Asianet Suvarna News Asianet Suvarna News

Lunar Eclipse 2022: 2022 ರ ಮೊದಲ ಚಂದ್ರಗ್ರಹಣ ಯಾವಾಗ, ಇದರ ಪರಿಣಾಮವೇನು?

ಏಪ್ರಿಲ್ 30 ರಂದು ಸೂರ್ಯಗ್ರಹಣದ ನಂತರ, ಮೇ 16 ರಂದು ವೈಶಾಖದ ಹುಣ್ಣಿಮೆಯನ್ನು ನೋಡುವ ವರ್ಷದ ಮೊದಲ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ ಸೂತಕದ ಅವಧಿ, ಧಾರ್ಮಿಕ ನಂಬಿಕೆಗಳು, ಸಮಯಗಳು, ಮಾಡಬೇಕಾದುದು ಮತ್ತು ಮಾಡಬಾರದು ಮತ್ತು ಅದರ ಪರಿಣಾಮಗಳೇನು ಎನ್ನುವ ವಿವರ ಇಲ್ಲಿದೆ.
 

Lunar Eclipse 2022 effect of first chandra grahan of 2022 date and Time san
Author
Bengaluru, First Published May 6, 2022, 1:27 AM IST

ಬೆಂಗಳೂರು (ಮೇ.6): 2022 ರ ಮೊದಲ ಚಂದ್ರ ಗ್ರಹಣ (Lunar Eclipse) ಮೇ ತಿಂಗಳಲ್ಲಿ (May Month) ಸಂಭವಿಸಲು ಸಜ್ಜಾಗಿದೆ. ಈ ವರ್ಷ ಕೇವಲ ಎರಡು ಚಂದ್ರಗ್ರಹಣಗಳು ನಡೆಯಲಿದ್ದು, ಎರಡೂ ಪೂರ್ಣ ಚಂದ್ರಗ್ರಹಣಗಳಾಗಿರಲಿದೆ. ಕೆಲವೇ ದಿನಗಳ ಹಿಂದೆ ಏಪ್ರಿಲ್ 30 ರಂದು, ಸಂಭವಿಸಿದ ವರ್ಷದ ಮೊದಲ ಸೂರ್ಯಗ್ರಹಣಕ್ಕೆ (Solar Eclipse) ಜಗತ್ತು ಸಾಕ್ಷಿಯಾಗಿತ್ತು. ಇದಾದ 15 ದಿನಗಳ ನಂತರ, ಮೇ 16 ರಂದು ವೈಶಾಖ ಹುಣ್ಣಿಮೆಯ (Vaishakh Purnima) ಸಮಯದಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ.

ಈ ದಿನ, ಚಂದ್ರಗ್ರಹಣವು ಬೆಳಿಗ್ಗೆ 07:02 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12:20 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಭಾರತದಲ್ಲಿ ಕಾಣಿಸದಿದ್ದರೂ, ಅದರ ಪರಿಣಾಮವು ಖಂಡಿತವಾಗಿಯೂ ಜನರ ಜೀವನದಲ್ಲಿ ಸಾಕ್ಷಿಯಾಗಲಿದೆ.

ವರ್ಷದ ಮೊದಲ ಚಂದ್ರಗ್ರಹಣವು ಮೇ 16 ರಂದು ಸಂಭವಿಸಲು ಸಿದ್ಧವಾಗಿದೆ ಮತ್ತು ಬೆಳಿಗ್ಗೆ 07:02 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:20 ಕ್ಕೆ ಕೊನೆಗೊಳ್ಳುತ್ತದೆ. ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯು ಮೇ 15 ರ ಭಾನುವಾರದಂದು ಮಧ್ಯಾಹ್ನ 12.45 ರಿಂದ ಪ್ರಾರಂಭವಾಗುತ್ತಿದೆ ಮತ್ತು ಮರುದಿನ ಮೇ 16 ರ ಸೋಮವಾರದಂದು ಬೆಳಿಗ್ಗೆ 09:43 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈಶಾಖ ಪೂರ್ಣಿಮೆಯನ್ನು ಮೇ 16 ರಂದು ಆಚರಿಸಲಾಗುತ್ತದೆ.

ಚಂದ್ರಗ್ರಹಣದ ಸೂತಕ ಕಾಲವು ಗ್ರಹಣಕ್ಕೆ 09 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಆದರೆ, ಸೂತಕ ಕಾಲವು ಚಂದ್ರಗ್ರಹಣ ಗೋಚರಿಸುವ ಸ್ಥಳದಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಚಂದ್ರಗ್ರಹಣ ಗೋಚರವಾಗದ ದೇಶದಲ್ಲಿ ಚಂದ್ರಗ್ರಹಣ ಸೂತಕವು ಮಾನ್ಯವಾಗುವುದಿಲ್ಲ. ಮೇ 15ರಂದು ರಾತ್ರಿ 10.02ರಿಂದ ಸೂತಕ ಕಾಲ ಆರಂಭವಾಗಲಿದ್ದು, ಚಂದ್ರಗ್ರಹಣ ಮುಗಿಯುವುದರೊಂದಿಗೆ ಸೂತಕ ಕಾಲ ಮುಕ್ತಾಯವಾಗಲಿದೆ.

ಈ ವರ್ಷ ಒಟ್ಟು ಎರಡು ಚಂದ್ರಗ್ರಹಣ: ವರ್ಷದ ಮೊದಲ ಚಂದ್ರಗ್ರಹಣ ಮೇ 16 ರಂದು ನಡೆಯಲಿದ್ದರೆ, 2ನೇ ಚಂದ್ರಗ್ರಹಣ ನವೆಂಬರ್ 8 ರಂದು ನಡೆಯಲಿದೆ.

ಏನು ಮಾಡಬಹುದು? ಏನು ಮಾಡಬಾರದು:
* ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು ಮತ್ತು ದೂರದರ್ಶಕ, ಬೈನಾಕ್ಯುಲರ್ ಅಥವಾ ಕನ್ನಡಕವನ್ನು ಬಳಸಬೇಕು.

* ಗ್ರಹಣದ ಸಮಯದಲ್ಲಿ ತಿನ್ನುವುದು ಸೂಕ್ತವಲ್ಲ. ಇದಲ್ಲದೆ, ತುಳಸಿ ಎಲೆಗಳನ್ನು ಆಹಾರದ ಭಕ್ಷ್ಯಗಳಲ್ಲಿ ಇಡಲು ಸಲಹೆ ನೀಡಲಾಗುತ್ತದೆ.  ವಿಶೇಷವಾಗಿ ಹಾಲಿನಿಂದ ಮಾಡಿದವುಗಳಲ್ಲಿ ಬಳಸಬೇಕೆಂದು ಹೇಳಲಾಗುತ್ತದೆ.

* ಚಂದ್ರಗ್ರಹಣದ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡಲು ಮಂತ್ರಗಳನ್ನು ಪಠಿಸಿ ಮತ್ತು ದೇವರ ಹೆಸರನ್ನ ನೆನಪಿಸಿಕೊಳ್ಳಿ

ರಾಹುಗ್ರಸ್ಥ ಸೂರ್ಯ ಗ್ರಹಣ: ಭಾರತದಲ್ಲಿ ಗೋಚಾರ ಇಲ್ಲ, ಆದರೂ ಪ್ರಭಾವ ಹೆಚ್ಚು!

* ಗ್ರಹಣದ ಸಮಯದಲ್ಲಿ ಕೂದಲು ಮತ್ತು ಉಗುರು ಕತ್ತರಿಸುವುದನ್ನು ತಪ್ಪಿಸಿ ಏಕೆಂದರೆ ಇದು ಅಶುಭವೆಂದು ಪರಿಗಣಿಸಲಾಗಿದೆ. ಇದನ್ನು ಹೊರತುಪಡಿಸಿ, ಚಾಕುಗಳು, ಫೋರ್ಕ್ ಅಥವಾ ಯಾವುದೇ ಇತರ ಮೊನಚಾದ ಮತ್ತು ಚೂಪಾದ ಉಪಕರಣಗಳನ್ನು ಬಳಸಬೇಡಿ.

2022ರ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ: ಯಾವ ರಾಶಿ ಮೇಲೆ ಏನು ಪರಿಣಾಮ?

* ಚಂದ್ರಗ್ರಹಣದ ನಂತರ ಅನ್ನ, ವಸ್ತ್ರದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
 

2022ರ ಈ ವರ್ಷ ಅನೇಕ ವಿಸ್ಮಯಗಳಿಗೆ ಕಾರಣವಾಗಿದೆ. ಅಂಥ ಮತ್ತೊಂದು ವಿಸ್ಮಯ ಈಗ ಗ್ರಹಕೂಟದಲ್ಲಿ ನಡೆಯಲಿದೆ. ಬರೋಬ್ಬರಿ 1000 ವರ್ಷಗಳ ಬಳಿಕ, ನಾಲ್ಕು ಗ್ರಹಗಳು ಒಂದೇ ನೇರಕ್ಕೆ ಬಂದು ನಿಲ್ಲಲಿವೆ.  1,000 ವರ್ಷಗಳ ನಂತರ, ಏಪ್ರಿಲ್ ಕೊನೆಯ ವಾರದಲ್ಲಿ ಶುಕ್ರ, ಮಂಗಳ, ಗುರು ಮತ್ತು ಶನಿ(Saturn) ಈ ನಾಲ್ಕು ಗ್ರಹಗಳು ಸೂರ್ಯೋದಯಕ್ಕೆ ಒಂದು ಗಂಟೆ ಮೊದಲು ಆಕಾಶದ ಪೂರ್ವ ಭಾಗದಲ್ಲಿ ನೇರ ರೇಖೆಯಲ್ಲಿ ಜೋಡಿಸಿದಂತೆ ಕಾಣೋ ಅಪರೂಪದ ಮತ್ತು ವಿಶಿಷ್ಟ ಖಗೋಳ ಘಟನೆ ಘಟಿಸಿತ್ತು. ಇದು ಖಗೋಳ ಶಾಸ್ತ್ರದಲ್ಲಾಗ್ತಾ ಇರೋ ಬದಲಾವಣೆಯಾದ್ರೆ, ಇನ್ನು ಜ್ಯೋತಿಷ ಶಾಸ್ತ್ರ(Astrology)ದಲ್ಲಿ ಮತ್ತೊಂದು ಬಗೆಯ ವಿಸ್ಮಯ ಘಟಿಸುತ್ತಿದೆ. ಅದೆಂದರೆ ಸೂರ್ಯ ಚಂದ್ರಾದಿ 9 ಗ್ರಹಗಳೂ ಸಂಚಾರ ನಡೆಸಲಿವೆ. 

Follow Us:
Download App:
  • android
  • ios