ಕಣ್ಣು  ಬಡಿದುಕೊಳ್ಳುವ ಸಂದರ್ಭದಲ್ಲಿ ಏನೋ ಶುಭ ಅಥವಾ ಅಶುಭವೆಂದು ಮಂದಿ ನಂಬುತ್ತಾರೆ. ಆದರೆ ಶುಭ ಅಶುಭದ ಮಧ್ಯೆ ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ. ಯಾಕೆಂದರೆ ಕಣ್ಣು ಬಡಿದುಕೊಳ್ಳುವುದು ಆರೋಗ್ಯದ ಸಮಸ್ಯೆಯಾಗಿದ್ದು, ಕಣ್ಣಿನ ದೌರ್ಬಲ್ಯದ ಸಂಕೇತವಾಗಿದೆ. 

ಕಣ್ಣಿನ ಸಮಸ್ಯೆ : ಕಣ್ಣಿನ ಮಾಂಸ ಖಂಡಗಳಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಕಣ್ಣು ಬಡಿದುಕೊಳ್ಳುತ್ತದೆ. ಅಂದರೆ ನೀವು ಕನ್ನಡಕ ಧರಿಸಬೇಕಾಗಬಹುದು. ಆಗಲೇ ಕನ್ನಡಕ ಧರಿಸುತ್ತಿದ್ದರೆ, ಮತ್ತೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿ, ಬದಲಾಯಿಸಿ. 

ಟೆನ್ಷನ್: ಸುಸ್ತು, ಟೆನ್ಷನ್‌ನಿಂದ ನಿದ್ರೆ ಸರಿಯಾಗದಿದ್ದರೆ ಕಣ್ಣು ಬಡಿದುಕೊಳ್ಳುತ್ತದೆ. 

ಸುಸ್ತು: ಹೆಚ್ಚು ಹೊತ್ತು ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದರಿಂದಲೂ ಕಣ್ಣುಗಳು ಆಯಾಸಗೊಳ್ಳುತ್ತವೆ. ಇದರಿಂದಲೂ ಕಣ್ಣು ಬಡಿದುಕೊಳ್ಳಲು ಆರಂಭಿಸುತ್ತದೆ. 

ಕರಿಯರ್‌ನಲ್ಲಿ ಯಶಸ್ಸು ಬೇಕೆಂದರೆ ಹೀಗ್ ಮಾಡಿ....

ಡ್ರೈ ನೆಸ್ : ಹೌದು ಕಣ್ಣು ಹೆಚ್ಚು ಡ್ರೈ ಆಗುವುದರಿಂದ, ಅಲರ್ಜಿ ಉಂಟಾಗುತ್ತದೆ. ತುರಿಕೆ ಮೊದಲಾದ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಾಗ  ಹೀಗೆ ಕಣ್ಣು ಬಡಿದುಕೊಳ್ಳುತ್ತದೆ.

ಪೋಷಕಾಂಶದ ಕೊರತೆ: ಶರೀರದಲ್ಲಿ ಮೆಗ್ನೇಷಿಯಂ ಕಡಿಮೆಯಾದರೆ ಕಣ್ಣು ಬಡಿದುಕೊಳ್ಳುತ್ತದೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ ಅತ್ಯಧಿಕ ಕೆಫೆನ್, ಆಲ್ಕೋಹಾಲ್ ಸೇವಿಸಿದರೂ ಸಮಸ್ಯೆ ಉಂಟಾಗುತ್ತದೆ.