ಶ್ರೀನಿವಾಸ ಜೋಕಟ್ಟೆ

ಭಗವಾನ್ ಗಣೇಶನ ಅತೀ ದೊಡ್ಡ ಪರ್ವ ಗಣೇಶ ಚತುರ್ಥಿ. ವಿಶ್ವದಾದ್ಯಂತ ಸಂಭ್ರಮದಿಂದ ಗಣೇಶನನ್ನು ಆರಾಧಿಸುತ್ತಾರೆ. ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿ ತನಕ ವಿಜೃಂಭಣೆಯಿಂದ ಮುಂಬಯಿಯಲ್ಲಿ ಹನ್ನೊಂದು
ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಲಗಳು, 2 ಲಕ್ಷಕ್ಕೂ ಹೆಚ್ಚು ಮನೆಗಳು ಉತ್ಸವವನ್ನು ಆಚರಿಸುತ್ತವೆ. ಈ ವರ್ಷ ಸೆ.2ರ ಗಣೇಶ ಚತುರ್ಥಿಯಿಂದ ಆರಂಭಗೊಂಡು ಸೆಪ್ಟಂಬರ್ 12ರ ಅನಂತ ಚತುರ್ದಶಿ ತನಕ 11 ದಿನಗಳ ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವದ ಸಂಭ್ರಮದಲ್ಲಿದ್ದಾರೆ.

ಮಂಡ್ಯ: ಗಣೇಶ ಕೂರಿಸುವವರು ಪಾಲಿಸಲೇಬೇಕಾದ ನಿಯಮಗಳಿವು..!

ಒಂದೂವರೆ ದಿನ, 3 ದಿನ, 5 ದಿನ, 7 ದಿನ , 11 ದಿನಗಳ...... ಕಾಲ ಗಣೇಶ ಪ್ರತಿಮೆ ಪೂಜಿಸಿ ವಿಸರ್ಜಿಸುತ್ತಾರೆ. ನಮ್ಮ ಕಚೇರಿ ಮುಂಬಯಿಯ ಪ್ರಖ್ಯಾತ ‘ಲಾಲ್‌ಬಾಗ್ ಕಾ ರಾಜಾ’ ಗಣೇಶ ಮಂಡಲದ ಪಕ್ಕದಲ್ಲಿ. ಈ 11 ದಿನಗಳ ಕಾಲ ನಮಗೆ ಆಫೀಸ್ ತಲುಪುವುದೇ ಬಹು ಪ್ರಯಾಸದ ಸಂಗತಿ. ಆ ದಾರಿಯಲ್ಲಿ ಒಳಹೋಗಲು ನಮಗೆ ವಂಡಳಿಯ ಐಡಿ ಕಾರ್ಡ್ ಪಡೆಯಬೇಕಾಗುತ್ತದೆ. ರಾತ್ರಿ ಹಗಲು ಇಲ್ಲಿ ಭಕ್ತರ ಕ್ಯೂ. ಸಾವಿರಾರು ಪೊಲೀಸರ ಕಾವಲು. 2 ತಿಂಗಳ ಮೊದಲೇ ಮಂಟಪ ನಿರ್ಮಾಣ ಕಾರ್ಯ ಆರಂಭ. ಸಾವಿರಾರು ಭಕ್ತರಿಗೆ ಕ್ಯೂ ನಿಲ್ಲಲು ವ್ಯವಸ್ಥೆ ಇಂತಹ ಸಿದ್ಧತೆಗಳು ನಡೆಯುತ್ತವೆ. ದಾದರ್, ಪರೇಲ್ , ಲಾಲ್‌ಬಾಗ್, ಗಿರ್ಗಾಂವ್.....

ಗೌರಿ ಗಣೇಶ್ ಹಬ್ಬದ ವಿಶೇಷ: KSRTCಯಿಂದ ಹೆಚ್ಚುವರಿ ಬಸ್, ರಿಯಾಯಿತಿಯೂ ಉಂಟು

ಇಲ್ಲೆಲ್ಲ ರಸ್ತೆಗಳು ಗಣೇಶಮಯ. ಈಗಲೇ ನಡೆದಾಡಲು ಸಾಧ್ಯವಿಲ್ಲದಷ್ಟು ನೂಕು ನುಗ್ಗಲು ಖರೀದಿಗಾಗಿ. ಡೇರೆ ಹಾಕಿ ಗಣೇಶ ಪ್ರತಿಮೆಗಳನ್ನು ತಯಾರಿಸುವವರಿಗೆ ಬಿಡುವೇ ಸಿಗುತ್ತಿಲ್ಲ. ಮುಂಬಯಿಯ ಸಾವಿರಾರು ಕಡೆ ಈಗಾಗಲೇ ಗಣೇಶ ಮೂರ್ತಿಗಳನ್ನು ಭಕ್ತರ ಖರೀದಿಗಾಗಿ ಪ್ರದರ್ಶನಕ್ಕಿಡಲಾಗಿದೆ. ದೊಡ್ಡ ದೊಡ್ಡ ಗಣೇಶ ಪ್ರತಿಮೆಗಳ ನಿರ್ಮಾಣ ಪೂರ್ಣಗೊಂಡಿದೆ. ಕೆಲವು ದೊಡ್ಡ ಗಣೇಶ ಪ್ರತಿಮೆಗಳನ್ನು ಶೃಂಗಾರ ಮಾಡಲು ಈಗಾಗಲೇ ಮಂಟಪಕ್ಕೆ ಒಯ್ಯಲಾಗಿದೆ. ಅನೇಕ ಅಂಗಡಿಗಳಲ್ಲಿ ‘ಪೇಣ್‌ನ ಗಣೇಶ ಪ್ರತಿಮೆಗಳು ಇಲ್ಲಿ ದೊರೆಯುವುದು’ ಎಂಬ ಬೋರ್ಡ್ ನೇತು ಹಾಕಿರುವುದನ್ನೂ ಕಾಣಬಹುದು. ಪೇಣ್ ಎಂಬ ಊರಿನಲ್ಲಿ ನಿರ್ಮಿಸಲಾದ ಗಣೇಶ ಪ್ರತಿಮೆಗಳಿಗೆ ಹೆಚ್ಚಿನ ಬೇಡಿಕೆ. 

ಗಣಪನ ನೈವೇದ್ಯಕ್ಕೆ ಹೀಗೆಲ್ಲ ಮಾಡ್ಬಹುದು ಮೋದಕ!

ಇಲ್ಲೆಲ್ಲ ರಸ್ತೆಗಳು ಗಣೇಶಮಯ. ಈಗಲೇ ನಡೆದಾಡಲು ಸಾಧ್ಯವಿಲ್ಲದಷ್ಟು ನೂಕು ನುಗ್ಗಲು ಖರೀದಿಗಾಗಿ. ಡೇರೆ ಹಾಕಿ ಗಣೇಶ ಪ್ರತಿಮೆಗಳನ್ನು ತಯಾರಿಸುವವರಿಗೆ ಬಿಡುವೇ ಸಿಗುತ್ತಿಲ್ಲ. ಮುಂಬಯಿಯ ಸಾವಿರಾರು ಕಡೆ ಈಗಾಗಲೇ ಗಣೇಶ ಮೂರ್ತಿಗಳನ್ನು ಭಕ್ತರ ಖರೀದಿಗಾಗಿ ಪ್ರದರ್ಶನಕ್ಕಿಡಲಾಗಿದೆ. ದೊಡ್ಡ ದೊಡ್ಡ ಗಣೇಶ ಪ್ರತಿಮೆಗಳ ನಿರ್ಮಾಣ ಪೂರ್ಣಗೊಂಡಿದೆ. ಕೆಲವು ದೊಡ್ಡ ಗಣೇಶ ಪ್ರತಿಮೆಗಳನ್ನು ಶೃಂಗಾರ ಮಾಡಲು ಈಗಾಗಲೇ ಮಂಟಪಕ್ಕೆ ಒಯ್ಯಲಾಗಿದೆ. ಅನೇಕ ಅಂಗಡಿಗಳಲ್ಲಿ ‘ಪೇಣ್‌ನ ಗಣೇಶ ಪ್ರತಿಮೆಗಳು ಇಲ್ಲಿ ದೊರೆಯುವುದು’ ಎಂಬ ಬೋರ್ಡ್ ನೇತು ಹಾಕಿರುವುದನ್ನೂ ಕಾಣಬಹುದು. ಪೇಣ್ ಎಂಬ ಊರಿನಲ್ಲಿ ನಿರ್ಮಿಸಲಾದ ಗಣೇಶ ಪ್ರತಿಮೆಗಳಿಗೆ ಹೆಚ್ಚಿನ ಬೇಡಿಕೆ. 

ಹಬ್ಬದೊಂದಿಗೆ ಪರಿಸರ ಕಾಳಜಿಯೂ ಇರಲಿ!

ಮುಂಬಯಿಯಲ್ಲಿ ಬಹು ಪ್ರಸಿದ್ಧ ಎನಿಸಿದ ನೂರಾರು ಗಣೇಶ ಮಂಡಳಿಗಳಿವೆ. ಲಾಲ್‌ಭಾಗ್ ಚಾ ರಾಜಾ ಗಣೇಶೋತ್ಸವ ಮಂಡಳಿಯ ಸ್ಥಾಪನೆ 1934 ರಲ್ಲಿ ಆಗಿದೆ. ಭಕ್ತರು ಐದು ಕಿ.ಮೀ ದೂರದ ತನಕವೂ ಇಲ್ಲಿ ಸಾಲಲ್ಲಿ ನಿಂತು ದರ್ಶನ ಪಡೆಯುತ್ತಾರೆ. ಅತೀ ಶ್ರೀಮಂತ ಜಿ.ಎಸ್.ಬಿ. ಸೇವಾ ಮಂಡಳದ ಗಣೇಶ, ಅಂಧೇರಿ ಚಾ ರಾಜಾ, ಸಹ್ಯಾದ್ರಿ ಕ್ರೀಡಾ ಮಂಡಳಿಯ ಗಣೇಶ, ಖೇತವಾಡಿಯ ಗಣೇಶ ಮಂಡಳ, ಈ ಬಾರಿ ನೂರನೇ ವರ್ಷದ ಸಂಭ್ರಮದಲ್ಲಿರುವ ಚಿಂಚ್ ಪೋಕ್ಲಿ ಚಿಂತಾಮಣಿ ಗಣೇಶ ಮಂಡಳಿ, ಗಣೇಶ ಗಲ್ಲಿ ಗಣಪತಿ ಮಂಡಳ...... ಹೀಗೆ ಅನೇಕ ಗಣೇಶ ಮಂಡಳಿಗಳು ಭಕ್ತರನ್ನು ಆಕರ್ಷಿಸುತ್ತಾ ಬಂದಿವೆ. 

ಅಪರೂಪದ ಅತ್ತೆ ಸೊಸೆ: ಇವರ ಮನೆ ಗೆಜ್ಜೆವಸ್ತ್ರದ ಪುಟ್ಟ ಬೊಗಸೆ

ಸಮುದ್ರತೀರ ಇರುವ ಮುಂಬಯಿಯಲ್ಲಿ ಅಷ್ಟೇ ಸಂಭ್ರಮದ ವಿಸರ್ಜನಾ ಮೆರವಣಿಗೆಯೂ ಕಂಡುಬರುವುದರಿಂದ ಮುಂಬಯಿ ಗಣೇಶೋತ್ಸವಕ್ಕೆ ವಿಶೇಷ ಆಕರ್ಷಣೆ. ಈಸಮಯ ‘ಗೋ ಗ್ರೀನ್’ ಗಣೇಶೋತ್ಸವದ ಸ್ಲೋಗನ್. ಮುಂಬಯಿಯ ಹನ್ನೊಂದು ಸಾವಿರ ಗಣಪತಿ ಮಂಡಲಗಳ ನೇತೃತ್ವದ ‘ಬೃಹನ್ ಮುಂಬಯಿ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿ’ ಯ ಅಧ್ಯಕ್ಷ ನರೇಶ್ ದಹಿಬಾವ್ಕರ್ ಗಣೇಶಮಂಡಲಗಳಿಗೆ ನಿಯಮ ಜಾರಿಗೊಳಿಸಿದ್ದಾರೆ.
ಅದರಲ್ಲಿ ಫಿಲ್ಮಿ ಹಾಡುಗಳನ್ನು ಗಣೇಶ ಮಂಡಲಗಳು ಹಾಕದಂತೆ ಆದೇಶಿಸಿದೆ. 

ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವ. ಸಮುದ್ರ ತೀರವನ್ನು ಹೊಂದಿರುವ ಮುಂಬಯಿ ಮಹಾನಗರದ ಸಾರ್ವಜನಿಕ ಗಣೇಶೋತ್ಸವಕ್ಕಂತೂ ತನ್ನದೇ ಆದ ವೈಭವಗಳಿವೆ. ಈ ಬಾರಿಯೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆಗಳಿವೆ ಎನ್ನುತ್ತಾರೆ ಗಣೇಶ ಮೂರ್ತಿಗಳ ಮಾರಾಟಗಾರರು. ಮುಂಬಯಿಯಾದ್ಯಂತ ಅಲಂಕಾರ ಸಾಮಗ್ರಿಗಳ ಅಂಗಡಿಗಳಲ್ಲಿ ಖರೀದಿ ದೃಶ್ಯ ಜೋರಾಗಿದೆ. ಅಲಂಕಾರ ವಸ್ತುಗಳಲ್ಲಿ ಚೈನಿಸ್ ವಸ್ತುಗಳಿಗೆ ಬಹಿಷ್ಕಾರ.

ಬೆರಣಿ ಗಣೇಶ ಬಂದ.. ಪರಿಸರಕ್ಕೆ ತಾನೇ ಪೂರಕ ಎಂದ

ಪುಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕರು 1893ರಲ್ಲಿ ಆರಂಭಿಸಿದ ಈ ಸಾರ್ವಜನಿಕ ಗಣೇಶೋತ್ಸವ ಆ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದ ಒಂದು ಅಂಗವೇ ಎನಿಸಿತ್ತು. ಅಂದು ವಿಕ್ಟೋರಿಯಾ ರಾಣಿ ನೀಡಿದ ಆದೇಶದಲ್ಲಿ ‘ಬ್ರಿಟಿಷ್ ಸರಕಾರವು ಜನರ ಧಾರ್ಮಿಕ ಚಟುವಟಿಕೆಗಳಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿಕೆ ನೀಡಲಾಗಿತ್ತು. ಇದು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಲಾಭವೇ ಆಯ್ತು. 

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹೊಸ ಭಾರತದ ‘ಥೀಮ್’ ಮುಂಬಯಿಯ ಗಣೇಶ ಮಂಡಲಗಳಲ್ಲೂ ಕಾಣಿಸತೊಡಗಿತು. ಗಣೇಶನನ್ನು ಆಧುನಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ವಿವಿಧ ರೂಪಗಳನ್ನು ನೀಡುತ್ತಾ ಬರಲಾಯಿತು. ಮುಂಬಯಿ ನಗರ-ಉಪನಗರಗಳಲ್ಲಿ ಸಾವಿರಾರು ಪ್ರಮುಖ ಗಣೇಶೋತ್ಸವ ಮಂಡಲಗಳಿದ್ದರೂ ‘ಲಾಲ್‌ಭಾಗ್ ಚಾ ರಾಜಾ’ ಗಣಪತಿ ವೀಕ್ಷಿಸಲು ಭಕ್ತರು ಹೆಚ್ಚಿನ ಆಸಕ್ತಿ ತೋರಿಸುವುದನ್ನೂ ಕಾಣಬಹುದು. ಹತ್ತು ಗಂಟೆ
ಕಾಲ ಬೇಕಿದ್ದರೂ ಇಲ್ಲಿ ಗಣೇಶನ ಮುಖದರ್ಶನಕ್ಕಾಗಿ ಭಕ್ತರು ಸಾಲಲ್ಲಿ ನಿಲ್ಲುತ್ತಾರೆ.

ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ನೀಡಬಹುದಾದ 4 ಉಡುಗೊರೆ!

ಮುಂಬಯಿಯ ವಿವಿಧ ಗಣೇಶ ಮಂಡಲಗಳು ತಮ್ಮ ವತಿಯಿಂದ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಶಾಲಾ ಮಕ್ಕಳಿಗೆ ನೆರವು, ಆರ್ಥಿಕ ಸಂಕಷ್ಟದ ರೋಗಿಗಳಿಗೆ ನೆರವು.. ಹೀಗೆಲ್ಲಾ ಸಹಾಯ ಮಾಡುತ್ತವೆ. ಪ್ಲಾಸ್ಟಿಕ್ ನಿಷೇಧ, ಕನ್ಯಾ ಸಂತತಿಗೆ ಪ್ರೋತ್ಸಾಹ, ಸಾಕ್ಷರತೆ ವೃದ್ಧಿ, ಗುಟ್ಕಾ, ತಂಬಾಕುಗಳ ನಿಷೇಧ ಇತ್ಯಾದಿ ಸಂದೇಶಗಳನ್ನು ಭಕ್ತರಿಗೆ ನೀಡುತ್ತವೆ. 

ಪ್ರತೀಸಲ ಮಹಾನಗರ ಪಾಲಿಕೆ ‘ಇಕೋ ಫ್ರೆಂಡ್ಲಿ’ ಗಣಪತಿ ಪ್ರತಿಮೆ ಸ್ಥಾಪಿಸುವಂತೆ ಭಕ್ತ ಜನತೆಗೆ ಮನವಿ ಮಾಡುತ್ತಾ ಬಂದಿದೆ. ಕೆಲವು ಎನ್.ಜಿ.ಓ.ಗಳೂ ಈ ನಿಟ್ಟಿನಲ್ಲಿ ಪ್ರಚಾರ ಮಾಡುತ್ತಿವೆ. ಗೃಹಗಳಲ್ಲಿ ಸ್ಥಾಪಿಸಲಾದ ಗಣೇಶ ಪ್ರತಿಮೆಗಳ ವಿಸರ್ಜನೆಗಾಗಿ ಅಲ್ಲಲ್ಲಿ ಕೃತಕ ಬಾವಿಗಳನ್ನು ವಿಸರ್ಜನೆಯ ದಿನಗಳಲ್ಲಿ ತೆರೆಯಲಾಗುತ್ತದೆ. ಎರಡು ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ, ಹನ್ನೊಂದು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಮಂಡಲಗಳಲ್ಲಿ ಗಣೇಶ ಪ್ರತಿಮೆಯನ್ನು ಮುಂಬಯಿಯಲ್ಲಿ ಸ್ಥಾಪಿಸುತ್ತಾ ಬಂದಿದ್ದಾರೆ.

ಮರೆಯಲಾಗದ ಗಣೇಶನ ಹಬ್ಬ ಆಚರಣೆಗೆ ಇಲ್ಲಿ ವಿಸಿಟ್ ಮಾಡಿ...

ಮುಂಬಯಿಯ ಪ್ರಮುಖ ಗಣೇಶೋತ್ಸವ ಮಂಡಲಗಳು ವಿಮೆ ಮಾಡಿಸಿಕೊಳ್ಳುತ್ತವೆ. ಜಿ.ಎಸ್.ಬಿ. ಸೇವಾ ಮಂಡಲ, ಕಿಂಗ್ಸ್ ಸರ್ಕಲ್ ಮುನ್ನೂರು ಕೋಟಿ ರೂಪಾಯಿ ವಿಮೆ ಮಾಡಿಸಿಕೊಂಡಿದ್ದೂ ಇದೆ. ಇದರಲ್ಲಿ ಭಕ್ತರ ಸುರಕ್ಷೆ, ಆಭರಣಗಳ ಸುರಕ್ಷೆ, ಬೆಂಕಿ, ಭೂಕಂಪದ ಸುರಕ್ಷೆ....ಇವೆಲ್ಲಾ ಸೇರಿವೆ. ಲಾಲ್ಬಾಗ್ ಕಾ ರಾಜಾ, ಅಂಧೇರಿ ಕಾ ರಾಜಾ, ವಡಾಲಾ ರಾಮ್‌ಮಂದಿರ ಗಣೇಶೋತ್ಸವ ಮಂಡಲಗಳೆಲ್ಲಾ ವಿಮೆ ಮಾಡಿಸಿಕೊಳ್ಳುತ್ತಾ ಬಂದಿವೆ. ಮುಂಬಯಿಯಲ್ಲಿ ಹಲವೆಡೆ ಮಹಿಳಾ ಕಲಾವಿದರೂ ಸಕ್ರಿಯರಿದ್ದಾರೆ. ಅಷ್ಟೇ ಅಲ್ಲ, ಗಣೇಶ ಮೂರ್ತಿಗಳಿಗೆ ಬಣ್ಣದ ಅಲಂಕಾರಗಳನ್ನು ಅನೇಕ ಕಡೆ ಹುಡುಗಿಯರು, ಮಹಿಳೆಯರು ಕುಂಚದಿಂದ ಕಲಾತ್ಮಕವಾಗಿ ರಚಿಸುತ್ತಾರೆ.

ಮುಂಬಯಿಯಲ್ಲಿ ಗಣೇಶೋತ್ಸವ ಸಮಾಪ್ತಿಯಾಗುವುದು ಲಾಲ್‌ಬಾಗ್ ಕಾ ರಾಜಾ ಮಂಡಳದ ಗಣೇಶ ಪ್ರತಿಮೆಯ ವಿಸರ್ಜನೆಯ ನಂತರವೇ. ಅನಂತಚತುರ್ದಶಿಯಂದು ಬೆಳಿಗ್ಗೆ ಲಾಲ್‌ಬಾಗ್‌ನಿಂದ ಹೊರಟ ಗಣೇಶ ಮೆರವಣಿಗೆ ಮರುದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಅರಬ್ಬಿ ಸಮುದ್ರದಲ್ಲಿ ಗಣೇಶನ ವಿಸರ್ಜನೆಯಾಗುತ್ತದೆ. 20 ರಿಂದ 22 ಗಂಟೆ ಕಾಲ ಅಲ್ಲಿ ಮೆರವಣಿಗೆ ಕಾಣುತ್ತೇವೆ. ಅಲ್ಲಿಗೆ ಮುಂಬಯಿಯ ಸಾರ್ವಜನಿಕ ಗಣೇಶೋತ್ಸವ ಸಮಾಪ್ತಿಯಾದಂತೆ.