ಫೆಂಗ್ ಶುಯಿ ಒಂದು ಚೈನೀಸ್ ವಾಸ್ತು. ಇದರಿಂದ ಮನೆಯಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎನರ್ಜಿ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಪಾಸಿಟಿವ್ ಎನರ್ಜಿ ಇದ್ದರೆ ಯಶಸ್ಸು ಸುಲಭ. ಜೊತೆಗೆ ನೆಗೆಟಿವ್ ಎನರ್ಜಿಯನ್ನು ದೂರ ಮಾಡಲೂ  ಸಹಾಯ ಮಾಡುತ್ತದೆ. ಫೆಂಗ್ ಶುಯಿ ಅನುಸಾರ ಮನೆಯಲ್ಲಿ ಕೆಂಪು ರಿಬನ್ ನಲ್ಲಿ ನಾಣ್ಯ ಕಟ್ಟಿ ಇಟ್ಟರೆ ಶುಭ. 

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...

- ಕೆಂಪು ರಿಬನ್ ನಲ್ಲಿ ಮೂರು ನಾಣ್ಯ ಕಟ್ಟಿಟ್ಟರೆ ಶುಭ ಎನ್ನುತ್ತಾರೆ. ಇದರಿಂದ ಮನೆಯ ನೆಗೆಟಿವ್ ಎನರ್ಜಿ ನಿವಾರಣೆಯಾಗುತ್ತದೆ. ಜೊತೆಗೆ ಸಕಾರಾತ್ಮಕತೆ ಹೆಚ್ಚುತ್ತದೆ. 

- ಕೆಲಸಗಳಲ್ಲಿ ಸಫಲತೆ ಬೇಕೆಂದರೆ ಮನೆಯ ಮುಖ್ಯ ದ್ವಾರದ ಒಳಗಿನ ಭಾಗದಲ್ಲಿ ಈ ನಾಣ್ಯವನ್ನು ನೇತು ಹಾಕಬೇಕು. 

- ಬಿಜಿನೆಸ್‌ನಲ್ಲಿ ಯಶಸ್ಸು ಸಿಗಬೇಕು ಎಂದಾದರೆ ಅಂಗಡಿ ಅಥವಾ ಆಫೀಸ್‌ನ ಮುಖ್ಯ ದ್ವಾರದಲ್ಲಿ ನಾಣ್ಯವನ್ನು ನೇತು ಹಾಕಿ. 

ಕಣ್ಣು ಬಡಿದುಕೊಳ್ಳುವುದು ಶುಭ ಸಂಕೇತವೇ?

- ಉತ್ತಮ ಕೆಲಸ ಸಿಗಬೇಕು ಎಂದಾದರೆ ಬೆಡ್ ರೂಮಿನ ದಕ್ಷಿಣ ದಿಕ್ಕಿನಲ್ಲಿ ನಾಣ್ಯವನ್ನು ನೇತು ಹಾಕಿ. 

- ಫೆಂಗ್ ಶುಯಿಗೆ ಸಂಬಂಧಿಸಿದ ಈ ನಾಣ್ಯವನ್ನು ಲಾಕರ್ ಅಥವಾ ಅಲ್ಮಾರಿಯ ಹ್ಯಾಂಡಲ್ ಮೇಲೆ ನೇತು ಹಾಕಿ. ಇದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. 

- ಸುಸ್ತು, ಒತ್ತಡ ದೂರ ಮಾಡಲು ಮನೆಯ ಹಾಲ್‌ನಲ್ಲಿ ಈ ನಾಣ್ಯವನ್ನು ಕಟ್ಟಿ. ಇದರಿಂದ ಒತ್ತಡ ನಿವಾರಣೆಯಾಗಿ, ಮನಸ್ಸು ಶಾಂತವಾಗುತ್ತದೆ. 

- ಗುಡ್ ಲಕ್ ನಿಮ್ಮದಾಗಲು ಪರ್ಸಿನಲ್ಲಿ ಸಣ್ಣ ಸೈಜಿನ ನಾಣ್ಯವನ್ನಿಡಿ.