ನಿಮ್ಮನೇಲಿ ಈ ವಸ್ತುಗಳಿದ್ದರೆ ಎಸೆದು ಬಿಡಿ, ಒಳ್ಳೇದಾಗುತ್ತೆ ನೋಡಿ

ಮನೆಯಲ್ಲಿ ಗೊಂದಲ, ಗಜಿಬಿಜಿ, ಸಂತೆ ಸೃಷ್ಟಿಸುವ ವಸ್ತುಗಳು, ಕಲಾಕೃತಿಗಳು ಇತರೆ ಸಾಮಗ್ರಿಗಳನ್ನು ದೂರಾಗಿಸಿ ಪಾಸಿಟಿವ್ ಎನರ್ಜಿ ತುಂಬಿಸಿ. 

These objects may be attracting negative energies into your home

ಮನೆ ಸಂತೋಷ, ಯಶಸ್ಸು, ಪಾಸಿಟಿವ್ ಎನರ್ಜಿಯಿಂದ ತುಂಬಿ ತುಳಕಬೇಕೆಂದರೆ ಎಲ್ಲಕ್ಕಿಂತ ಮೊದಲು ನೆಗೆಟಿವ್ ಎನರ್ಜಿ ತರುವಂಥ ವಸ್ತುಗಳಿಂದ ದೂರಾಗಬೇಕು ಎನ್ನುತ್ತದೆ ವಾಸ್ತುಶಾಸ್ತ್ರ. ಮನೆಯಲ್ಲಿ ಗೊಂದಲ ಸೃಷ್ಟಿಸುವ, ಗಜಿಬಿಜಿ ಮಾಡುವ, ಸಂತೆ ಮಾಡುವ ಕೆಲ ವಸ್ತುಗಳು ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ. ಅವುಗಳನ್ನು ಮೊದಲು ಮನೆಯಿಂದ ಆಚೆ ಕಳಿಸಿ. ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿರಬಾರದ ಇಂಥ ವಸ್ತುಗಳ ಪಟ್ಟಿ ಇಲ್ಲಿದೆ. 

ಮುರಿದ ವಸ್ತುಗಳು
ಬಹಳಷ್ಟು ಮನೆಗಳಲ್ಲಿ ಒಡೆದ ಗಾಜುಗಳು, ತುಂಡಾದ ಪಿಂಗಾಣಿ ಬಟ್ಟಲು, ಮುರಿದ ಟ್ರೇ ಹಾಗೂ ಇಂಥದೇ ಹಲವಾರು ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವರು ಅವನ್ನು ಮರುಬಳಕೆ ಮಾಡಲು ಯೋಗ್ಯವಾಗಿಸುವ ಯೋಚನೆಯಲ್ಲಿ ತೆಗೆದಿಟ್ಟು ಮರೆತಿದ್ದರೆ, ಮತ್ತೆ ಕೆಲವರು ಅದನ್ನೇ ಬಳಸುತ್ತಿರುತ್ತಾರೆ. ಮತ್ತೆ ಕೆಲವರಿಗೆ ಅದರ ಮೇಲೆ ಏನೋ ಸೆಂಟಿಮೆಂಟ್. ಆಪ್ತರು ಕೊಟ್ಟ ಉಡುಗೊರೆ ಎಂಬ ಅಭಿಮಾನ. ಆದರೆ, ಈ ವಸ್ತುಗಳು ಮನೆಯಲ್ಲಿ ದುಃಖ, ಬೇಜಾರು, ಏಕತಾನತೆ, ನಿರಾಶದಾಯಕತೆ ಹರಡುತ್ತವೆ. ಅದಕ್ಕಾಗಿಯೇ ನಿಮ್ಮ ವಸ್ತುಗಳು ಮುರಿದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಮುರಿದಿದ್ದರೂ ತಕ್ಷಣ ರಿಪೇರಿ ಮಾಡಿಸುವುದನ್ನು ಮರೆಯಬೇಡಿ. ಇಲ್ಲದಿದ್ದಲ್ಲಿ ಎಸೆದುಬಿಡಿ. 

ಮನಸ್ಸಿನ ಕಥೆ ಹೇಳೋ ಕಿಟಕಿ ಪರದೆಗಳು

ನೆಗೆಟಿವ್ ಕಲಾಕೃತಿಗಳು

ಅಳುತ್ತಿರುವ ಮಗು, ಮುಳುಗಿದ ಹಡಗು, ಮುಳುಗುತ್ತಿರುವ ಸೂರ್ಯ, ಜೊತೆಗೆ ಅರ್ಥವಾಗದ, ಗೊಂದಲ ಸೃಷ್ಟಿಸುವ ಕಲಾಕೃತಿಗಳಂಥವನ್ನು ಮನೆಯಿಂದ ಹೊರ ಹಾಕಿ. ಅವು ಮನೆಯಲ್ಲಿ ನೋವು ಹಾಗೂ ದುಃಖದ ಪರಿಸರ ನಿರ್ಮಿಸುತ್ತವೆ. ಅಂತೆಯೇ ಜಲಪಾತ, ಸಮುದ್ರ, ಮಳೆಯ ಚಿತ್ರಗಳು, ಅಕ್ವೇರಿಯಂ ಅಥವಾ ಫೌಂಟೇನ್ ಬೆಡ್‌ರೂಂನಲ್ಲಿದ್ದರೆ ಅದು ಹಣಕಾಸಿನ ಅಡಚಣೆ ಸೃಷ್ಟಿಸುವ ಜೊತೆಗೆ ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳನ್ನು ತರುತ್ತದೆ. ಏಕೆಂದರೆ, ನೀರು ನಿಲ್ಲದ ವಸ್ತುವಾಗಿದ್ದು, ಮನೆಯಲ್ಲಿ ಸೆಟಲ್ ಆಗದ ಪರಿಸರ ಸೃಷ್ಟಿಸುತ್ತದೆ. 

These objects may be attracting negative energies into your home

ಒಣಗಿದ ಹೂವು ಅಥವಾ ಆರ್ಟಿಫಿಶಿಯಲ್ ಹೂವುಗಳು
ನಿಸರ್ಗ ಎಂಬುದು ಯಾವಾಗಲೂ ಮನೆಯಲ್ಲಿ ಸಂತೋಷ ಹರಡುತ್ತದಾದರೂ, ಒಣಗಿದ ಸಸ್ಯಗಳು, ಬಾಡಿದ ಹೂವುಗಳು ಮನೆಯವರ ಮೇಲೆ ಪೂರ್ತಿ ಉಲ್ಟಾ ಪರಿಣಾಮಗಳನ್ನು ಬೀರುತ್ತವೆ. ಕಾರ್ನೇಶನ್‌ಗಳು ಮನೆಗೆ ದುರದೃಷ್ಟ ತರುತ್ತವೆ. ಅವನ್ನು ಬೇಕಿದ್ದರೆ ಹೊರಾಂಗಣದಲ್ಲಿ ಅಥವಾ ಬಾಲ್ಕನಿಯಲ್ಲಿ ಬೆಳೆಯಬಹುದು. ಇನ್ನು ಮುಳ್ಳುಗಳಿರುವ ಸಸ್ಯಗಳನ್ನು ಮನೆಯೊಳಗೆ ಇಡಲೇಕೂಡದು. ಅವು ಮನೆಯ ಸದಸ್ಯರ ನಡುವೆ ಸಮಸ್ಯೆ ತಂದಿಡುತ್ತವೆ. 

ವಾಸ್ತು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

These objects may be attracting negative energies into your home

ಹರಿದ ಬಟ್ಟೆಗಳು
ಹರಿದ ಬಟ್ಟೆಗಳು, ಪ್ಯಾಚ್ ಹಾಕಿ ಹರಿದ ಜಾಗ ತುಂಬಿದ ಬೆಡ್‌ಶೀಟ್‌ಗಳು ನಿಮ್ಮ ಲವ್ ಲೈಫ್‌ನಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಪ್ರತಿ ತಿಂಗಳಿಗೊಮ್ಮೆ ನಿಮ್ಮ ವಾರ್ಡ್ರೋಬ್‌ನಲ್ಲಿ ಫೇಡ್ ಆದ,. ಹರಿದ, ನೀವು ಧರಿಸದ ಬಟ್ಟೆಗಳನ್ನು ತೆಗೆದುಬಿಡಿ. ಹಳೆಯ ಬಟ್ಟೆಗಳು ಮನೆಯ ಪುನರುತ್ಪಾದನಾ ಎನರ್ಜಿಯನ್ನು ನಾಶ ಮಾಡುತ್ತವೆ. 

ಸತ್ತ ಪ್ರಾಣಿಗಳು
ಸತ್ತ ಪ್ರಾಣಿಯ ಚರ್ಮದಿಂದ ತಯಾರಿಸಿದ ವಸ್ತುಗಳು, ಸತ್ತ ಪ್ರಾಣಿಗಳ ಮುಖ ಸೃಷ್ಟಿ, ದಂತಗಳು, ಉಗುರುಗಳು ಇತರೆ ಯಾವುದೇ ಸತ್ತ ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳಲ್ಲಿ ಎನರ್ಜಿ ಚಲನಹೀನ ಸ್ಥಿತಿ ತಲುಪಿರುತ್ತದೆ. ಅದು ನಿರಂತರ ಸಾವಿನ ಸೂತಕವನ್ನು ಹರಡಬಲ್ಲವು. ವಾಸ್ತು ಪ್ರಕಾರ, ಪ್ರಕೃತಿಗೆ ವಿರುದ್ಧವಾದ ಯಾವುದೇ ವಸ್ತುವನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಪೂರ್ತಿ ಬೆಳವಣಿಗೆಗೆ ತಡೆಯೊಡ್ಡಿ ಅವನ್ನು ಕುಬ್ಜವಾಗಿಸಲಾಗಿರುತ್ತದೆ ಎಂಬ ಕಾರಣಕ್ಕೆ ಬೋನ್ಸಾಯ್ ಗಿಡಗಳನ್ನು ಕೂಡಾ ವಾಸ್ತು ಶಾಸ್ತ್ರ ಒಪ್ಪುವುದಿಲ್ಲ. 

ಹಿಡಿ ಮೇಲ್ಮುಖವಾಗಿಡುವುದು
ಹಿಡಿ ಅಥವಾ ಪೊರಕೆಯನ್ನು ಮೇಲ್ಮುಖವಾಗಿ ಇಡುವುದರಿಂದ ಅದು ದುರದೃಷ್ಟವನ್ನು ಆಕರ್ಷಿಸುತ್ತದೆ. ಬದಲಿಗೆ, ಮನೆಯೊಳಗೆ ಎಲ್ಲಿ ಬೇಕಾದರೂ ಇಡಿ, ನೆಲ ಮುಖವಾಗಿ ಇಡಿ. ಹಾಗೆಯೇ, ಕತ್ತರಿಯನ್ನು ತೆರೆದಿಡುವುದು ಕೂಡಾ ದುರದೃಷ್ಟವನ್ನು ಕರೆಯುತ್ತದೆ. ಯಾವಾಗಲೂ ಕತ್ತರಿ ಬಾಯಿ ಮುಚ್ಚಿಯೇ ಇರಬೇಕು. 

 

Latest Videos
Follow Us:
Download App:
  • android
  • ios