- Home
- Entertainment
- Sandalwood
- ದೆಹಲಿಗೆ ಹೋಗಿ ಅಮಿತ್ ಶಾರನ್ನು ಭೇಟಿಯಾದ Rishab Shetty ; ಕುತೂಹಲ ಮೂಡಿಸಿದ ಭೇಟಿ; ಉದ್ದೇಶ ಏನಾಗಿತ್ತು?
ದೆಹಲಿಗೆ ಹೋಗಿ ಅಮಿತ್ ಶಾರನ್ನು ಭೇಟಿಯಾದ Rishab Shetty ; ಕುತೂಹಲ ಮೂಡಿಸಿದ ಭೇಟಿ; ಉದ್ದೇಶ ಏನಾಗಿತ್ತು?
Kantara Movie Actor Rishab Shetty News: ಕಾಂತಾರ ಸಿನಿಮಾವನ್ನು ನಿರ್ದೇಶಿಸಿ, ನಟಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟ ರಿಷಬ್ ಶೆಟ್ಟಿ ಈಗ ಮುಂದಿನ ಸಿನಿಮಾದ ಘೋಷಣೆ ಮಾಡಬೇಕಿದೆ. ಈ ಮಧ್ಯೆ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಕಾರಣ ಏನು?

ದೆಹಲಿಯಲ್ಲಿ ಕಾಣಿಸಿಕೊಂಡ್ರು
ಇತ್ತೀಚೆಗೆ ಅವರು ದೆಹಲಿಗೆ ಹೋದ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿತ್ತು. ದೆಹಲಿಯ ಏರ್‌ಪೋರ್ಟ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ವಿಡಿಯೋ ರಿಲೀಸ್ ಆಗಿತ್ತು. ಇದರ ಹಿಂದಿನ ಕಾರಣ ಏನು ಎಂದು ಈಗ ರಿವೀಲ್ ಆಗಿದೆ.
ಕಾಂತಾರವನ್ನು ಹೊಗಳಿದ ಅಮಿತ್ ಶಾ
ಗೌರವಾನ್ವಿತ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿಯಾಗುವ ಸೌಭಾಗ್ಯ ನನ್ನದಾಯಿತು. 'ಕಾಂತಾರ' ಮತ್ತು 'ಕಾಂತಾರ ಚಾಪ್ಟರ್ 1' ಚಿತ್ರಗಳ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದು, ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಮುಂದಿನ ಸಿನಿಮಾ ಯಾವುದು?
ನನ್ನ ಮುಂಬರುವ ಸಿನಿಮಾಗಳ ಕುರಿತೂ ಅವರೊಂದಿಗೆ ಚರ್ಚಿಸುವ ಅದ್ಭುತ ಅವಕಾಶ ಸಿಕ್ಕಿತು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಏನೇನು ಮಾತನಾಡಿದರು?
ವಿಶೇಷವಾಗಿ ನಮ್ಮ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಸಿನಿಮಾ ನಿರ್ಮಾಣದ ಬಗ್ಗೆ ಅವರಿಗಿರುವ ಆಳವಾದ ಜ್ಞಾನ, ತಿಳುವಳಿಕೆಯನ್ನು ನೋಡಿ ನಾನು ನಿಜವಾಗಿಯೂ ಖುಷಿ ಆಯ್ತು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

