ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ಭರ್ಜರಿ ಬಹುಮತಗಳೊಂದಿಗೆ ಆಯ್ಕೆಯಾಗಿರುವ ಸಿಪಿ ರಾಧಾಕೃಷ್ಣನ್ ಯಾರು? ಇವರ ರಾಜಕೀಯ ಜೀವನ, ಸಾಮಾಜಿಕ ಸೇವೆ ಕುರಿತು ರೋಚಕ ಮಾಹಿತಿ ಇಲ್ಲಿದೆ.

ನವದೆಹಲಿ (ಸೆ.09) ಭಾರತದ ನೂತನ ಉಪ ರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಇದೀಗ ಯಾರು ಈ ಸಿಪಿ ರಾಧಕೃಷ್ಣನ್ ಅನ್ನೋ ಹುಡುಕಾಟಗಳು ತೀವ್ರಗೊಳ್ಳುತ್ತಿದೆ. ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸಿಪಿ ರಾಧಾಕೃಷ್ಣನ್ ಅವರನ್ನು ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿತ್ತು. ಇದೀಗ ಸಿಪಿ ರಾಧಾಕೃಷ್ಣನ್ ಭಾರತದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಬಿಜಿಪಿಯ ಹಿರಿಯ ನಾಯಕನ ರಾಜಕೀಯ ಹಾದಿ ಬಲು ರೋಚಕ.

ಬಿಜೆಪಿ ಕಟ್ಟಿ ಬೆಳೆಸಿದ ನಾಯಕ

ಸಿಪಿ ರಾಧಾಕೃಷ್ಣನ್ ಭಾರತೀಯ ಜನಸಂಘದಿಂದ ರಾಜಕೀಯದಲ್ಲಿದ್ದಾರೆ. 1974ರಲ್ಲಿ ಭಾರತೀಯ ಜನಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಭಾರತೀಯ ಜನಸಂಘ ಬಿಜೆಪಿ ಪಕ್ಷವಾಗಿ ಹೊರಹೊಮ್ಮಿತ್ತು. ದೇಶದಲ್ಲಿ ಹಾಗೂ ಬಲಪಂಥೀಯ ರಾಜಕೀಯಕ್ಕೆ ಮರೂಭೂಮಿಯಂತಿದ್ದ ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಿಬೆಳೆಸಿದ ನಾಯಕ ಸಿಪಿ ರಾಧಾಕೃಷ್ಣನ್. ಬಹಶ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿದ್ದಾರೆ. ಇವರ ರಾಜಕೀಯ ಜೀವನ, ರಾಜ್ಯಪಾಲರ ಅವದಿಯಲ್ಲೂ ಯಾವುದೇ ವಿವಾದಗಳಿಲ್ಲ. ಶಿಸ್ತು, ಸಂಯಮದಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಆಯ್ಕೆ, 532 ಮತಗಳ ಭರ್ಜರಿ ಗೆಲುವು

ಆರ್‌ಎಸ್‌ಎಸ್ ಕಟ್ಟಾಳು ಸಿಪಿ ರಾಧಾಕೃಷ್ಣನ್

ಸಿಪಿ ರಾಧಾಕೃಷ್ಣನ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳುವಾಗಿದ್ದಾರೆ. ಆರ್‌ಎಸ್ಎಸ್ ಸದಸ್ಯನಾಗಿ, ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇದೀಗ ಆರ್‌ಎಸ್ಎಸ್ ಸಾಮಾನ್ಯ ಕಾರ್ಯಕರ್ತ ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿ ಸೇವೆ

ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿ ಇದೇ ರಾಧಾಕೃಷ್ಣನ್‌ಗೆ ಇದೆ. 2004 ರಿಂದ 2007ರ ವರೆಗೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ ತಳಹಂತದಿಂದ ಬಿಜೆಪಿ ಕಟ್ಟಿದ್ದಾರೆ. ತಮಿಳುನಾಡಿನಲ್ಲಿ ದ್ರಾವಿಡ್ ರಾಜಕೀಯ ನಡುವೆ ಹಿಂದುತ್ವದ ರಾಜಕೀಯ ಪಸರಿಸಿದ ಸಿಪಿ ರಾಧಾಕೃಷ್ಣನ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.

ವಿವಾದಾತ್ಮಕ ಹೇಳಿಕೆ ಇಲ್ಲ, ಬಿಜೆಪಿ ವಿರುದ್ಧ, ಆರ್‌ಎಸ್ಎಸ್ ವಿರುದ್ದ, ಹಿಂದುತ್ವದ ವಿರುದ್ಧ ವಿವಾದಾತ್ಮಕ ಹೇಳಿಕೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಆದರೆ ಎಲ್ಲೂ ವಿವಾದಿತ ಹೇಳಿಕೆ ನೀಡಿಲ್ಲ. ನೂತನ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತ ಬಿಜೆಪಿ ನಾಯಕರು, ಸೇರಿದಂತೆ ಹಲವರು ಸಿಪಿ ರಾಧಾಕೃಷ್ಣನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.