ವಾಸ್ತುವು ಪ್ರಕೃತಿ ಮನುಷ್ಯ ಹಾಗೂ ಭೂಮಿಯ ನಡುವೆ ಸಮತೋಲನ ತಂದು, ಬದುಕಿನಲ್ಲಿ ಉತ್ತಮ ಆರೋಗ್ಯ, ಸಮೃದ್ಧಿ, ನೆಮ್ಮದಿ ತರುವಲ್ಲಿ ಸಹಕರಿಸುವ ವಿದ್ಯೆಯಾಗಿದೆ. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನಸುಗಳನ್ನು, ಗುರಿಗಳನ್ನು ಸಾಧಿಸಲು ಪ್ರತಿಯೊಬ್ಬರೂ ಬೆಳಗಿನಿಂದ ರಾತ್ರಿವರೆಗೆ ದುಡಿತ, ಕಲಿಕೆಯ ಹಿಂದೆ ಬಿದ್ದು ಒತ್ತಡಕ್ಕೊಳಗಾಗುತ್ತಿದ್ದಾರೆ.

ರಾತ್ರಿ ಹೊತ್ತು ಕೆಟ್ಟ ಕನಸು ಬೀಳುತ್ತಾ? ಹಿಂಗ್ ಮಾಡ್ ನೋಡಿ...

ಈ ಒತ್ತಡ, ಆತಂಕ, ಖಿನ್ನತೆ ಇವೆಲ್ಲವೂ ನಮ್ಮ ಸುತ್ತಲಿನ ನೆಗೆಟಿವ್ ಎನರ್ಜಿಯ ಕಾರಣದಿಂದಲೇ ಆಗುತ್ತವೆ. ಆದರೆ, ಈ ಒತ್ತಡದಿಂದ ಬಿಡುಗಡೆ ಹೊಂದಲು, ಕನಿಷ್ಠ ಪಕ್ಷ ಕಡಿಮೆ ಮಾಡಲು ವಾಸ್ತುವಿನ ನಿಯಮಗಳನ್ನು ಅನುಸರಿಸುವುದರಿಂದ ಸಾಧ್ಯವಾಗುತ್ತದೆ. ಅಂಥ 20 ವಾಸ್ತು ರೂಲ್ಸ್‌ಗಳು ಇಲ್ಲಿವೆ.

1. ಬೇಡವಾದ, ತುಕ್ಕು ಹಿಡಿದ, ಹರಿದ, ತುಂಡಾದ ವಸ್ತುಗಳನ್ನು ಮನೆಯಿಂದ ತಕ್ಷಣವೇ ಹೊರ ಹಾಕಬೇಕು. ಇವೆಲ್ಲವೂ ನೆಗೆಟಿವ್ ಎನರ್ಜಿಯ ಉಗಮ ಸ್ಥಾನಗಳು. 

2. ಮನೆಯ ಪ್ರತಿ ಕೋಣೆಯ ಈಶಾನ್ಯ ಮೂಲೆಯನ್ನು ಬಹಳ ಸ್ವಚ್ಛವಾಗಿ, ಜೋಡಿಸಿಟ್ಟುಕೊಳ್ಳಬೇಕು. ಇದಲ್ಲದೆ ಗೋಡೆಯ ಎಲ್ಲ ಮೂಲೆಗಳೂ ಜೇಡ ಕಟ್ಟದಂತೆ ಸ್ವಚ್ಛವಾಗಿರಬೇಕು. ಅವು ಬಡತನವನ್ನು ಸೂಚಿಸುತ್ತವಷ್ಟೇ ಅಲ್ಲ, ಮನೆ ಸದಸ್ಯರ ನಡುವೆ ಬಿಕ್ಕಟ್ಟಿನ ಪರಿಸ್ಥಿತಿ ತಂದು ಒತ್ತಡ ಹೆಚ್ಚಿಸುತ್ತವೆ.

3. ಮಧ್ಯದ ಹಾಲ್‌ನ ಮಧ್ಯಭಾಗವನ್ನು ಖಾಲಿಯಿಟ್ಟುಕೊಳ್ಳಬೇಕು. ಅಂದರೆ ಮನೆಯ ಮಧ್ಯಭಾಗದಲ್ಲಿ ಯಾವುದೇ ಸರಕು ಸರಂಜಾಮನ್ನಾಗಲೀ, ಫರ್ನಿಚರ್ ಆಗಲಿ ಇರಕೂಡದು.

ಆರೋಗ್ಯ ಸ್ಥಿರವಾಗಿಡಲು ವಾಸ್ತು ಪ್ರಕಾರ ಏನು ಮಾಡಬೇಕು ಗೊತ್ತಾ...?

4. ಬೆಡ್‌ರೂಂಗಳಲ್ಲಿ ಕನ್ನಡಿಗಳನ್ನಿರಿಸಬಾರದು. ಹಾಗೊಂದು ವೇಳೆ ಅವು ಅನಿವಾರ್ಯವೆನಿಸಿದರೆ, ರಾತ್ರಿ ಮಲಗುವಾಗ ಅವಕ್ಕೆ ಬಟ್ಟೆಗಳಿಂದ ಮುಚ್ಚಬೇಕು. 

5. ತಲೆಯನ್ನು ಉತ್ತರ ದಿಕ್ಕಿಗಿಟ್ಟು ಎಂದಿಗೂ ಮಲಗಕೂಡದು. ಪೂರ್ವ ಹಾಗೂ ದಕ್ಷಿಣ ಭಾಗಗಳು ತಲೆಯಿಡಲು ಉತ್ತಮ ದಿಕ್ಕಾಗಿದ್ದು, ಪಶ್ಚಿಮ ಕೂಡಾ ಪರವಾಗಿಲ್ಲ. ಇನ್ನು ಮಲಗುವ ಕೋಣೆಯಲ್ಲಿ ಮದ್ಯ ಸೇವನೆ ಬೇಡವೇ ಬೇಡ. 

6. ಮಂಚವು ಯಾವತ್ತೂ ಗೋಡೆಗೆ ತಾಕಿರಬಾರದು. ಅಷ್ಟೇ ಅಲ್ಲ, ಅದರಲ್ಲಿ ಹೆಡ್‌ರೆಸ್ಟ್ ಇರಲೇಬೇಕು.

7. ಯಾವಾಗಲೂ ನಾಲ್ಕು ಕಾಲುಗಳಿರುವ ಮಂಚವನ್ನೇ ಬಳಸಬೇಕು. ಬೆಡ್‌ಬಾಕ್ಸ್‌ಗಳು ಇರಬಾರದು. 

ನಿಮ್ಮನೇಲಿ ಈ ವಸ್ತುಗಳಿದ್ದರೆ ಎಸೆದು ಬಿಡಿ, ಒಳ್ಳೇದಾಗುತ್ತೆ ನೋಡಿ

8. ಒಂದು ವೇಳೆ ಬಾಕ್ಸ್ ಇರುವ ಬೆಡ್ ಬಳಸಿದರೆ, ಅದರೊಳಗೆ ನೆಗೆಟಿವ್ ಎನರ್ಜಿ ಸೂಸುವ ಯಾವ ವಸ್ತುಗಳೂ ಇರಕೂಡದು. ಇದು ಮಲಗುವವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

9. ಹಾಸಿಗೆ ಮೇಲೆ ಮಲಗಲು ಯಾವಾಗಲೂ ಸ್ವಚ್ಛವಾದ ಬಿಳಿಯ ಲೆನಿನ್ ಬಟ್ಟೆ ಬಳಸಿ.

10. ಇಂಪಾದ ಮೆಲುವಾದ ಸಂಗೀತ ಹಾಗೂ ಸುಗಂಧಗಳನ್ನು ಬೆಡ್‌ರೂಂನಲ್ಲಿ ಹಾಕಿಟ್ಟುಕೊಳ್ಳಬೇಕು. ಇದು ರಾತ್ರಿಯ ನಿದ್ದೆಗೆ ನೆಮ್ಮದಿ ತರುತ್ತದೆ.

11. ಮನೆಯ ಉತ್ತರ ಭಾಗದಲ್ಲಿ ಓದುವ ಸ್ಥಳವಿರಬೇಕು. ಸ್ಟಡಿ ಟೇಬಲ್ ಈಶಾನ್ಯ ದಿಕ್ಕಿಗಿರಬೇಕು. ಇದರಿಂದ ಏಕಾಗ್ರತೆ ಹೆಚ್ಚುತ್ತದೆ.

12. ಏಕಾಗ್ರತೆ ಹಾಗೂ ಬುದ್ಧಿಮತ್ತೆ ಹೆಚ್ಚಬೇಕೆಂದರೆ ಮಕ್ಕಳು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಓದಲು ಕೂರುವಂತೆ ನೋಡಿಕೊಳ್ಳಬೇಕು.

13. ಓದುವ ಟೇಬಲ್ ಮೇಲೆ ಯಾವಾಗಲೂ 1 ಗ್ಲಾಸ್ ಪೂರ್ತಿ ತುಂಬಿದ ನೀರು ಇರಬೇಕು. ಜೊತೆಗೆ ಟೇಬಲ್ ಯಾವಾಗಲೂ ಖಾಲಿಯಾಗಿ ಸ್ವಚ್ಛವಾಗಿ ಇರಬೇಕು.

14. ಜ್ಞಾನ ಹಾಗೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು ಓದುವ ಕೋಣೆಯಲ್ಲಿ ಹಳದಿ ಬಣ್ಣವನ್ನು ಬಳಸಬೇಕು. ಇನ್ನು ಮನಸ್ಸು ಪ್ರಶಾಂತವಾಗಿರಬೇಕೆಂದರೆ ಮನೆಯ ಎಲ್ಲ ಗೋಡೆಗಳಿಗೂ ತಿಳಿವರ್ಣವನ್ನೇ ಹಚ್ಚಬೇಕು. ಏಕೆಂದರೆ ಗಾಢವರ್ಣದ ಗೋಡೆಗಳು ಮನೆಯ ಸದಸ್ಯರಲ್ಲಿ ಅಭದ್ರತೆ ಹಾಗೂ ದುಃಖ ತರುತ್ತವೆ. 

ಮತ್ತೊಬ್ಬರ ಪೆನ್, ಟವೆಲ್ ಬಳಕೆ ಹಿಂದಿದೆ ವಾಸ್ತು ಶಾಸ್ತ್ರ

15. ಆಗ್ನೇಯ ದಿಕ್ಕಿನಲ್ಲೇ ಅಡುಗೆಕೋಣೆ ಇರಬೇಕು. ಅಡುಗೆ ಮಾಡುವವರು ಪೂರ್ವಕ್ಕೆ ಮುಖ ಮಾಡಿ ಅಡುಗೆ ತಯಾರಿಸಬೇಕು. ಪಾತ್ರೆಗಳನ್ನು ಯಾವಾಗಲೂ ತೊಳೆದೇ ಇಡಬೇಕು. 

16. ಊಟ ಮಾಡುವಾಗ ಪುರುಷರು ಯಾವಾಗಲೂ ಉತ್ತರಕ್ಕೆ ಮುಖ ಮಾಡಿ ಕೂರಬೇಕು. ಮಹಿಳೆಯರು ಪೂರ್ವಕ್ಕೆ ಮುಖ ಮಾಡಿ ಕೂರಬೇಕು.

17. ಗಿಡಗಳು, ಮರ ಹಾಗೂ ಸೆರಾಮಿಕ್ಸ‌ನ್ನು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿಡಬೇಕು.

18. ಪಾಸಿಟಿವಿಟಿ ಹೆಚ್ಚಿಸಲು ಮನೆಯ ಈಶಾನ್ಯ ಭಾಗದಲ್ಲಿ ಅಕ್ವೇರಿಯಂ ಅಥವಾ ಒಂದು ಬಟ್ಟಲಿನಲ್ಲಿ ನೀರಿಡಬೇಕು.

19. ಆರೋಗ್ಯ ಹಾಗೂ ಸಮೃದ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿ ದೀಪವೊಂದನ್ನು ಹಚ್ಚಿಡಿ.

20. ಉತ್ತಮ ಸಂಬಂಧವನ್ನು ಎಂಜಾಯ್ ಮಾಡಲು ವಿಂಡ್ ಚೈಮ್ ಸೇರಿದಂತೆ ನೇತು ಹಾಕುವ ವಸ್ತುಗಳನ್ನು ವಾಯುವ್ಯ ದಿಕ್ಕಿನಲ್ಲಿ ನೇತು ಹಾಕಿ.