಯವಾಣಿಗಳನ್ನು ನುಡಿಯಲು ಆರಂಭಿಸಿದರು. ಯುದ್ಧಗಳು, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳ ಬಗ್ಗೆ ಅವರು ಹೇಳಿದ್ದೆಲ್ಲವೂ ಸತ್ಯವಾಗುತ್ತಿದೆ.

ಕೊರೊನಾದಂಥ ಸಾಂಕ್ರಾಮಿಕ ರೋಗದ ಬಗ್ಗೆ, 1990ರ ದಶಕದ ಕೊಲ್ಲಿ ಯುದ್ಧದ ಬಗ್ಗೆ, ಅನೇಕ ನೈಸರ್ಗಿಕ ಪ್ರಕೋಪಗಳ ಬಗ್ಗೆ ಅವರು ನುಡಿದಿದ್ದ ಭವಿಷ್ಯವಾಣಿಗಳು ನಿಜವಾಗಿವೆ. 1996ರಲ್ಲಿ ಅವರು ವಿಧಿವಶರಾಗುವ ಮುಂಚೆ, ಇಂಡೋ ಪಾಕ್ ಯುದ್ಧದ ಬಗ್ಗೆಯೂ ಹೇಳಿದ್ದರು. ಆಗ 1971ರ ಇಂಡೋ - ಪಾಕ್ ಯುದ್ಧ ಮುಗಿದಿತ್ತು. ಆದರೆ, ಮತ್ತೊಂದು ಯುದ್ಧದ ಮುನ್ಸೂಚನೆಯನ್ನು ನೀಡಿದ್ದರು ಅವರು. 2025ರಲ್ಲಿ ಅದು ಭಾಗಶಃ ನೆರವೇರಿದೆ. ಯುರೋಪಿನ ಆಂತರಿಕ ಕಲಹ, ವೈದ್ಯಕೀಯ ಕ್ರಾಂತಿ, ಮತ್ತು ಮಾನವ-ಏಲಿಯನ್ ಸಂವಹನ ಮುಂತಾದವುಗಳಿವೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಯುದ್ಧಗಳು, ಭೂಕಂಪಗಳು, ನೈಸರ್ಗಿಕ ಪ್ರಕೋಪಗಳು, ಕರೊನಾ ಸೋಂಕಿನ ದಿನಗಳು ಇತ್ಯಾದಿಗಳ ಬಗ್ಗೆ ಬಾಬಾ ವಂಗಾ ಮೊದಲೇ ಭವಿಷ್ಯವಾಣಿ ಹೇಳಿದ್ದರು. ಅಷ್ಟೇ ಅಲ್ಲ, 2028ರಲ್ಲಿ ಹೊಸ ಬಗೆಯ ಮತ್ತೊಂದು ವೈರಸ್ ಕಾಣಿಸಿಕೊಂಡು ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತದೆ ಎಂದು ಹೇಳಿದ್ದರು.