ಎಲ್ಲರನ್ನೂ ಮೋಡಿ ಮಾಡುವ ನವಿರಾದ ನವಿಲು ಗರಿಗೆ ಮಾರು ಹೋಗದವರು ಯಾರು? ಬೀಸಣಿಗೆಯಲ್ಲಿಯೋ, ಕೃಷ್ಣನ ಫೋಟೋ ಅಥವಾ ಮೂರ್ತಿ ಮೇಲೋ ನವಿಲುಗರಿಯನ್ನು ಇಟ್ಟುಕೊಂಡಿರುತ್ತಾರೆ ಹಲವರು. ಆದರೆ, ಇದಕ್ಕೆ ಮನೆಯ ದೋಷವನ್ನೂ ಪರಿಹರಿಸೋ ಶಕ್ತಿ ಇದೆ ಎಂಬ ಸತ್ಯ ಗೊತ್ತಾ?

  • ನವಿಲುಗರಿ ಮನೆಯಲ್ಲಿದ್ದರೆ ಹೇಗೆ ವಾಸ್ತು ದೋಷ ನಿವಾರಣೆಯಾಗುತ್ತೆ.
  • ಎಂಟು ನವಿಲು ಗರಿಗಳನ್ನು ಒಟ್ಟಾಗಿ ಬಿಳಿ ದಾರದಿಂದ ಕಟ್ಟಿ ಓಂ ಸೋಮಯಾ ನಮಃ ಎಂದು ಮಂತ್ರ ಹೇಳಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.
  • ಮೂರು ನವಿಲು ಗರಿಗಳನ್ನು ಕಟ್ಟಿ, ಅದರ ಜೊತೆ ಅಡಿಕೆ ಇಟ್ಟು, ಅದರ ಮೇಲೆ ನೀರು ಸಿಂಪಡಿಸುವಾಗ ಓಂ ಶನೀಶ್ವರಾಯ ನಮಃ ಜಪಿಸಿದರೆ ಶನಿ ದೋಷವೂ ದೂರವಾಗುತ್ತದೆ.
  • ನವಿಲುಗರಿಯನ್ನು ಲಾಕರ್ ಬಳಿ ಇಟ್ಟರೆ ಸಂಪತ್ತು ಹೆಚ್ಚುತ್ತದೆ.
  • ಮನೆ ಮುಂಭಾಗದಲ್ಲಿಟ್ಟರೆ ಋಣಾತ್ಮಕ ಶಕ್ತಿ ದೂರವಾಗುತ್ತದೆ.
  • ಆಫೀಸ್‌ನಲ್ಲಿ ನಾಟ್ಯ ಮಾಡುವ ನವಿಲಿನ ಚಿತ್ರವನ್ನಿಟ್ಟರೆ, ಆದಾಯ ಹೆಚ್ಚುತ್ತದೆ.
  • ಹಿಂದೆ ದೇಹದಿಂದ ವಿಷ ತೆಗೆಯಲೂ ನವಿಲು ಗರಿಯನ್ನು ಬಳಸುತ್ತಿದ್ದರು. ದೇಹದ ವಿಷವನ್ನೂ ತೆಗೆಯುವಷ್ಟು ಶಕ್ತಿ ನವಿಲು ಗರಿಗಿದೆ.
  • ಮನೆಯಲ್ಲಿರುವ ಹಲ್ಲಿ ಓಡಿಸಲೂ ಈ ನವಿಲು ಗರಿ ಬೆಸ್ಟ್.
  • ಬೆಡ್‌ರೂಮಿನಲ್ಲಿ ಗರಿ ಬಿಚ್ಚಿರುವ ನವಿಲಿನ ಚಿತ್ರವಿದ್ದರೆ, ದಾಂಪತ್ಯದ ಬಾಂಧವ್ಯ ಗಟ್ಟಿಗೊಳ್ಳುತ್ತದೆ.