ಮಂಡ್ಯ/ಮದ್ದೂರು: ಭಾನುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯ ಕೋಮಿನ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಘಟನೆ ಖಂಡಿಸಿ ಬಿಜೆಪಿ-ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮೆರವಣಿಗೆ ಮೇಲೆ ಎರಡು ಬಾರಿ ಕಲ್ಲು ತೂರಾಟ, ಮಾರಕಾಸ್ತ್ರ ಝಳಪಿಸಿದ ಘಟನೆಗಳು ನಡೆದಿವೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರು ಸೇರಿ 6 ಮಂದಿ ಗಾಯಗೊಂಡಿದ್ದಾರೆ. ಘಟನೆ ಖಂಡಿಸಿ ಇಂದು ಹಿಂದೂಪರ ಸಂಘಟನೆಗಳು ಇಂದು ಮದ್ದೂರು ಬಂದ್‌ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಇದೇ ವೇಳೆ, ಬುಧವಾರ ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಆಯೋಜಿಸಲಾಗಿದ್ದು, ರಾಜ್ಯ ಬಿಜೆಪಿ ನಾಯಕರ ನಿಯೋಗ ಇದರಲ್ಲಿ ಪಾಲ್ಗೊಳ್ಳಲಿದೆ.

11:24 PM (IST) Sep 09
2025ರಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 5 ತಮಿಳು ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದೆ. ಯಾವ್ಯಾವ ಸಿನಿಮಾಗಳು ಈ ಪಟ್ಟಿಯಲ್ಲಿವೆ ಅಂತ ನೋಡೋಣ.
11:19 PM (IST) Sep 09
ನೇಪಾಳದ ಪರಿಸ್ಥಿತಿ ಕೈಮೀರಿದೆ. ಪ್ರಧಾನಿ ರಾಜೀನಾಮೆ ನೀಡಿದ್ದರೆ, ಹಲವು ಮಾಜಿ ಪ್ರಧಾನಿಗಳು ಮೇಲೆ ದಾಳಿಯಾಗಿದೆ. ನೇಪಾಳ ಸೇನೆ ರಂಗ ಪ್ರವೇಶ ಮಾಡಿದ್ದು, ಶಾಂತಿ ಕಾಪಾಡಲು ಮನವಿ ಮಾಡಿದೆ. ಇದರ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ನೇಪಾಳದಲ್ಲಿ ಮತ್ತೆ ರಾಜ ಆಡಳಿತ ಬರುತ್ತಾ?
11:00 PM (IST) Sep 09
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಬ್ರಿಟಿಷ್ ಕಾಲದ ಸಾಹಿತಿ ಜಾನ್ ಗ್ಯಾರೆಟ್ ಪತ್ನಿ ಸೋಫಿಯಾ ಗ್ಯಾರೆಟ್ ಸಮಾಧಿಯನ್ನು ಇಂಗ್ಲೆಂಡಿನಿಂದ ಬಂದ ಅವರ ವಂಶಸ್ಥರು ಪತ್ತೆ ಮಾಡಿದ್ದಾರೆ. ದೇಶ, ಕುಟುಂಬ ಬಿಟ್ಟು ಭಾರತಕ್ಕೆ ಬಂದ ಪೊರ್ವಜರ ಸಮಾಧಿ ನೋಡಿ ಭಾವುಕರಾಗಿದ್ದು, ಅವರಿಗೆ ಗೌರವ ಸಲ್ಲಿಸಿದ್ದಾರೆ.
10:37 PM (IST) Sep 09
ನೇಪಾಳದಲ್ಲಿ ಜೆನ್ ಜೆಡ್ ಸಮುದಾಯದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಆಕ್ರೋಶವೆಲ್ಲಾ ಅಲ್ಲಿನ ರಾಜಕಾರಣಿಗಳತ್ತ ತಿರುಗಿದೆ. ಕೈಗೆ ಸಿಕ್ಕ ತಮ್ಮ ದೇಶದ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಪ್ರತಿಭಟನಾಕಾರರು ಥಳಿಸಿದ್ದಾರೆ.
10:32 PM (IST) Sep 09
ನೇಪಾಳ ಪರಧಾನಿ ರಾಜೀನಾಮೆ ಸೇರಿದಂತೆ ಕಳೆದ ಮೂರೇ ದಿನದಲ್ಲಿ ಮೂವರು ಪ್ರಧಾನಿಗಳು ಸ್ಥಾನ ಕಳದೆುಕೊಂಡಿದ್ದಾರೆ. ಹ್ಯಾಟ್ರಿಕ್ ಪ್ರಧಾನಿಗಳ ರಾಜೀನಾಮೆ ಹಿಂದಿನ ಕಾರಣವೇನು?
10:32 PM (IST) Sep 09
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಬಂಧನ ಮಾಡಲಾಗಿದೆ. 250 ಕೋಟಿ ರೂ. ಬೆಲೆಬಾಳುವ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ದಾಳಿ ನಡೆಸಿತ್ತು. ಈ ವೇಲೆ ಸತೀಶ್ ಸೈಲ್ ಮನೆಯಲ್ಲಿ 1.41 ಕೋಟಿ ರೂ. ನಗದು ಮತ್ತು 6.75 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
09:22 PM (IST) Sep 09
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಅವರ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಇಡಿ ದಾಳಿ ಚಳ್ಳಕೆರೆಯಲ್ಲಿ ದಾಳಿ ನಡೆಸಿ ₹24 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಇದೀಗ, ಒಟ್ಟು ವಶಪಡಿಸಿಕೊಂಡ ಆಸ್ತಿ ₹100 ಕೋಟಿ ದಾಟಿದೆ. ವೀರೇಂದ್ರ ಇ.ಡಿ. ಕಸ್ಟಡಿಯಲ್ಲಿದ್ದಾರೆ.
08:58 PM (IST) Sep 09
ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ಭರ್ಜರಿ ಬಹುಮತಗಳೊಂದಿಗೆ ಆಯ್ಕೆಯಾಗಿರುವ ಸಿಪಿ ರಾಧಾಕೃಷ್ಣನ್ ಯಾರು? ಇವರ ರಾಜಕೀಯ ಜೀವನ, ಸಾಮಾಜಿಕ ಸೇವೆ ಕುರಿತು ರೋಚಕ ಮಾಹಿತಿ ಇಲ್ಲಿದೆ.
08:28 PM (IST) Sep 09
08:06 PM (IST) Sep 09
ಬೀದರ್‌ನಲ್ಲಿ ಸಾಲಬಾಧೆ ಹಾಗೂ ಆಸ್ತಿ ವಿವಾದದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ತಂದೆ ಮತ್ತು ಮೂರು ಮಕ್ಕಳು ಮೃತಪಟ್ಟರೆ, ತಾಯಿ ಮತ್ತು ಒಂದು ಮಗುವನ್ನು ರಕ್ಷಿಸಲಾಗಿದೆ. ಘಟನೆ ಭಾಲ್ಕಿ ತಾಲೂಕಿನ ಮರೂರಿನಲ್ಲಿ ನಡೆದಿದೆ.
07:54 PM (IST) Sep 09
07:35 PM (IST) Sep 09
ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಸಂಜೆ 6 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿದೆ.ಇದೀಗ ಫಲಿತಾಂಶ ಘೋಷಣೆಯಾಗಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಗೆಲುವು ಕಂಡಿದ್ದಾರೆ.
07:27 PM (IST) Sep 09
ನೇಪಾಳದ ಪ್ರತಿಭಟನೆ ಹಾಗೂ ಹಿಂಸಾಚಾರ ಕೈಮೀರಿದೆ. ಪ್ರತಿಭಟನಕಾರರು ಸಿಕ್ಕ ಸಿಕ್ಕ ಕಡೆ ಬೆಂಕಿ ಹಚುತ್ತಿದ್ದಾರೆ. ನೇಪಾಳ ಮಾಜಿ ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಮಾಜಿ ಪ್ರಧಾನಿ ಪತ್ನಿ ಜೀವಂತ ದಹನವಾದ ದಾರುಣ ಘಟನೆ ನಡೆದಿದೆ.
07:03 PM (IST) Sep 09
ಬೆಂಗಳೂರಿನಲ್ಲಿ ಸೆಪ್ಟೆಂಬರ್ 15 ರಿಂದ 17ರವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಒಟ್ಟು 3 ದಿನಗಳ ಕಾಲ ಪಂಪಿಂಗ್ ಸ್ಟೇಷನ್‌ಗಳ ನಿರ್ವಹಣಾ ಕಾರ್ಯಗಳಿಂದಾಗಿ ಈ ಅವಧಿಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಡಲು ಬೆಂಗಳೂರು ಜಲಮಂಡಳಿ ಸೂಚಿಸಿದೆ.
06:53 PM (IST) Sep 09
ರಾಜ್ಯದಲ್ಲಿ ನಡೆದ ಉದಯಗಿರಿ ಗಲಭೆ, ನಾಗಮಂಗಲ ಕೋಮುಗಲಭೆ, ಮದ್ದೂರು ಗಣೇಶ ಮೆರವಣಿಗೆ ಗಲಾಟೆ ಸೇರಿದಂತೆ ಹಲವು ಘಟನೆಗಳು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂಬ ಆರೋಪಕ್ಕೆ ಗುರಿಮಾಡಿವೆ. ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿವೆ.
05:44 PM (IST) Sep 09
05:26 PM (IST) Sep 09
05:26 PM (IST) Sep 09
ನಟಿ ಐಶ್ವರ್ಯ ರೈ ದಿಢೀರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಕೂಡ ಐಶ್ವರ್ಯ ರೈ ಅರ್ಜಿ ವಿಚಾರಣೆ ನಡೆಸಿದೆ. ಅಷ್ಟಕ್ಕೂ ಐಶ್ವರ್ಯ ರೈ ಕೋರ್ಟ್ ಮೆಟ್ಟಿಲು ಹತ್ತಿದ್ದು ಯಾಕೆ?
05:19 PM (IST) Sep 09
05:09 PM (IST) Sep 09
04:58 PM (IST) Sep 09
ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಬೆಂಕಿ ಹಾಕುವ ಕೆಲಸವನ್ನು ಕೆಲ ಶಕ್ತಿಗಳು ಮಾಡುತ್ತಿವೆ ಎಂದು ಅವರು ಆಪಾದಿಸಿದರು.
04:48 PM (IST) Sep 09
04:43 PM (IST) Sep 09
ಶ್ರೀಕೃಷ್ಣ ಹಾಗೂ ರಾಧಾ ದೈವಿಕ ಪ್ರೇಮದಿಂದ ಪ್ರೇರಿತವಾಗಿರುವ ಅತ್ಯಮ್ಯೂಲ್ಯ ವಜ್ರ ಹಾಗೂ ಅಮೂಲ್ಯ ರತ್ನಗಳಿಂದ ತಯಾರಿಸಿರುವ ಭೀಮ ರಾಸ ಲೀಲಾ ಕಲೆಕ್ಷನ್ ಬಿಡುಗಡೆಯಾಗಿದೆ.
04:34 PM (IST) Sep 09
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಮುಂದಿನ ಮುಖ್ಯಮಂತ್ರಿ ತಾವಾದರೆ ಮೂರು ಗ್ಯಾರೆಂಟಿ ನೀಡಿದ್ದಾರೆ. ಅವರು ಹೇಳಿದ್ದೇನು ಕೇಳಿ...
04:11 PM (IST) Sep 09
03:52 PM (IST) Sep 09
ಜೆನ್‌ಜಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ನೇಪಾಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ, ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆ. ಇತ್ತ ಪ್ರತಿಭಟನಕಾರರು ಪ್ರಧಾನಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಶ್ರೀಲಂಕಾ, ಬಾಂಗ್ಲಾದೇಶ ಬಳಿಕ ನೇಪಾಳದಲ್ಲೂ ಈ ಪರಿಸ್ಥಿತಿ ಯಾಕೆ?
03:43 PM (IST) Sep 09
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ ಮತ್ತು ಶರತ್ ಮದುವೆಯಾಗಿ, ಹಿತಾ ಅಪಘಾತದಲ್ಲಿ ಸಾವನ್ನಪ್ಪಿದಂತೆ ತೋರಿಸಲಾಗಿದೆ. ಹಿತಾಳ ಹುಟ್ಟಿನ ರಹಸ್ಯ ಬೇರೆಯದ್ದೇ ಇದ್ದು, ಅವಳು ಕೂಡ ಆತ್ಮವಾಗಿ ಬರುವ ಸೂಚನೆ ಇದೆ. ಏನಿದು ಟ್ವಿಸ್ಟ್?
03:41 PM (IST) Sep 09
ಚಾಮರಾಜನಗರದ ಬೊಮ್ಮಲಾಪುರದಲ್ಲಿ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಬೇಸತ್ತ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಕೂಡಿಹಾಕಿ ಪ್ರತಿಭಟನೆ ನಡೆಸಿದ್ದಾರೆ.
03:13 PM (IST) Sep 09
02:38 PM (IST) Sep 09
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಬೃಹತ್ ದಾಳಿಯಲ್ಲಿ ಇಬ್ಬರು ವಿದೇಶಿ ಪೆಡ್ಲರ್‌ಗಳು ಸೇರಿದಂತೆ ಹಲವು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ, ₹1.5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಡ್ಜ್‌ವೊಂದರಲ್ಲಿ ಪಾರ್ಟಿಗೆ ವ್ಯವಸ್ಥೆ ಮಾಡಲಾಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
02:33 PM (IST) Sep 09
ದಸರಾ ಉತ್ಸವದ ಉದ್ಘಾಟನೆಗೆ ಸಂಬಂಧಿಸಿದಂತೆ ಇದಾಗಲೇ ವಾದ-ವಿವಾದ-ಪ್ರತಿವಾದಗಳು ಜೋರಾಗಿಯೇ ನಡೆಯುತ್ತಿದೆ. ಇದರ ವಿಚಾರ ಹೈಕೋರ್ಟ್ಗೂ ಹೋಗಿದೆ. ಇದರ ನಡುವೆಯೇ ನಟ ಅವಿನಾಶ್ ಹೇಳಿದ್ದೇನು?
12:36 PM (IST) Sep 09
12:31 PM (IST) Sep 09
ಭಾರತೀಯರಿಗೆ ಉದ್ಯೋಗವು ಕೇವಲ ಸಂಬಳಕ್ಕಾಗಿ ಅಲ್ಲ, ಗುರುತಿಸುವಿಕೆ, ಭದ್ರತೆ ಮತ್ತು ಸೇರಿದವರ ಭಾವನೆಗಾಗಿಯೂ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ.
12:18 PM (IST) Sep 09
12:05 PM (IST) Sep 09
ಸಿಎಂ ಸಿದ್ದರಾಮಯ್ಯನವರಿಗೆ ನಿಸಾರ್ ಅಹ್ಮದ್ ಅವರ ಸಾಹಿತ್ಯದ ಕನಿಷ್ಠ ಜ್ಞಾನವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
11:41 AM (IST) Sep 09
Actor Darshan Thoogudeepa: ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿದ್ದು, “ನನಗೆ ಸ್ವಲ್ಪ ವಿಷ ಕೊಡಿ” ಎಂದು ಹೇಳಿದ್ದಾರಂತೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆಯಾಗಿ ವರ್ಷವಾಗಿದೆ.
11:11 AM (IST) Sep 09
ಸುಪ್ರೀಂ ಕೋರ್ಟ್ ತೀರ್ಪಿನಿಂದ 1.68 ಲಕ್ಷ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಇಟಿ ಅರ್ಹತೆಯನ್ನು ಪೂರ್ವಾನ್ವಯಗೊಳಿಸದಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.
10:56 AM (IST) Sep 09
ಭದ್ರಾವತಿಯ ಈದ್ ಮಿಲಾದ್‌ನಲ್ಲಿ ಕೆಲ ಮುಸ್ಲಿಂ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
09:24 AM (IST) Sep 09
08:26 AM (IST) Sep 09
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಪೊಲೀಸರೇ ಇವತ್ತು ಅಸಹಾಯಕರಾಗಿದ್ದಾರೆ. ರಾಜ್ಯ ಸರ್ಕಾರ, ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಅವರು ಘಟನೆಯ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.