ಸಸ್ಯಗಳು ಮನಸ್ಸಿಗೆ ಸಂತೋಷ, ನೆಮ್ಮದಿ ತರುವುದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ವಾಸ್ತುಶಾಸ್ತ್ರ ಕೂಡಾ ಇದನ್ನೇ ಅನುಮೋದಿಸುತ್ತದೆ. ಮನಸ್ಸಿಗೆ ಶಾಂತಿ, ದೇಹಕ್ಕೆ ಆರೋಗ್ಯ ನೀಡುವ ಸಸ್ಯಗಲನ್ನು ಮನೆಯ ಹೊರಗಷ್ಟೇ ಅಲ್ಲ, ಒಳಗೆ ಕೂಡಾ ಬೆಳೆಸಬೇಕು ಎನ್ನುತ್ತದೆ ಫೆಂಗ್ ಶುಯ್.

ನೀವು ಪ್ರತಿದಿನ ನಾಲ್ಕು ಹೂವನ್ನು ವಾಸ್‌ಗೆ ಹಾಕಿ ಖುಷಿ ಪಡುತ್ತಿದ್ದರೆ, ಸ್ವಲ್ಪ ಅಪ್‌ಗ್ರೇಡ್ ಆಗಿ. ಬೆಳಗ್ಗೆ ಇಟ್ಟು ಸಂಜೆ ಬಾಡುವ ಹೂವಿನ ಬದಲು ಸದಾ ಹಸಿರಾಗಿರುವ ಸಸ್ಯಗಳನ್ನು ಬೆಳೆಸಿ. ಹೀಗೆ ಒಳಾಂಗಣದಲ್ಲಿ ಬದುಕುವ, ವಾಸ್ತುವಿನ ಪ್ರಕಾರವೂ ಹೊಂದಿಕೊಳ್ಳುವ ಸಸ್ಯಗಳನ್ನು ತಂದು ಮನೆಯ ಪಾಸಿಟಿವ್ ಎನರ್ಜಿ ಹೆಚ್ಚಿಸಿ. 

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಅದೃಷ್ಟದ ಬಿದಿರು

ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶವನ್ನು ಪ್ರತಿನಿಧಿಸುವ ಕಾರಣದಿಂದಾಗಿ ಇದು ಮನೆಯ ಒಳಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತರುವುದು. ಇದು ಮನೆಯ ಒಳಗಡೆ ಸುಮಾರು ಮೂರು ಅಡಿಯಷ್ಟು ಎತ್ತರಕ್ಕೆ ಬೆಳೆಯುವುದು. ಆದರೆ ಇದರ ನಿರ್ವಹಣೆ ಮತ್ತು ಆರೈಕೆಯು ತುಂಬಾ ಸುಲಭ. ಫೆಂಗ್ ಶುಯ್ ಪ್ರಕಾರ, ಈ ಸಸ್ಯ ಎಷ್ಟು ಕಾಂಡ ಹೊಂದಿರುತ್ತದೆನ್ನುವುದು ಕೂಡಾ ಪ್ರಮುಖವಾಗಿ ಗಮನಿಸಬೇಕು.

ಏಕೆಂದರೆ 3 ಎಳೆಯ ಬಿದಿರು ಸಂತೋಷ, ಧೀರ್ಘಾಯಸ್ಸು ಹಾಗೂ ಸಮೃದ್ಧಿಯನ್ನು ಸೂಚಿಸುತ್ತದೆ. 5 ಎಳೆಗಳು ಹಣಕ್ಕಾಗಿ, 6 ಎಳೆಗಳು ಅದೃಷ್ಟಕ್ಕಾಗಿ, ಏಳು ಕಾಂಡದ್ದು ಆರೋಗ್ಯ, 8 ಎಳೆಗಳಿದ್ದರೆ ಬೆಳವಣಿಗೆ  ಹಾಗೂ 10 ಎಳೆಗಳಿದ್ದರೆ ಸಂಪೂರ್ಣತೆಯನ್ನು ಸೂಚಿಸುತ್ತದೆ. ನಿಮಗೇನಾದರೂ 21 ಕಾಂಡಗಳ ಬಿದಿರು ದೊರಕಿತೆಂದರೆ ಆರೋಗ್ಯ ಜೊತೆಗೆ ಅತ್ಯುತ್ತಮ ಸಂಪತ್ತು ಕೂಡಾ ನಿಮ್ಮದಾಗುವುದು. 

ಏನೋ ಕಳೆದುಕೊಂಡ ಭಾವವೇ? ಮನೆ ಹೀಗಿಟ್ಟಕೊಂಡ್ರೆ ಸರಿ ಹೋಗುತ್ತೆ...

ಮನಿ ಪ್ಲ್ಯಾಂಟ್

ಬೆಳೆಸುವವರಿಗೆ ಅದೃಷ್ಟ ತರುವ ಮತ್ತೊಂದು ಸಸ್ಯ ಮನಿ ಪ್ಲ್ಯಾಂಟ್. ಸಾಮಾನ್ಯವಾಗಿ ಇವನ್ನು ಹೆಣೆಯಲಾಗಿರುತ್ತದೆ. ಅದೃಷ್ಟ ಕೆಲಸ ಮಾಡಬೇಕೆಂದರೆ ನೀವು 3ರಿಂದ 5 ಎಳೆಗಳನ್ನು ಹೆಣೆದಂಥ ಸಸ್ಯಗಳನ್ನು ಇಟ್ಟುಕೊಳ್ಳಬೇಕು. ನಾಲ್ಕು ದುರದೃಷ್ಟದ ಸಂಖ್ಯೆ ಎಂಬುದು ಮನಸ್ಸಿನಲ್ಲಿರಲಿ. ಇದರೊಂದಿಗೆ ಅದೃಷ್ಟಕ್ಕಾಗಿ ಈ ಸಸ್ಯದ ಎಲೆಗಳು ಐದು ಅಥವಾ ಅದಕ್ಕಿಂತ ಹೆಚ್ಚಿನ ಬೆರಳುಗಳನ್ನು ಹೊಂದಿರಬೇಕು. ಮಲೇಶಿಯಾ ಮತ್ತು ಇಂಡೋನೇಶಿಯಾದಲ್ಲಿ ಈ ಸಸ್ಯಗಳು ಹೆಚ್ಚಾಗಿ ಲಭ್ಯವಿವೆ.

ಇವು ಮನೆಯೊಳಗೆ ಚೆನ್ನಾಗಿ ಬೆಳೆಯುತ್ತದೆ. ಹೂಕುಂಡದಲ್ಲಿ ಇದನ್ನು ಬೆಳೆಸಬಹುದು. ಇದು ವಿಕಿರಣ ಹೀರಿ ಎನರ್ಜಿ ತುಂಬುವುದು. ಮನೆಯಲ್ಲಿ ಒತ್ತಡ ಕಡಿಮೆ ಮಾಡಿ ಸಮೃದ್ಧಿ ತರುವುದು. 

ಹವಾಯನ್ ಟಿ ಪ್ಲ್ಯಾಂಟ್

ಈ ಸಸ್ಯವು ಹಲವಾರು ಸುಂದರ ಬಣ್ಣಗಳಲ್ಲಿ ಲಭ್ಯವಿದೆ. ಇದಕ್ಕೆ ನಿಗೂಢವಾದ ಶಕ್ತಿಯಿದೆ ಎಂದು ಮುಂಚಿನಿಂದಲೂ ನಂಬಿಕೊಂಡು ಬರಲಾಗಿದ್ದು, ಅದೇ ಕಾರಣಕ್ಕೆ ಮನೆಯೊಳಗೆ ಇದನ್ನು ಬೆಳೆಸುವುದರಿಂದ ಕುಟುಂಬದವರಿಗೆ ಒಳ್ಳೆಯದು ಮಾಡುತ್ತದೆ ಎನ್ನಲಾಗುತ್ತದೆ. ಎರಡು ಕಾಂಡಗಳ ಟೀ ಪ್ಲ್ಯಾಂಟ್ ಬೆಳೆಯುವುದರಿಂದ ಅದೃಷ್ಟ ಡಬಲ್ ಆಗುವ ಜೊತೆಗೆ ತಮ್ಮ ಪ್ರೀತಿ ಕೂಡಾ ಫಲಿಸುತ್ತದೆ. 

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

ಜೇಡ್ ಸಸ್ಯ

ವೃತ್ತಾಕಾರದ ಎಲೆಗಳನ್ನು ಹೊಂದಿರುವ ಸಸ್ಯಗಳೆಲ್ಲವೂ ಮನೆಗೆ ಒಳಿತು ಮಾಡುತ್ತದೆ ಎಂಬುದು ಫೆಂಗ್ ಶುಯ್ ನಂಬಿಕೆ. ಅಂತೆಯೇ ಜೇಡ್ ಸಸ್ಯ ಕೂಡಾ. ಸಾಮಾನ್ಯವಾಗಿ ಇದನ್ನು ಹೊಸದಾಗಿ ಉದ್ಯೋಗ ಆರಂಭಿಸುವವರಿಗೆ ಉಡುಗೊರೆಯಾಗಿ ಕೊಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಇದನ್ನು ಉದ್ಯೋಗ ಸ್ಥಳದ ಪ್ರವೇಶದ್ವಾರದಲ್ಲಿಡುವುದರಿಂದ ಯಶಸ್ಸು ಹಾಗೂ ಸಮೃದ್ಧಿಯಾಗುವುದು ಖಚಿತ ಎನ್ನಲಾಗುತ್ತದೆ. ಮನೆಗೆ ಕೂಡಾ ಇದೇ ಲಾಜಿಕ್ ಹೊಂದಿಕೆಯಾಗುವಲ್ಲಿ ಅನುಮಾನವಿಲ್ಲ.

ಸ್ನೇಕ್ ಪ್ಲ್ಯಾಂಟ್

ಮದರ್ ಇನ್ ಲಾ(ಅತ್ತೆ) ಸಸ್ಯವೆಂದೂ ಕರೆಸಿಕೊಳ್ಳುವ ಸ್ನೇಕ್ ಪ್ಲ್ಯಾಂಟ್ ಬರೀ ಅತ್ತೆ ಸಸ್ಯವಲ್ಲ, ಲತ್ತೆ ಸಸ್ಯ ಕೂಡಾ! ಗಾಳಿಯಲ್ಲರುವ ವಿಷಾನಿಲಗಳನ್ನು ಹೀರಿಕೊಳ್ಳುವ ಗುಣದಿಂದಾಗಿ ಇದು ಸಲಹಿದವರಿಗೆ ಕೇವಲ ಉತ್ತಮ ಗಾಳಿಯನ್ನಷ್ಟೇ ಉಳಿಸುತ್ತದೆ. ಗಾಳಿಯಲ್ಲಿರುವ ಫಾರ್ಮಾಲ್‌ಡಿಹೈಡ್, ಬೆಂಜೀನ್‌ನಂಥ ವಿಷವನ್ನು ಇದು ತೆಗೆದು ಹಾಕಬಲ್ಲದು. ಇದರೊಂದಿಗೆ ಪ್ರಾಕೃತಿಕವಾಗಿ ತೇವಾಂಶ ಉಳಿಸಲು ಕೂಡಾ ಈ ಸಸ್ಯ ನೆರವಾಗುತ್ತದೆ. ಎಲ್ಲೆಡೆ ಮಲಿನ ಗಾಳಿಯಿಂದ ಕಾಯಿಲೆಗಳು ಹರಡುತ್ತಿರುವ ಇಂದಿನ ಕಾಲದಲ್ಲಿ ಸ್ವಚ್ಛ ಗಾಳಿಯನ್ನು ಕೊಡುವ ಈ ಸಸ್ಯ ಆರೋಗ್ಯ ಹಾಗೂ ಸಂತೋಷ ತರುವುದರಲ್ಲಿ ಅನುಮಾನವೇ ಬೇಡ. 

ಜಗಳ ಆಡೋದ್ ಬಿಟ್ಹಾಕಿ, ಚೆನ್ನಾಗಿ ಲೈಫ್ ಲೀಡ್ ಮಾಡಲು ಹೀಗ್ ಮಾಡಿ!

ತುಳಸಿ

ತುಳಸಿಯು ಆ್ಯಂಟಿಸೆಪ್ಟಿಕ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ ಎಂಬುದು ಎಲ್ಲ ಭಾರತೀಯರಿಗೂ ಗೊತ್ತು. ಇದರ ಜೊತೆಗೆ ಇದು ಆ್ಯಂಟಿ ಡಿಪ್ರೆಸೆಂಟ್ ಕೂಡಾ ಹೌದು. ಎಂದರೆ, ಖಿನ್ನತೆ ವಿರುದ್ಧ ಕೂಡಾ ಹೋರಾಡುತ್ತದೆ. ಅದಕ್ಕಾಗಿಯೇ ಭಾರತೀಯರ ಮನೆಯಂಗಳದಲ್ಲಿ ತುಳಸಿ ಉತ್ತಮ ಸ್ಥಾನ ಪಡೆದಿದೆ. ವಾಸ್ತು ಪ್ರಕಾರ ಇದು ಮನೆಗೆ ಪ್ರೀತಿ, ಆಸ್ತಿ, ಅದೃಷ್ಟ ಹಾಗೂ ಆರೋಗ್ಯ ತರುತ್ತದೆ. ಜೊತೆಗೆ, ಕೆಲವೊಂದು ರೀತಿಯ ಕ್ರಿಮಿಕೀಟಗಳನ್ನು ಕೂಡಾ ಮನೆಯೊಳಗೆ ಬರದಂತೆ ನೋಡಿಕೊಳ್ಳುತ್ತದೆ. ಕಡಿಮೆ ಪ್ರಯತ್ನದಲ್ಲಿ ಆರ್ಥಿಕವಾಗಿ ಹೆಚ್ಚು ಯಶಸ್ಸು ಸಾಧಿಸಲು ತುಳಸಿ ನೆರವಾಗುತ್ತದೆ.

ಮಲ್ಲಿಗೆ

ಮಲ್ಲಿಗೆಯು ಮನೆಯಂಗಳಕ್ಕೆ ಪರಿಮಳ ಲೇಪ ಮಾಡುವುದಷ್ಟೇ ಅಲ್ಲ, ಇದು ಪ್ರೀತಿ ಹಾಗೂ ಹಣವನ್ನು ಆಕರ್ಷಿಸುತ್ತದೆ.