ವಿಜಯ್-ಸ್ಫಂದನಾ ದಾಂಪತ್ಯಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ಅಂತಾರಲ್ಲ, ದೃಷ್ಟಿಯಾಗುತ್ತೆ ಅನ್ನೋದು ನಿಜಾನ?
ವಿಜಯ ರಾಘವೇಂದ್ರ- ಸ್ಪಂದನಾ ಸ್ಯಾಂಡಲ್‌ವುಡ್‌ನ ಅಪರೂಪದಲ್ಲೇ ಅಪರೂಪದ ಜೊಡಿ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನಕ್ಕೆ ಆಸರೆಯಾಗಿ ಆದರ್ಶ ದಂಪತಿಗಳಾಗಿ ಜೀವನ ನಡೆಸ್ತಿದ್ರು. ಆದರೆ ತಮ್ಮ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುಂಚೆಯೇ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆ. ಇಷ್ಟಕ್ಕೂ ದೃಷ್ಟಿಯಾಗುತ್ತೆ, ಕೆಟ್ಟ ಕಣ್ಣು ಬಿತ್ತು ಅನ್ನೋದೆಲ್ಲಾ ನಿಜಾನ?
ನಟ ವಿಜಯ ರಾಘವೇಂದ್ರ ತಮ್ಮ ಪತ್ನಿ ಸ್ಪಂದನಾರನ್ನು ಪ್ರೀತಿಸುವಷ್ಟು ಮತ್ಯಾರನ್ನು ಪ್ರೀತಿಸಿಲ್ಲ ಅನಿಸುತ್ತದೆ. ಸ್ಪಂದನಾ ವಿಜಯ ರಾಘವೇಂದ್ರ ದಂಪತಿಗಳು ಅನೋನ್ಯವಾಗಿ ಜೀವನ ನಡೆಸ್ತಿದ್ರು. ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಇಬ್ಬರಲ್ಲಿತ್ತು. ಸ್ಪಂದನಾ ಅವರಲ್ಲೇ ತನ್ನ ತಾಯಿಯನ್ನ ಕಾಣ್ತಿದ್ದ ವಿಜಯ್ ಅವರನ್ನು ತುಂಬಾನೇ ಪ್ರೀತಿಸುತ್ತಿದ್ದರು. ವಿಜಯ್-ಸ್ಪಂದನಾ ಲವ್ ಸ್ಟೋರಿಯೇ ರೋಚಕ. ವಿಜಯ ರಾಘವೇಂದ್ರ- ಸ್ಪಂದನಾ ಸ್ಯಾಂಡಲ್‌ವುಡ್‌ನ ಅಪರೂಪದಲ್ಲೇ ಅಪರೂಪದ ಜೊಡಿ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನಕ್ಕೆ ಆಸರೆಯಾಗಿ ಆದರ್ಶ ದಂಪತಿಗಳಾಗಿ ಜೀವನ ನಡೆಸ್ತಿದ್ರು.
15 ವರ್ಷಗಳ ಹಿಂದೆ ವಿಜಯ್ ರಾಘವೇಂದ್ರ(Vijaya Raghavendra) ಮತ್ತು ಸ್ಪಂದನಾ(Spandana) ಪ್ರೀತಿಸಿ ಮದ್ವೆಯಾಗಿದ್ರು. ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ ಸ್ಪಂದನಾ, ವಿಜಯ ರಾಘವೇಂದ್ರ ಜೊತೆ 26 ಆಗಸ್ಟ್ 2007ರಂದು ಮದುವೆ ಆಗಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಡಿ.ಕೆ ಶಿವರಾಮ್ ಮಗಳಾಗಿದ್ದ ಸ್ಪಂದನಾ - ವಿಜಯ ರಾಘವೇಂದ್ರ ದಂಪತಿಗೆ ಶೌರ್ಯ(Shaurya) ಎಂಬ ಮಗ ಇದ್ದಾನೆ. ವಿಜಯ ರಾಘವೇಂದ್ರ-ಸ್ಪಂದನಾ ಪ್ರೀತಿಸಿ ಮದುವೆಯಾಗಿದ್ರು. ಮದುವೆ ಬಳಿಕವೂ ಪ್ರೇಮಿಗಳಂತೆಯೇ ಅನೋನ್ಯವಾಗಿಯೇ ಇದ್ದರು. ಮೊದಲಿಗೆ ಸ್ಪಂದನಾ ಪರಿಚಯವಾಗಿದ್ದು ಮಲ್ಲೇಶ್ವರಂನ ಕಾಫಿ ಡೇಯಲ್ಲಿ, ಮೊದಲ ಬಾರಿ ಸ್ಪಂದನ ಅವರನ್ನ ನೋಡಿದ ವಿಜಯರಾಘವೇಂದ್ರ ಮೊದಲ ನೋಟದಲ್ಲೇ ಕಳೆದು ಹೋಗಿದ್ರು. 2007ರಲ್ಲಿ ಮತ್ತೊಮ್ಮೆ ಶೇಷಾದ್ರಿಪುರಂನ ಕಾಫಿ ಡೇಯಲ್ಲಿ(Coffee Day) ಸ್ಪಂದನಾರನ್ನ ನೋಡಿದ ವಿಜಯ ರಾಘವೇಂದ್ರ ಮೊದಲ ಬಾರಿ ಮಾತಾಡಿಸ್ತಾರೆ. ಅಲ್ಲಿಂದಲೇ ಈಬ್ಬರ ನಡುವೆ ಪ್ರೀತಿ ಶುರುವಾಯ್ತು.
ಸ್ಪಂದನಾ ಸಾವಿಗೆ ಕಾರಣವಾಯ್ತು ಸೈಲೆಂಟ್ ಕಿಲ್ಲರ್ ಲೋ ಬಿಪಿ, ರಕ್ತದೊತ್ತಡ ಕಡಿಮೆಯಾಗೋಕೆ ಕಾರಣ ಏನು?
ಎರಡನೇ ಬಾರಿ ಭೇಟಿ ವೇಳೆ ಹೇಗಾದ್ರೂ ಸರಿ, ಸ್ಪಂದನಾರನ್ನೇ ಮದುವೆಯಾಗಬೇಕು ಎಂದು ವಿಜಯ ರಾಘವೇಂದ್ರ ನಿರ್ಧರಿಸ್ತಾರೆ. ಕೆಲವೇ ದಿನಗಳಲ್ಲಿ ತಮ್ಮ ಪ್ರೀತಿಯನ್ನ ಸ್ಪಂದನಾ ಬಳಿ ವಿಜಯರಾಘವೇಂದ್ರ ಹೇಳಿಕೊಳ್ತಾರೆ. ವಿಜಯರಾಘವೇಂದ್ರ ಅವರ ಪ್ರೀತಿಗೆ ಸ್ಪಂಧನಾ ಕೂಡಾ ಒಪ್ಪಿಗೆ ನೀಡ್ತಾರೆ. ಸ್ಪಂದನಾ ಯಾರು ಏನು ಎಂಬುವುದನ್ನೇ ತಿಳಿದುಕೊಳ್ಳದೇ ವಿಜಯ್ರಾಘವೇಂದ್ರ ಪ್ರೀತಿ ಮಾಡಿರ್ತಾರೆ. ಆದ್ರೆ ಸ್ಪಂದನಾ ಪೊಲೀಸ್ ಅಧಿಕಾರಿ ಮಗಳು ಎಂದು ವಿಜಯರಾಘವೇಂದ್ರಗೆ ಗೊತ್ತಾಗಿದ್ದೇ ತಡವಾಗಿ, ಇವರ ಪ್ರೀತಿ ಕೊನೆಗೂ ಇಬ್ಬರ ಮನೆಯವರಿಗೂ ತಿಳಿಯುತ್ತದೆ.ಮನೆಯಲ್ಲಿ ಮದುವೆಗೂ ಒಪ್ಪಿಗೆಯೂ ನೀಡ್ತಾರೆ. ಹೀಗೆ ಇಬ್ಬರ ನಡುವೆ ಪ್ರೀತಿಯಾಗಿ ಮದ್ವೆಯಾಗುತ್ತದೆ.
ಕೆಟ್ಟ ದೃಷ್ಟಿ ಬಿದ್ದಿದೆ ಎಂದ ಗಿರಿಜಾ ಲೋಕೇಶ್, ಸುಧಾರಾಣಿ
ಆದರೆ ತಮ್ಮ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುಂಚೆಯೇ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದ ನಟ-ನಟಿಯರು ಸ್ಪಂದನಾ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಸ್ಪಂದನಾ ಇನ್ನಿಲ್ಲ ಎಂದು ಭಾವುಕರಾಗಿದ್ದಾರೆ. 'ರಾಘು ಒಳ್ಳೆ ಹುಡುಗ ಒಳ್ಳೆ ಕಲಾವಿದ. ನಿಜಕ್ಕೂ ಆ ಕುಟುಂಬಕ್ಕೆ ಏನೋ ಆಗಿತ್ತು ಆ ದೇವರೇ ದೃಷ್ಠಿ ಹಾಕಿದ್ದಾನೆ ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾನೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಗಿರಿಜಾ ಲೋಕೇಶ್ ಮಾತನಾಡಿದ್ದಾರೆ.
ಅಣ್ಣಾವ್ರು ಕೊನೆಯವರೆಗೂ ಫಿಟ್ ಆಗಿದ್ರು, ಈಗಿನವ್ರಿಗೆ ಯಾಕೆ ಫಿಟ್ನೆಸ್ ಶಾಪ ಆಗ್ತಿದೆ?
ನಟಿ ಸುಧಾರಾಣಿ ಮಾತನಾಡಿ, 'ಕಳೆದ ತಿಂಗಳು ನೇಲ್ಸ್ ಸ್ಟುಡಿಯೋದಲ್ಲಿ ಭೇಟಿ ಮಾಡಿದ್ದು ಆಗ ಹೇಗಿದ್ದೀರಾ ಚೆನ್ನಾಗಿದ್ದೀರಾ ಅಂತ ಕೆಲವು ನಿಮಿಷ ಮಾತನಾಡಿದ್ದು ಅಷ್ಟೆ ಈಗ ನೋಡಿ ಒಂದು ತಿಂಗಳಾಗಿದೆ ಸ್ಪಂದನಾನೇ ಇಲ್ಲ. ಕುಟುಂಬದ ಮೇಲೆ ಯಾರ್ ಕಣ್ಣು ಬಿತ್ತೋ ಗೊತ್ತಿಲ್ಲ: ಎಂದು ಸುಧಾರಾಣಿ ಕಣ್ಣೀರಿಟ್ಟಿದ್ದಾರೆ. ಇಷ್ಟಕ್ಕೂ ದೃಷ್ಟಿಯಾಗುತ್ತೆ, ಕೆಟ್ಟ ಕಣ್ಣು ಬಿತ್ತು ಅನ್ನೋದೆಲ್ಲಾ ನಿಜಾನ?
ದೃಷ್ಟಿಯಾಗುತ್ತೆ, ಕೆಟ್ಟ ಕಣ್ಣು ಬಿತ್ತು ಅನ್ನೋದೆಲ್ಲಾ ನಿಜಾನ?
ದುಷ್ಟ ಕಣ್ಣಿನ ಮೇಲಿನ ನಂಬಿಕೆಯು ಪ್ರಪಂಚದಾದ್ಯಂತ ಅನೇಕ ಸಂಸ್ಕೃತಿಗಳಲ್ಲಿ ಕಂಡುಬರುವ ಮೂಢನಂಬಿಕೆಯಾಗಿದೆ. ಇದುವ್ಯಕ್ತಿಗೆ ಹಾನಿ ಮಾಡುವ ಅಥವಾ ದುರದೃಷ್ಟವನ್ನು ತರುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ದುಷ್ಟ ಕಣ್ಣು ವ್ಯಕ್ತಿಗೆ ಹಾನಿಯನ್ನುಂಟು ಮಾಡುತ್ತದೆ ಎಂಬ ಕಲ್ಪನೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೂ, ದುಷ್ಟ ಕಣ್ಣಿನ ಮೇಲಿನ ನಂಬಿಕೆಯು ಮಾನಸಿಕವಾಗಿ ಹಾನಿಕಾರಕವಾಗಬಹುದು ಎಂದು ಕೆಲವರು ನಂಬುತ್ತಾರೆ. ಏಕೆಂದರೆ ಇದು ಆತಂಕ ಮತ್ತು ಭಯದ ಭಾವನೆಗಳಿಗೆ ಕಾರಣವಾಗಬಹುದು. ನಂಬಿಕೆಗಳು ಮತ್ತು ಮೂಢನಂಬಿಕೆಗಳು ಸಾಂಸ್ಕೃತಿಕ ಮತ್ತು ವೈಯಕ್ತಿಕ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯು ತಾನು ಏನನ್ನು ನಂಬುತ್ತಾನೆ ಮತ್ತು ಹೇಗೆ ತನ್ನ ಜೀವನವನ್ನು ನಡೆಸಬೇಕೆಂದು ನಿರ್ಧರಿಸುತ್ತಾನೆ.
ಸಂಬಂಧಗಳ ಮೇಲೆ ಕೆಟ್ಟ ದೃಷ್ಟಿ ಹೇಗೆ ಪರಿಣಾಮ ಬೀರುತ್ತದೆ?
ದುಷ್ಟ ಕಣ್ಣಿನ ಲಕ್ಷಣಗಳು ಸಾಕಷ್ಟು ವಿಸ್ತಾರವಾಗಿವೆ ಮತ್ತು ಅವು ಸಂಬಂಧಗಳ ಮೇಲೆ ಪ್ರಭಾವ ಬೀರಬಹುದು. ಪರೋಕ್ಷವಾಗಿ ಮನಸ್ಸನ್ನು ಕೆರಳಿಸಬಹುದು. ನಿರಂತರವಾಗಿ ಹೆಚ್ಚು ಭಾವುಕರಾಗಬಹುದು. ಸುತ್ತಲಿನ ಜನರಿಗೆ ಗೊಂದಲವನ್ನು ಉಂಟುಮಾಡಬಹುದು. ಭಾವನೆಗಳು ಜಗತ್ತಿನಲ್ಲಿ ಒಬ್ಬಂಟಿಯಾಗಿರುವಂತೆ ಭಾಸವಾಗುವಂತೆ ಮಾಡಲು ಪ್ರಾರಂಭಿಸಬಹುದು.