ಸೆ.20ಕ್ಕೆ ಮತ್ತೆ ಸಿಗ್ನಲ್ ಪಕ್ಕಾ: ಖ್ಯಾತ ಜ್ಯೋತಿಷಿ ಕೊಟ್ಟರು ಭರವಸೆ!
ಚಂದ್ರಯಾನ-2 ಯೋಜನೆ ಹಿನ್ನಡೆ ಹಿನ್ನೆಲೆ| ಯೋಜನೆ ಹಿನ್ನಡೆಯಿಂದಾಗಿ ನಿರಾಶೆಯ ಮಡಲಲ್ಲಿ ದೇಶ| ಸೆ.20ಕ್ಕೆ ಚಂದ್ರಯಾನ-2 ನೌಕೆ ಮತ್ತೆ ಸಂಪರ್ಕಕ್ಕೆ ಸಿಗಲಿದೆಯಾ?| ಖ್ಯಾತ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ| ಹಲವು ಪಕ್ಕಾ ಭವಿಷ್ಯ ನುಡಿದು ಖ್ಯಾತರಾಗಿರುವ ಅನಿರುದ್ಧ ಮಿಶ್ರಾ|
ನವದೆಹಲಿ(ಸೆ.07): ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ಇಡೀ ದೇಶ ದು:ಖತಪ್ತವಾಗಿದೆ. ವಿಕ್ರಂ ಮೂನ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿ.ಮೀ ಅಂತರದಲ್ಲಿ ಇಸ್ರೋ ಸಂಪರ್ಕ ಕಡಿದುಕೊಂಡಿದೆ.
ಈ ಮಧ್ಯೆ ಚಂದ್ರಯಾನ-2 ನೌಕೆ ಸೆ.20ಕ್ಕೆ ಮತ್ತೆ ಸಂಪರ್ಕಕ್ಕೆ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅನಿರುದ್ಧ, ತಮ್ಮ ಅನಿಸಿಕೆ ಪ್ರಕಾರ ಸೆ.20ಕ್ಕೆ ಚಂದ್ರಯಾನ-2 ನೌಕೆ ಮತ್ತೆ ಸಂಪರ್ಕಕ್ಕೆ ಸಿಗಲಿದ್ದು, ಈಗಾಗಲೇ ಇಸ್ರೋ ವಿಜ್ಞಾನಿಗಳು ತಮ್ಮ ಚಟುವಟಿಕೆ ತೀವ್ರಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಹಲವು ಬಾರಿ ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ ನಿಜವಾಗಿರುವುದು ಗಮನಿಸಬೇಕಾದ ಅಂಶ. ಪ್ರಮುಖವಾಗಿ 2019ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದರು.
ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅನಿರುದ್ಧ ಸ್ಪಷ್ಟವಾಗಿ ನುಡಿದಿದ್ದರು. ಆದರೆ ಕೊನೆಯ ಐಪಿಎಲ್ ಪಂದ್ಯಾವಳಿಯ ಕುರಿತು ಅನಿರುದ್ಧ ಹೇಳಿದ್ದ ಭವಿಷ್ಯ ಸುಳ್ಳಾಗಿದ್ದ ಪರಿಣಾಮ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು.
ಅದೆನೆ ಇರಲಿ ಅನಿರುದ್ಧ ಮಿಶ್ರಾ ಭವಿಷ್ಯ ಕರಾರಯವಕ್ಕು ಹೌದೋ ಅಲ್ಲವೋ ಎನ್ನುವುದಕ್ಕಿಂತ ಅವರು ನುಡಿದಂತೆ ಚಂದ್ರಯಾನ-2 ನೌಕೆ ಮತ್ತೆ ಸಂಪರ್ಕಕ್ಕೆ ಸಿಗಲಿ ಎಂಬುದೇ ಎಲ್ಲರ ಆಶಯ.