ಅಬ್ಬಾ, ಬೆಳಗ್ಗೆ ಎಂಟು ಗಂಟೆ ಕಡಿಮೆ ಏಳಬಾರದು ಎಂದು ಮಲಗಿರುತ್ತೀರಿ. ಬೀಳೋ ಕನಸು ನಿಮ್ಮ ಸುಖ ನಿದ್ರೆಯನ್ನೇ ಕಸಿದುಕೊಳ್ಳುತ್ತದೆ. ಅಂಥ ಕನಸು ಬೀಳೋ ಕಾಣವೂ ಗೊತ್ತಾಗೋಲ್ಲ. ಯಾವುದೇ ಸುಪ್ತ ಮನಸ್ಸಿನ ಆಸೆ, ಆಕಾಂಕ್ಷೆ ಹಾಗೂ ಭಯ-ಭೀತಿಗಳು ಕನಸಿನ ರೂಪದಲ್ಲಿ ಹೊರ ಹೊಮ್ಮಿರುತ್ತದೆ. ಸೊಂಪಾಗಿ ಮಾಡೋ ನಿದ್ರೆಗೆ ಭಂಗ ತಂದಿರುತ್ತದೆ ಆ ಕನಸು.

ಈ ಕೆಟ್ಟ ಕೆಟ್ಟ ಕನಸುಗಳಿಗೆ ನಾನಾ ರೀತಿಯಲ್ಲಿ ಪರಿಹಾರ ಕಂಡು ಕೊಳ್ಳಬಹುದು. ಕೆಲವೊಮ್ಮೆ ಬೆಚ್ಚಿ ಬೀಳುವಂಥ ಕನಸು ಬೀಳುತ್ತಿದ್ದರೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ನಿದ್ರೆಗೆ ಸದಾ ಭಂಗ ಉಂಟಾಗೋದು ರೆಗ್ಯುಲರ್ ಆಗಿ ಬಿಡುತ್ತೆ. ಇಂಥ ಕೆಟ್ಟ ಕನಸುಗಳಿಗೂ ಮುಕ್ತಿ ಹಾಡಲು ಇಲ್ಲಿವೆ ಕೆಲವು ಟಿಪ್ಸ್.

ಮೌಢ್ಯ ಬಿತ್ತೋ ವಾಸ್ತುಶಾಸ್ತ್ರ: ಜೋಪಾನವಾಗಿರಿ...

- ಬೆಡ್‌ರೂಮ್‌ ಯಾವಾಗಲೂ ದಕ್ಷಿಣ- ಪೂರ್ವ ದಿಕ್ಕಿನಲ್ಲಿರಬೇಕು.  

- ಕೋಣೆಯ ಮೂಲೆಗೆ ಬೆಡ್ ಸಮನಾಗಿರಬಾರದು. ಅಲ್ಲದೇ ಬಾತ್‌ರೂಮ್‌ ಬೆಡ್‌ನ ಸರಿ ಎದುರು ಭಾಗದಲ್ಲಿ ಇರಬಾರದು.  ಜೊತೆಗೆ ಬಾತ್‌ರೂಮ್‌ನ ಬಾಗಿಲು ಯಾವಾಗಲೂ ಮುಚ್ಚಿರಬೇಕು.

- ಪೂರ್ವ, ಉತ್ತರ ಅಥವಾ ಪಶ್ಚಿಮ ಗೋಡೆಗಳು ಬೆಡ್‌ರೂಮ್‌ ಪ್ರವೇಶ ಬಾಗಿಲಿಗೆ ಉತ್ತಮ ಸ್ಥಳ. ದಕ್ಷಿಣ ಗೋಡೆಯಲ್ಲಿ ಬಾಗಿಲು ನಿರ್ಮಿಸಬೇಡಿ. ಅಲ್ಲದೇ ಯಾವುದೆ ಶಬ್ಧ ಮಾಡದ ಬಾಗಿಲುಗಳಿರಲಿ.

- ದಕ್ಷಿಣದ ಕಡೆಗೆ ಕಾಲು ಹಾಕಿ ಮಲಗಿದರೆ ಕೆಟ್ಟ ಕನಸುಗಳು ಹೆಚ್ಚು ಬೀಳುತ್ತದೆ. ಅಲ್ಲದೆ ಎದೆ ನೋವು ಕಾಣಿಸಿಕೊಳ್ಳಲೂ ಬಹುದು.

ಆರೋಗ್ಯ ಸ್ಥಿರವಾಗಿಡಲು ವಾಸ್ತು ಪ್ರಕಾರ ಏನು ಮಾಡಬೇಕು ಗೊತ್ತಾ...?

- ಪಶ್ಚಿಮದ ಕಡೆಗೆ ತಲೆಹಾಕಿ ಮಲಗುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಅಲ್ಲದೇ ಕೆಟ್ಟ ಕನಸು ಬೀಳುವುದಿಲ್ಲ.

- ನಿಮ್ಮ ಬೆಡ್‌ರೂಮ್‌ನಲ್ಲಿ ಕನ್ನಡಿ ಇದ್ದರೆ ನೀವು ಮಲಗುವಾಗ ನಿಮ್ಮ ದೇಹದ ಯಾವುದೇ ಭಾಗ ಕನ್ನಡಿಯಲ್ಲಿ ಕಾಣಿಸದಂತೆ ನೋಡಿಕೊಳ್ಳಿ.  ಕನ್ನಡಿಯಲ್ಲಿ ನೀವು ಮಲಗಿರುವುದರು ಕಂಡರೆ ಕೆಟ್ಟ ಕನಸು ಬೀಳುತ್ತದೆ.