ಬೆಂಗಳೂರು (ಜು.2): ಕಳೆದ 150 ವರ್ಷಗಳಲ್ಲಿ ಎಂದೂ ಕಂಡರಿಯದ ಬರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರುವ ಸಂಭವವಿದೆ. ಮಳೆಯ ತೀವ್ರ ಕೊರತೆಯಿಂದ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಕುಡಿಯುವ ನೀರು ಹಾಗೂ ಬೆಳೆನಷ್ಟದ ಸಮಸ್ಯೆ ಎದುರಿಸಲು ಸರ್ಕಾರ ಸಮಗ್ರ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು. ಬರಗಾಲ ಎದುರಿಸಲು ಮೋಡ ಬಿತ್ತನೆ ಕುರಿತು ಚಿಂತನೆ ಇಲ್ಲ ಎಂದೂ ಈ ವೇಳೆ ಸ್ಪಷ್ಟಪಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
11:22 PM (IST) Jul 02
Renukaswamy Case: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಎಸ್ಐ ನಟೇಶ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಮುಖ ಸಾಕ್ಷಿದಾರ ಸಂದೀಪ್ ನೀಡಿರುವ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
09:38 PM (IST) Jul 02
MBBS ಪರೀಕ್ಷೆಗಳೇ ಮೊದಲ ಆದ್ಯತೆಯಾಗಿದ್ದವು. ನನ್ನ ಭಾಗದ ಚಿತ್ರೀಕರಣ ಮುಗಿದ ತಕ್ಷಣವೇ ಪ್ರಾಯೋಗಿಕ ಪರೀಕ್ಷೆಗಳಿಗೆ ತೆರಳುತ್ತಿದ್ದೆ. ಮತ್ತೆ ಸಮಯ ಸಿಕ್ಕಾಗ ಸೆಟ್‌ಗೆ ಹಿಂದಿರುಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ ಎಂದರು ಶ್ರೀಲೀಲಾ.
08:45 PM (IST) Jul 02
‘ನೆಕ್ಸ್ಟ್ ಲೆವೆಲ್’ ಸಿನಿಮಾಗೆ ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ನಿರ್ಮಾಪಕ ತರುಣ್ ಶಿವಪ್ಪ ಸೇರಿ ದೊಡ್ಡ ತಾರಾಬಳಗವನ್ನೇ ಒಟ್ಟುಗೂಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
07:04 PM (IST) Jul 02
ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
06:46 PM (IST) Jul 02
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ವಿಚಾರ ಬಿಟ್ಟು ರಾಜ್ಯದ ಅಭಿವೃದ್ದಿ ಕಡೆಗೆ ಗಮನಹರಿಸಲಿ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದ..
06:33 PM (IST) Jul 02
ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುವ ಸ್ಥಿತಿಗೆ ತಲುಪಿವೆ. ಈ ವರ್ಷ 11 ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿ.
06:06 PM (IST) Jul 02
Ashika Padukone Birthday: ಜೀ ತೆಲುಗು ವಾಹಿನಿಯ ಸೂಪರ್‌ಹಿಟ್ ಧಾರಾವಾಹಿ 'ತ್ರಿನಯನಿ' ಮೂಲಕ ಮನೆಮಾತಾದ ನಟಿ ಆಶಿಕಾ ಗೋಪಾಲ್ ಪಡುಕೋಣೆ ಇಂದು ಬಹುಭಾಷಾ ಕಿರುತೆರೆ ತಾರೆಯಾಗಿ ಮಿಂಚುತ್ತಿದ್ದಾರೆ.
05:18 PM (IST) Jul 02
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಕ್ಷುಲ್ಲಕವಿಚಾರಕ್ಕೆ ಬೀದಿ ಬದಿ ವ್ಯಾಪಾರಿಬ್ಬರು ಕೊಲೆಯಾಗಿದ್ದಾರೆ. ಸುಕಾ ಸುಮ್ಮನೆ ಶುರುವಾದ ಜಗಳ ತಾರಕಕ್ಕೇರಿ, ನಾಲ್ವರು ಯುವಕರು ಹಲ್ಲೆ ನಡೆಸಿದ್ದರಿಂದ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
05:15 PM (IST) Jul 02
Tandoori roti recipe in restaurant style: ಮನೆಯಲ್ಲಿ ತಂದೂರ್ ಇಲ್ಲದೆಯೇ ಮೃದುವಾದ, ಉಬ್ಬಿದ ತಂದೂರಿ ರೋಟಿ ಮಾಡುವುದನ್ನು ಕಲಿಯಿರಿ. ಕೇವಲ 4 ಸುಲಭ ಹಂತಗಳಲ್ಲಿ ಡಾಬಾ ಶೈಲಿಯ ತಂದೂರಿ ರೋಟಿ ಮಾಡುವ ಸರಳ ರೆಸಿಪಿ, ಬೇಕಾಗುವ ಸಾಮಗ್ರಿಗಳು ಮತ್ತು ಪರ್ಫೆಕ್ಟ್ ರೋಟಿಗಾಗಿ ಟಿಪ್ಸ್ ಇಲ್ಲಿವೆ.
04:46 PM (IST) Jul 02
Golden Star Ganesh: ಇತ್ತೀಚಿನ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಬಗ್ಗೆ ಮಾತನಾಡಿದ ಗಣೇಶ್, "ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಕಾತುರ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಉತ್ತಮ ಕಂಟೆಂಟ್ ಕೊರತೆ.
04:42 PM (IST) Jul 02
top 10 best trekking places in karnataka: ವಾರಪೂರ್ತಿ ಕೆಲಸ ಮಾಡಿದವರಿಗೆ, ವೀಕೆಂಡ್‌ನಲ್ಲಿ ಎಲ್ಲಿಯಾದರೂ ಚಾರಣ ಹೋಗಬೇಕು ಎಂದು ಎನಿಸುವುದುಂಟು. ಅಂತೆಯೇ ಕರ್ನಾಟಕದಲ್ಲೇ ಚಾರಣ ಮಾಡಲು ಸಾಕಷ್ಟು ಜಾಗಗಳು ಇವೆ. ಹಾಗಾದರೆ ಎಲ್ಲಿ ಹೋಗಬಹುದು?
04:25 PM (IST) Jul 02
Pichchar: ನೀವು ಮಂಗಳೂರಿನವರು. ತುಳು ಚಿತ್ರವೊಂದನ್ನು ನಿರ್ಮಿಸಿ ಎಂದು ಸ್ನೇಹಿತರು ಹೇಳುತ್ತಿದ್ದರು. ಒಳ್ಳೆಯ ಕತೆ ಸಿಕ್ಕರೆ ಮಾಡೋಣ ಅಂತ ಹೇಳಿದ್ದೆ. ಈ ಚಿತ್ರದ ಕತೆ ನನಗೂ ಗಣೇಶ್ ಅವರಿಗೂ ಇಷ್ಟವಾಗಿ ನಿರ್ಮಿಸಿದ್ದೇವೆ.
04:16 PM (IST) Jul 02
ಅದೊಂದು ಘೋರ ಅಪರಾಧ ಕೃತ್ಯ. ಪತ್ನಿಯನ್ನ ಉಸಿರುಗಟ್ಟಿಸಿ ಕ್ರೂರವಾಗಿ ಸಾಯಿಸಿದ್ದ ಪಾಪಿ ಪತಿ. ಬಳಿಕ ವಿಷಕಾರಿ ಹಾವು ಕಚ್ಚಿದ ಕತೆ ಕಟ್ಟಿದ್ದ. ಇದೀಗ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಏನಿದು ಸ್ಟೋರಿ ಅನ್ನೋ ವಿವರ ಇಲ್ಲಿದೆ.
04:15 PM (IST) Jul 02
ದೇಹಕ್ಕೆ ಪ್ರೋಟೀನ್ ಅತ್ಯಗತ್ಯ, ಆದರೆ ಕೋಳಿ, ಮಟನ್ ಮತ್ತು ಮೀನುಗಳಲ್ಲಿ ಯಾವುದು ಉತ್ತಮ? ಈ ಲೇಖನವು ಪ್ರತಿ ಮಾಂಸದ ಪ್ರೋಟೀನ್, ಕೊಬ್ಬಿನಾಂಶ ಮತ್ತು ಆರೋಗ್ಯದ ಮೇಲಿನ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಯಾವುದು ಶ್ರೇಷಠ ಆಯ್ಕೆ ಎಂಬುದನ್ನು ತಿಳಿಯಿರಿ.
03:50 PM (IST) Jul 02
ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ, ರಾಮನಗರದಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಬಾಂಗ್ಲಾ ವಲಸಿಗರು ಸೇರಿದಂತೆ ಕಳ್ಳ ಮತದಾರರನ್ನು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ವಿಡಿಯೋ ಸಮೇತ ದೂರಿದ್ದು, ಕೇಂದ್ರ ಚುನಾವಣಾ ಆಯೋಗ ಮತ್ತು ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
03:47 PM (IST) Jul 02
ʻಗೋಲ್ಡನ್ ಸ್ಟಾರ್ʼ ಗಣೇಶ್ ಅವರ ಕಳೆದ ವರ್ಷದ ಹುಟ್ಟುಹಬ್ಬದಂದು ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಆದರೆ ಈ ವರ್ಷ ಅವರ ಹುಟ್ಟುಹಬ್ಬದಂದು ಗಣೇಶ್ ಕಡೆಯಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ಅದೇನು ಅಂತ ನೋಡಿ..
03:24 PM (IST) Jul 02
Daali Dhananjaya Movie: ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು, ಕಂಟೆಂಟ್ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಸಿನಿಮಾ ‘ಮದರ್ ಪ್ರಾಮಿಸ್’. ಡಾಲಿ ಧನಂಜಯ ನಿರ್ಮಿಸಿ ನಟನೆ ಮಾಡಿರೋ ‘ಮದರ್ ಪ್ರಾಮಿಸ್’ ಸಿನಿಮಾ ಮತ್ತೊಂದು ಹಾಡು ಬಿಡುಗಡೆ ಆಗಿದೆ.
03:23 PM (IST) Jul 02
ವಿಜಯ್ ನಟನೆಯ 'ಜನ ನಾಯಗನ್' ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ. ಪೈರಸಿ ಮಾಡಿದ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದು, ತನಿಖೆ ಮುಂದುವರೆದಿದೆ. ಅಷ್ಟಕ್ಕೂ ಕೋರ್ಟ್‌ಹೇಳಿದ್ದೇನು ಗೊತ್ತಾ?
03:22 PM (IST) Jul 02
ತಾವು ರಾಕಿಂಗ್ ಸ್ಟಾರ್ ಯಶ್ ಜೊತೆ ನಾಯಕಿಯಾಗಿ ನಟಿಸಲು ಇಷ್ಟಪಡುವುದಾಗಿ ಎಂದು ಕನ್ನಡದ ನಟಿಯೊಬ್ಬರು ಹೇಳಿದ್ದಾರೆ. ಅವರ ಈ ಅನಿರೀಕ್ಷಿತ ಉತ್ತರ ಪಕ್ಕದಲ್ಲಿದ್ದ ಸಹ-ನಟಿಯರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
03:21 PM (IST) Jul 02
03:01 PM (IST) Jul 02
Actor Shashi Hegde: ‘ರಾಜ ರಾಣಿ’ ಧಾರಾವಾಹಿ ನಟಿ ಲಾವಣ್ಯಾ ಭಾರದ್ವಾಜ್, ಶಶಿ ಹೆಗಡೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಸಂದರ್ಶನವೊಂದರಲ್ಲಿ ಜೊಮ್ಯಾಟೋ ಡೆಲಿವರಿ ಕೆಲಸ ಮಾಡೋದಾಗಿ ಹೇಳಿದ್ದಾರೆ.
02:56 PM (IST) Jul 02
02:29 PM (IST) Jul 02
ಅಂದಹಾಗೆ, 'ರಾಮಾಯಣ' ಚಿತ್ರವು ಈ ವರ್ಷದ (2026) ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ. ಮಹಾಕಾವ್ಯ ಆಧಾರಿತ ಈ ಸಿನಿಮಾ, ಈಗಿನಿಂದಲೇ ಇಡೀ ಭಾರತೀಯ ಚಿತ್ರರಂಗ ಹಾಗೂ ಜಾಗತಿಕವಾಗಿ ಗಮನ ಸೆಳೆಯುತ್ತಿದೆ. ಚಿತ್ರತಂಡವು ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
02:26 PM (IST) Jul 02
02:14 PM (IST) Jul 02
Baaro Maleraya.: ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆ ಕೃಷಿ ಚಟುವಟಿಕೆಗಳು ನಿಂತುಹೋಗಿವೆ. ರೈತರು ಆತಂಕಗೊಂಡಿದ್ದಾರೆ. ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹೊಸಪೇಟೆಯ ಮರಿಯಮ್ಮನಹಳ್ಳಿ ರೈತರು ಏನೆಲ್ಲ ಮಾಡುತ್ತಿದ್ದಾರೆ ನೋಡಿ.
01:31 PM (IST) Jul 02
01:30 PM (IST) Jul 02
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಕೋಚ್ ಗೌತಮ್ ಗಂಭೀರ್ ಅವರು ಅನುಭವಿ ಆ ಆಟಗಾರನ ಬದಲು ಬೇರೆಯವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
01:14 PM (IST) Jul 02
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್, ಭೂಮಿಕಾ ಕುರಿತಂತೆ ಕಥೆ ಸಾಗುತ್ತಿದೆ. ಈಗ ಇಬ್ಬರು ಮಕ್ಕಳ ಜೊತೆಗೆ ಈ ದಂಪತಿ ಖುಷಿಯಿಂದ ಜೀವನ ಮಾಡುತ್ತಿದೆ. ಆದರೆ ಮಕ್ಕಳು ಮಾಡಿದ ತರಲೆ ನಿಜಕ್ಕೂ ಭೂಮಿಕಾಗೆ ದೊಡ್ಡ ಸರ್ಪ್ರೈಸ್ ನೀಡಲಿದೆ.
12:44 PM (IST) Jul 02
12:36 PM (IST) Jul 02
Bhagyavantaru Serial: ಸನ್ ಉದಯ ವಾಹಿನಿಯು ಹೊಸ ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದೆ. ಈಗ ‘ಭಾಗ್ಯವಂತರು’ ಎನ್ನುವ ಹೊಸ ಸೀರಿಯಲ್ ಪರಿಚಯಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
12:36 PM (IST) Jul 02
2024ರಲ್ಲಿ ಬಿಡುಗಡೆಯಾದ 'ಕೃಷ್ಣಂ ಪ್ರಣಯ ಸಖಿ' ಚಿತ್ರ ಸೂಪರ್ ಹಿಟ್ ಆಗುವ ಮೂಲಕ ನಟ ಗಣೇಶ್ ಮತ್ತೆ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಾರೆ. ಸದ್ಯ ನಟ ಗಣೇಶ್ ಅವರು ಹಲವು ಸಿನಿಮಾಗಳಿಗೆ ಸಹಿ ಮಾಡಿದ್ದು, ಕೆಲವು ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದರೆ ಇನ್ನೂ ಕೆಲವು ಸಿನಿಮಾಗಳು ಪ್ರೊಡಕ್ಷನ್ ಹಂತದಲ್ಲಿವೆ.
12:32 PM (IST) Jul 02
ಈ ಲೇಖನವು ಇತಿಹಾಸದಲ್ಲಿ ನಡೆದ ಅತಿ ದೀರ್ಘ ಉಪವಾಸ ಸತ್ಯಾಗ್ರಹದ ಬಗ್ಗೆ ವಿವರಿಸುತ್ತದೆ. ಅಲ್ಲದೆ, ಭಗತ್ ಸಿಂಗ್ ಅವರಂತಹ ಇತರ ಸ್ವಾತಂತ್ರ್ಯ ಹೋರಾಟಗಾರರ ಉಪವಾಸ ಸತ್ಯಾಗ್ರಹಗಳನ್ನೂ ಉಲ್ಲೇಖಿಸಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
11:42 AM (IST) Jul 02
ಆಳಂದ ಕೋಮು ಗಲಭೆ ಸೇರಿದಂತೆ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ಕ್ರಮದಲ್ಲಿ ಮೇಲ್ನೋಟಕ್ಕೆ ದೋಷಗಳಿವೆ ಎಂದಿದೆ.
11:25 AM (IST) Jul 02
ಗಾಜಿಯಾಬಾದ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನಿಲ್ಲಿಸಿದ ಕಾರಿನಲ್ಲಿ ಎಸಿ ಆನ್ ಮಾಡಿ ಮಲಗಿ ಸಾವನ್ನಪ್ಪಿದ್ದಾರೆ. ಆದೆರೆ ಆ ಸಾವಿನ ಹಿಂದೆ ಕಾರಿನ ಎಸಿಯೇ ಕಂಟಕವಾಯ್ತಾ? ಆದ್ದರಿಂದ ಎಸಿಹಾಕುವ ಮುನ್ನ ಈ ಸುದ್ದಿಯನ್ನು ಒಮ್ಮೆ ನೋಡಿ.
11:09 AM (IST) Jul 02
ಟೌನ್‌ಶಿಪ್ ಮಾಡಲು ಬಿಡದಿಯಲ್ಲಿ ರೈತರಿಗೆ ಎಕರೆಗೆ ₹2.07 ಕೋಟಿ ನೀಡುವಾಗ, ವಿಂಡ್ ಪವರ್ ಕಂಪನಿಗಳಿಗೆ ಜಮೀನು ನೀಡಿದ ಆಳಂದ ರೈತರಿಗೆ ಕೇವಲ ₹2-4 ಲಕ್ಷ ನೀಡುವುದು ತಾರತಮ್ಯ ಅಲ್ಲವೇ? ಮುಖ್ಯಮಂತ್ರಿಗಳೇ ಬಿಡದಿಗೊಂದು ನ್ಯಾಯ, ಆಳಂದ ರೈತರಿಗೊಂದು ನ್ಯಾಯವಾ? ಎಂದು ಬಿಜೆಪಿ ಮುಖಂಡ ಪ್ರಶ್ನಿಸಿದ್ದಾರೆ.
10:42 AM (IST) Jul 02
ಬೆಂಗಳೂರು ಉತ್ತರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ, ಮೈಸೂರು ಅರಸ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದ (ಕ್ರಿ.ಶ. 1750) ಅಪೂರ್ವ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ನಿರ್ವಹಣೆಗಾಗಿ ಗ್ರಾಮವನ್ನು ದಾನವಾಗಿ ನೀಡಿದ್ದನ್ನು ದಾಖಲಿಸಿದೆ.
10:28 AM (IST) Jul 02
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಬಿಜೆಪಿ ಮುಖಂಡ ರಾಮ್ ಮಾಧವ್ ಅವರು ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಯಾವುದೇ ಸಂವಿಧಾನಿ ಹುದ್ದೆಯಲ್ಲಿರದಿದ್ದರೂ ವಿದೇಶದಲ್ಲಿ ರಹಸ್ಯ ಸಭೆ ನಡೆಸಲು ಅಧಿಕಾರ ಕೊಟ್ಟವರ್ಯಾರು ಎಂದು ಕಿಡಿ.
10:00 AM (IST) Jul 02
ಗೃಹಜ್ಯೋತಿ ಯೋಜನೆ ಪರಿಶೀಲನೆ ಆರಂಭವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಗೃಹಜ್ಯೋತಿ ಯೋಜನೆ ಕೆಲವರಿಂದ ದುರುಪಯೋಗ ಆಗುತ್ತಿದೆ ಹೀಗಾಗಿ ಪರಿಶೀಲನೆ ನಡೆಯುತ್ತಿದೆ. ಜಾತಿ ಪ್ರಮಾಣಪತ್ರ ಪಾನ್ ಕಾರ್ಡ್ ಕೇಳಿದ್ರೆ ತಪ್ಪೇನಿಲ್ಲ ಎಂದು ಸಚಿವ ಕೆಜೆ ಚಾರ್ಜ್ ಸಮರ್ಥಿಸಿಕೊಂಡರು.
09:39 AM (IST) Jul 02
Darling Krishna Movie: ನಟ ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಅವರು ನಿರ್ದೇಶಕ ಪಿಸಿ ಶೇಖರ್ ಜೊತೆ ಕೈಜೋಡಿಸಿದ್ದಾರೆ. “ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ರಾಘವೇಂದ್ರ ಅಭಿನಯದ "ಮಹಾನ್" ಸಿನಿಮಾ ನಿರ್ಮಾಪಕ ಪ್ರಕಾಶ್ ಬೂದೂರು, ಈಗ ಹೊಸ ಸಿನಿಮಾವನ್ನು ಆರಂಭಿಸಿದ್ದಾರೆ.
09:36 AM (IST) Jul 02