ಅಣ್ಣಾವ್ರು ಕೊನೆಯವರೆಗೂ ಫಿಟ್ ಆಗಿದ್ರು, ಈಗಿನವ್ರಿಗೆ ಯಾಕೆ ಫಿಟ್ನೆಸ್ ಶಾಪ ಆಗ್ತಿದೆ?
ಡೈರೆಕ್ಟಾಗೋ ಇಂಡೈರೆಕ್ಟಾಗೋ ಫಿಟ್‌ನೆಸ್ ಕ್ರೇಜ್‌ಗೆ ಬಿದ್ದು ಈ ಕಾಲದವರು ಪ್ರಾಣ ಕಳ್ಕೊಳ್ತಿದ್ದಾರೆ. ಅವತ್ತು ಅಪ್ಪು, ಚಿರು, ಇವತ್ತು ಸ್ಪಂದನಾ ಹೀಗೆ ಸಾಕಷ್ಟು ಮಂದಿ ಸಿಕ್ತಾರೆ. ಆದರೆ ಅಣ್ಣಾವ್ರು ಕೊನೆಯವರೆಗೂ ಫಿಟ್ ಆಗಿಯೇ ಇದ್ರು. ಅವ್ರಿಗೆ ಆಗಿದ್ದು ಇವರಿಗ್ಯಾಕೆ ಆಗ್ತಿಲ್ಲ?
ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅವರ ಫಿಸಿಕಲೀ ಫಿಟ್, ಮೆಂಟಲೀನೂ ಫಿಟ್ ಆಗಿಯೇ ಇದ್ದರು. ಅಣ್ಣಾವ್ರ ಫಿಟ್‌ನೆಸ್‌ಕೊನೆಯವರೆಗೂ ಹಾಗೇ ಇತ್ತು. ಅವರ ತೂಕ ಹೆಚ್ಚಾಗಿದ್ದಿಲ್ಲ, ಕಡಿಮೆ ಆಗಿಯೂ ಇದ್ದಿದ್ದಿಲ್ಲ. ಎಷ್ಟಿರಬೇಕೋ ಅಷ್ಟೇ.. ಡಾ ರಾಜ್ ನಿತ್ಯವೂ ಕಸರತ್ತು ಮಾಡ್ತಿದ್ರು. ಫಿಟ್ ಆಗಲು ಏನೆಲ್ಲ ಮಾಡಬೇಕೊ ಆ ಎಲ್ಲ ವ್ಯಾಯಾಮಗಳನ್ನೂ ಮಾಡುತ್ತಿದ್ದರು. ಆದರೆ ಅವರ ಆಪ್ತರು ಹೇಳುವಂತೆ ಅವರೆಂದೂ ಜಿಮ್‌ಗೆ ಎಡತಾಕಿದವರಲ್ಲ. ಬದಲಿಗೆ ನಮ್ಮ ಪಾರಂಪರಿಕ ಪದ್ಧತಿಯನ್ನೇ ಶ್ರದ್ಧೆಯಿಂದ ಫಾಲೋ ಮಾಡುತ್ತಿದ್ದರು.
ಈವಾಗಿಂದೇನೋ ಜಿಮ್ ಯುಗ. ಆದರೆ ದಶಕಗಳಾಚೆ ನೋಡಿದರೆ ಆಗ ಜಿಮ್‌ಗಳ ಸಂಖ್ಯೆ ಕಡಿಮೆ ಇತ್ತು. ದೇಹ ದಂಡಿಸಲು ಯೋಗ ಅಭ್ಯಾಸ ಮಾಡುತ್ತಿದ್ದರು. ಅದಕ್ಕೂ ಹಿಂದೆ ಗರಡಿ ಮನೆಯಲ್ಲಿ ಕಸರತ್ತು ಮಾಡುತ್ತಿದ್ದರು. ಆಶ್ರಮಗಳಲ್ಲಿ, ಧ್ಯಾನ ಕೇಂದ್ರಗಳಲ್ಲಿ, ಕುಟೀರಗಳಲ್ಲಿ ಯೋಗ ಕೇಂದ್ರಗಳಿದ್ದವು. ಯೋಗ ಭಾರತದ ಪ್ರಾಚೀನ ವಿದ್ಯೆ. ಇದರ ಶಬ್ದಶಃ ಅರ್ಥ ‘ನಿಯಂತ್ರಿಸು’ ಅಂತ. ಯೋಗ ‘ಸರ್ವರೋಗ ನಿವಾರಕ ವಿಜ್ಞಾನ’ ಆಗಿದ್ದರಿಂದ, ವೈದ್ಯಕೀಯ ಶಾಸ್ತ್ರದಲ್ಲೂ ಇದನ್ನು ಪರ್ಯಾಯ ಔಷಧಿಯಾಗಿ ಬಳಕೆ ಮಾಡುತ್ತಾರೆ. ಹೀಗಾಗಿ ‘ರೋಗಕ್ಕೆ ಯೋಗ ಮದ್ದು’ ಎಂಬ ನುಡಿಯೂ ಪ್ರಚಲಿತದಲ್ಲಿದೆ.
ಕಾಮನಬಿಲ್ಲು ಸಿನಿಮಾ ನೋಡಿದರೆ ಅದರಲ್ಲಿ ಅಣ್ಣಾವ್ರು ಮಾಡಿರುವ ಯೋಗವನ್ನು ನೋಡಬಹುದು. ಯೋಗಾಸನ ಭಂಗಿಗಳನ್ನು ಅದ್ಭುತವಾಗಿ ಮಾಡಿ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ಅವರಿಂದ ಪ್ರೇರಣೆ ಪಡೆದು ಹಲವರು ಯೋಗಾಭ್ಯಾಸ ಮಾಡಲು ಮುಂದಾಗಿದ್ದರು. ಜನ ಸಾಮಾನ್ಯರು ಯೋಗಾಭ್ಯಾಸದ ಅಭ್ಯಾಸ ಶುರು ಮಾಡಿಕೊಂಡಿದ್ದರು. ನಟ ಗಣೇಶ್ ಕೂಡ ತಾನು ಅಣ್ಣಾವ್ರ 'ಕಾಮನ ಬಿಲ್ಲು' ಸಿನಿಮಾ ನೋಡಿ ಯೋಗದ ಬಗ್ಗೆ ಅಭಿರುಚಿ ಬೆಳೆಸಿಕೊಂಡಿರೋದಾಗಿ ತಿಳಿಸಿದ್ದಾರೆ. ಯೋಗ ಮಾಡಿದರೆ ದೇಹದ ಫಿಟ್ ಆಗಿರೋದಷ್ಟೇ ಅಲ್ಲ, ಮನಸ್ಸೂ ಶಾಂತವಾಗುತ್ತೆ. ಸ್ಟ್ರೆಸ್, ಟೆನ್ಶನ್ ಎಲ್ಲವೂ ಹತೋಟಿಗೆ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಗುರು ಮುಖೇನ ಯೋಗ ಕಲಿತವರ್ಯಾರೂ ಹೀಗೆ ಅಕಾಲದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿಲ್ಲ.
ಸ್ಪಂದನಾ ಸಾವಿಗೆ ಕಾರಣವಾಯ್ತು ಲೋ ಬಿಪಿ, ಇದು ಸೈಲೆಂಟ್ ಕಿಲ್ಲರ್!
ಹಾಗೆ ನೋಡಿದರೆ ಅಣ್ಣಾವ್ರ ಸಮಕಾಲೀನರಂತಿರುವ ರಜನಿಕಾಂತ್ ಈಗಲೂ ಮೋಸ್ಟ್ ಡಿಮ್ಯಾಂಡಿಂಗ್ ಹೀರೋ. ಅವರ ಜೈಲರ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಇದೆ. ಇವರೂ ನಿತ್ಯ ಯೋಗ ತಪ್ಪಿಸೋದಿಲ್ಲ. ಜೊತೆಗೆ ಪ್ರಾಣಾಯಾಮವನ್ನೂ ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಇವರು ಹಿಮಾಲಯದ ಯೋಗಿಗಳನ್ನು ಗುರುವಾಗಿ ಪಡೆದವರು. ಬದುಕಲ್ಲಿ ಎಂಥಾ ಏರಿಳಿತ ಬಂದರೂ ಸಿನಿಮಾ, ರಾಜಕೀಯದಲ್ಲಿ ಎಂಥಾ ಸಮಸ್ಯೆ ಎದುರಾದರೂ ಎದೆಗುಂದದೇ ಇರೋದು ರಜನಿ ಸ್ಟೈಲ್. ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಆರೂವರೆ ಅಡಿ ಕಟೌಟ್. ಅವರು ದಪ್ಪಗಾದದ್ದನ್ನು ಯಾರೂ ನೋಡಿಲ್ಲ. ಅಂದಿನಿಂದ ಇಂದಿನವರೆಗೂ ಅವರು ಫಿಟ್ ಆಗಿಯೇ ಇದ್ದಾರೆ. ಆದರೆ ಅವರ್ಯಾರೂ ಈ ಕಾಲದವರ ಸಮಸ್ಯೆಗೆ ಬಲಿಯಾಗಿಲ್ಲ.
ಆದರೆ ಈ ಕಾಲದವರಲ್ಲಿ ಹಾಗಲ್ಲ. ಪ್ರತಿಯೊಬ್ಬರಿಗೂ ಫಿಟ್‌ನೆಸ್ ಕ್ರೇಜ್ (fitness craze). ಹಾಗಂತ ಜೀವನಶೈಲಿಯಲ್ಲಿ ಒತ್ತಡ(stress) ಇದ್ದೇ ಇರುತ್ತದೆ. ನಿದ್ದೆ ಮಾಡೋದಕ್ಕೆ ಹೊತ್ತು ಗೊತ್ತು ಅಂತ ಇರೋದಿಲ್ಲ. ಎಷ್ಟೆಷ್ಟೋ ಹೊತ್ತಿಗೆ ನಿದ್ದೆ, ಎಷ್ಟೆಷ್ಟೋ ಹೊತ್ತಿಗೆ ಎಚ್ಚರ. ಆಹಾರದಲ್ಲೂ ಶಿಸ್ತು ಫಾಲೋ ಮಾಡಲ್ಲ. ಈ ಕಾಲದ ಡಯೆಟ್ ಫುಡ್ ಸೇವನೆ ಎಲ್ಲ ಕಡೆ ಕಾಮನ್ ಆಗ್ತಿದೆ. ಜನರ ಈ ಕ್ರೇಜ್ ನೋಡಿಯೇ ಪ್ರೋಟೀನ್ ಪೌಡರ್ ತಯಾರಿಸೋ ಕಂಪನಿಗಳು, ಬೊಜ್ಜು ಕರಗಿಸೋ ಪೌಡರ್‌ಗಳ ಕಂಪನಿಗಳು ಹಾದಿಗೊಂದು ಬೀದಿಗೊಂದು ಇವೆ. ಇವುಗಳಿಗೆ ದಿನೇ ದಿನೇ ಬೇಡಿಕೆ(demand) ಜಾಸ್ತಿ ಆಗುತ್ತಲೂ ಇದೆ. ಸ್ಟ್ರಸ್ ಇಟ್ಟುಕೊಂಡು ಸರಿಯಾಗಿ ನಿದ್ದೆ(sleep) ಮಾಡದೇ ಇಂಥಾ ಪೌಡರ್‌ಗಳ ಮೊರೆಹೋಗುತ್ತ ಫಿಟ್‌ನೆಸ್‌ಗೆ ಮೊರೆಹೋಗೋ ಇಂದಿನವರು ಅಕಾಲಿಕವಾಗಿ ಜೀವ(life) ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬಹಳ ಬೇಸರ ತರುವ ಸಂಗತಿ.
Spandana Death: 16 ಕೇಜಿ ದೇಹತೂಕ ಇಳಿಸಿದ್ದೇ ಸ್ಪಂದನಾ ಸಾವಿಗೆ ಮುಳುವಾಯ್ತಾ?