ಎಲ್ಲವೂ ಸರಿ ಇದೆ ಎನಿಸುತ್ತದೆ. ಆದರೂ ಏನೋ ಕಿರಿಕಿರಿ. ಸುಖಾ ಸುಮ್ಮನೆ ಹೆಚ್ಚೋ ಒತ್ತಡ. ಹೀಗೆ ಮನೆಯಲ್ಲಿಡುವ ಕೆಲವು ವಸ್ತುಗಳಿಂದಲೂ ಏನೇನೋ ಸಮಸ್ಯೆಗಳು ಸೃಷ್ಟಿಯಾಗುತ್ತೆ. ಅದಕ್ಕೆ ಕೆಲವು ವಸ್ತುಗಳನ್ನು ಇಡೋ ಸ್ಥಳದಲ್ಲಿಯೇ ಇಡಬೇಕು. ವಾಸ್ತುವೆಂದರೆ ಸ್ವಚ್ಛತೆಯೂ ಹೌದು. ಒಂದಕ್ಕೊಂದು ಸಂಬಂಧವಿರೋ ಈ ಅಂಶಗಳನ್ನು ತಪ್ಪದೇ ಪಾಲಿಸಬೇಕು. ಮನೆಯ ನೆಮ್ಮದಿಯಾಗಿ ಇಲ್ಲಿವೆ ಸಿಂಪಲ್ ವಾಸ್ತು ಟಿಪ್ಸ್..

ಇಲ್ಲಿವೆ ವಾಸ್ತು ಟಿಪ್ಸ್

- ಮನೆ ಮಧ್ಯ ಭಾಗದಲ್ಲಿ ಹಳದಿ ಬಣ್ಣದ ಹಾಸು ಹಾಸಿರಬೇಕು. ಹೊರ ಭಾಗದ ಮೇಲೆ ಆಗಸದ ನೀಲಿ ಬಳಸುವುದರಿಂದ ಗುರು ಮತ್ತು ಶನಿ ಗ್ರಹಗಳ ದೃಷ್ಟಿ ಮನೆ ಮೇಲೆ ಬೀಳುವಂತಾಗುತ್ತದೆ. 
- ಮನೆ ಮಧ್ಯ ಭಾಗ ಸದಾ ಖಾಲಿಯಾಗಿರಬೇಕು. ಅಲ್ಲಿ ಗೋಡೆ, ಕಪಾಟು, ಮಂಚ ಏನೂ ಇರಬಾರದು.
-  ಬ್ರಹ್ಮ ಸ್ಥಾನವಾಗಿರುವ ಮನೆ ಮಧ್ಯ ಭಾಗಕ್ಕೆ ಚಂದ್ರನ ಬೆಂಬಲ ದೊರೆತರೆ ಗೃಹ ಸೌಖ್ಯಕ್ಕೆ ಕಾರಣವಾಗುತ್ತದೆ. 
- ಚಂದ್ರನೇ ಮನೆಯ ಮಧ್ಯ ಭಾಗಕ್ಕೆ ಅಧಿಪತಿ. ಅದಕ್ಕೆ ಪೂರ್ವಾದಿ ಅಷ್ಟ ದಿಕ್ಕುಗಳ ಬಗ್ಗೆ ಹೇಗೆ ಜಾಗ್ರತೆ ವಹಿಸುತ್ತಿರುತ್ತೇವೆಯೋ ಹಾಗೆ ನಡು ಮನೆಯೆಡೆಗೂ ಗಮನಿಸಬೇಕು. 
- ಮನೆಯ ಬಾಗಿಲ ಮುಂದೆ ಹಿಡಿ ಹಾಗ ಚಪ್ಪಲಿಯಂಥ ದುಷ್ಟ ಶಕ್ತಿಗಳನ್ನು ತರಿಸುವ ವಸ್ತುಗಳನ್ನು ಇಡಬಾರದು. 
- ಅಡುಗೆ ಮನೆ, ಜಗುಲಿಯಲ್ಲಿ ಪೊರಕೆ ಕಾಣುವಂತೆ ಇಟ್ಟರೆ ತಿನ್ನೋ ಆಹಾರಕ್ಕೆ ಅಭಾವ ಸೃಷ್ಟಿಯಾಗುತ್ತದೆ. 
- ಮನೆ ಹೊರಗೆ ಪೊರಕೆ ಕಾಣುವಂತಿದ್ದರೆ ನೆಗಟಿವ್ ಎನರ್ಜಿ ಹೆಚ್ಚುತ್ತದೆ. 
- ಸೂಕ್ತ ಜಾಗದಲ್ಲಿ ನೀಟಾಗಿಯೇ ಪೊರಕೆಯನ್ನು ಇಡಬೇಕು. ಅದು ಅಸ್ತವ್ಯಸ್ತವಾಗಿರಬಾರದು. ಯಾರಿಗೂ ಕಾಣದಂತಿಡಬೇಕು. 

ವಾಸ್ತು ದೋಷಕ್ಕೆ ನವಿಲು ಗರಿ ಪರಿಹಾರ