- Home
- Karnataka Districts
- ಪುನೀತ್ ಕೆರೆಹಳ್ಳಿ, ಗೋಪಿಗೌಡಗೆ ಹೊಡೆಯೋಕೆ ಹೋಗ್ತಿದ್ದೀವಿ ಎಂದಿದ್ದ ಸಿರಾಜ್ ವಿರುದ್ಧ ಎಫ್‌ಐಆರ್
ಪುನೀತ್ ಕೆರೆಹಳ್ಳಿ, ಗೋಪಿಗೌಡಗೆ ಹೊಡೆಯೋಕೆ ಹೋಗ್ತಿದ್ದೀವಿ ಎಂದಿದ್ದ ಸಿರಾಜ್ ವಿರುದ್ಧ ಎಫ್‌ಐಆರ್
ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಸಿರಾಜ್ ಅಲಿಬೇಗ್ ವಿರುದ್ಧ ಎಫ್‌ಐಆರ್ ದಾಖಲು. ಮದ್ದೂರು ಕಲ್ಲು ತೂರಾಟ ಪ್ರಕರಣದಲ್ಲಿ ಪ್ರತಿಭಟನಾಕಾರರ ವಿರುದ್ಧವೂ ಪ್ರಕರಣ ದಾಖಲು.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ಮತ್ತು ಗೋಪಿ ಗೌಡಗೆ ಹೊಡೆಯೋಕೆ ಹೋಗ್ತಿದ್ದೀವಿ ಎಂದು ಧಮ್ಕಿ ಹಾಕಿದ್ದ ಸಿರಾಜ್ ಅಲಿಬೇಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಕರ್ತವ್ಯನಿರತ ಕಾನ್‌ಸ್ಟೇಬಲ್ ಮುಂದೆಯೇ ಸಿರಾಜ್ ಅಲಿಬೇಗ್, ಈ ರೀತಿಯ ಹೇಳಿಕೆ ನೀಡಿದ್ದನು. ಕಾನ್‌ಸ್ಟೇಬಲ್ ನೀಡಿರುವ ದೂರಿನಡಿಯಲ್ಲಿಯೂ ಅರಸೀಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುನೀತ್ ಕೆರೆಹಳ್ಳಿಯನ್ನು ಕೊಲೆ ಮಾಡುವ ಉದ್ದೇಶದಿಂದ ಈ ಹೇಳಿಕೆ ನೀಡಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ವಿಡಿಯೋ ಇದಾಗಿದೆ. ಹಾಗಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು.
ಮದ್ದೂರು ಕಲ್ಲು ತೂರಾಟ
ಮಂಡ್ಯ ಜಿಲ್ಲೆಯ ಮದ್ದೂರು ಕಲ್ಲು ತೂರಾಟ ಪ್ರಕರಣ ಖಂಡಿಸದವರ ಮೇಲೆ ಎಫ್ಐಆರ್ ದಾಖಲಾಗಿದೆ. ಘಟನೆ ಖಂಡಿಸಿ ಸೆಪ್ಟೆಂಬರ್ 9ರಂದು ಮದ್ದೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂಬಂಧ ಪ್ರತಿಭಟನಾಕಾರರ ಮೇಲೆ ಪ್ರತ್ಯೇಕ ಎರಡು ಎಫ್ಐಆರ್ ದಾಖಲಾಗಿದೆ.
ಮುಸ್ಲಿಂ ಧರ್ಮದ ಬಾವುಟಕ್ಕೆ ಬೆಂಕಿ ಹಾಕಿದ್ದ ಮತ್ತು ಈದ್ ಮಿಲಾದ್ ಗೆ ಹಬ್ಬದ ಹಿನ್ನಲೆ ಹಾಕಿದ್ದ ಬಂಟಿಂಗ್ಸ್ ಕಿತ್ತೆಸೆದವರ ವಿರುದ್ದ ಒಂದು ಎಫ್ಐಆರ್ ಆಗಿದೆ. ಪ್ರತಿಭಟನಾ ಮೆರವಣಿಗೆ ವೇಳೆ ಮಸೀದಿಗೆ ನುಗ್ಗಲು ಯತ್ನಿಸಲಾಗಿದ್ದು, ಆ ವೇಳೆ ಕಲ್ಲು ತೂರಿದ ವಿಚಾರವಾಗಿ ಮತ್ತೊಂದು ಎಫ್ಐಆರ್ ಆಗಿದೆ. ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಗಿರೀಶ್, ಸೌಮ್ಯ, ರಮ್ಯ, ಪಲ್ಲವಿ ಸೇರಿದಂತೆ 500 ಜನರ ಮೇಲೆ BNS 189(2), 189(4), 121, 121(2), 190 ಅಡಿ ಎಫ್ಐಆರ್ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.