LIVE NOW
Published : Sep 07, 2026, 07:20 AM ISTUpdated : Sep 07, 2026, 11:12 PM IST

Karnataka News Live: Sachin - ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?

ಸಾರಾಂಶ

ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿರುವುದರಿಂದ ಸರ್ಕಾರದಿಂದಲೇ ಭೂಮಿ ಉಳುಮೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬರದಿಂದಾಗಿ ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಭೂಮಿ ಉಳುಮೆ ಮಾಡುವುದಕ್ಕೂ ಅವರಿಂದ ಸಾಧ್ಯವಾಗುತ್ತಿಲ್ಲ. ಅವರ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ಮೂರು ಎಕರೆವರೆಗೆ ಜಮೀನು ಹೊಂದಿರುವ ರೈತರ ಭೂಮಿಯನ್ನು ಸರ್ಕಾರದಿಂದಲೇ ಉಚಿತವಾಗಿ ಉಳುಮೆ ಮಾಡಿಕೊಡುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

11:12 PM (IST) Sep 07

Sachin - ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಮಹಾರಾಷ್ಟ್ರದ ಪ್ರಸಿದ್ಧ ಗಿರಿಧಾಮವಾದ ಲೋನಾವಲಾದಲ್ಲಿ ₹70 ಕೋಟಿ ಮೌಲ್ಯದ 3.86 ಎಕರೆ ಜಮೀನನ್ನು ಖರೀದಿಸಿದ್ದಾರೆ. ಈ ಬೃಹತ್ ಹೂಡಿಕೆಯ ನಂತರ ಏನು ಮಾಡಲಿದ್ದಾರೆ ಗೊತ್ತಾ? ಈ ಕುರಿತು ಕಂಪ್ಲಿಟ್ ರಿಪೋರ್ಟ್ ಇಲ್ಲಿದೆ.

Read Full Story

11:03 PM (IST) Sep 07

ನಟ ದರ್ಶನ್‌ಗೆ ಶುರುವಾಯ್ತು ಟೆನ್ಶನ್, ನಾಳೆ ಸಂಜೆ 4 ಗಂಟೆ ಆದೇಶ ಪ್ರಕಟಿಸಲಿದೆ ಹೈಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಸಂಕಷ್ಟಗಳು ಹೆಚ್ಚಾಗುತ್ತಿದೆ. ದರ್ಶನ್ ಆಪ್ತನೆ ಮಾಫಿ ಸಾಕ್ಷಿಯಾಗಿ ತಿರುಗಿದ್ದಾನೆ. ಇತ್ತ ನಾಳೆ ಸಂಜೆ 4 ಗಂಟೆಗೆ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ.

Read Full Story

10:45 PM (IST) Sep 07

Delhi Building Collapse - ಅಣ್ಣ ಎಲ್ಲಿದ್ದಾನೆ ಪತ್ತೆ ಮಾಡಿ; ಕಣ್ಣೀರಿಟ್ಟು ಹುಚ್ಚಿಯಂತೆ ಆಸ್ಪತ್ರೆಯಿಂದ ಆಸ್ಪತ್ರೆ ಅಲೆಯುತ್ತಿರುವ ತಂಗಿ!

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿದು 30 ಗಂಟೆ ಕಳೆದರೂ, ಅವಶೇಷಗಳಡಿ ಸಿಲುಕಿರುವ ತನ್ನ ಸಹೋದರ ಪವನ್‌ಗಾಗಿ ತಂಗಿ ಪ್ರಿಯಾಂಶಿ ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾಳೆ. ಸಾಮಾಜಿಕ ಮಾಧ್ಯಮದಿಂದ ಸುದ್ದಿ ತಿಳಿದು ಓಡಿಬಂದ ಆಕೆಗೆ, ಆಡಳಿತದಿಂದ ಯಾವುದೇ ಸ್ಪಷ್ಟ ಮಾಹಿತಿ ಸಿಗದೆ ಅಸಹಾಯಕಳಾಗಿದ್ದಾಳೆ.
Read Full Story

10:11 PM (IST) Sep 07

Health Department - ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!

ಹೆಚ್ಚುತ್ತಿರುವ ಆಹಾರ ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಅವಧಿ ಮೀರಿದ ಪದಾರ್ಥಗಳು, ಕೃತಕ ಬಣ್ಣಗಳ ಬಳಕೆ ಮತ್ತು ಕಳಪೆ ನೈರ್ಮಲ್ಯ ಕಂಡುಬಂದಿದ್ದರಿಂದ ಖ್ಯಾತ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.

Read Full Story

09:29 PM (IST) Sep 07

ನಮ್ಮ ಮೆಟ್ರೋ ಮಾರ್ಗ ಸುಗಮಗೊಳಿಸಿದ್ದ ಕಾನೂನು ಶಕ್ತಿ 'DLN Rao' ಇನ್ನಿಲ್ಲ - ಬೆಂಗಳೂರಿಗೆ ಇವರ ಕೊಡುಗೆ ಏನು ಗೊತ್ತಾ?

ಹಿರಿಯ ವಕೀಲ ಡಿಎಲ್‌ಎನ್ ರಾವ್ ಸೋಮವಾರ ನಿಧನರಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಕಾನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಅವರು ಗಣಿಗಾರಿಕೆ, ಭೂಸ್ವಾಧೀನ, ಮೂಲಸೌಕರ್ಯ ಮತ್ತು ಸಾರ್ವಜನಿಕ ಕಾನೂನಿನಲ್ಲಿ ಪರಿಣತಿ ಹೊಂದಿದ್ದರು. ಬೆಂಗಳೂರಿನ ನಮ್ಮ ಮೆಟ್ರೋ ಭೂಗತ ಮಾರ್ಗದ ಪ್ರಕರಣದಲ್ಲಿ 2010ರಲ್ಲಿ ಹೈಕೋರ್ಟ್ ಅವರನ್ನು Amicus Curiae ಆಗಿ ನೇಮಿಸಿತ್ತು.

Read Full Story

08:50 PM (IST) Sep 07

ದ್ರಾವಿಡ್, ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದ ಮೇಲೆ ಕಣ್ಣು - ಅವಕಾಶಗಳ ಬಗ್ಗೆ ಪಡಿಕ್ಕಲ್ ಮಾತು

ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಲು ಎಷ್ಟು ಸ್ಪರ್ಧೆ ಇದೆ ಅನ್ನೋದ್ರ ಬಗ್ಗೆ ಕನ್ನಡಿಗ ದೇವದತ್ ಪಡಿಕ್ಕಲ್ ಮಾತನ್ನಾಡಿದ್ದಾರೆ. ಒಂದು ಸ್ಥಾನಕ್ಕಾಗಿ ಎಷ್ಟು ಕಾಯಬೇಕು ಅನ್ನೋದನ್ನ ವಿವರಿಸಿದ್ದಾರೆ. ಅವರು ಹೇಳಿರುವ ಮಾತುಗಳು ಇಲ್ಲಿವೆ.

Read Full Story

08:25 PM (IST) Sep 07

ಗರ್ಭಗುಡಿಗೆ ಪ್ರತಿದಿನ ಬೀಳುತ್ತೆ ಸೂರ್ಯಕಿರಣ - ಐಹೊಳೆಯ ಈ ದೇಗುಲದ ನಿಗೂಢ ರಹಸ್ಯ ಗೊತ್ತಾ?

ಬಾಗಲಕೋಟೆ ಜಿಲ್ಲೆಯ ಐಹೊಳೆಯ ಐತಿಹಾಸಿಕ ದುರ್ಗಾ ದೇವಾಲಯದ ಗರ್ಭಗುಡಿಗೆ ಪ್ರತಿದಿನ ಬೆಳಗ್ಗೆ ಸೂರ್ಯಕಿರಣಗಳು ನೇರವಾಗಿ ಬೀಳುತ್ತಿರುವುದು ವಿಶೇಷ ಗಮನ ಸೆಳೆದಿದೆ. ಸೂರ್ಯತಿಲಕ ಅಥವಾ ಸೂರ್ಯಾಭಿಷೇಕ ಎಂದು ಕರೆಯಲಾಗುವ ಈ ವಿದ್ಯಮಾನವು ದೇವಾಲಯದ ಮೂಲ ಸ್ವರೂಪದ ಕುರಿತು ಹೊಸ ಕುತೂಹಲ ಹುಟ್ಟಿಸಿದೆ.

Read Full Story

08:13 PM (IST) Sep 07

Cricket - ಒಂದೇ ದಿನ ಎರಡು ದೇಶಗಳಲ್ಲಿ ಕಣಕ್ಕಿಳಿಯಲಿದೆ ಭಾರತ! 28 ವರ್ಷಗಳ ಬಳಿಕ ಮರುಕಳಿಸಲಿದೆ ಅಪರೂಪದ ಇತಿಹಾಸ!

ಭಾರತೀಯ ಕ್ರೀಡಾಭಿಮಾನಿಗಳಿಗೆ ಅಪರೂಪದ ದಿನ ಎದುರಾಗಲಿದೆ. ಅಂದು ಭಾರತ ಒಂದೇ ದಿನ ಎರಡು ವಿಭಿನ್ನ ದೇಶಗಳಲ್ಲಿ ಕಣಕ್ಕಿಳಿಯಲಿದೆ. ಈ ಅಪರೂಪದ ವೇಳಾಪಟ್ಟಿಯ ಸಂಪೂರ್ಣ ವಿವರನ್ನೊಮ್ಮೆ ನೋಡಿಕೊಂಡು ಬರೋಣ ಬನ್ನಿ.

Read Full Story

08:10 PM (IST) Sep 07

ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಇಲಾಖೆ, ಅರ್ಜಿ ಸಲ್ಲಿಗೆ ಕೊನೆ ದಿನಾಂಕ ಯಾವಾಗ?

ಶಿಕ್ಷಕರ ನೇಮಕಾತಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್. ಶಾಲಾ ಶಿಕ್ಷಣ ಇಲಾಖೆ ಮಹತ್ವದ ಪ್ರಕಟಣೆ ಹೊರಡಿಸಿದೆ. ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಜಿಲ್ಲಾ, ವಿಭಾಗವಾರು ಅಧಿಸೂಚನೆ ಹೊಡಿಸಲಾಗಿದೆ. ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.

Read Full Story

07:58 PM (IST) Sep 07

ಸ್ವತಃ ನಾನೇ ಆ ಡ್ರೆಸ್ ಆಯ್ಕೆ ಮಾಡಿದ್ದೆ - ಟ್ರೋಲಿಂಗ್ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹೇಳಿದ್ದೇನು?

ನಟಿ ಐಶ್ವರ್ಯ ಲಕ್ಷ್ಮಿ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಕುರಿತು ಎದುರಿಸಿದ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಡ್ರೆಸ್ ಆಯ್ಕೆಯಲ್ಲಿ ತಮ್ಮ ತಪ್ಪೂ ಇದೆ ಎಂದು ಒಪ್ಪಿಕೊಂಡಿದ್ದಾರೆ.

Read Full Story

07:31 PM (IST) Sep 07

ದುನಿಯಾ ವಿಜಯ್ ‘ಸಿಟಿ ಲೈಟ್ಸ್’ನಲ್ಲಿ ಅಲಖ್ ನಿರಂಜನ್ - ಜನಪದದ ಸೊಗಡಿಗೆ ರ‍್ಯಾಪ್ ಟಚ್

ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಅಭಿನಯದ ‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಹಾಡು ‘ಅಲಖ್ ನಿರಂಜನ್’ ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಜನಪದ ಸಂಗೀತದ ಸೊಗಡಿಗೆ ರ‍್ಯಾಪ್..

Read Full Story

07:28 PM (IST) Sep 07

ತೀವ್ರ ಬಿಸಿಲಿನಿಂದ ಬೆಂಗಳೂರು ಸೇರಿ ರಾಜ್ಯದಲ್ಲಿ 5 ಡಿಗ್ರಿ ತಾಪಮಾನ ಏರಿಕೆ, ಮುಂದಿನ ವಾರ 37° ಡಿಗ್ರಿ

ಮಳೆ ಕೊರತೆ ಕಾರಣ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಉರಿ ಬಿಸಿಲಿನ ಶಾಕ್ ಎದುರಾಗಿದೆ. ಬೆಂಗಲೂರು ಸೇರಿದಂತೆ ರಾಜ್ಯದಲ್ಲಿ ಶೇಕಡಾ 5 ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಾಗಿದೆ . ಮುಂದಿನ ವಾರ 37° ಡಿಗ್ರಿ ಸೆಲ್ಶಿಯಸ್‌ಗೆ ತಲುಪಲಿದೆ.

Read Full Story

06:23 PM (IST) Sep 07

ನೀವು ಈ ತರಹದ 'ನ್ಯೂ ಏಜ್ ಲವ್ ಸ್ಟೋರಿ' ಸಿನಿಮಾ ನೋಡೋಕೆ ಚಾನ್ಸೇ ಇಲ್ಲ.. ಊಹಿಸಲಾಗದ ಟ್ವಿಸ್ಟ್!

ಕಿರಣ್ ಅಬ್ಬವರಂ ಹಾಗೂ ಶ್ರೀ ಗೌರಿ ಪ್ರಿಯಾ ಅಭಿನಯದ ‘ಚೆನ್ನೈ ಲವ್ ಸ್ಟೋರಿ’ ಸಿನಿಮಾ ಇದೀಗ OTTಗೆ ಎಂಟ್ರಿ ಕೊಟ್ಟಿದೆ. ಥಿಯೇಟರ್‌ನಲ್ಲಿ ಸಕ್ಸಸ್ ಕಂಡ ಈ ನ್ಯೂ ಏಜ್ ಲವ್ ಸ್ಟೋರಿ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ.

Read Full Story

05:48 PM (IST) Sep 07

ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ನೆನಪಿದೆಯಾ? ಈಗ ಅವರ ಜೀವನದಲ್ಲಿ ಏನಾಗ್ತಿದೆ?

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಹಾಗೂ ತೆಲುಗು ಪ್ರೇಕ್ಷಕರ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್‌ನೆಸ್ ವಿಡಿಯೋಗಳು ಹಾಗೂ ಗ್ಲಾಮರಸ್ ಫೋಟೋಗಳಿಂದ ಅವರು ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.

Read Full Story

05:43 PM (IST) Sep 07

Bigg Boss - ದೊಡ್ಮನೆಗೆ ಎಂಟ್ರಿಕೊಟ್ಟ ಬಿಜೆಪಿ ನಾಯಕನ ಮಗಳು; ಯಾರು ಈ ಸುಂದರಿ?

ರಿಯಾಲಿಟಿ ಶೋನ ಅತಿದೊಡ್ಡ ಶೋ ಬಿಗ್‌ ಬಾಸ್‌ ಭಾರೀ ಟ್ರೆಂಡಿಂಗ್‌ನಲ್ಲಿದೆ. ಈಗಾಲೇ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದು, ಅವರ ವ್ಯಕ್ತಿತ್ವ ಅನಾವರಣ ಆಗೋದೊಂದೇ ಭಾಕಿ ಇದೆ. ಇದರ ನಡುವೆ ಹಿಂದಿ ಬಿಗ್‌ಬಾಸ್‌ಗೆ ಬಿಜೆಪಿ ನಾಯಕನ ಮಗಳೊಬ್ಬರು ಎಂಟ್ರಿಯಾಗಿದ್ದಾರೆ. ಯಾರು ಅವರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

05:37 PM (IST) Sep 07

Delhi - ವಾಜಪೇಯಿ ಅವರ 'ಮಾನಸ ಪುತ್ರ' ಇನ್ನಷ್ಟು ದಿನ ಇದ್ದಿದ್ದರೆ ಸತ್ಯನಿಕೇತನ ದುರಂತ ನಡೆಯುತ್ತಿರಲಿಲ್ಲವೇ? ಚಕಾಚಕ್ ಅಂತಿತ್ತಾ ದೆಹಲಿ?

ದೆಹಲಿಯ ಸತ್ಯನಿಕೇತನದಲ್ಲಿ ನಡೆದ ಕಟ್ಟಡ ಕುಸಿತ ದುರಂತವು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಈ ಹಿನ್ನೆಲೆಯಲ್ಲಿ, ಅಕ್ರಮ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದ ವಾಜಪೇಯಿ ಅವರ ಮಾನಸ ಪುತ್ರರ ಕಾರ್ಯವೈಖರಿಯನ್ನು ಸ್ಮರಿಸಲಾಗಿದೆ. ಇಂತಹ ದುರಂತಗಳನ್ನು ತಡೆಯಲು ಆ ಮಾದರಿಯ ಕಟ್ಟುನಿಟ್ಟಿನ ಆಡಳಿತದ ಅಗತ್ಯವಿದೆ ಎಂದು ಲೇಖನವು ಪ್ರತಿಪಾದಿಸುತ್ತದೆ.

Read Full Story

05:22 PM (IST) Sep 07

ಕೆಪಿಎಸ್‌ಸಿ ನೇಮಕಾತಿ ಅಕ್ರಮ - ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕೃತ್ಯದಿಂದ ಕೆಪಿಎಸ್‌ಸಿ ಮೇಲಿನ ಸಾರ್ವಜನಿಕರ ವಿಶ್ವಾಸ ನಾಶವಾಗಿದೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ, ಸಾಹುಕಾರ್ ಅವರು ಅಕ್ರಮವಾಗಿ ನೂರಾರು ಎಕರೆ ಆಸ್ತಿ ಸಂಪಾದಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ದಾಖಲೆ ಬಿಡುಗಡೆ ಮಾಡಿದ್ದಾರೆ.
Read Full Story

05:11 PM (IST) Sep 07

'ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..' - ಮದುವೆ ಬಗ್ಗೆ ನಟಿ ರಮ್ಯಾ ನಿಲುವೇನು?

ಸ್ಯಾಂಡಲ್‌ವುಡ್ ನಟಿ ರಮ್ಯಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮದುವೆಗಿಂತ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ ಎಂದಿದ್ದಾರೆ. ಸೂಕ್ತ ಸಂಗಾತಿ ಸಿಕ್ಕರೆ ಮದುವೆ ಉತ್ತಮ ಎಂದು ಹೇಳಿರುವ ಅವರು, ಸದ್ಯ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.

Read Full Story

04:58 PM (IST) Sep 07

ರೇಣುಕಾಸ್ವಾಮಿ ಪ್ರಕರಣ - ಜೈಲಲ್ಲಿರುವ A1 ಆರೋಪಿ ಪವಿತ್ರಾ ಗೌಡ ಹೊಸ ಬೇಡಿಕೆಗೆ ಅಸ್ತು ಎಂದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ತಮ್ಮನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಭಾಗಶಃ ಪುರಸ್ಕರಿಸಿದೆ. ಮತ್ತೊಂದೆಡೆ, ವಿಚಾರಣೆಗೆ ಖುದ್ದು ಹಾಜರಾಗಲು ಅನುಮತಿ ಕೋರಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Read Full Story

04:57 PM (IST) Sep 07

Guidelines - ಹುಬ್ಬಳ್ಳಿ- ಧಾರವಾಡದಲ್ಲಿ ಗಣೇಶ ಉತ್ಸವಕ್ಕೆ ಹೊಸ ಗೈಡ್‌ಲೈನ್ಸ್; ಆಯುಧ ಹಿಡಿದರೆ 10 ಲಕ್ಷ ಬಾಂಡ್! 80 ಡೆಸಿಬಲ್ ದಾಟಿದರೆ ಡಿಜೆ ಬಂದ್!

ಪೊಲೀಸ್ ಕಮಿಷನರೇಟ್ ಗಣೇಶ ಚತುರ್ಥಿ ಹಬ್ಬಕ್ಕೆ ಹೊಸ, ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಡಿಜೆ ಸೌಂಡ್‌ಗೆ ರಾತ್ರಿ 10 ಗಂಟೆಯ ಗಡುವು, 80 ಡೆಸಿಬಲ್ ಮಿತಿ, ಅಪಾಯಕಾರಿ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಶಾಂತಿ ಕದಡುವವರ ವಿರುದ್ಧ 'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' ರಚಿಸಲಾಗಿದ್ದು, ಮಾರಕಾಸ್ತ್ರಗಳೊಂದಿಗೆ ಸಿಕ್ಕಿಬಿದ್ದರೆ 10 ಲಕ್ಷ ರೂಪಾಯಿ ಬಾಂಡ್ ಹಾಕುವ ಎಚ್ಚರಿಕೆ ನೀಡಲಾಗಿದೆ.

Read Full Story

04:43 PM (IST) Sep 07

ಡೆವಿಲ್ಸ್ ಕಿಚನ್ Vs ಸಿನಿಮಾ ನಂಟು - ಪ್ರಕೃತಿಯ ರಹಸ್ಯದೊಳಗಿನ ಸಾಹಸದ ಲೋಕ 'ಗುಣ ಗುಹೆ'

‘ಗುಣ’ ಸಿನಿಮಾ ಮತ್ತು ‘ಮಂಜುಮ್ಮಲ್ ಬಾಯ್ಸ್’ ಮೂಲಕ ಪ್ರಸಿದ್ಧಿ ಪಡೆದ ಕೊಡೈಕೆನಾಲ್‌ನ ಗುಣ ಗುಹೆಗಳು ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ನಿಗೂಢ ಗುಹೆಗಳು, ಆಳವಾದ ಬಿರುಕುಗಳು ಮತ್ತು ಪೈನ್ ಕಾಡಿನ ಸೌಂದರ್ಯ ಈ ತಾಣದ ವಿಶೇಷತೆ.

Read Full Story

04:39 PM (IST) Sep 07

ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್ - ಮಹತ್ವದ ಮನವಿಯೊಂದಿಗೆ ಮತ್ತೊಮ್ಮೆ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲ

ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿ ಮಾಫಿ ಸಾಕ್ಷಿ ಆಗಿರೋದು ಭಾರೀ ಕುತೂಹಲ ಮೂಡಿಸಿದೆ. ಬೆನ್ನಲ್ಲೇ ದರ್ಶನ್ ಪರ ಮತ್ತೊಮ್ಮೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಯಾಕೆ ದರ್ಶನ್ ಅವರಿಗೆ ಆತಂಕ ಶುರುವಾಗಿದ್ಯಾ? ಈ ಕುರಿತು ಕಂಪ್ಲೀಟ್ ಡಿಟೈಲ್ಡ್ ಸ್ಟೋರಿ ಇಲ್ಲಿದೆ.

Read Full Story

04:24 PM (IST) Sep 07

Cricket - ತಂಡದಿಂದ ಹೊರಗಿಟ್ಟರು, ಕಾಂಟ್ರ್ಯಾಕ್ಟ್ ಕಿತ್ತುಕೊಂಡರು! ಈಗ ಬ್ಯಾಟ್‌ನಿಂದಲೇ ಎಲ್ಲರ ಬಾಯಿ ಮುಚ್ಚಿಸಿದ ಇಶಾನ್! ಇದಪ್ಪ ಕಂಬ್ಯಾಕ್‌ ಅಂದ್ರೆ!

'ಮಾನಸಿಕ ದಣಿವು' ಕಾರಣಕ್ಕೆ ತಂಡದಿಂದ ಹೊರಬಿದ್ದಿದ್ದ ಇಶಾನ್ ಕಿಶನ್, ಟೀಕೆಗಳನ್ನು ಮೆಟ್ಟಿ ನಿಂತಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ನಾಯಕನಾಗಿ ಭರ್ಜರಿ ಶತಕ ಸಿಡಿಸಿ, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಪ್ರದರ್ಶನವು ಬಿಸಿಸಿಐ ಮತ್ತು ಆಯ್ಕೆಗಾರರಿಗೆ ನೀಡಿದ ಬಲವಾದ ಉತ್ತರವಾಗಿದೆ.
Read Full Story

04:18 PM (IST) Sep 07

ರಿಷಬ್ ಶೆಟ್ಟಿ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು, ಆದ್ರೆ.. - ನಟ ಶೈನ್ ಶೆಟ್ಟಿ ಹೇಳಿದ್ದೇನು?

ಶೈನ್ ಶೆಟ್ಟಿ ನಿರ್ಮಿಸಿ, ನಾಯಕನಾಗಿ ನಟಿಸಿರುವ ‘ಶಂಕರಾಭರಣ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಭಟ್ ನಿರ್ದೇಶನದ ಈ ಹಾರರ್ ಕಾಮಿಡಿಯಲ್ಲಿ ಶೈನ್ ಬಸ್ ಚಾಲಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನ.20ರಂದು ತೆರೆಗೆ ಬರಲಿದೆ.

Read Full Story

04:01 PM (IST) Sep 07

ನಿರ್ದೇಶಕ ಓಂ ಸಾಯಿಪ್ರಕಾಶ್‌ ನನ್ನ ಪಾಲಿಗೆ ಗುರುಗಳಿದ್ದಂತೆ - ಹಿರಿಯ ನಟಿ ಉಮಾಶ್ರೀ!

ಓಂ ಸಾಯಿಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಸಿನಿಮಾ ಸೆ.25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಸಿಎಂ ಆದಾಗ ಆಡಳಿತದಲ್ಲಿ ಎದುರಿಸುವ ಸವಾಲುಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಚಿತ್ರದ ಪ್ರಮುಖ ಕಥಾಹಂದರವಾಗಿದೆ.

Read Full Story

03:54 PM (IST) Sep 07

ಬೆಚ್ಚಿಬಿದ್ದ ಶಿವಮೊಗ್ಗ - ರೌಡಿಶೀಟರ್ ಕುಳ್ಳಿ ಕಿರಣ್‌ನ ಮುಗಿಸಿದ ದುಷ್ಟರು

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರೌಡಿ ಅಬ್ಬರ ಮತ್ತೆ ಮುನ್ನೆಲೆಗೆ ಬಂದಿದೆ. ನಗರದ ಸೀಗೆಹಟ್ಟಿಯ ನಿವಾಸಿ, ರೌಡಿಶೀಟರ್ ಕುಳ್ಳಿ ಕಿರಣ (32) ಎಂಬಾತನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದೆ. ಅಷ್ಟಕ್ಕೂ ಆಗಿದ್ದೇನು?

Read Full Story

03:48 PM (IST) Sep 07

ಕೊನೆಗೂ ಶುರುವಾಯಿತು ದುನಿಯಾ ಸೂರಿ ಚಿತ್ರ ಕಾಗೆ ಬಂಗಾರ - ತಾರಾಬಳಗದಲ್ಲಿ ಸರ್ಪ್ರೈಸ್!

ದುನಿಯಾ ಸೂರಿ ನಿರ್ದೇಶನದ ‘ಕಾಗೆ ಬಂಗಾರ’ ಚಿತ್ರೀಕರಣ ಆರಂಭವಾಗಿದ್ದು, ಸೂರ್ಯ ಪ್ರಖ್ಯಾತ್ ಮತ್ತು ರಿತನ್ಯಾ ವಿಜಯ್ ನಾಯಕ-ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಸಿದ್ಧಿ ಸೇರಿದಂತೆ ಹಳೆಯ ಚಿತ್ರಗಳ ಹಲವು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Read Full Story

01:04 PM (IST) Sep 07

10 ತಿಂಗಳ ಮಗುವನ್ನು ಗಂಡನ ಕೈಗೆ ಒಪ್ಪಿಸಿ ತೆಲುಗು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಕನ್ನಡ ನಟಿ!!

ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರೈ, ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ 'ಬಿಗ್ ಬಾಸ್ ತೆಲುಗು ಸೀಸನ್ 10'ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ತಾಯಿಯಾದ ಅವರು, ತಮ್ಮ 10 ತಿಂಗಳ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಶೋಗೆ ಬಂದಿರುವುದು ಕುತೂಹಲ ಕೆರಳಿಸಿದೆ.

Read Full Story

01:00 PM (IST) Sep 07

ಕೆಪಿಎಸ್‌ಸಿ ಪರೀಕ್ಷಾ ಅಕ್ರಮಕ್ಕೆ ಸ್ಫೋಟಕ ಟ್ವಿಸ್ಟ್ - ಮಂಜುನಾಥ ರಿವೀಲ್ ಮಾಡಿದ ಆ 7 ನಿಮಿಷಗಳ ಆಡಿಯೋ...!

ಕೆಪಿಎಸ್‌ಸಿ ಪರೀಕ್ಷಾ ಅಕ್ರಮಕ್ಕೆ ಸ್ಫೋಟಕ ಟ್ವಿಸ್ಟ್: ದೂರುದಾರ ಮಂಜುನಾಥ್‌ಗೆ 7 ನಿಮಿಷಗಳ ಬೆದರಿಕೆ ಆಡಿಯೋ! ‘ಆಕೆ ಸೂ*ಸೈಡ್ ಮಾಡ್ಕೊಂಡ್ರೆ ಯಾರು ಹೊಣೆ?’ ಎಂದು ಬೆದರಿಕೆ ಹಾಕಿದ ಪ್ರಕರಣ ನಡೆದಿದೆ. ಈ ಬಗ್ಗೆ ದೂರುದಾರ ಮಂಜುನಾಥ್ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಆರೋಪಿಗಳ ಸಂಬಂಧಿಕರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

Read Full Story

12:30 PM (IST) Sep 07

ಕಾಂಗ್ರೆಸ್‌ನಲ್ಲಿ ' ಸರ್ಕಾರಿ ಬಂಗಲೆ' ವಾರ್ - ಮಹದೇವಪ್ಪ ಮನೆಯಲ್ಲಿದ್ದಾಗಲೇ ಪೇಂಟಿಂಗ್ ಆರಂಭಿಸಿದ ಭೈರತಿ ಸುರೇಶ್!

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಗಾಗಿ ಕಾಂಗ್ರೆಸ್ ನಾಯಕರಾದ ಎಚ್.ಸಿ. ಮಹದೇವಪ್ಪ ಮತ್ತು ಭೈರತಿ ಸುರೇಶ್ ನಡುವೆ ವಿವಾದ ಭುಗಿಲೆದ್ದಿದೆ. ಮಹದೇವಪ್ಪನವರು ನಿವಾಸ ಖಾಲಿ ಮಾಡುವ ಮುನ್ನವೇ, ಸುರೇಶ್ ಅವರು ನವೀಕರಣ ಕಾರ್ಯ ಆರಂಭಿಸಿ, ಶೆಡ್ ಕೆಡವಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

12:29 PM (IST) Sep 07

ಮರದ ಕೆಳಗೆ ಆರಂಭವಾದ ಶಾಲೆ ಇಂದು ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಉದ್ಯಾನವನ ಕಾರಂಜಿ! ಶಿಕ್ಷಕ ಸುರೇಶ್ ಸಾಧನೆಗೆ ರಾಜ್ಯ ಸರ್ಕಾರದ ಗೌರವ

ಶಾಲೆಗೆ ಕಟ್ಟಡವಿಲ್ಲ, ಬಸ್‌ ಸೌಲಭ್ಯವಿಲ್ಲ, ಗುಡ್ಡಗಾಡು ಪ್ರದೇಶ. ಇಂತಹ ಹಿಂದುಳಿದ ಗ್ರಾಮದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಒಂದೇ ಸಂಕಲ್ಪದೊಂದಿಗೆ ಕಳೆದ 18 ವರ್ಷಗಳಿಂದ ದುಡಿದ ಶಿಕ್ಷಕರೊಬ್ಬರ ಶ್ರಮಕ್ಕೆ 2026-27ನೇ ಸಾಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಗೌರವ ಸಿಕ್ಕಿದೆ.

Read Full Story

12:18 PM (IST) Sep 07

ಕೊನೆಗೂ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು; ಗುಡ್ ನ್ಯೂಸ್ ಹಂಚಿಕೊಂಡ ಸಂಸದ...!

ತಿರುಪತಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಭಾರತೀಯ ರೈಲ್ವೆ ಇಲಾಖೆಯು, ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಿದೆ. ಈ ಸಂಬಂಧ ತಿರುಪತಿ ಸಂಸದರು ಗುಡ್‌ ನ್ಯೂಸ್ ಕೊಟ್ಟಿದ್ದಾರೆ.

Read Full Story

12:10 PM (IST) Sep 07

ತೆಲುಗು ಬಿಗ್‌ಬಾಸ್‌ 10ಕ್ಕೆ ಕನ್ನಡದ ಮೂವರು ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ, ಎಲ್ಲಿಯವರು? ಇಲ್ಲಿದೆ ನೋಡಿ

ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್‌ಬಾಸ್‌ ಸೀಸನ್ 10 'ದಶಾವತಾರಂ' ಥೀಮ್‌ನೊಂದಿಗೆ ಆರಂಭವಾಗಿದೆ. ಈ ಬಾರಿ ಕನ್ನಡದ ಮೂವರು ಪ್ರತಿಭೆಗಳಾದ ನಟಿ ಚೈತ್ರಾ ರೈ, ನಟ ಮುಖೇಶ್ ಗೌಡ ಮತ್ತು ಆದಿತ್ ಈಶ್ವರನ್ (ತ್ರಿಗುಣ್) ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ್ದಾರೆ.
Read Full Story

12:06 PM (IST) Sep 07

ಶನಿ ಸಂಚಾರ - ಕಷ್ಟಗಳಿಗೆ ಫುಲ್ ಸ್ಟಾಪ್... ಈ 2 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್!

ಜ್ಯೋತಿಷ್ಯದಲ್ಲಿ ಶನಿ ಸಂಚಾರಕ್ಕೆ ತುಂಬಾನೇ ಮಹತ್ವವಿದೆ. ಸದ್ಯದ ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2026ರ ಶನಿ ಸಂಚಾರದಿಂದ ಎರಡು ರಾಶಿಯವರ ಜೀವನದಲ್ಲಿ ಒಳ್ಳೆಯ ಬದಲಾವಣೆಗಳಾಗಲಿವೆ. ಅವರ ಆರ್ಥಿಕ ಸ್ಥಿತಿ, ಕೆಲಸ, ವ್ಯಾಪಾರ ಹಾಗೂ ಕುಟುಂಬ ಜೀವನದಲ್ಲಿ ಅದೃಷ್ಟ ಕೈಹಿಡಿಯಲಿದೆ.
Read Full Story

11:50 AM (IST) Sep 07

Bigg Boss Kannada - ಕಾವ್ಯಾ ಗೌಡ ಪ್ರಶ್ನೆಯಿಂದ ಸುದೀಪ್ ರಿವೀಲ್ ಮಾಡಿದ್ರು ರಹಸ್ಯ

Kavya Gowda: ಬಿಗ್‌ಬಾಸ್ ಕನ್ನಡ ಸೀಸನ್ 13 ರ ವೇದಿಕೆಯಲ್ಲಿ ಸ್ಪರ್ಧಿ ಕಾವ್ಯಾ ಗೌಡ ಅವರು ಶೋಕೇಸ್‌ನಲ್ಲಿದ್ದ ವಸ್ತುಗಳ ಬಗ್ಗೆ ಪ್ರಶ್ನಿಸಿದಾಗ, ನಿರೂಪಕ ಸುದೀಪ್ ರಹಸ್ಯವೊಂದನ್ನು ಬಹಿರಂಗಪಡಿಸಿದರು.

Read Full Story

11:17 AM (IST) Sep 07

ಭೂಮಿ ಪುತ್ರ ಯೋಗದಿಂದ ಈ 4 ರಾಶಿಗಳಿಗೆ ಆಸ್ತಿ ಭಾಗ್ಯ, ಮನೆ, ಜಾಗ ಖರೀದಿಸುವ ಯೋಗ

ಸೆಪ್ಟೆಂಬರ್ 18 ರಂದು ಮಂಗಳ ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಸಾಗಲಿದೆ. ಇದರಿಂದ 'ಭೂಮಿ-ಪುತ್ರ ಯೋಗ' ಉಂಟಾಗಲಿದ್ದು, ಈ 4 ರಾಶಿಯವರಿಗೆ ಭೂಮಿ, ಮನೆ ಮತ್ತು ಆಸ್ತಿ ಖರೀದಿಸುವ ಭಾಗ್ಯ ಸಿಗಲಿದೆ.

Read Full Story

11:14 AM (IST) Sep 07

ತಿರುಪತಿ ಬಳಿಕ ಮಂತ್ರಾಲಯ ಮಠದ ಮೇಲೆ ಸೈಬರ್ ವಂಚಕರ ಕಣ್ಣು! ಖುದ್ದಾಗಿ ಸುಬುಧೇಂದ್ರ ತೀರ್ಥ ಶ್ರೀಗಳು ಭಕ್ತರಿಗೆ ನೀಡಿದ ಎಚ್ಚರಿಕೆ ಏನು?

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ, ದೇಣಿಗೆ ಮತ್ತು ಪ್ರಸಾದದ ಹೆಸರಿನಲ್ಲಿ ಆನ್‌ಲೈನ್ ವಂಚನೆ ಜಾಲ ಸಕ್ರಿಯವಾಗಿದೆ. ಈ ಬಗ್ಗೆ ಎಚ್ಚರದಿಂದಿರುವಂತೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರಲ್ಲಿ ಮನವಿ ಮಾಡಿದ್ದು, ಮಠದಿಂದ ಯಾವುದೇ ಆನ್‌ಲೈನ್ ಸೇವೆಗಳಿಲ್ಲವೆಂದು ಸ್ಪಷ್ಟನೆ.

Read Full Story

11:10 AM (IST) Sep 07

ಪೋಷಕರೇ ಎಚ್ಚರ... ಫಿಟ್ ಇಲ್ಲದ ನೂರಾರು ಶಾಲಾ ಬಸ್‌ ಓಡುತ್ತಿವೆ..! ಮಕ್ಕಳ ಜೀವನದೊಂದಿಗೆ ಚೆಲ್ಲಾಟ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಶಾಲಾ ಬಸ್‌ಗಳು ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ಇಲ್ಲದೆ ಸಂಚರಿಸುತ್ತಿದ್ದು, ಮಕ್ಕಳ ಸುರಕ್ಷತೆಗೆ ಅಪಾಯವನ್ನುಂಟುಮಾಡಿದೆ. ಸಾರಿಗೆ ಇಲಾಖೆ ನೋಟಿಸ್ ನೀಡಿದ್ದರೂ, ನಿಯಮ ಉಲ್ಲಂಘಿಸಿ ಈ ವಾಹನಗಳು ಓಡಾಟ ಮುಂದುವರಿಸಿವೆ.
Read Full Story

11:09 AM (IST) Sep 07

ಸ್ಯಾಟಲೈಟ್ ಫೋಟೋದಾಗ ಹಸಿರು ಕಾಣಿಸ್ತೈತಿ ಅಂತಾ ಬರಪೀಡಿತ ಪಟ್ಯಾಗ ಕಲ್ಬುರ್ಗಿ ಕೈಬಿಟ್ರಲ್ಲೋ ಸರ್ಕಾರದವ್ರು!

ಸ್ಯಾಟಲೈಟ್‌ನಲ್ಲಿ ಹಸಿರು ಕಂಡಿದ್ದೇ ತಪ್ಪಾಯ್ತಾ?: ಬರ ಪಟ್ಟಿಯಿಂದ ಕಲಬುರಗಿ ಹೊರಗಿಟ್ಟ ಸರ್ಕಾರ! ಶೇ.50ಕ್ಕೂ ಹೆಚ್ಚು ಮಳೆ ಕೊರತೆಯಿದ್ದರೂ ಸ್ಯಾಟಲೈಟ್ ಫೋಟೋದಲ್ಲಿ ಹಸಿರು ಕಂಡಿದೆ ಎಂದು ಕಲಬುರಗಿಯನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ. ತಂತ್ರಜ್ಞಾನವೇ ಕೈಕೊಟ್ಟಿತಾ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

10:59 AM (IST) Sep 07

ಕರ್ನಾಟಕದಲ್ಲಿ ಟ್ಯಾಕ್ಸಿಗಳ ದರ ಸುಲಿಗೆಗೆ ಬ್ರೇಕ್, ಮೀಟರ್ ಕಡ್ಡಾಯಕ್ಕೆ ಮುಂದಾದ ಸಾರಿಗೆ ಇಲಾಖೆ

ಬೆಂಗಳೂರಿನಲ್ಲಿ ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಟ್ಯಾಕ್ಸಿ ಮಾಲೀಕರು ನಡೆಸುತ್ತಿದ್ದ ಮನಸೋಇಚ್ಛೆ ದರ ವಸೂಲಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಫೇರ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ನಿಯಮವು ಹೊಸ ವಾಹನ ನೋಂದಣಿ ಮತ್ತು ಹಳೆಯ ವಾಹನಗಳ ಎಫ್‌ಸಿ ನವೀಕರಣಕ್ಕೂ ಅನ್ವಯವಾಗಲಿದೆ.
Read Full Story

More Trending News