ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ವಿಚಾರ ಬಿಟ್ಟು ರಾಜ್ಯದ ಅಭಿವೃದ್ದಿ ಕಡೆಗೆ ಗಮನಹರಿಸಲಿ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದ..

ಗಂಗಾವತಿ (ಜು.02): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ವಿಚಾರ ಬಿಟ್ಟು ರಾಜ್ಯದ ಅಭಿವೃದ್ದಿ ಕಡೆಗೆ ಗಮನಹರಿಸಲಿ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದ ಚಿಕ್ಕ ಬೊಮ್ಮನಾಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆವೇರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಅಂದರೆ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಈಗಾಗಲೆ ಬಿಡದಿ ವಿಷಯ ನ್ಯಾಯಲಯ ಮೆಟ್ಟಿಲು ಏರಿದೆ. ಕಾರಣ ಮುಖ್ಯಮಂತ್ರಿಗಳು ಬಿಡದಿ ವಿಷಯ ಬಿಟ್ಟು ರಾಜ್ಯದ ಹಿತ ಕಾಪಾಡುವದಕ್ಕೆ ಮುಂದಾಗಬೇಕೆಂದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರಿತು ಅಡಿಯೋ ವೈರಲ್ ಪ್ರಶ್ನೆಗೆ ಸದಾನಂದಗೌಡರು ನಿಷ್ಟಾವಂತ ನಾಯಕರಾಗಿದ್ದಾರೆ. ಆ ಅಡಿಯೋ ತಮಗೆ ಸಂಬಂಧಿಸಿದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಈ ವಿಷಯ ಪದೆ ಪದೆ ಹೇಳಿಕೆ ನೀಡುವದು ಸರಿಯಲ್ಲ ಎಂದರು. ಎಐ ಟೆಕ್ನಾಲಜಿ ಬಂದ ಮೇಲೆ ಸಾಕಷ್ಟು ರೀತಿಯಲ್ಲಿ ಬದಾಲವಣೆಯಾಗುತ್ತದೆ. ಇದರಿಂದ ಒಳ್ಳೆಯದು, ಇದೆ ಕೆಟ್ಟದ್ದು ಇದೆ. ಇದರಿಂದ ಏನು ಮಾಡಲು ಸಾದ್ಯ ಇಲ್ಲ ಎಂದರು. ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಸೃಷ್ಟಿಯಾಗುವ ಸಂಭವ ಇದೆ ಎಂದ ಅವರು ಗ್ಯಾರಂಟಿ ಯೋಜನೆಯಲ್ಲಿ ಜನರಿಗೆ ಕಳೆದ ಮೂರು ತಿಂಗಳಿನಿಂದ ಹಣ ತಲುಪುತ್ತಿಲ್ಲ ಎಂದರು.

ನೈತಿಕತೆ ಇಲ್ಲ

ಗ್ಯಾರಂಟಿ ಯೋಜನೆ ನೆಪದಲ್ಲಿ ಯೋಜನೆ ಬಂದ್ ಮಾಡುವ ಹುನ್ನಾರದಲ್ಲಿ ಸರ್ಕಾರ ಇದೆ ಎಂದರು. ರಾಮ ಮಂದಿರ ಟ್ರಸ್ಟ್ ಹಣ ದುರುಪಯೋಗವಾಗಿದೆ ಎನ್ನುವದಕ್ಕೆ ಲೆಕ್ಕ ಕೇಳುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 500 ವರ್ಷಗಳ ಇತಿಹಾಸ ಇದೆ. ರಾಮ ಭಕ್ತ ಹನುಮನ್ನು ಬಿಟ್ಟರೆ ಮತ್ತೇ ನರೇಂದ್ರ ಮೋದಿ ಮತ್ತು ಆದಿತ್ಯನಾಥ ಭಕ್ತರು ಎಂದರು.