New Year 2023: ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ ?
ನಾವೆಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿದ್ದೇವೆ. ಈ ವರ್ಷ ಹೇಗಿರುತ್ತೋ, ಏನೋ ಎಂಬ ಕುತೂಹಲ ಎಲ್ಲರಿಗೂ ಇದೆ. ನಿಮ್ಮ ಜನ್ಮ ಸಂಖ್ಯೆಯ ಆಧಾರದ ಮೇಲೆ ಇಲ್ಲಿನ ಸಂಖ್ಯೆಗಳನ್ನು ನೋಡಿ 2023ರಲ್ಲಿ ನಿಮ್ಮ ಜೀವನದಲ್ಲಾಗುವ ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮುಂದಿನ ವರ್ಷದ ಭವಿಷ್ಯವನ್ನು ನಿಮ್ಮ ಜನ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (Numerology). ನಿಮ್ಮ ಜನ್ಮ ಸಂಖ್ಯೆಯ ಆಧಾರದ ಮೇಲೆ ಇಲ್ಲಿನ ಸಂಖ್ಯೆಗಳನ್ನು ನೋಡಿ 2023ರಲ್ಲಿ ನಿಮ್ಮ ಜೀವನ (Life)ದಲ್ಲಾಗುವ ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು. ಅದಕ್ಕೂ ಮೊದಲು 2023ರ ಮೂಲ ಸಂಖ್ಯೆಯನ್ನು ತಿಳಿದುಕೊಳ್ಳಿ. 2023, 2+0+2+3=7 ಈ ವರ್ಷದ ಸಂಖ್ಯೆ 7. ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಜನ್ಮ ದಿನಾಂಕ + ಜನನದ ತಿಂಗಳು + ಜನನ ವರ್ಷ ಸೇರಿಸಿ ಬರುವ ಸಂಖ್ಯೆಯನ್ನು ನೋಡಿ. ಉದಾ: ನೀವು 1/02/1998ರಂದು ಜನಿಸಿದ್ದರೆ 1+1+0+2+1+9+9+8=30 ಈಗ ಬಂದಿರುವ ಎರಡಂಕಿ ಸಂಖ್ಯೆಯನ್ನು 1 ಅಂಕಿ ಸಂಖ್ಯೆಗೆ ಇಳಿಸಿ 3+0=3. ಈ ಸಂಖ್ಯೆಯೇ ನಿಮ್ಮ ವರ್ಷದ ಸಂಖ್ಯೆಯಾಗಿರಲಿದೆ.
ಅದೃಷ್ಟದ ಬಾಗಿಲು ತೆರೆಯಲಿದೆ
ಈ ವರ್ಷ ನಿಮಗೆ ನಿರೀಕ್ಷಿತ ಯಶಸ್ಸು ಸಿಗಲಿದ್ದು, ಅದೃಷ್ಟದ (Luck) ಬಾಗಿಲು ತೆರಯಲಿದೆ. 2023 ಪ್ರೇಮಿಗಳಿಗೆ ಅತ್ಯುತ್ತಮ ವರ್ಷವಾಗಿರಲಿದೆ. ನಿಮ್ಮ ಆರೋಗ್ಯ, ಕೆಲಸಕ್ಕೆ ಪ್ರಾಮುಖ್ಯತೆ ನೀಡುವಿರಿ. ನಿಮ್ಮ ಅಹಂಕಾರ ಸ್ವಭಾವ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ನಿಮಗೆ ಪ್ರೇರಣೆಯಾಗಲಿದೆ. ಸಂಗಾತಿ (Partner)ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮತೋಲಿತ ಜೀವನ ನಿಭಾಯಿಸುವಿರಿ. ಹಣಕಾಸು ವಿಷಯದಲ್ಲಿ ಸ್ವಲ್ಪ ಏರಿಳಿತ ಕಾಣುವಿರಿ. ವ್ಯಾಪಾರ, ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆಯಿಡಿ. ವರ್ಷದ ಪ್ರಾರಂಭದಲ್ಲಿ ಉದ್ಯೋಗಿಗಳು ಶ್ರಮವಹಿಸಿದಷ್ಟೂ ಫಲ ಸಿಗದೆ ಇದ್ದರೂ, ವರ್ಷಾಂತ್ಯದಲ್ಲಿ ಸುಖ ಕಾಣುವಿರಿ.
Yearly Horoscope 2023: 2023ರ ವರ್ಷ ಯಾವ ರಾಶಿಯವರಿಗೆ ಅದೃಷ್ಟ ತರಲಿದೆ ನೋಡಿ....
ಆಕಾಂಕ್ಷೆಗಳು ಈಡೇರುವ ವರ್ಷ
ಉದ್ಯೋಗಿಗಳಿಗೆ ಅತ್ಯುತ್ತಮ ಅವಕಾಶ ಒದಗಲಿದೆ. ಹಣವನ್ನು ಒಳ್ಳೆಯ ಕಡೆ ಹೂಡಿಕೆ ಮಾಡುವಿರಿ. ವಿದೇಶದಲ್ಲಿ ನೆಲೆಗೊಳ್ಳುವ ಇಚ್ಛೆ ಈಡೇರಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ಹುದ್ದೆ ಸಿಗುವ ಸಾಧ್ಯತೆಯಿದೆ. ಜೀವನದಲ್ಲಿ ಉನ್ನತಿ ಹೊಂದಲಿದ್ದಿರಿ. ಪ್ರೇಮಿಗಳಿಗೆ ಅತ್ಯುತ್ತಮ ವರ್ಷವಾಗಿದೆ. ಪ್ರೇಮಿಗಳಿಗೆ ಮದುವೆ ಯೋಗ ಒದಗಿ ಬರಲಿದೆ. ವರ್ಷದ ಮಧ್ಯದಲ್ಲಿ ಸ್ವಲ್ಪ ಏರಿಳಿತ ಕಾಣುವ ಸಾಧ್ಯತೆಗಳಿವೆಯಾದರೂ ಸಂತೋಷ ನಿಮ್ಮ ಜೋಳಿಗೆಗೆ ಬಂದು ಬೀಳಲಿದೆ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಲಿದೆ. ಮುಂಚಿತವಾಗಿ ಎಚ್ಚರ ವಹಿಸುವುದು ಉತ್ತಮ. ಬೆಳೆಯಲು ಪ್ರೋತ್ಸಾಹಿಸಿದ ಜನರೊಂದಿಗೆ ಉತ್ತಮ ಸಂಬಂಧ ನಿರ್ವಹಿಸಿ.
ಹೊಸ ಅನ್ವೇಷಣೆಗೆ ಯತ್ನ
ಸಾಮಾಜಿಕ ವಲಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಸೃಜನಾತ್ಮಕ ಹಾಗೂ ಕಲಾತ್ಮಕ ಕಾರ್ಯಗಳಲ್ಲಿ ಸಕ್ರಿಯರಾಗುವಿರಿ. ವ್ಯವಹಾರ, ಹಣಕಾಸು ವಿಷಯದಲ್ಲಿ ಬೆಳವಣಿಗೆ ಸಾಧಾರಣವಾಗಿರಲಿದೆ. ಸಾಹಸ, ಪ್ರಯಾಣ, ಹೊಸ ಅನ್ವೇಷಣೆಗೆ ಯತ್ನಿಸುವಿರಿ. ನಿಮ್ಮ ವ್ಯಕ್ತಿತ್ವ ಸುಧಾರಿಸಿಕೊಳ್ಳಲು ಯತ್ನಿಸುವಿರಿ. ವಿದೇಶದಲ್ಲಿ ಅಧ್ಯಯನ ಮಾಡುವ ಅವಕಾಶ ಸಿಗಲಿದೆ. ಆದರೆ ಕೆಲವು ಅನಗತ್ಯ ಮಾನಸಿಕ ಒತ್ತಡಗಳು ಉಂಟಾಗುವ ಸಾಧ್ಯತೆಯಿದೆ. ಸ್ವಾನುರಾಗ ಹೆಚ್ಚಲಿದೆ. ಸಂಗಾತಿಯೊಡನೆ ಮನಸ್ತಾಪ ಉಂಟಾಗಿ ಅನವಶ್ಯಕ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ. ಕುಟುಂಬ, ಸ್ನೇಹಿತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ.
ಸಾಮರ್ಥ್ಯ ಆಧಾರಿತ ಯಶಸ್ಸು
ಸಮಾನ ಮನೋಭಾವ ಹೊಂದಿರುವ ವ್ಯಕ್ತಿಗಳ ಭೇಟಿ. ಕೆಲಸದಲ್ಲಿ ಹೆಚ್ಚು ಮನಸ್ಸು ತೊಡಗಿಸಿಕೊಳ್ಳುವಿರಿ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಯಶಸ್ಸು ಗಳಿಸುವಿರಿ. ನಿಮ್ಮ ಯಶಸ್ಸಿಗೆ ಬೇರಾರೂ ಶ್ರಮಿಸುವುದಿಲ್ಲ. ಕಷ್ಟ ದಾಟಿ, ಸುಖದ ಹಾದಿಗೆ ಜೀವನ ಬರಲಿದೆ. ಜವಾಬ್ದಾರಿ ಹೆಚ್ಚಲಿದೆ. ಅತಿಯಾದ ಆತ್ಮವಿಶ್ವಾಸದಿಂದ ದೂರವಿರಿ. ದಾಂಪತ್ಯ ಜೀವನದಲ್ಲಿ ಸಂತೋಷವಿರಲಿದೆ. ಪ್ರೀತಿ ಹೆಚ್ಚಾಗುತ್ತದೆ. ಪ್ರೇಮ ಸಂಬಂಧವೂ ಉತ್ತಮವಾಗಿರಲಿದೆ. ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ ಕಂಡುಬರಲಿದೆ. ವರ್ಷದ ಪ್ರಾರಂಭದಲ್ಲಿ ಕಷ್ಟ ಅನುಭವಿಸಿದರೂ ಉಳಿದ ಕೆಲವು ತಿಂಗಳಲ್ಲಿ ಸುಖವಾಗಿರುವಿರಿ.
Weekly Love Horoscope:ಈ ವಾರ ವೃಷಭ ರಾಶಿಗೆ ಪ್ರೀತಿ ವ್ಯಕ್ತಪಡಿಸಲು ಅಡ್ಡಿ, ಆತಂಕ!
ಪರಿವರ್ತನೆಯ ವರ್ಷವಿದು
ನಿಮ್ಮ ಪಾಲಿಗೆ ಇದು ಪರಿವರ್ತನೆ ಮತ್ತು ವಿಮೋಚನೆಯ ವರ್ಷವಾಗಿರಲಿದೆ. ಉದ್ಯೋಗದಲ್ಲಿ ಹಾಗೂ ಜೀವನದಲ್ಲಿ ವರ್ಷಾಂತ್ಯಕ್ಕೆ ಗಮನಾರ್ಹ ಬದಲಾವಣೆಗಳನ್ನು ಕಾಣುವಿರಿ. ಬದಲಾವಣೆಗಳನ್ನು ಸ್ವಾಗತಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ. ವೃತ್ತಿ ಜೀವನ ಸಾಮಾನ್ಯವಾಗಿರಲಿದೆ. ಕೌಟುಂಬಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಆರ್ಥಿಕ ಸವಾಲುಗಳು ಎದುರಾಗಲಿವೆ. ವೈವಾಹಿಕ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗಬಹುದು. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ ಉಳಿತಾಯದ ಕಡೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವಾಗಿರಲಿದೆ. ಸಾಧಾರಣದಿಂದ ಉತ್ತಮ ಅಂಕಗಳು ದೊರೆಯಲಿವೆ.
ಯೋಜಿತ ಕಾರ್ಯಕ್ಕೆ ಒತ್ತು
ಭೂತಕಾಲದಲ್ಲಿ ಕಾಡುತ್ತಿದ್ದ ಸಮಸ್ಯೆಗಳಿಗೆ ಈ ವರ್ಷ ಪರಿಹಾರ (Sollution) ದೊರಕಲಿದೆ. ಸಾಕಷ್ಟು ಪ್ರಗತಿ ಹಾಗೂ ಜನಪ್ರಿಯತೆ ಗಳಿಸುವಿರಿ. ಉದ್ಯೋಗಿಗಳಿಗೆ ಅವರ ಆಯ್ಕೆಯ ಅವಕಾಶ ಬಂದೊದಗಲಿದೆ. ಈ ವರ್ಷ ವ್ಯಾಪಾರದಲ್ಲಿ ಸಾಮಾನ್ಯ ಯಶಸ್ಸು ದೊರಕಲಿದೆ. ಯೋಜನೆ ರೂಪಿಸಿಕೊಂಡು ಕೆಲಸ ಮಾಡಿದರೆ ಉತ್ತಮ ಪ್ರಗತಿ. ವರ್ಷದ ಪ್ರಾರಂಭದಲ್ಲಿ ಮಾಡಿದ ಕಾರ್ಯಗಳನ್ನು ಅರ್ಧಕ್ಕೆ ಬಿಡದೇ ಮುಂದುವರೆಸಿ. ಪ್ರೇಮಿಗಳ ಬದುಕಿನಲ್ಲಿ ಸಮಸ್ಯೆಗಳು ಸುಳಿದಾಡಲಿವೆ. ಆರೋಗ್ಯ (Health)ದಲ್ಲಿ ಸಣ್ಣ-ಪುಟ್ಟ ಏರುಪೇರಾಗುವ ಸಾಧ್ಯತೆಗಳಿವೆ. ಕುಟುಂಬ, ಸಂಗಾತಿಗೆ ಸಮಯ ನೀಡಿ.
ಸ್ವಯಂ ಬೆಳವಣಿಗೆಗೆ ಪ್ರಾಮುಖ್ಯತೆ
ಆಧ್ಯಾತ್ಮಿಕತೆಗೆ ಒತ್ತು ನೀಡುವಿರಿ. ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದರಿಂದ ಸ್ವಯಂ ಬೆಳವಣಿಗೆ ಹೊಂದಿರುವಿರಿ. ಸಾಕಷ್ಟು ವೈಯಕ್ತಿಕ ಬದಲಾವಣೆಗಳಾಗುವುವು. ಏಕಾಂತದಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ. ವಿದ್ಯಾಭ್ಯಾಸ, ಉದ್ಯೋಗದಲ್ಲಿ ಅವಶ್ಯಕ ಬೆಳವಣಿಗೆ ಹೊಂದಿ, ಕನಸುಗಳು ನನಸಾಗಲಿವೆ. ಬದುಕಿನಲ್ಲಿ ಅಚ್ಚರಿ ಘಟನೆಗಳು ಎದುರಾಗಲಿವೆ. ಅಹಂಕಾರದ ಸ್ವಭಾವ ತ್ಯಜಿಸಿ, ಬೆಳವಣಿಗೆ ಕಡೆ ಗಮನಹರಿಸಿ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಕಂಡುಬರಲಿದೆ. ಆದರೆ ಭಯಪಡುವ ಅವಶ್ಯಕತೆಯಿಲ್ಲ. ಪ್ರೀತಿಯಲ್ಲಿ ಯಶಸ್ಸು ಕಾಣುವಿರಿ ಹಾಗೂ ವೈವಾಹಿಕ ಜೀವನವೂ (Married life) ಗಟ್ಟಿಯಾಗಿರಲಿದೆ.
ಬೆಳವಣಿಗೆ ಶಿಖರ ಏರುವಿರಿ
ಉದ್ಯೋಗ, ವ್ಯಾಪಾರದಲ್ಲಿ ಈ ವರ್ಷ ನೀವು ಬೆಳವಣಿಗೆ ಶಿಖರ ಏರುವಿರಿ. ಹೊಸ ಉದ್ಯಮ ಸ್ಥಾಪಿಸುವ ಕಡೆ ಗಮನಹರಿಸುತ್ತೀರಿ. ಸ್ವಯಂ ನಿಯಂತ್ರಣವಿರುವುದು ಉತ್ತಮ. ಈಗಾಗಲೇ ಯಶಸ್ಸು ದೊರಕಿದೆ ಎಂದುಕೊಂಡು ಪ್ರಯತ್ನಿಸುವುದು ಬಿಟ್ಟರೆ ಸೋಲು ಖಚಿತ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಅವಕಾಶ ದೊರೆಯುವ ಸಂಭವವಿದೆ. ಅಂದುಕೊಂಡ ಕೆಲಸ ಸಾಧಿಸುವಿರಿ. ಪ್ರೇಮಿಗಳು ವೈವಾಹಿಕ ಜೀವನಕ್ಕೆ ಕಾಲಿಡುವ ಸಂಭವವಿದೆ. ವೈವಾಹಿಕ, ಕೌಟುಂಬಿಕ ಕಲಹಗಳು ಸಂಭವಿಸುವುವು. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗುವ ಸಾಧ್ಯತೆ ಕಡಿಮೆ.
ಯಶಸ್ಸು ಬೆನ್ನೇರಿ ನಿಲ್ಲಲಿದೆ
ನಿಮಗೆ ಈ ವರ್ಷ ಅತ್ಯುತ್ತಮವಾಗಿರಲಿದ್ದು, ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ಪದೋನ್ನತಿ, ಬಡ್ತಿ ಸಿಗುವ ಸಂಭವವಿದೆ. ರಫ್ತು-ಆಮದು ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ಕ್ಷಮಿಸುವ ಮನೋಭಾವ, ತಾಳ್ಮೆ ಅವಶ್ಯಕ. ಗಳಿಸಿದ ಹಣ ಉಳಿತಾಯ ಮಾಡುವಿರಿ. ಹೊಸ ವಸ್ತುಗಳು ಬದುಕಿನಲ್ಲಿ ಬಂದಂತೆ, ಹಳೆ ವಸ್ತುಗಳಿಗೆ ವಿದಾಯ ಹೇಳುವುದು ಅವಶ್ಯಕವಾಗಿದೆ. ಅದು ವ್ಯಕ್ತಿಗಳೇ ಆಗಿದ್ದರೂ ವಿದಾಯ ಹೇಳುವುದು ಉತ್ತಮ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡುವಿರಿ. ವರ್ಷದ ಮಧ್ಯದಲ್ಲಿ ಸ್ವಲ್ಪ ಸವಾಲುಗಳು ಎದುರಾದರೂ, ವರ್ಷಾಂತ್ಯದಲ್ಲಿ ಸುಖ ಕಾಣುವಿರಿ. ವಾಹನ ಚಾಲನೆ ಕಡೆ ಗಮನ ಹರಿಸಿ. ಆರೋಗ್ಯದಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸವಾಗಲಿದೆ.