ಅಪರೂಪದ ಅತ್ತೆ ಸೊಸೆ: ಇವರ ಮನೆ ಗೆಜ್ಜೆವಸ್ತ್ರದ ಪುಟ್ಟ ಬೊಗಸೆ
ಬೆಳಕಿಗೆ ಬಾರದ ಅದೆಷ್ಟೋ ಪ್ರತಿಭೆಗಳು ನಮ್ಮಲ್ಲಿವೆ. ಅದರಲ್ಲಿಯೂ ಅಳಿದು ಹೋಗುತ್ತಿರುವ ಗೆಜ್ಜೆವಸ್ತ್ರದಂಥ ಕಲೆಗೆ ಜೀವ ತುಂಬುವವರೂ ಹಲವರಿದ್ದಾರೆ. ಇದೀಗ ಗೌರಿ ಹಬ್ಬದ ಸೀಸನ್. ಮಗಳಿಗೆ ಅರಿಷಿನ- ಕುಂಕುಮ ನೀಡುವ ಸಂಭ್ರಮ ತವರಿಗೆ. ಅದೇ ಹೊತ್ತಲ್ಲಿ ವಿಧ ವಿಧವಾದ ಗೆಜ್ಜೆವಸ್ತ್ರಗಳೂ ಅಲ್ಲಲ್ಲಿ ತಯಾರಾಗುತ್ತಿವೆ. ಇಂಥ ಕಲೆಯನ್ನು ಬೆಳೆಸುತ್ತಿರುವ ಮಲೆನಾಡಿನ ಅತ್ತೆ-ಸೊಸೆ ಶ್ರೀಮತಿ ಹಾಗೂ ಮಮತಾ ಅವರ ಕೈ ಕುಸುರಿಯ ಝಲಕ್ ಇಲ್ಲಿವೆ ನೋಡಿ...
114

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶ್ರೀಮತಿ ಹಾಗೂ ಶಿವಮೊಗ್ಗದ ಮಮತಾ ಅವರ ಅತ್ತೆ-ಸೊಸೆ ಜೋಡಿ ಅಪರೂಪದ್ದು.

214
ಸಮಾನ ಆಸಕ್ತಿ ಇರುವ ಈ ಜೋಡಿ ವಿಧ ವಿಧವಾದ ಗೆಜ್ಜೆವಸ್ತ್ರಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ.

314
ಪ್ರತಿಯೊಂದು ಶುಭಕಾರ್ಯಗಳಿಗೂ ಹೂ ಬತ್ತಿ, ಗೆಜ್ಜೆವಸ್ತ್ರ ಬೇಕೇ ಬೇಕು. ಆದರೆ, ಗೌರಿ ಪೂಜೆಗೆ ಮಾಡುವ ಗೆಜ್ಜೆವಸ್ತ್ರದ ವಿಶೇಷವೇ ವಿಭಿನ್ನ.

414
ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಗಳಿಗೆ ತವರಿನ ಕುಂಕುಮ ಬರುತ್ತದೆ. ಇದರೊಟ್ಟಿಗೆ ತಪ್ಪದೇ ಇರಬೇಕಾದ್ದು ಗೆಜ್ಜೆವಸ್ತ್ರ.

514
ಒಮ್ಮೆ ಆಶೀರ್ವಾದ ರೂಪದ ಕುಂಕುಮ ಹಾಗೂ ಗೆಜ್ಜೆವಸ್ತ್ರ ಬಂತೆಂದರೆ ಹೆಣ್ಣಿಗೋ ತವರಿನ ನೆನಪೇ ಕಾಡುತ್ತದೆ.

614
ಅಮ್ಮನ ಆಶೀರ್ವಾದದೊಂದಿಗೆ, ಹತ್ತು ಹಲವು ಭಾವಗಳನ್ನು ತುಂಬುವ ಗೆಜ್ಜೆವಸ್ತ್ರ ಮಾಡುವುದರಲ್ಲಿ ಶ್ರೀಮತಿ-ಮಮತಾರದ್ದು ಎತ್ತಿದ ಕೈ.

714
ಮಗಳ ಗೌರವವನ್ನು ಹೆಚ್ಚಿಸುವಂಥ ಚೆಂದ ಚೆಂದದ ಗೆಜ್ಜೆವಸ್ತ್ರಗಳನ್ನು ಮಾಡುವುದು ಇವರ ಹವ್ಯಾಸ.

814
ಮಮತಾ ಕಲೆಯಲ್ಲಿಯೇ ಪದವಿಯನ್ನೂ ಪಡೆದಿದ್ದಾರೆ. ಅನೇಕ ಮಕ್ಕಳಿಗೆ ಪೇಟಿಂಗ್ ಕ್ಲಾಸ್ ಸಹ ಮಾಡುತ್ತಾರೆ.

914
ಬರೀ ಗೆಜ್ಜೆವಸ್ತ್ರ ಮಾತ್ರವಲ್ಲ, ಮದುವೆಗೆ ನೀಡುವ ಅಲಂಕಾರಿಕ ಅರಿಶಿನ-ಕುಂಕುಮದ ಬಟ್ಟಲು, ಕೊಬ್ಬರಿ ಕಲೆ ಮುಂತಾದವನ್ನೂ ಮಾಡುತ್ತಾರೆ.

1014
ಬದಲಾದ ಜೀವನಶೈಲಿಯಲ್ಲಿ ಗೆಜ್ಜೆವಸ್ತ್ರ ಮಾಡಲು ಈಗೀಗ ತಾಯಂದಿರಿಗೂ ಟೈಮಿಲ್ಲ. ಸಣ್ಣನೆ ಎಳೆ ತೆಗೆದು ಹತ್ತಿಯಲ್ಲಿ ಮಾಡುವ ಈ ವಸ್ತ್ರವನ್ನು ತರೇಹವಾರಿ ಮಾಡುತ್ತಾರೆ ಈ ಅತ್ತೆ-ಸೊಸೆ.

1114
ಅಳಿದು ಹೋಗುತ್ತಿರುವ ಕಲೆಗೆ ಕಾಯಕಲ್ಪ ನೀಡುತ್ತಿರುವ ಈ ಜೋಡಿಗೆ ಜೈ ಎನ್ನಲೇಬೇಕು.

1214
ಬದಲಾದ ಕಾಲದಲ್ಲಿ ಅಣ್ಣ ಗೆಜ್ಜೆವಸ್ತ್ರ ಕೊಡಲು ಬರುತ್ತಿಲ್ಲ. ಪೋಸ್ಟಲ್ಲಿ ಬರುವ ಕುಂಕುಮ, ಆನ್‌ಲೈನಲ್ಲಿ ಬರುತ್ತೆ ಉಡುಗೊರೆಯ ಹಣ. ತವರಿಂದ ಬಾರದ ಅಣ್ಣನ ನೆನೆದು ಹೆಣ್ಣಿಗೂ ಕಾಡಲು ಆರಂಭವಾಗಿದೆ ಅಭದ್ರತೆ.

1314
ಭಾವ, ಭಕುತಿ ಹೆಚ್ಚಿಸುವ ಗೆಜ್ಜೆವಸ್ತ್ರ ಮಾಡುವುದೂ ಕಷ್ಟ.

1414
ಈ ಕಲೆಯನ್ನು ಉಳಿಸಿ, ಬೆಳೆಸುತ್ತಿರುವವರ ಸಂಖ್ಯೆಯೂ ಕಡಿಮೆ. ಅಂಥದ್ರಲ್ಲಿ ಅಳಿದು ಹೋಗುತ್ತಿರುವ ಪಾರಂಪರಿಕ ಕಲೆಯನ್ನು ಉಳಿಸುತ್ತಿರುವ ಈ ಜೋಡಿಯ ಕಲಾ ಸೇವೆ ಹೀಗೇ ಮುಂದುವರಿಯಲಿ ಎಂದು ಹಾರೈಸೋಣವೇ?

Latest Videos