MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Sports
  • Cricket
  • Viabhav Sooryavanashi: ವೈಭವ್‌ಗಿಂತ ಜಾಸ್ತಿ‌ ಈ ಸ್ಟಾರ್ ಕ್ರಿಕೆಟರ್‌ಗೆ ಆಯ್ತಾ ಅನ್ಯಾಯ? ಉತ್ತರಿಸ್ತಾರಾ ಗಂಭೀರ್ ?

Viabhav Sooryavanashi: ವೈಭವ್‌ಗಿಂತ ಜಾಸ್ತಿ‌ ಈ ಸ್ಟಾರ್ ಕ್ರಿಕೆಟರ್‌ಗೆ ಆಯ್ತಾ ಅನ್ಯಾಯ? ಉತ್ತರಿಸ್ತಾರಾ ಗಂಭೀರ್ ?

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಕೋಚ್ ಗೌತಮ್ ಗಂಭೀರ್ ಅವರು ಅನುಭವಿ ಆ ಆಟಗಾರನ ಬದಲು ಬೇರೆಯವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.  

2 Min read
Author : Bhimasi M Koleppanavar
Published : Jul 02 2026, 01:30 PM IST
Share this Photo Gallery
  • FB
  • TW
  • Linkdin
  • Whatsapp
16
ಯಾರು ಆ ಸ್ಟಾರ್‌ ಕ್ರಿಕೆಟರ್‌?
Image Credit : Getty

ಯಾರು ಆ ಸ್ಟಾರ್‌ ಕ್ರಿಕೆಟರ್‌?

ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದ ಭಾರತದ ಬ್ಯಾಟಿಂಗ್‌ ಕ್ರಮಾಂಕ ಕ್ರಿಕೆಟ್ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ವೈಭವಗಿಂತಲೂ ಆ ಸ್ಟಾರ್‌ ಕ್ರಿಕೆಟರ್‌ಗೆ ಹೆಚ್ಚಿನ ಅನ್ಯಾಯವಾಯ್ತಾ ಎನ್ನುವ ಸುದ್ದಿ ಅಭಿಮಾನಿಗಳನ್ನು ಆಕ್ರೋಶಗೊಳಿಸಿದೆ. ಅದರಲ್ಲೂ ಎರಡೂ ಬಾರಿ ವಿಶ್ವ ಕಪ್‌ ಗೆಲುವಿನಲ್ಲಿ ಭಾಗವಾಗಿದ್ದ ಆ ಕ್ರಿಕೆಟರ್‌ನ್ನು ಬೆಂಚ್‌ ಕಾಯಿಸಿದ್ದೇಕೆ? ಅಷ್ಟಕ್ಕೂ ಯಾರು ಪ್ರತಿಭೆ ಎನ್ನುವುದಕ್ಕೆ ಸಂಪೂರ್ಣ ಉತ್ತರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಗಂಭೀರ್‌ ನಿರ್ಧಾರದ ಹಿಂದೆ ಹಲವು ಪ್ರಶ್ನೆ!
Image Credit : Getty

ಗಂಭೀರ್‌ ನಿರ್ಧಾರದ ಹಿಂದೆ ಹಲವು ಪ್ರಶ್ನೆ!

ಎರಡು ಬಾರಿ ವಿಶ್ವಕಪ್ ವಿಜೇತರಾಗಿದ್ದ ಆ ಪ್ಲೇಯರ್‌ ಬದಲು ಮತ್ತೊಬ್ಬರನ್ನು ಕಣಕ್ಕಿಳಿಸಿರುವ ನಿರ್ಧಾರದ ಹಿಂದೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ಡ್ರೆಸ್ಸಿಂಗ್ ರೂಮ್ ಸಮೀಕರಣದ ಬಗ್ಗೆ ಹೊಸ ಊಹಾಪೋಹಗಳು ಸೃಷ್ಟಿಯಾಗಿವೆ. ಕೆಲವು ಕ್ರಿಕೆಟ್ ತಜ್ಞರು ಮುಖ್ಯ ಕೋಚ್ ಗೌತಮ್ ಗಂಭೀರ್ ನಿರ್ಧಾರವು ಡ್ರೆಸ್ಸಿಂಗ್ ರೂಮ್ ಕ್ಯಾಲ್ಕುಲೇಷನ್‌ ಬಗ್ಗೆ ಹೊಸ ಅನುಮಾನಗಳು ಹುಟ್ಟುಕೊಂಡಿವೆ ಎಂದು ನಂಬಿಕೊಂಡಿದ್ದಾರೆ ಕೆಲ ಮೂಲಗಳಿಂದ ತಿಳಿದು ಬಂದಿದೆ.

Related Articles

Related image1
Cricket Betting Addiction: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕಳಕೊಂಡ ಹಣ ಮತ್ತೆ ಗಳಿಸಲು ಕಳ್ಳತನಕ್ಕಿಳಿದ ಆಸಾಮಿ!
Related image2
Cricket: ವೈಭವ್‌ಗೆ ಬೆದರಿತಾ ಇಂಗ್ಲೆಂಡ್? ಸೂರ್ಯವಂಶಿ ಪದಾರ್ಪಣೆ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂತು ಬಿಗ್‌ ನ್ಯೂಸ್!
36
ಇವರೇ ಆ ಆಲ್‌ರೌಂಡರ್‌!
Image Credit : ANI

ಇವರೇ ಆ ಆಲ್‌ರೌಂಡರ್‌!

ಬೆಂಚ ಕಾದ ಪ್ರತಿಭೆ ಮತ್ಯಾರು ಅಲ್ಲ ಅವರೇ ಆಲ್‌ ರೌಂಡರ್‌ ಕ್ರಿಕೆಟರ್‌ ಅಕ್ಷರ ಪಟೇಲ್. ಭಾರತ ತಂಡ ಸತತ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದಾಗ, ಅಕ್ಷರ್‌ನಂತಹ ಅನುಭವಿ ಕ್ರಿಕೆಟಿಗನನ್ನು ಫಿನಿಷರ್ ಆಗಿ ಕರೆತರುವುದು ಸಹಜ. ಆದರೆ ಎಲ್ಲರ ಆಶ್ಚರ್ಯಕ್ಕೆಒಳಗಾಗುವಂತೆ, 7ನೇ ಕ್ರಮಾಂಕದಲ್ಲಿ ಅಕ್ಷರ ಬದಲಿಗೆ ಯುವ ಆಟಗಾರ ಹರ್ಷಿತ್ ರಾಣಾ ಅವರನ್ನು ಕ್ರೀಸ್‌ಗೆ ಇಳಿಸಲಾಯಿತು. ಕ್ರಿಕೆಟ್ ವಲಯದಲ್ಲಿ ಈಗಾಗಲೇ ಒಂದು ಕುತೂಹಲವಿದೆ. ಐಪಿಎಲ್‌ನಲ್ಲಿ ಕೆಕೆಆರ್‌ಗೆ ಆಡಿದ ಸಮಯದಿಂದ ಗಂಭೀರ್ ನೆಚ್ಚಿನ ಶಿಷ್ಯ ಹರ್ಷಿತ್‌ಗೆ ಈ ಅವಕಾಶ ಸಿಕ್ತಾ? ಎನ್ನುವ ಮಾತು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.

46
ಸಿಗಲಿಲ್ಲ ಸೂರ್ಯವಂಶಿಗೆ ಅವಕಾಶ!
Image Credit : Getty

ಸಿಗಲಿಲ್ಲ ಸೂರ್ಯವಂಶಿಗೆ ಅವಕಾಶ!

ದೇಶೀಯ ಕ್ರಿಕೆಟ್‌ನ ಅದ್ಭುತ ಹುಡುಗ ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಇಲೆವೆನ್‌ನಲ್ಲಿ ಅವಕಾಶ ನೀಡದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದರೂ, ಅಕ್ಷರ್ ಪಟೇಲ್‌ಗೆ ಇನ್ನೂ ಹೆಚ್ಚಿನ ಅನ್ಯಾಯವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ದೇಶಕ್ಕಾಗಿ ಹಲವಾರು ಪಂದ್ಯಗಳನ್ನು ಗೆದ್ದುಕೊಟ್ಟ ಹಿರಿಯ ಆಲ್‌ರೌಂಡರ್‌ನ್ನು ಈ ರೀತಿ ನಿರ್ಲಕ್ಷಿಸಿಸಿರುವುದು ಅಭಿಮಾನಿಗಳು ಆಕ್ರೋಶಕ್ಕೆ ಕಾರಣವಾಗಿದೆ.

56
ವಿಶ್ಲೇಷಕರ ವಾದವೇನು?
Image Credit : X/@BCCI

ವಿಶ್ಲೇಷಕರ ವಾದವೇನು?

ಪಂದ್ಯ ಪ್ರಾರಂಭದಿಂದಲೂ ಗಂಭೀರ್ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಕ್ರಿಕೆಟ್ ವಿಶ್ಲೇಷಕರಲ್ಲಿ ಹಲವು ಭಿನ್ನಾಭಿಪ್ರಾಯಗಳಿವೆ. ಆ ವೇಳೆ ಮೊದಲು ರಾಣಾ ಅವರನ್ನು ಕ್ರೀಸ್‌ಗೆ ಇಳಿಸುವುದು ಸರಿಯಾದ ನಿಲುವಲ್ಲ ಎಂದು ಕೆಲ ಹಿರಿಯ ಕ್ರಿಕೆಟಿಗರ ಮಾತಾಗಿದೆ. ಏಕೆಂದರೆ ಅವರಿಗೆ T20 ಫಾಮ್ರ್ಯಾಟ್‌ನಲ್ಲಿ ಅನುಭವವು ಕಡಿಮೆ ಇದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಅವರು ಪಳಗುವ ಅವಶ್ಯಕತೆ ಇದೆ ಎಂದು ವಿಶ್ಲೇಷಕರ ವಾದವಾಗಿದೆ.

66
ಈ ವಿವಾದ ನಿಭಾಯಿಸ್ತಾರಾ ಗಂಭೀರ್!
Image Credit : ANI

ಈ ವಿವಾದ ನಿಭಾಯಿಸ್ತಾರಾ ಗಂಭೀರ್!

ಮಳೆಯಿಂದಾಗಿ ಪಂದ್ಯ ಕೊನೆಗೆ ರದ್ದಾದರೂ, ಗಂಭೀರ್ ಅವರ ತಂತ್ರವು ದೊಡ್ಡ ಪ್ರಶ್ನೆಗಳನ್ನು ಸೃಷ್ಟಿಸುವಂತೆ ಕಂಡಿದೆ. ಜುಲೈ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಎರಡನೇ ಟಿ20ಐಗೂ ಮುನ್ನ ಟೀಮ್ ಇಂಡಿಯಾದ ಚಿಂತಕರ ಚಾವಡಿ ಈ ಬ್ಯಾಟಿಂಗ್ ಕ್ರಮಾಂಕದ ವಿವಾದವನ್ನು ಹೇಗೆ ನಿಭಾಯಿಸುತ್ತದೆ. ಅಲ್ಲದೇ ಅಕ್ಷರ್ ಪಟೇಲ್‌ಗೆ ಅರ್ಹವಾದ ಗೌರವವನ್ನು ನೀಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ವೈಭವ್ ಸೂರ್ಯವಂಶಿ
ಟೀಮ್ ಇಂಡಿಯಾ
ಗೌತಮ್ ಗಂಭೀರ್
ಕ್ರಿಕೆಟ್

Latest Videos
Recommended Stories
Recommended image1
ದುಲೀಪ್ ಟ್ರೋಫಿ ಮೂಲಕ ಬಿಸಿಸಿಐ ಸೆಲೆಕ್ಟರ್ಸ್‌ಗೆ ಮತ್ತೊಂದು ಖಡಕ್ ವಾರ್ನಿಂಗ್ ಕೊಟ್ಟ ಮೊಹಮ್ಮದ್ ಶಮಿ!
Recommended image2
CPL: ​ಕೊಹ್ಲಿ ದಾಖಲೆ ಸರಿಗಟ್ಟಿದ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್! ಟಿ20 ಕ್ರಿಕೆಟ್‌ನಲ್ಲಿ ಈತನ ಆ ದಾಖಲೆ ಏನು?
Recommended image3
ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಯಿಂದ 8 ಪ್ರಮುಖ ಆಟಗಾರರು ಔಟ್; ಈ ಸ್ಟಾರ್ ಆಟಗಾರನ ಕ್ರಿಕೆಟ್ ಬದುಕು ಅಂತ್ಯ?
Related Stories
Recommended image1
Cricket Betting Addiction: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕಳಕೊಂಡ ಹಣ ಮತ್ತೆ ಗಳಿಸಲು ಕಳ್ಳತನಕ್ಕಿಳಿದ ಆಸಾಮಿ!
Recommended image2
Cricket: ವೈಭವ್‌ಗೆ ಬೆದರಿತಾ ಇಂಗ್ಲೆಂಡ್? ಸೂರ್ಯವಂಶಿ ಪದಾರ್ಪಣೆ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂತು ಬಿಗ್‌ ನ್ಯೂಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved