Published : May 02, 2026, 07:47 AM ISTUpdated : May 02, 2026, 10:35 PM IST

Karnataka News Live: ಭಾಗ್ಯಲಕ್ಷ್ಮೀ ಧಾರಾವಾಹಿ ತನ್ಮಯ್‌ಗೆ ಒಲಿದ 'ಅದೃಷ್ಟಲಕ್ಷ್ಮೀ'; ಶೋಮ್ಯಾನ್‌ ಕಣ್ಣಿಗೆ ಬಿದ್ದ ನಿಹಾರ್‌ ಗೌಡ

ಸಾರಾಂಶ

ಬೆಂಗಳೂರು (ಮೇ.2): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ. ದಿನಾಂಕವೇ ನಿಗದಿಯಾಗದೆ ಇರುವಾಗ ಮುಖ್ಯಮಂತ್ರಿ ಬದಲಾಗುತ್ತಾರೆ, ಬದಲಾಗಲ್ಲ ಎಂದು ನಾನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಗುರುವಾರವಷ್ಟೇ 'ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ' ಎಂದಿದ್ದ ಖರ್ಗೆಯವರು ಶುಕ್ರವಾರ ತಮ್ಮ ಹೇಳಿಕೆಗೆ ಸ್ಪಷ್ಟಿಕರಣ ನೀಡು ಡ್ತಾ, 'ಸಿಎಂ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ' ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

10:35 PM (IST) May 02

ಭಾಗ್ಯಲಕ್ಷ್ಮೀ ಧಾರಾವಾಹಿ ತನ್ಮಯ್‌ಗೆ ಒಲಿದ 'ಅದೃಷ್ಟಲಕ್ಷ್ಮೀ'; ಶೋಮ್ಯಾನ್‌ ಕಣ್ಣಿಗೆ ಬಿದ್ದ ನಿಹಾರ್‌ ಗೌಡ

Bhagyalakshmi Kannada Serial Episode Update: 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪಟ ಪಟ ಅಂತ ಮಾತನಾಡುತ್ತ, ಸದಾ ತಾಯಿಗೆ ಸಪೋರ್ಟ್‌ ಮಾಡುತ್ತ ತನ್ಮಯ್ ಪಾತ್ರ ಈಗಾಗಲೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಈ ಪಾತ್ರದಲ್ಲಿ ನಿಹಾರ್ ಗೌಡ ನಟಿಸುತ್ತಿದ್ದಾರೆ. ಇನ್ನೊಂದು ಅವಕಾಶ ಸಿಕ್ಕಿದೆ.

 

Read Full Story

10:01 PM (IST) May 02

Karnataka Rains - ರಾಜ್ಯದಲ್ಲಿ ಮುಂದಿನ ಮೂರು ದಿನ ಎಲ್ಲೆಲ್ಲಿ ಮಳೆ ಆರ್ಭಟ - ಇಲ್ಲಿದೆ ಮಾಹಿತಿ

ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಗುಂಡ್ಲುಪೇಟೆಯಲ್ಲಿ ಈಗಾಗಲೇ ಮಳೆಯಿಂದಾಗಿ ಬಾಳೆ ಬೆಳೆಗಾರರಿಗೆ ಅಪಾರ ನಷ್ಟವಾಗಿದೆ.
Read Full Story

09:53 PM (IST) May 02

Karwar - ಪತ್ನಿ ಮದ್ಯ ತಂದುಕೊಡದ್ದಕ್ಕೆ ಮನನೊಂದು ಆಟೋ ಚಾಲಕ ನೇಣಿಗೆ ಶರಣು

ಮದ್ಯಪಾನದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದ ನಡುವೆಯೂ ಪತ್ನಿ ಮದ್ಯ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಕದ್ರಾದಲ್ಲಿ ಸಂಭವಿಸಿದೆ.

Read Full Story

09:25 PM (IST) May 02

ಮೇ.15ಕ್ಕೆ ಸಿಎಂ ಬದಲಾವಣೆ? ಚರ್ಚೆಗೆ ಪ್ರತಿಕ್ರಿಯೆ ಬೇಡ - ಶಾಸಕ ಎ.ಎಸ್.ಪೊನ್ನಣ್ಣ

ರಾಜ್ಯದಲ್ಲಿ ಮೇ.15ಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ, ಸಚಿವ ಸಂಪುಟ ಬದಲಾಗುತ್ತದೆ ಎಂದು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸದಂತೆ ಸೂಚನೆಯಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.

Read Full Story

09:15 PM (IST) May 02

ತವರೂರು ಕಾರವಾರಕ್ಕೆ ಆಗಮಿಸಿದ ಫೆಮಿನಾ ಮಿಸ್ ಇಂಡಿಯಾ ಸಾಧ್ವಿ ಸೈಲ್; ಕಿರೀಟಕ್ಕೆ ಪೂಜೆ ಸಲ್ಲಿಕೆ

ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ, ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು ತಮ್ಮ ತವರೂರು ಕಾರವಾರಕ್ಕೆ ಭೇಟಿ ನೀಡಿದರು. ಅವರಿಗೆ ಅದ್ದೂರಿ ಸ್ವಾಗತ ದೊರೆತಿದ್ದು, ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Read Full Story

08:19 PM (IST) May 02

ಕಾರ್ಮಿಕರ ಜೀವನ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಾರ್ಮಿಕರ ಜೀವನ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅವರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Read Full Story

07:54 PM (IST) May 02

ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಸ್ಫೋಟಕ ಆರೋಪ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹರಿಹರ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಲ್ಲದೆ, ಬಿ.ಎಸ್. ಯಡಿಯೂರಪ್ಪನವರ ಪುತ್ರ ವ್ಯಾಮೋಹವನ್ನು ಟೀಕಿಸಿದ್ದಾರೆ.

Read Full Story

07:33 PM (IST) May 02

ಒಂದು ವರ್ಷದೊಳಗೆ ಹೊಸ ಬಸ್ ನಿಲ್ದಾಣ ಕಾಮಗಾರಿ ಪೂರ್ಣ - ಶಾಸಕ ಜನಾರ್ದನ ರೆಡ್ಡಿ

ಒಂದು ವರ್ಷದೊಳಗೆ ನೂತನ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ಹೇರೂರು ರಸ್ತೆಯ ಮಾರ್ಗದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದ ಶಂಖು ಸ್ಥಾಪನೆ ನೆರವೇರಿಸಿ ಮಾತನಾಡಿದರು.

Read Full Story

07:06 PM (IST) May 02

ಭಕ್ತನಂತೆ ಬರ್ತಾನೆ, ದೇವರ ಆಭರಣ ಕದ್ದು ಪರಾರಿಯಾಗ್ತಾನೆ - ಕಲಬುರ್ಗಿ ಖದೀಮ ಯಾರು ನೋಡಿ

ಕಲಬುರ್ಗಿಯ ಅಡ್ವೊಕೇಟ್ ಕಾಲನಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ, 1.37 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಮೊಹಮ್ಮದ್ ಶೇಖ್‌ನನ್ನು ಬಂಧಿಸಿ, ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Read Full Story

06:11 PM (IST) May 02

ದೆಹಲಿಗೆ ಹೋಗಿ ಅಮಿತ್‌ ಶಾರನ್ನು ಭೇಟಿಯಾದ Rishab Shetty ; ಕುತೂಹಲ ಮೂಡಿಸಿದ ಭೇಟಿ; ಉದ್ದೇಶ ಏನಾಗಿತ್ತು?

Kantara Movie Actor Rishab Shetty News: ಕಾಂತಾರ ಸಿನಿಮಾವನ್ನು ನಿರ್ದೇಶಿಸಿ, ನಟಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟ ರಿಷಬ್‌ ಶೆಟ್ಟಿ ಈಗ ಮುಂದಿನ ಸಿನಿಮಾದ ಘೋಷಣೆ ಮಾಡಬೇಕಿದೆ. ಈ ಮಧ್ಯೆ ಅವರು ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಕಾರಣ ಏನು? 

 

Read Full Story

05:56 PM (IST) May 02

ಯೋಗೇಶ್ ಗೌಡ ಹತ್ಯೆ ಪ್ರಕರಣ ಆಪರಾಧಿ ವಿನಯ್ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹ, ಸರ್ಕಾರ ಮಹತ್ವದ ಆದೇಶ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷಿ ಎಂದು ತೀರ್ಪು ಬಂದ ಹಿನ್ನೆಲೆಯಲ್ಲಿ, ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಜನಪ್ರತಿನಿಧಿ ಕಾಯ್ದೆಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಶಿಕ್ಷೆಯಿಂದ ಬಿಡುಗಡೆಯಾದ ನಂತರವೂ ಆರು ವರ್ಷಗಳ ಕಾಲ ಈ ಅನರ್ಹತೆ ಮುಂದುವರಿಯಲಿದೆ.
Read Full Story

05:55 PM (IST) May 02

Bengaluru - ಬಾರದ ಲೋಕಕ್ಕೆ ಪಯಣಿ ಬೆಳೆಸಿದ ಮಹಿಳಾ ಅಧಿಕಾರಿ ಎಸ್‌ಪಿ ಲಾವಣ್ಯ ಎನ್.

ಬೆಸ್ಕಾಂ ವಿಜಿಲೆನ್ಸ್ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದ 2010ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿ ಲಾವಣ್ಯ ಎನ್. ಅವರು ಕೊಲೊನ್ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. 39 ವರ್ಷದ ಲಾವಣ್ಯ ಅವರು ಪತಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Read Full Story

05:45 PM (IST) May 02

ಒಟಿಟಿಗೆ ಬಂದ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ರ Love Mocktail 3 Movie; ಯಾವಾಗ ರಿಲೀಸ್?‌

Darling Krishna: ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟನೆಯ ಲವ್ ಮಾಕ್ಟೇಲ್ 3 ಸಿನಿಮಾ ಮನಮುಟ್ಟುವ ಭಾವನಾತ್ಮಕ ಕಥೆಯಾಗಿದೆ. ಇದಕ್ಕೆ ಡಾರ್ಲಿಂಗ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾವನ್ನು ಕ್ರಿಸ್ಮಿ ಫಿಲಂಸ್ ಲಾಂಛನದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಿರ್ಮಾಣ ಮಾಡಿದ್ದಾರೆ.

 

Read Full Story

05:41 PM (IST) May 02

ಈ ಬಾರಿ ಬೇಸಿಗೆಯಲ್ಲಿ ಉತ್ತಮ ಮಳೆ, ಕಾಡ್ಗಿಚ್ಚಿನ ಆತಂಕ ದೂರ - ಪ್ರವಾಸಿಗರ ಕಣ್ಣಿಗಂತೂ ಹಸಿರಿನ ಸಿಂಚನ

ಬಂಡೀಪುರದಲ್ಲಿ ಈ ವರ್ಷ ಬೆಂಕಿ ಬೀಳುವ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ಜೊತೆಗೆ ವರುಣ ಕೂಡ ಸಾಥ್ ನೀಡಿದ್ದು, ಇದೀಗ ಬಂಡೀಪುರದಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.

Read Full Story

05:29 PM (IST) May 02

ಶೃಂಗೇರಿ - ಮತ ಮರು ಎಣಿಕೆಯಲ್ಲಿ ಕೂಡ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡಗೆ ಗೆಲುವು, ಕಾರ್ಯಕರ್ತರ ಸಂಭ್ರಮ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂಲ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೈಕೋರ್ಟ್ ನಿರ್ದೇಶನದಂತೆ ನಡೆದ ಈ ಮರುಪರಿಶೀಲನೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ ಗೆಲುವು ಮತ್ತೊಮ್ಮೆ ದೃಢಪಟ್ಟಿದೆ.
Read Full Story

05:25 PM (IST) May 02

PHOTOS - ವಿವಾಹ ವಾರ್ಷಿಕೋತ್ಸವದಂದು ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್‌ ಸರ್ಜಾ!

Actress Meghana Raj Sarja: ನಟಿ ಮೇಘನಾ ಸರ್ಜಾಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇಂದು ಅವರು ಪತಿ ಚಿರಂಜೀವಿ ಸರ್ಜಾರನ್ನು ನೆನೆದು, ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾವುಕರಾಗಿ ಬರೆದುಕೊಂಡಿದ್ದಾರೆ. 

 

Read Full Story

05:24 PM (IST) May 02

ಡಿವೋರ್ಸ್​ ಸಲ್ಲಿಸೋದಿದ್ರೆ ಮದುವೆ ರಿಜಿಸ್ಟರ್​ ಆಗಿರಲೇಬೇಕಾ? ಹೈಕೋರ್ಟ್​ ಕೊಟ್ಟ ತೀರ್ಪಿನ ಡಿಟೇಲ್ಸ್​ ಇಲ್ಲಿದೆ

ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿಯಾಗಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಈ ಕಾಯ್ದೆಯಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮದುವೆ ನೋಂದಣಿ ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Read Full Story

04:47 PM (IST) May 02

ಮಾದೇವ ಚಿತ್ರಕ್ಕಿಂತ ದೊಡ್ಡದಾಗಿ ಈ ಸಿನಿಮಾ ಗೆಲ್ಲೋ ಭರವಸೆ ಇದೆ - ವಿನೋದ್‌ ಪ್ರಭಾಕರ್

ಒಂದು ಸಿನಿಮಾದಿಂದ ಸಿಗುವುದೇ ಅಂತಿಮ ಅನುಭವ ಅಲ್ಲ. ನನ್ನ ತಂದೆ ಪ್ರಭಾಕರ್‌ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ನಿರ್ಮಾಣ ಹಾಗೂ ನಿರ್ದೇಶನ ಕೂಡ ಮಾಡಿದವರು ಎಂದರು ವಿನೋದ್‌ ಪ್ರಭಾಕರ್‌.

Read Full Story

04:44 PM (IST) May 02

ನಿರ್ಮಾಪಕ ಸಾರಾ ಗೋವಿಂದ್ ಬೆದರಿಕೆ ಆರೋಪ, ಠಾಣೆ ಮೆಟ್ಟಲೇರಿದ ನಟ ಚೇತನ್ ಅಹಿಂಸಾ!

ಡಾ.ರಾಜ್‌ಕುಮಾರ್ ಸ್ಮಾರಕದ ಕುರಿತ ಹೇಳಿಕೆ ಹಿನ್ನೆಲೆಯಲ್ಲಿ, ತಮಗೆ ಜೀವ ಬೆದರಿಕೆ ಹಾಕಿದ್ದಾರೆಂದು ನಟ ಚೇತನ್ ಅಹಿಂಸಾ ಅವರು ಸಾರಾ ಗೋವಿಂದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಠಾಣೆಗೆ ಆಗಮಿಸಿದ ಚೇತನ್, ಸಾರಾ ಗೋವಿಂದ್ ಅವರ ಮೇಲೆ ದಬ್ಬಾಳಿಕೆ ಮತ್ತು ಹಿಂದಿನ ಅಪರಾಧಗಳ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
Read Full Story

04:32 PM (IST) May 02

ಕನ್ನಡದಲ್ಲಿ ಇವರೇ ನನ್ನ ನೆಚ್ಚಿನ ನಟ - ದೈವ-ಭೂತಗಳ ಬಗ್ಗೆ ನಟಿ ಪೂಜಾ ಹೆಗ್ಡೆ ಮಾತು

ಚಿಕ್ಕಂದಿನಿಂದಲೂ ಭೂತ, ದೈವ ಹಾಗೂ ಆಚರಣೆಗಳನ್ನು ನೋಡುತ್ತಾ ಬೆಳೆದವಳು ನಾನು. ಹೀಗಾಗಿ ನನಗೆ ಅವುಗಳ ಮಹತ್ವ ಗೊತ್ತಿದೆ. ‘ಕಾಂತಾರ’ ಸಿನಿಮಾ ಭೂತ ಹಾಗೂ ದೈವಗಳ ಆರಾಧನೆಯನ್ನು ಇಡೇ ದೇಶಕ್ಕೆ ಪರಿಚಯಿಸಿತು.

Read Full Story

04:19 PM (IST) May 02

ಹಿಮೋಫಿಲಿಯಾ ರೋಗಪತ್ತೆ ತಡವಾಗಬಾರದು, ಯಾಕೆ! ಇಲ್ಲಿದೆ ಸಂಪೂರ್ಣ ಮಾಹಿತಿ

ಹಿಮೋಫಿಲಿಯಾ ಸಮಸ್ಯೆ ಕೊಂಚ ಕಳವಳಕಾರಿಯಾಗಿರುವ ಸಮಸ್ಯೆ. ಅಲ್ಲದೇ, ಈ ಹಿಮೋಫಿಲಿಯಾ ರೋಗಪತ್ತೆ ತಡವಾದರೆ ಇನ್ನಷ್ಟು ಆತಂಕಕಾರಿಯಾಗಿದೆ. ಏಕೆಂದರೆ ಇದರ ಪರಿಣಾಮಗಳು ಜೀವನಪರ್ಯಂತ ಇರುತ್ತವೆ.

Read Full Story

03:57 PM (IST) May 02

ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ - ಜೂನ್‌ನಲ್ಲಿ ಪಿಂಕ್ ಲೈನ್ ಓಪನ್; ಇಂದಿನಿಂದ 15 ದಿನ ಹೈಟೆಕ್ ತಪಾಸಣೆ!

ಬೆಂಗಳೂರಿನ ನಮ್ಮ ಮೆಟ್ರೋ 'ಪಿಂಕ್ ಲೈನ್' ಜೂನ್ ತಿಂಗಳಲ್ಲಿ ಮೊದಲ ಹಂತದ ಸಂಚಾರಕ್ಕೆ ಸಜ್ಜಾಗುತ್ತಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದಲ್ಲಿ, ರೈಲ್ವೆ ಇಲಾಖೆಯು ಕಟ್ಟುನಿಟ್ಟಿನ ಸುರಕ್ಷತಾ ತಪಾಸಣೆ ನಡೆಸುತ್ತಿದ್ದು, ಚಾಲಕರಹಿತ ರೈಲುಗಳ ಪರೀಕ್ಷೆ ಅಂತಿಮ ಹಂತದಲ್ಲಿದೆ.
Read Full Story

03:44 PM (IST) May 02

ಬೆಂಗಳೂರು - ಅಪರಿಚಿತ ವೃದ್ದೆಯ ಬರ್ಬರ ಹತ್ಯೆ, ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಅಪರಿಚಿತ ವೃದ್ಧೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಸುಮಾರು 50-60 ವರ್ಷದ ವೃದ್ಧೆಯ ಅರೆಬೆಂದ ಶವ ಪತ್ತೆಯಾಗಿದ್ದು, ಆಸ್ತಿ ವಿವಾದದ ಶಂಕೆ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

03:03 PM (IST) May 02

ಮಂಗಳೂರು ವಿಮಾನ ನಿಲ್ದಾಣ ಗಮನಾರ್ಹ ಸಾಧನೆ, ಬರೋಬ್ಬರಿ 3 ಚಿನ್ನದ ಪದಕ!

ಮಂಗಳೂರು ವಿಮಾನ ನಿಲ್ದಾಣವು, ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ ಆಯೋಜಿಸಿದ್ದ ಸಮ್ಮೇಳನದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಅಪ್‌ಡೇಟರ್ ಸರ್ವೀಸಸ್ ಲಿಮಿಟೆಡ್ (ಯುಡಿಎಸ್) ಸಹಯೋಗದೊಂದಿಗೆ, ಕಾರ್ಯಾಚರಣೆಯಲ್ಲಿ ಮಾನವ ದೋಷಗಳನ್ನು ಕಡಿಮೆ ಮಾಡುವ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ 'ಪೋಕಾ ಯೋಕ್' ಪರಿಹಾರಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ.
Read Full Story

02:27 PM (IST) May 02

ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ

ಬೆಂಗಳೂರಿನಿಂದ ವಿಜಯಪುರಕ್ಕೆ ಗೋಲಗುಂಬಜ್ ಮತ್ತು ಬಸವ ಎಕ್ಸ್‌ಪ್ರೆಸ್‌ನಂತಹ ರೈಲುಗಳಿವೆ. ಇವುಗಳಲ್ಲದೆ, ಮೈಸೂರಿನಿಂದ ಸಾಯಿನಗರ ಶಿರಡಿಗೆ ವಾರಕ್ಕೊಮ್ಮೆ ಸಂಚರಿಸುವ ರೈಲು ಸಂಖ್ಯೆ 16217, ವಿಜಯಪುರಕ್ಕೆ ಹಗಲು ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಈ ರೈಲು ಮೈಸೂರು, ಬೆಂಗಳೂರು, ಚಿತ್ರದುರ್ಗ ಮೂಲಕ ವಿಜಯಪುರಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ.
Read Full Story

02:18 PM (IST) May 02

ಶಾಲೆಗಳಲ್ಲಿ ದಿನಪತ್ರಿಕೆ ಓದು ಕಡ್ಡಾಯ, ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಸರ್ಕಾರಕ್ಕೆ ಪತ್ರ

ರಾಜ್ಯದ ಶಾಲೆಗಳಲ್ಲಿ ದಿನಪತ್ರಿಕೆ ಓದನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರವನ್ನು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಸ್ವಾಗತಿಸಿದ್ದಾರೆ. ಈ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಪ್ರತಿ ಶಾಲೆಗೆ 15 ರಿಂದ 90 ವಿವಿಧ ಪತ್ರಿಕೆಗಳನ್ನು ಒದಗಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಚರ್ಚೆಯನ್ನು ಪ್ರೋತ್ಸಾಹಿಸುವಂತಹ ಹಲವು ಸಲಹೆಗಳನ್ನು ಅವರು ನೀಡಿದ್ದಾರೆ.
Read Full Story

01:37 PM (IST) May 02

ಶೀರ್ಷಾಸನದಲ್ಲಿ ಶಿವತಾಂಡವ ಸ್ತೋತ್ರ - ಶಿರಸಿಯ 8 ವರ್ಷದ ಬಾಲಕನಿಗೆ ಒಲಿದ ಅಂತರಾಷ್ಟ್ರೀಯ ಪ್ರಶಸ್ತಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್ನುವ ಬಾಲಕ, ಶೀರ್ಷಾಸನ ಭಂಗಿಯಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸಿ ಅಂತರಾಷ್ಟ್ರೀಯ ದಾಖಲೆ ಬರೆದಿದ್ದಾನೆ. ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಈ ಸ್ತೋತ್ರ ಪಠಿಸಿದ ಈತನ ಸಾಧನೆಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ.
Read Full Story

01:26 PM (IST) May 02

Pakistan Satellite - ಸ್ಯಾಟಲೈಟ್ ಉಡಾವಣೆ ಆಯ್ತು, ಆದ್ರೆ ಮೊದಲ ಫೋಟೋನೇ ಫೇಕ್? ಪಾಕ್ ಬಾಹ್ಯಾಕಾಶ ಸಂಸ್ಥೆ ಮತ್ತೆ ಎಡವಟ್ಟು

ಪಾಕಿಸ್ತಾನ ಏಪ್ರಿಲ್ 25ರಂದು ಚೀನಾದ ರಾಕೆಟ್ ಬಳಸಿ EO-3 ಸ್ಯಾಟಲೈಟ್ ಉಡಾವಣೆ ಮಾಡಿತು. ಇದು ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ SUPARCOಗೆ ಒಂದು ದೊಡ್ಡ ಹೆಜ್ಜೆ. ಆದರೆ, ಸ್ಯಾಟಲೈಟ್ ಕಳಿಸಿದ 'ಮೊದಲ ಫೋಟೋ' ಅಂತ ಹಂಚಿಕೊಂಡ ಚಿತ್ರ, ಉಡಾವಣೆಗೂ ತಿಂಗಳುಗಳ ಹಿಂದಿನದ್ದು ಎಂದು ಗೊತ್ತಾಗಿ ವಿವಾದ ಸೃಷ್ಟಿ.

Read Full Story

01:17 PM (IST) May 02

ಫಾರಿನ್‌ನಿಂದ ಬಂದ ತಕ್ಷಣ ದಾಂಡೇಲಿ ಯುವಕನ ಆತ್ಮ*ಹತ್ಯೆ - ಡೆತ್ ನೋಟ್‌ನಲ್ಲಿ ಪತ್ನಿ, ಅತ್ತೆ ಹೆಸರು ಉಲ್ಲೇಖ!

ಉತ್ತರ ಕನ್ನಡದ ದಾಂಡೇಲಿಯಲ್ಲಿ, ಮಲೇಷ್ಯಾದಿಂದ ಹಿಂದಿರುಗಿದ್ದ ರಾಘವೇಂದ್ರ ವಾಡಕರ ಎಂಬ ಯುವಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ ಮತ್ತು ಅತ್ತೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಈ ಘಟನೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Read Full Story

12:59 PM (IST) May 02

ರಾಯಚೂರಲ್ಲಿ ಭಾರೀ ಅನಾಹುತ - ಎಲ್ಲೋ ಹಚ್ಚಿದ ಬೆಂಕಿಯ ಕಿಡಿಗೆ,10 ಮೇಕೆ, 20 ಕೋಳಿ ಸಜೀವ ದಹನ, 2 ಲಕ್ಷ ರೂ. ನಗದು ಹಣ ಸುಟ್ಟು ಬೂದಿ!

ವಿಧಿಯಾಟವೋ ಅಥವಾ ಅಜಾಗರೂಕತೆಯೋ ಒಟ್ಟಿನಲ್ಲಿ ಗ್ರಹಚಾರ ಕೆಟ್ಟು ಎಲ್ಲೋ ಹೊತ್ತಿಸಿದ ಕಿಡಿ ಇನ್ನೊಬ್ಬರ ಬದುಕನ್ನೇ ಸುಟ್ಟು ಭಸ್ಮ ಮಾಡಿರುವ ಘೋರ ದುರಂತವೊಂದು ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ನಡೆದಿದೆ.

Read Full Story

12:54 PM (IST) May 02

ಸಾಫ್ಟ್​ವೇರ್​ ಎಂಜಿನಿಯರ್ ಕನಸಿಗೆ ಕಂಟಕ? ರಾಜ್ಯದಲ್ಲಿ ಶೇ.17ರಷ್ಟು ಮಾತ್ರ ಉದ್ಯೋಗ- ವರದಿ ಹೇಳಿದ್ದೇನು

ಕರ್ನಾಟಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ವ್ಯಾಮೋಹ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಇದೇ ಕ್ಷೇತ್ರಕ್ಕೆ ತಳ್ಳುತ್ತಿದ್ದಾರೆ. ಆದರೆ, ಕರ್ನಾಟಕ ಎಂಜಿನಿಯರಿಂಗ್ ಶಿಕ್ಷಣ ಸುಧಾರಣಾ ಸಮಿತಿಯ ವರದಿಯ ಪ್ರಕಾರ, ಕೇವಲ 17% ಪದವೀಧರರು ಮಾತ್ರ ಉದ್ಯೋಗ ಪಡೆಯುತ್ತಿದ್ದು, ಈ ಬಿಕ್ಕಟ್ಟನ್ನು ನಿಭಾಯಿಸಲು ಕಾಲೇಜುಗಳಿಗೆ ಕಠಿಣ ನಿಯಮಗಳನ್ನು ಶಿಫಾರಸು ಮಾಡಲಾಗಿದೆ.
Read Full Story

12:39 PM (IST) May 02

ಬೆಂಗಳೂರು - ಮನೆಯೇ ಆಗಿದ್ದ ಆಟೋ ಮೇಲೆ ಬಿದ್ದ ಮರ, ಗಾಢ ನಿದ್ರೆಯಲ್ಲಿದ್ದ ಚಿಕ್ಕಮಗಳೂರು ಮೂಲದ ಚಾಲಕ ಪವಾಡ ಸದೃಶ ಪಾರು!

ಬೆಂಗಳೂರಿನ ಜಯನಗರದಲ್ಲಿ ಸುರಿದ ಭಾರಿ ಮಳೆಗೆ ಮರವೊಂದು ಆಟೋ ಮೇಲೆ ಬಿದ್ದು, ಚಾಲಕ ರಶೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಟೋವನ್ನೇ ಮನೆಯಾಗಿಸಿಕೊಂಡಿದ್ದ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಜೀವನೋಪಾಯದ ವಾಹನ ನಾಶವಾಗಿ ಬೀದಿಗೆ ಬಿದ್ದಿದ್ದಾರೆ. ಈ ಘಟನೆಯು ಅವರ ಕಷ್ಟದ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
Read Full Story

11:26 AM (IST) May 02

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ ಹೈಡ್ರಾಮಾ, ಸ್ಟ್ರಾಂಗ್ ರೂಮ್‌ನಲ್ಲಿ ಟ್ರಂಕ್‌ಗಳು ಓಪನ್ ಆಗಿ ಗೊಂದಲ

ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ, ಸ್ಟ್ರಾಂಗ್ ರೂಮ್‌ನ ಟ್ರಂಕ್‌ಗಳು ತೆರೆದಿವೆ ಎಂಬ ಗೊಂದಲದಿಂದ ಹೈಡ್ರಾಮಾ ಸೃಷ್ಟಿಯಾಯಿತು. ತಕ್ಷಣದ ಪರಿಶೀಲನೆ ನಡೆಸಿದ ಅಧಿಕಾರಿಗಳು, ಅಂಚೆ ಮತಪತ್ರಗಳಿದ್ದ ಟ್ರಂಕ್‌ಗಳು ಸುರಕ್ಷಿತವಾಗಿದ್ದು, ಸೀಲ್ ಹಾಗೆಯೇ ಇದೆ ಎಂದು ಸ್ಪಷ್ಟಪಡಿಸಿ ಗೊಂದಲಕ್ಕೆ ತೆರೆ ಎಳೆದರು.
Read Full Story

10:59 AM (IST) May 02

ಶಿವಣ್ಣನ ಅಕ್ಕನ ಮಗನೊಂದಿಗೆ ಅಕ್ರಮ ಸಂಬಂಧ, ಹೆಂಡತಿಯ ದ್ರೋಹಕ್ಕೆ ಬಲಿಯಾದವು ಮೂರು ಜೀವಗಳು!

ತುಮಕೂರಿನ ಕುಣಿಗಲ್‌ನಲ್ಲಿ, ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆ ಬೆಳೆಸಿದ ಅಕ್ಕನ ಮಗನ ನಂಬಿಕೆ ದ್ರೋಹದಿಂದ ನೊಂದ ವ್ಯಕ್ತಿಯೊಬ್ಬರು, ತಮ್ಮ ಇಬ್ಬರು ಮುದ್ದಾದ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಂಡ ಮನೆಗೆ ಕನ್ನ ಹಾಕಿದ ಈ ಘೋರ ದುರಂತವು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.
Read Full Story

10:51 AM (IST) May 02

ಬೆಂಗಳೂರು - ಪೀಣ್ಯ ಫ್ಲೈಓವರ್ ಮತ್ತೆ ಬಂದ್, ಸಂಚಾರಕ್ಕೆ ಪರ್ಯಾಯ ಮಾರ್ಗಗಳ ಪಟ್ಟಿ ಇಲ್ಲಿದೆ

ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ದುರಸ್ತಿ ಕಾಮಗಾರಿಯ ಅಂತಿಮ ಹಂತದ 'ಲೋಡ್ ಟೆಸ್ಟ್' ನಡೆಸಲು ಮೇ 5 ರಿಂದ ಮೇ 8 ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
Read Full Story

10:34 AM (IST) May 02

ಗ್ರಾಹಕರಿಗೆ ಹೋಟೆಲ್‌ ಬಿಲ್‌ ಶಾಕ್ - ಅಡುಗೆ ಅನಿಲ ದರ ಏರಿಕೆ ಬೆನ್ನಲ್ಲೇ ಮೆನು ಬೆಲೆಯಲ್ಲಿ ಶೇ. 10ರಷ್ಟು ಹೆಚ್ಚಳ!

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಆಂಧ್ರಪ್ರದೇಶದ ಹೋಟೆಲ್‌ಗಳು ಆಹಾರ ಪದಾರ್ಥಗಳ ಬೆಲೆಯನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿವೆ. ಇಂಧನವಲ್ಲದೆ, ಖಾದ್ಯ ತೈಲ ಮತ್ತು ತರಕಾರಿಗಳಂತಹ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಈ ನಿರ್ಧಾರಕ್ಕೆ ಕಾರಣವಾಗಿದೆ.

Read Full Story

10:22 AM (IST) May 02

ತುಮಕೂರಲ್ಲಿ 44 ನವಿಲುಗಳ ಸರಣಿ ಸಾವಿಗೆ ಕಾರಣವೇನು? ಭೋಪಾಲ್ ಲ್ಯಾಬ್ ವರದಿ ಶಾಕಿಂಗ್ ರಿಪೋರ್ಟ್!

ತುಮಕೂರು ತಾಲೂಕಿನಲ್ಲಿ 44 ನವಿಲುಗಳ ಅಸಹಜ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ಭೋಪಾಲ್ ಲ್ಯಾಬ್ ವರದಿ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆ ತೀವ್ರ ನಿಗಾ ವಹಿಸಿದ್ದು, ಸತ್ತ ಪಕ್ಷಿಗಳನ್ನು ಮುಟ್ಟದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
Read Full Story

10:13 AM (IST) May 02

Amruthadhaare Serial - ಮುಗೀತು ಜಯದೇವ್‌ ಅಧ್ಯಾಯ; ಹೆತ್ತ ತಾಯಿಗೆ ಕಣ್ಣೀರು ಹಾಕಿಸಿದೋರು ಉಳಿದ ಚರಿತ್ರೆ ಇದ್ಯಾ?

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಈಗ ತನ್ನ ಹಳೆಯ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾನೆ. ಜಯದೇವ್‌ ಎಲ್ಲ ಆಸ್ತಿಯನ್ನು ಕಳೆದುಕೊಳ್ಳುವ ಸಮಯ ತಂದುಕೊಂಡಿದ್ದನು. ಹೀಗಾಗಿ ಹರಾಜಿನಲ್ಲಿ ಗೌತಮ್‌ ಅದನ್ನೆಲ್ಲವನ್ನು ಮರಳಿ ಪಡೆದಿದ್ದಾನೆ.

 

Read Full Story

10:05 AM (IST) May 02

ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನ ಟೈರ್ ಬ್ಲಾಸ್ಟ್ ಆಗಿ ಪಲ್ಟಿ, ಓರ್ವ ಸಾವು, ಏಳು ಮಂದಿಗೆ ಗಾಯ

ಧಾರವಾಡದಿಂದ ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಪ್ರಯಾಣಿಕರ ವಾಹನದ ಟೈರ್ ಬ್ಲಾಸ್ಟ್ ಆಗಿ ನಡುರಸ್ತೆಯಲ್ಲೇ ಪಲ್ಟಿಯಾಗಿದೆ. ಈ ದುರಂತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಏಳು ಜನ ಗಾಯಗೊಂಡಿದ್ದಾರೆ.

 

Read Full Story

09:19 AM (IST) May 02

ಆ ಮನೆ ಮಾರಾಯ್ತು, ಈಗ 2ನೇ ಮದುವೆ ಆಲೋಚನೆ ಇದ್ಯಾ?; ಇದ್ದದ್ದನ್ನು ಇದ್ದ ಹಾಗೆ ಹೇಳಿದ Vijay Raghavendra

Actor Vijay Raghavendra On Wife Spandana: ನಟ ವಿಜಯ್‌ ರಾಘವೇಂದ್ರ ಅವರು ಫಸ್ಟ್‌ ಟೈಮ್‌ ತುಳು ಭಾಷೆಯಲ್ಲಿ ಅವರು ಸಂದರ್ಶನ ನೀಡಿದ್ದಾರೆ. ಇವರ ಪತ್ನಿ ಸ್ಪಂದನಾ ಮಂಗಳೂರಿನವರು. ಒಂದೇ ವರ್ಷದಲ್ಲಿ ತುಳು ಭಾಷೆ ಕಲಿತ ವಿಜಯ್‌ ರಾಘವೇಂದ್ರ ಈಗ ತುಳುವಿನಲ್ಲೇ ಪತ್ನಿ ಬಗ್ಗೆಯೇ ಸಂದರ್ಶನ ನೀಡಿದ್ದಾರೆ.

 

Read Full Story

More Trending News