ಆರೋಗ್ಯವೇ ಭಾಗ್ಯ ಎಂಬುದು ಅನಾರೋಗ್ಯ ಅನುಭವಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಮನವರಿಕೆಯಾಗಿರುತ್ತದೆ. ದೊಡ್ಡದಾದ ಮನೆ, ಕುಟುಂಬ, ಕೈತುಂಬ ಹಣ ಎಲ್ಲವೂ ಇದ್ದು ಆರೋಗ್ಯವೇ ಇಲ್ಲವೆಂದರೆ ಉಳಿದವೆಲ್ಲವೂ ನಗಣ್ಯ ಎನಿಸತೊಡಗುತ್ತವೆ. ಹೀಗಾಗಿ, ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯ. ಹೀಗೆ ಆರೋಗ್ಯ ಕಾಪಾಡಿಕೊಳ್ಳಲು ವಾಸ್ತುವಿನಲ್ಲಿ ಕೆಲ ಸಲಹೆಗಳಿವೆ. 

1. ನಿದ್ರೆಯ ಪೊಸಿಶನ್

ವ್ಯಕ್ತಿಯು ಹೇಗೆ ಮಲಗುತ್ತಾನೆ ಎಂಬುದಕ್ಕೂ ಆತನ ಆರೋಗ್ಯಕ್ಕೂ ಸಂಬಂಧವಿದೆ. ಆರೋಗ್ಯಕ್ಕಾಗಿ ಯಾವಾಗಲೂ ನಿಮ್ಮ ತಲೆಯನ್ನು ದಕ್ಷಿಣಕ್ಕೆ ಇಟ್ಟು ಮಲಗಬೇಕು. ವಾತಾ ಹಾಗೂ ಕಫ ಇರುವವರು ಮಂಚದ ಎಡಭಾಗದಲ್ಲಿ ಮಲಗಬೇಕು. ಪಿತ್ತ ಇರುವವರು ಬಲಭಾಗದಲ್ಲಿ ಮಲಗಬೇಕು. 

ನಿಮ್ಮನೇಲಿ ಈ ವಸ್ತುಗಳಿದ್ದರೆ ಎಸೆದು ಬಿಡಿ, ಒಳ್ಳೇದಾಗುತ್ತೆ ನೋಡಿ

2. ಮೆಟ್ಟಿಲಿನ ಸ್ಥಳ

ಮನೆಯ ಮೆಟ್ಟಿಲು ಎಲ್ಲಿರಬೇಕು ಎಂಬುದನ್ನು ಕಟ್ಟಿಸುವ ಮೊದಲೇ ವಾಸ್ತುತಜ್ಞರನ್ನು ಕೇಳಿ ಮುಂದುವರಿಯುವುದು ಉತ್ತಮ. ಏಕೆಂದರೆ, ಮೆಟ್ಟಿಲು ಕೂಡಾ ಮನೆಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಯಾವತ್ತೂ ಮೆಟ್ಟಿಲು ಮನೆಯ ಮಧ್ಯಭಾಗದಲ್ಲಿರಬಾರದು. ಇದು ದೊಡ್ಡ ರೀತಿಯ ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಯಾವಾಗಲೂ ಗೋಡೆಯ ಮೂಲೆಯಲ್ಲಿಯೇ ಮೆಟ್ಟಿಲಿರಬೇಕು. ಮೆಟ್ಟಿಲಿನ ಕೆಳಗಿನ ಜಾಗವನ್ನು ಟಾಯ್ಲೆಟ್, ಸ್ಟೋರೇಜ್ ಅಥವಾ ಅಡಿಗೆಕೋಣೆಯಾಗಿ ಬಳಸುವುದರಿಂದ ಹೃದಯದ ಸಮಸ್ಯೆಗಳು ಹಾಗೂ ಭಯ ಹೆಚ್ಚುತ್ತದೆ. 

3. ಫರ್ನಿಚರ್

ಮನೆಯೊಳಗೆ ಎನರ್ಜಿ ಫ್ರೀಯಾಗಿ ಓಡಾಡಬೇಕು. ಹಾಗಾಗಿ, ಮನೆಯ ಮಧ್ಯಭಾಗದಲ್ಲಿ ಎನರ್ಜಿಗೆ ತಡೆ ಒಡ್ಡುವಂತೆ ಯಾವುದೇ ಫರ್ನಿಚರ್ ಇಡಬಾರದು. ಬ್ರಹ್ಮಸ್ಥಾನ ಎಂದು ಕರೆಸಿಕೊಳ್ಳುವ ಮನೆಯ ಮಧ್ಯಭಾಗದಲ್ಲಿ ಎನರ್ಜಿ ಹರಿವಿಗೆ ತೊಂದರೆಯಾದರೆ ನಿವಾಸಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ.

ಮತ್ತೊಬ್ಬರ ಪೆನ್, ಟವೆಲ್ ಬಳಕೆ ಹಿಂದಿದೆ ವಾಸ್ತು ಶಾಸ್ತ್ರ

4. ಓವರ್‌ಹೆಡ್ ಬೀಮ್

ಈಗಂತೂ ಮನೆಯಲ್ಲಿ ಓವರ್‌ಹೆಡ್ ಬೀಮ್ ಹಾಕಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ರೀತಿ ಚಾವಣಿಯಿಂದ ನೇತಾಡುವ ಬೆಳಕು ಎಂದಿಗೂ ಕೋಣೆಯ ಮಧ್ಯಭಾಗದಲ್ಲಿರದಂತೆ ಎಚ್ಚರ ವಹಿಸಿ. ಏಕೆಂದರೆ, ಅವು ಮನಸ್ಸನ್ನು ಡಿಸ್ಟರ್ಬ್ ಮಾಡುತ್ತವೆ. ಏಕೆಂದರೆ ಅವು ನಾವು ನಮ್ಮ ಮನಸ್ಸಿನೊಂದಿಗೆ ಮಾತನಾಡಿಕೊಳ್ಳಲು ಅಡ್ಡಿ ಪಡಿಸುತ್ತವೆ.

5. ಅಗ್ನಿಸಂಬಂಧಿ ವಸ್ತು

ಮನೆಯ ಈಶಾನ್ಯ ಬಾಗದಲ್ಲಿ ಜನರೇಟರ್ ಇಡುವುದು, ಅಂಡರ್‌ಗ್ರೌಂಡ್‌ನಲ್ಲಿ ವಾಟರ್ ಟ್ಯಾಂಕ್ ಇಡುವುದು ಅಥವಾ ದಕ್ಷಿಣದ ಗೋಡೆಯಲ್ಲಿ ಸ್ಲೋಪ್ ಇಡುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. 

6. ಪೂರ್ವದಲ್ಲಿ ಅಗ್ನಿ

ವಾಯುವ್ಯ ಮೂಲೆಯಲ್ಲಿ ಪ್ರತಿ ದಿನ ದೀಪ ಹಚ್ಚುವುದು ಅಥವಾ ಸ್ಟೌ ಹಚ್ಚುವುದರಿಂದ ಅದು ಮನೆಮಂದಿಯಲ್ಲಿ ಉತ್ತಮ ಆರೋಗ್ಯವನ್ನು ಹೊತ್ತು ತರುತ್ತದೆ. ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವ ಬೆಂಕಿ ಯಾವತ್ತೂ ಪಾಸಿಟಿವ್ ಎನರ್ಜಿ ತರುತ್ತದೆ. ಪೂರ್ವದಲ್ಲಿ ಹಚ್ಚುವ ದೀಪ ಅಥವಾ ಸ್ಟೌ ಕೂಡಾ ಆರೋಗ್ಯ ಸೇರಿದಂತೆ ಎಲ್ಲ ರೀತಿಯಲ್ಲಿ ಮನೆಮಂದಿಗೆ ಒಳಿತು ಮಾಡುತ್ತದೆ. 

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

7. ಆಂಜನೇಯನ ಫೋಟೋ

ಆಂಜನೇಯನು ಆರೋಗ್ಯ ಕೊಡುವವನು. ಹಾಗಾಗಿ, ದಕ್ಷಿಣಕ್ಕೆ ಮುಖ ಮಾಡಿ ಆಂಜನೇಯನ ಫೋಟೋವನ್ನಿಡಿ.