ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ (ಬಿಎಂಐಸಿ) ಭೂಮಿ ಕಳೆದುಕೊಂಡಿರುವ ರೈತರಿಗೆ ನಿವೇಶನಗಳ ಹಂಚಿಕೆ ಸಂಬಂಧ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರದ ಬಗ್ಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ 1,453 ನಿವೇಶನಗಳ ಹಂಚಿಕೆ ಸಂಬಂಧ ನೈಸ್ ಸಂಸ್ಥೆಗೆ ಅನುಮತಿ ನೀಡುವ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪುಗಳ ಸಹಮತವಿದೆ ಎಂದು ಸರ್ಕಾರ ಜನತೆಗೆ ತಪ್ಪು ಮಾಹಿತಿ ನೀಡಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ನಾವು ಏನೇ ಮಾಡಿದರು ಕಾನೂನಿನ ಚೌಕಟ್ಟಿನಲ್ಲಿ, ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಂಡೇ ಮಾಡಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಬೇಕಾದರೆ ಕೋರ್ಟ್ ಇದೆ, ಕಾನೂನು ಇದೆ, ಹೋರಾಟ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹಿಂದಿನವರು ಏನು ಅಗ್ರಿಮೆಂಟ್‌ಗೆ ಸೈನ್ ಹಾಕಿದ್ದಾರೆ, ಆ ಹಾದಿಯಲ್ಲೇ ಎಲ್ಲವು ಮುಂದಕ್ಕೆ ನಡೆದುಕೊಂಡು ಬಂದಿದೆ. ಯೋಜನೆಯಲ್ಲಿ ಆಸ್ತಿ ಕಳೆದುಕೊಂಡವರ ರಕ್ಷಣೆ ಮಾಡಬೇಕಲ್ವಾ? ಎಂದು ಪ್ರಶ್ನಿಸಿದರು.
10:46 PM (IST) Sep 08
ಯಶವಂತಪುರ ಎಪಿಎಂಸಿಗೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ರೈತರು ಮತ್ತು ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಮಾರುಕಟ್ಟೆಯ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದರು. ಶ್ರಮಿಕರ ಜೊತೆ ಕುಳಿತು ಇಡ್ಲಿ-ಕಾಫಿ ಸವಿದ ಸಿಎಂ, ಹೋಟೆಲ್ ಬಿಲ್ ಪಾವತಿಸಿ ಅಲ್ಲಿನ ಉಳಿದ ಗ್ರಾಹಕರಿಗೂ ಉಚಿತ ಉಪಹಾರದ ವ್ಯವಸ್ಥೆ ಮಾಡಿ ಅಚ್ಚರಿ ಮೂಡಿಸಿದರು.
10:21 PM (IST) Sep 08
ಶಿಕಾರಿಪುರದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರ ನಡುವೆ ಘೋಷಣೆಗಳ ಪೈಪೋಟಿ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಪರವಾಗಿ 'ಮುಂದಿನ ಸಿಎಂ' ಘೋಷಣೆ ಕೂಗಿದ್ದು, ನಂತರ ಇಬ್ಬರೂ ನಾಯಕರು ಜಂಟಿಯಾಗಿ ಬಂದು ಕಾರ್ಯಕರ್ತರನ್ನು ಶಾಂತಗೊಳಿಸಿದರು.
10:04 PM (IST) Sep 08
ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ 2026-27ನೇ ಸಾಲಿನ ಅನುದಾನ ಹಂಚಿಕೆ ಮತ್ತು ಬಳಕೆ ಕುರಿತು ಕೆಲವು ಮಹತ್ವದ ಶಿಫಾರಸುಗಳನ್ನು ರಾಜ್ಯಪರಿಷತ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು
09:53 PM (IST) Sep 08
ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಗಳಿಗಾಗಿ ಬಿಸಿಸಿಐ, ಚಾಟ್‌ಜಿಪಿಟಿ ಸೇರಿದಂತೆ ಮೂರು ಕಂಪನಿಗಳ ಜೊತೆ 130 ಕೋಟಿ ರೂ.ಗೂ ಅಧಿಕ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಹಿಂದಿನ ಅವಧಿಗಿಂತ ಶೇ. 44 ರಷ್ಟು ಹೆಚ್ಚಿನ ಹಣ ಬಿಸಿಸಿಐ ಖಜಾನೆಗೆ ಸೇರಲಿದ್ದು, ಭಾರತೀಯ ಕ್ರಿಕೆಟ್‌ನ ವಾಣಿಜ್ಯ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ.
09:45 PM (IST) Sep 08
ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಭಾನುವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಲಕ್ಕವಳ್ಳಿ ಅಣೆಕಟ್ಟಿನಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
09:29 PM (IST) Sep 08
ಕೇವಲ ಸಿಹಿ ತಿಂದರೆ ಹೊಟ್ಟೆಯಲ್ಲಿ ಹುಳುಗಳಾಗುತ್ತವೆ ಎನ್ನುವುದು ತಪ್ಪು ಕಲ್ಪನೆ. ನೈರ್ಮಲ್ಯದ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ. ಮಗುವಿನಲ್ಲಿ ಮೇಲೆ ತಿಳಿಸಿದ ಲಕ್ಷಣಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರನ್ನು ಸಂಪರ್ಕಿಸಿ.
09:14 PM (IST) Sep 08
ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಫ್ರಾನ್ಸ್ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು Thales, Somfy, Mecachrome, SevenCia ಮತ್ತು Danone ಕಂಪನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
09:08 PM (IST) Sep 08
ಭಾರತ ನವೀಕರಿಸಬಹುದಾದ ಇಂಧನ (BRE) ಶೃಂಗಸಭೆ ಮತ್ತು ಎಕ್ಸ್‌ಪೋ 2026ರ ಭಾಗವಾಗಿ ಬೆಂಗಳೂರಿನಲ್ಲಿ ಐದನೇ ಪ್ರಾದೇಶಿಕ ರೋಡ್‌ಶೋ ನಡೆದಿದೆ. ಇಂಧನ ಸಾಮರ್ಥ್ಯ ಸೇರ್ಪಡೆ, ₹7.5 ಲಕ್ಷ ಕೋಟಿ ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿ ಗುರಿಯೊಂದಿಗೆ ಕರ್ನಾಟಕ ಹೆಜ್ಜೆ ಇಟ್ಟಿದೆ.
09:01 PM (IST) Sep 08
ರಾಜ್ಯದಲ್ಲಿ ಬರಗಾಲ ಇದ್ದರೂ ವಿದ್ಯುತ್ ಸಮಸ್ಯೆ ತಲೆದೋರದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅಗತ್ಯ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
08:46 PM (IST) Sep 08
ಕೇರಳದ ಪಾಲಕ್ಕಾಡ್ ಕಪಿಮುಷ್ಠಿಯಲ್ಲಿದ್ದ ಮಂಗಳೂರು ರೈಲ್ವೇಯನ್ನು ಮೈಸೂರಿಗೆ ಡಿವಿಶನ್‌ಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಆಡಳಿತಾತ್ಮಕ ವರ್ಗಾವಣೆಯಿಂದ ಇದೀಗ ಪ್ರತಿ ದಿನ 100ಕ್ಕೂ ಹೆಚ್ಚು ರೈಲುಗಳಿಗೆ ಮಂಗಳೂರು ನಿಲ್ದಾಣವಾಗಿದೆ.
08:36 PM (IST) Sep 08
ಬೆಂಗಳೂರಿನ ಬೈಕ್, ಸ್ಕೂಟರ್ ಸೇರಿದಂತೆ ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್ ಹೊರಬಂದಿದೆ. ಬೆಂಗಳೂರಿನ ಕೆಲ ಫ್ಲೈ ಓವರ್ ಮೇಲೆ ಬೈಕ್ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಮಹತ್ವದ ಬದಲಾವಣೆ ಮಾಡಲಾಗಿದೆ.
08:21 PM (IST) Sep 08
ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡುವುದಾಗಿ ಬೆದರಿಕೆ ಹಾಕಿದ ಸಚಿವ ಬಸವರಾಜ ರಾಯರೆಡ್ಡಿ, ತಹಶೀಲ್ದಾರ್ ತಮ್ಮ ಪಿಆರ್‌ಒ ಆಗಿ ಕೆಲಸ ಮಾಡಲಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿ ಡಿಜಿಟಲ್ ಸಿಗ್ನೇಚರ್ ಬಳಸಿ ಪತ್ರ ವಿಲೇವಾರಿ ಮಾಡುವಂತೆ ಪಿಎಗೆ ಸೂಚಿಸಿರುವ ಸಚಿವರು, ಅಧಿಕಾರಿಗಳ ವಿರುದ್ಧ ಅತಿರೇಕದ ಮಾತುಗಳನ್ನಾಡಿದ್ದಾರೆ.
07:51 PM (IST) Sep 08
ಚಿಯಾನ್ ವಿಕ್ರಮ್ ತಮ್ಮ ಜೊತೆ ಕೆಲಸ ಮಾಡಿದ ನಾಯಕಿಯರ ಬಗ್ಗೆ ಮಾತನಾಡುತ್ತಾ, ದಿವಂಗತ ನಟಿ ಸೌಂದರ್ಯ ಅವರನ್ನು ಅತ್ಯಂತ ಸುಂದರ ನಟಿ ಎಂದು ಕರೆದಿದ್ದರು. ಸೌಂದರ್ಯ ಅವರನ್ನು ಮದುವೆಯಾಗಬೇಕು ಅನಿಸುವಷ್ಟು ಸುಂದರ ಹಾಗೂ ಅಮಾಯಕ ವ್ಯಕ್ತಿತ್ವ ಹೊಂದಿದ್ದರು.
07:09 PM (IST) Sep 08
ದರ್ಶನ್ ಅವರ ಖುದ್ದೂ ಹಾಜರಾತಿ ಅರ್ಜಿಯನ್ನು ಸತ್ರ ನ್ಯಾಯಾಲಯ ವಜಾ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವುದಾಗಿ ವಕೀಲ ನಾಸಿರ್ ಅಲಿ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾಂತ್ರಿಕ ದೋಷಗಳಿವೆ ಎಂದು ವಾದಿಸಿರುವ ಅವರು, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಿದ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ
06:54 PM (IST) Sep 08
'ಕೆಚ್ಚೆದೆಯ ಕನ್ನಡತಿ ಅಕ್ಕ' ಖ್ಯಾತಿಯ ಅನು, ಮಹಿಳಾ ಸಮಾವೇಶವೊಂದರಲ್ಲಿ ತಮ್ಮನ್ನು ಗುರುತಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಕದಲ್ಲಿದ್ದ ರೀಲ್ಸ್ ಕಲಾವಿದರನ್ನು ಹೊಗಳಿದ ಗಣ್ಯರು, ಸಮಾಜಕ್ಕಾಗಿ ದುಡಿಯುತ್ತಿರುವ ತಮ್ಮನ್ನು ಕಡೆಗಣಿಸಿದ್ದು ನೋವು ತಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.
06:20 PM (IST) Sep 08
ಸಿಂಫನಿ ಲಿಮಿಟೆಡ್ ಸ್ಥಾಪಕ ಅಚಲ್ ಅನಿಲ್ ಬಕೇರಿ ಅವರು ತಮ್ಮ ಉದ್ಯೋಗಿಗಳಿಗೆ 20 ಕೋಟಿ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದು, ಇದರಿಂದ ಷೇರು ಬೆಲೆ ಶೇ. 13 ರಷ್ಟು ಏರಿಕೆಯಾಗಿದೆ. ಕೂಲರ್ ಜೊತೆಗೆ ಎಸಿ ಮತ್ತು ಫ್ಯಾನ್ ಮಾರುಕಟ್ಟೆಗೂ ಪ್ರವೇಶಿಸಲು ಕಂಪನಿ ಸಜ್ಜಾಗಿದ್ದು, ಇದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ.
06:10 PM (IST) Sep 08
06:04 PM (IST) Sep 08
ನಟಿ ಪ್ರೇಮಾ ತಮ್ಮ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಹಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಇದೇ ವೇಳೆ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಉಪೇಂದ್ರ ಜೊತೆ ಪ್ರೀತಿಯಲ್ಲಿದ್ದರು ಎಂಬ ಹಳೆಯ ರೂಮರ್ಸ್‌ಗೂ ಸ್ಪಷ್ಟನೆ ನೀಡಿದ್ದಾರೆ.
05:40 PM (IST) Sep 08
ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಬರೋಬ್ಬರಿ 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದ್ದು, ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ‘ಟಾಕ್ಸಿಕ್’ ಫಲಿತಾಂಶ, ಸಿನಿಮಾ ಬಿಸಿನೆಸ್ ಹಾಗೂ ಸರಿಯಾದ ಸಮಯಕ್ಕಾಗಿ ಮೇಕರ್ಸ್ ಕಾಯುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
05:30 PM (IST) Sep 08
05:17 PM (IST) Sep 08
ಮಮಿತಾ ಬೈಜು, ಕಯಾದು ಲೋಹರ್, ಭಾಗ್ಯಶ್ರೀ ಬೋರ್ಸೆ, ರುಕ್ಮಿಣಿ ವಸಂತ್ ಹಾಗೂ ಪ್ರೀತಿ ಮುಕುಂದನ್ ಸದ್ಯ ಸೌತ್ ಇಂಡಿಯನ್ ಸಿನಿಮಾದಲ್ಲಿ ಸಖತ್ ಡಿಮ್ಯಾಂಡ್‌ನಲ್ಲಿರುವ ಯಂಗ್ ಹೀರೋಯಿನ್ಸ್. ಈ ಐವರು ನಟಿಯರ ಸಿನಿ ಜರ್ನಿ ಇದೀಗ ಭಾರೀ ಗಮನ ಸೆಳೆಯುತ್ತಿದೆ.
05:12 PM (IST) Sep 08
ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳು ಪ್ರವೇಶಿಸಿದ್ದು, ಡೈಮಂಡ್ ಹುಡುಕುವ ಟಾಸ್ಕ್ ಶುರುವಾಗಿದೆ. ಡೈಮಂಡ್ ಹೊಂದಿರುವ ಸ್ಪರ್ಧಿ ನೇರವಾಗಿ ನಾಮಿನೇಟ್ ಆಗಲಿದ್ದು, ಎಲ್ಲರ ಅನುಮಾನ ಆಸಿಯಾ ಮೇಲಿದೆ. ಇತ್ತ ವಿಮಾನದಲ್ಲಿರುವ ಸ್ಪರ್ಧಿಗಳ ನಡುವೆ ಸ್ನಾನಕ್ಕಾಗಿ ಜಗಳ ನಡೆದಿದೆ.
05:04 PM (IST) Sep 08
ಬೆಂಗಳೂರಿನ ರಾಜಾನುಕುಂಟೆಯ ನಿರ್ಜನ ಪ್ರದೇಶದಲ್ಲಿ ಪಾಪಿಗಳು ಬಿಟ್ಟು ಹೋಗಿದ್ದ ನವಜಾತ ಹೆಣ್ಣು ಮಗುವನ್ನು ವಾಕಿಂಗ್ ಹೋಗುತ್ತಿದ್ದ ಮಂಜುನಾಥ್ ಎಂಬುವವರು ಸಕಾಲದಲ್ಲಿ ರಕ್ಷಿಸಿದ್ದಾರೆ. ಸದ್ಯ ಮಗು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದ್ದು, ಮಗುವನ್ನು ಆಟೋದಲ್ಲಿ ಬಂದು ಬಿಟ್ಟು ಹೋದ ಪೋಷಕರ ಪತ್ತೆಗಾಗಿ ರಾಜಾನುಕುಂಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
04:52 PM (IST) Sep 08
04:49 PM (IST) Sep 08
‘ಮಾಲ್ಗುಡಿ ಡೇಸ್’ ಅಭಿಮಾನಿಗಳಿಗೆ ಸಿಹಿಸುದ್ದಿಯ ಸುಳಿವು ಸಿಕ್ಕಿದೆ. 40 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಆಗುಂಬೆಗೆ ಭೇಟಿ ನೀಡಿ, ‘ಮಾಲ್ಗುಡಿಯಿಂದ ಮತ್ತೊಂದು ಕಥೆ ಮತ್ತೆ ಬರುತ್ತಿದೆ’ ಎಂದು ಪೋಸ್ಟ್ ಮಾಡಿದ್ದಾರೆ.
04:27 PM (IST) Sep 08
ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಮೆಗಾ ಆಡಿಷನ್ ಶುರುವಾಗಿದೆ. ಅಮ್ಮಂದಿರ ಅದ್ಭುತ ಡ್ಯಾನ್ಸ್, ಭಾವುಕ ಕತೆಗಳು ಹಾಗೂ ಕ್ಯಾನ್ಸರ್ ಗೆದ್ದ ತಾಯಿಯ ವಿಶೇಷ ಪ್ರದರ್ಶನ ಗಮನ ಸೆಳೆಯುತ್ತಿದೆ.
04:15 PM (IST) Sep 08
ನಿರಂತರ ಕೆಲಸದ ಒತ್ತಡ ಮತ್ತು ಓಡಾಟದ ದಣಿವಿನಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಇಂದು ವಿಧಾನಸೌಧದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣವೇ ವೈದ್ಯರು ತಪಾಸಣೆ ನಡೆಸಿದ ಬಳಿಕ ಡಿ.ಕೆ.ಶಿ ಅವರ ಆರೋಗ್ಯ ಚೇತರಿಸಿಕೊಂಡಿದ್ದು, ಸದ್ಯ ಬಿಪಿ ಸಹಜ ಸ್ಥಿತಿಗೆ ಮರಳಿದೆ.
03:54 PM (IST) Sep 08
ಬಿಗ್‌ಬಾಸ್ ಸೀಸನ್ 13ರ ಮನೆ ಎರಡು ತಂಡಗಳಾಗಿ ವಿಂಗಡನೆಯಾಗಿದ್ದು, ವಿಮಾನದಲ್ಲಿರುವ ತಂಡವು ಮನೆಯೊಳಗಿನ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡಲು ಆರಂಭಿಸಿದೆ. ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಈ ಗಾಸಿಪ್ ನಡೆದಿದೆ.
03:40 PM (IST) Sep 08
‘ಸ್ಪಾರ್ಕ್’ ಸಿನಿಮಾದಲ್ಲಿ ಲಾಯರ್ ವೈದೇಹಿ ಪಾತ್ರದಲ್ಲಿ ನಟಿಸಿರುವ ಭಾವನಾ ಮೆನನ್, ತಮ್ಮ ವಿಭಿನ್ನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ನಾಯಕ ನಿರಂಜನ್ ಸುಧೀಂದ್ರ ಅವರ ನಟನಾ, ಡ್ಯಾನ್ಸ್ ಮತ್ತು ಫೈಟ್ ಪ್ರತಿಭೆಯನ್ನು ನಟಿ ಮೆಚ್ಚಿಕೊಂಡಿದ್ದಾರೆ.
03:13 PM (IST) Sep 08
KGF 3 ಸಿನಿಮಾ ಖಚಿತವಾಗಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಯಶ್ ನಟನೆಯ ಮೂರನೇ ಭಾಗದ ಕಥೆ ಮತ್ತು ಚಿತ್ರಕಥೆ ಈಗಾಗಲೇ ಸಿದ್ಧವಾಗಿದ್ದು, ಕೆಲವು ವಿಚಾರಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
02:51 PM (IST) Sep 08
01:10 PM (IST) Sep 08
01:01 PM (IST) Sep 08
12:56 PM (IST) Sep 08
12:45 PM (IST) Sep 08
73 ವರ್ಷದ ಶಿವಗಂಗಮ್ಮ ಅಜ್ಜಿ, ಖಾನಾವಳಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಯಸ್ಸನ್ನು ಮೀರಿ ದುಡಿಯುವ ಇವರ ಹೋಟೆಲ್, ರುಚಿಕರವಾದ ಜೋಳದ ರೊಟ್ಟಿಗೆ ಪ್ರಸಿದ್ಧವಾಗಿದ್ದು, ಕಾಯಕವೇ ಕೈಲಾಸವೆಂದು ನಂಬಿ ತಮ್ಮ ಕೊನೆಯುಸಿರಿನವರೆಗೂ ದುಡಿಯಬೇಕೆಂಬ ಹಂಬಲ ಹೊಂದಿದ್ದಾರೆ.
12:35 PM (IST) Sep 08
12:12 PM (IST) Sep 08
12:06 PM (IST) Sep 08
ಒಂದು ಕಡೆ ಸಾಲ, ಇನ್ನೊಂದು ಕಡೆ ಕೈಕೊಟ್ಟ ಮಳೆ. ಕಣ್ಮುಂದೆ ಒಣಗಿ ನಿಂತ ಬೆಳೆ.. ಇಂಥ ಪರಿಸ್ಥಿತಿಯಲ್ಲಿ ಸಾಲಗಾರರ ಸಾಲ ಹೇಗೆ ತೀರಿಸಲಿ ಎಂದು ಮನನೊಂದು ದುಡುಕಿನ ನಿರ್ಧಾರಕ್ಕೆ ಬಂದು ಯಾದಗಿರಿ ಜಿಲ್ಲೆಯ ಅನ್ನದಾತ ದುಡುಕಿನ ನಿರ್ಧಾರದಿಂದ ಜೀವ ಕಳೆದುಕೊಂಡ ಘಟನೆ ನಡೆದಿದೆ.
11:50 AM (IST) Sep 08
11:10 AM (IST) Sep 08