ಪ್ಯಾಂಟಿನಲ್ಲಿ ಚಿಲ್ಲರೆ ಪೈಸೆ, ಪೆನ್, ಎಟಿಎಂ ಕಾರ್ಡ್‌ಗಳು, ಮನೆ ಕೀ ಮುಂತಾದ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ. ವಾಸ್ತು ಪ್ರಕಾರ ಈ ಬೇಡದ ವಸ್ತುಗಳನ್ನು ಜೇಬಿನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಯಾವ ವಸ್ತುವನ್ನಿಟ್ಟುಕೊಳ್ಳಬಾರದು?

ಹಳೇ ಬಿಲ್: ತಿಂಡಿ ತಿಂದದ್ದು ಆಗಿರಬಹುದು ಅಥವಾ ಸಾಮಗ್ರಿಗಳನ್ನು ಖರೀದಿಸಿದ್ದು, ವಿದ್ಯುತ್ ಬಿಲ್ ಕೂಡ ಆಗಿರಬಹುದು. ಅವನ್ನು ಪರ್ಸ್ ಅಥವಾ ಜೇಬಿನಲ್ಲಿಟ್ಟುಕೊಂಡು ಸುತ್ತಬೇಡಿ. ಇದರಿಂದ ನೆಗೆಟಿವ್ ಎನರ್ಜಿ ಉತ್ಪತ್ತಿಯಾಗುತ್ತದೆ. ಜೊತೆಗೆ ಆರ್ಥಿಕ ಜೀವನದ ಮೇಲೆ  ಪರಿಣಾಮ ಬೀರುತ್ತದೆ. 

ಅಪಾಯಕಾರಿ ಫೋಟೋ: ಕೋಪ, ಕೊಲೆ, ಮತ್ಸರ, ವಿರೋಧ ಭಾವನೆಗಳನ್ನು ಬಿಂಬಿಸುವ ವಸ್ತುಗಳನ್ನು ಜೇಬಿನಲ್ಲಿಡಬೇಡಿ. ಇವು ನಮ್ಮ ಸುತ್ತಮುತ್ತಲೂ ಕೆಟ್ಟ ಶಕ್ತಿಯನ್ನು ಉತ್ತೇಜಿಸುತ್ತವೆ. 

ಹರಿದ ಪರ್ಸ್: ಜೇಬಿನಲ್ಲಿ ಪರ್ಸ್ ಇಡಬಾರದೇ ಎಂದು ಕೇಳಬೇಡಿ. ಖಂಡಿತಾ ಇಡಬಹುದು. ಆದರೆ ಆ ಪರ್ಸ್ ಹರಿದು ಅಥವಾ ಹಾಳಾಗಿ ಹೋಗದೆ ಚೆನ್ನಾಗಿರಬೇಕು. ಯಾಕೆಂದರೆ ವಾಸ್ತು ಶಾಸ್ತ್ರದ ಅನುಸಾರ ತುಂಡಾದ ಹರಿದ ಪರ್ಸ್ ಬಳಸಿದರೆ ಹಣ ಉಳಿಯುವುದಿಲ್ಲ. 

ನೋಟ್: ಜೇಬಿನಲ್ಲಿ ನೋಟ್ ಇಡುವುದಾದರೆ ಅದನ್ನು ಸರಿಯಾದ ರೀತಿಯಲ್ಲಿ ಇಡಿ. ಅದನ್ನು ಹೇಗೇಗೋ ಮಡಚಿ, ಮುದ್ದೆ ಮಾಡಿ ಇಟ್ಟರೆ ಅದು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.  

ವಾಸ್ತುವಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಿನ್ನುವ ಆಹಾರ: ಜೇಬಿನಲ್ಲಿ ಸಾಮಾನ್ಯವಾಗಿ ಚಾಕಲೇಟ್ ಅಥವಾ ಚಿಪ್ಸ್ ಪ್ಯಾಕ್ ಇರುತ್ತದೆ. ಆದರೆ ವಾಸ್ತುವಿನ ಪ್ರಕಾರ ಇಂಥ ವಸ್ತುಗಳನ್ನಿಡುವುದರಿಂದ ದುಷ್ಪರಿಮಾಣ ಬೀರುತ್ತದೆ.

ಔಷಧಿಗಳು: ಔಷಧಿಗಳಿಂದ ಹೊರ ಬರುವ ಶಕ್ತಿ ಮನುಷ್ಯನ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. 

ಹರಿತವಾದ ವಸ್ತು: ಬ್ಲೇಡ್, ಚಾಕು, ಪಿನ್, ಸೂಜಿ ಮೊದಲಾದ ವಸ್ತುಗಳನ್ನು ಜೇಬಿನಲ್ಲಿಡಬೇಡಿ. ಇವು ಮನೆಯಲ್ಲಿ ಇಡುವುದೂ ಅಪಾಯಕಾರಿ. ಆದರೆ ಅಗ್ನಿ ತತ್ವ ಹೊಂದಿರುವ ಅಡುಗೆ ಮನೆಯಲ್ಲಿ ಇವುಗಳನ್ನ ಇಡಬಹುದು.