ಬೆಂಗಳೂರು (ಅ.7): ರಾಜ್ಯದಲ್ಲಿ ಜಾತಿ ಗಣತಿ ಪ್ರಕ್ರಿಯೆ ಆರಂಭಕ್ಕೂ ಮುನ್ನ ಧುತ್ತನೆ ಎದ್ದು ಕುಳಿತ ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೊಡಬೇಕು, ಕಳೆದ ಬಾರಿಯಂತೆ ಈ ಸಲ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಗೆ ಎಲ್ಲವನ್ನೂ ಕಟ್ಟುವ ಆಟ ನಡೆಯಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ವೀರಶೈವರನ್ನು ಬಿಟ್ಟು ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೇಳುವುದಕ್ಕೆ ಅವರದ್ದೇ ಸಂಪುಟದ ಸಹೋದ್ಯೋಗಿ ಈಶ್ವರ ಖಂಡ್ರೆ ವಿರೋಧ ಸೂಚಿಸಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನಡೆಯ ಹೇಳಿಕೆ ಕೊಟ್ಟಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:57 PM (IST) Oct 07
ಕರ್ಣ ಧಾರಾವಾಹಿಯಲ್ಲಿ ಕರ್ಣನಾಗಿ ಕಿರಣ್ ರಾಜ್, ನಿಧಿಯಾಗಿ ಭವ್ಯಾ ಗೌಡ, ನಿತ್ಯಾ ಆಗಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ನಮ್ರತಾ ಗೌಡ, ಭವ್ಯಾ ಗೌಡ ನಡುವೆ ಯಾರು ಇಷ್ಟ ಎಂದು ಕಿರಣ್ ರಾಜ್‌ಗೆ ಪ್ರಶ್ನೆ ಮಾಡಲಾಗಿತ್ತು. ಆಗ ಕಿರಣ್ ರಾಜ್ ನೀಡಿದ ಉತ್ತರ ಮಾತ್ರ..
11:33 PM (IST) Oct 07
Bigg Boss Re Start Date: ಬಿಗ್‌ಬಾಸ್ ಕನ್ನಡದ ಸೆಟ್‌ಗೆ ಬೀಗ ಜಡಿಯಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮಂಗಳವಾರದ ಸಂಚಿಕೆ ಪ್ರಸಾರವಾಗಿದ್ದರೂ, ನ್ಯಾಯಾಲಯದ ಮುಂದಿನ ತೀರ್ಮಾನದವರೆಗೆ ಶೋನ ಭವಿಷ್ಯ ಅನಿಶ್ಚಿತವಾಗಿದೆ.
11:32 PM (IST) Oct 07
Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ಕರ್ಣನ ಮದುವೆಯ ಪ್ರೋಮೋ ರಿಲೀಸ್ ಆಗಿದೆ. ಈಗ ಕರ್ಣನಿಗೆ ನಿತ್ಯಾ ಬಯ್ಯಾ ಎಂದು ಕರೆದಿದ್ದಾಳೆ. ಹಾಗಾದರೆ ಕರ್ಣ ಹಾಗೂ ನಿತ್ಯಾ ಮದುವೆ ಆಗಿದ್ದು ಸುಳ್ಳಾ? ಕನಸಾ? ಸತ್ಯ ಏನು?
10:51 PM (IST) Oct 07
Bigg Boss Kannada contestants moved: ಮಾಲಿನ್ಯ ಮಂಡಳಿಯ ನೋಟಿಸ್‌ನಿಂದಾಗಿ ಬಿಗ್‌ಬಾಸ್ ಸೆಟ್ ಇರುವ ಜಾಲಿವುಡ್ ಸ್ಟುಡಿಯೋ ಸೀಜ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ 17 ಸ್ಪರ್ಧಿಗಳನ್ನು ಬಿಡದಿಯ ಐತಿಹಾಸಿಕ ಹಾಗೂ ರಾಜಕೀಯವಾಗಿ ಸುದ್ದಿಯಾಗಿದ್ದ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.
10:10 PM (IST) Oct 07
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ: ಕಾಕತಾಳೀಯವಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಿಂದಾಗಿ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದು, ಆಕೆಯ ನಾಲಿಗೆ ಮೇಲಿನ ಮಚ್ಚೆಯ ಮಾತು ಇದೀಗ ಚರ್ಚೆಯಲ್ಲಿದೆ.
10:04 PM (IST) Oct 07
Apoorva K Bhat Death: ಪುತ್ತೂರು ಮೂಲದ ಅಪೂರ್ವ ಕೆ ಭಟ್ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪೂರ್ವ ಹೋಗುತ್ತಿದ್ದ ಕಾರ್‌ಗೆ ಬಸ್ ಬಂದು ಗುದ್ದಿತ್ತು. ಹೀಗಾಗಿ ಅಪೂರ್ವ ಕೋಮಾ ಸೇರಿಕೊಂಡಿದ್ದರು. ಈ ಘಟನೆ ಬಗ್ಗೆ ಅಪೂರ್ವ ಪತಿ ಆಶೀಶ್ ಸರಡ್ಕ ಏನು ಹೇಳಿದ್ದರು?
09:26 PM (IST) Oct 07
Ashish Saradka Wife apoorva k bhat: 134 ದಿನಗಳ ಕಾಲ ಕೋಮಾದಲ್ಲಿದ್ದ ಪುತ್ತೂರು ಮೂಲದ ಅಪೂರ್ವ ಕೆ ಭಟ್ ಅವರು ಇಹಲೋಕ ತ್ಯಜಿಸಿದ್ದಾರೆ. ಪತ್ನಿಯನ್ನು ಉಳಿಸಿಕೊಳ್ಳಲು ಒದ್ದಾಡಿದ್ದ ಅಪೂರ್ವ ಪತಿ ಆಶಿಶ್ ಸರಡ್ಕ ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
09:17 PM (IST) Oct 07
Bigg Boss Kannada contestants evicted: ಬಿಗ್‌ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳನ್ನು ಹೊರಕಳುಹಿಸಲಾಗಿದೆ. ಪೊಲೀಸರ ಸಮ್ಮುಖದಲ್ಲಿ ಮನೆಗೆ ಬೀಗ ಹಾಕಲಾಗಿದ್ದು, ಸ್ಪರ್ಧಿಗಳನ್ನು ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಎರಡು-ಮೂರು ದಿನಗಳಲ್ಲಿ ಶೋ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ.
09:15 PM (IST) Oct 07
ಬಿಗ್‌ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ‘ಕೋಣ’ಕ್ಕಾಗಿ ನಾನ್ವೆಜ್ ತ್ಯಜಿಸಿದ್ದಾರೆ. ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ, ಮಾಂಸಾಹಾರ ಸೇವಿಸುವುದಿಲ್ಲವೆಂದು ಹರಕೆ ಹೊತ್ತಿರುವುದಾಗಿ ಅವರು ತಿಳಿಸಿದ್ದಾರೆ. ಹಾಗಿದ್ದರೆ ಯಾವ ಕೋಣ ಇದು? ನಟಿ ಹೇಳಿದ್ದೇನು?
08:49 PM (IST) Oct 07
Bigg Boss Kannada set sealed: ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಗ್‌ಬಾಸ್ ಸೆಟ್ ಇರುವ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ಜಿಲ್ಲಾಡಳಿತ ಬೀಗ ಹಾಕಿದೆ. ಮಾಲಿನ್ಯ ಮಂಡಳಿ ನೋಟಿಸ್ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
08:41 PM (IST) Oct 07
Doctor's Negligence:ಕಪ ಹಾಗೂ ಶೀತದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವೈದ್ಯನೋರ್ವ ತಪ್ಪಾದ ಇಂಜೆಕ್ಷನ್ ನೀಡಿದ ಪರಿಣಾಮ 2 ವರ್ಷದ ಮಗು ಸಾವನ್ನಪ್ಪಿದೆ. ಮಧ್ಯಪ್ರದೇಶದ ಶೆಹೋರೆ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
07:56 PM (IST) Oct 07
ಕಾನೂನು ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಡದಿಯ ಜಾಲಿವುಡ್ ಸ್ಟೂಡಿಯೋಸ್‌ನಲ್ಲಿರುವ ಬಿಗ್ ಬಾಸ್ ಮನೆಯನ್ನು ರಾಜ್ಯ ಸರ್ಕಾರ ಕ್ಲೋಸ್ ಮಾಡಿಸಿದೆ. ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳು ಸ್ಟುಡಿಯೋಗೆ ಬೀಗ ಜಡಿದಿದ್ದು, ಎಲ್ಲಾ 17 ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿ, ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ
07:41 PM (IST) Oct 07
Eshwar Khandre on Bigg Boss: ಪರಿಸರ ಕಾಯಿದೆ ಉಲ್ಲಂಘನೆ ಆರೋಪದ ಮೇಲೆ ಬಿಗ್ ಬಾಸ್ ಸೀಸನ್ 12 ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದೆ.
07:31 PM (IST) Oct 07
Apoorva K Bhat Death: ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಅಪೂರ್ವ ಕೆ ಭಟ್ ಅವರು ನಿಧನರಾಗಿದ್ದಾರೆ. 134 ದಿನಗಳಿಂದ ನಡೆದ ಅಪಘಾತ ಇದಾಗಿತ್ತು. ಇಷ್ಟು ದಿನಗಳಿಂದ ಆಸ್ಪತ್ರೆ ಬೆಡ್ ಮೇಲೆ ಕಾಲ ಕಳೆದಿದ್ದ ಅಪೂರ್ವ ಕೊನೆಗೂ ಹೋರಾಡಿ ಸೋತರು.
07:26 PM (IST) Oct 07
ತುಮಕೂರಿನಲ್ಲಿ ಪತ್ನಿಯ ಕಿರುಕುಳ, ಹಣಕ್ಕಾಗಿ ಪೀಡನೆ ಮತ್ತು ಎಐಎಂಐಎಂ ಮುಖಂಡನೊಂದಿಗಿನ ಆಕೆಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಫೇಸ್‌ಬುಕ್ ಲೈವ್‌ನಲ್ಲಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಸಹ ಪತ್ನಿಯ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
07:25 PM (IST) Oct 07
ಮಗುವಿಗೆ 6 ತಿಂಗಳು ಎದೆಹಾಲು ಅಗತ್ಯವಾಗಿದ್ದು, ಒಂದು ವರ್ಷ ಮುಂದುವರಿಸುವುದು ಮಿದುಳಿನ ಬೆಳವಣಿಗೆಗೆ ಸಹಕಾರಿ. ಒಂದೂವರೆ ವರ್ಷದ ನಂತರ ಕ್ರಮೇಣವಾಗಿ ಎದೆಹಾಲು ನೀಡುವುದನ್ನು ಕಡಿಮೆ ಮಾಡಿ ನಿಲ್ಲಿಸುವುದು ತಾಯಿ ಮತ್ತು ಮಗುವಿಗೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅವರು ಹೇಳಿದ ಟಿಪ್ಸ್ ಇಲ್ಲಿದೆ…
07:22 PM (IST) Oct 07
ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಪತ್ನಿ ಸಮೇತ ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಮತ್ತು ಶಿವನಸಮುದ್ರದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಧಾರ್ಮಿಕ ಪ್ರವಾಸದ ವೇಳೆ ಅಭಿಮಾನಿಗಳು ಅವರನ್ನು ಕಂಡು ಸಂಭ್ರಮಿಸಿದರು.
07:06 PM (IST) Oct 07
ಕೊಡಗಿನ ವಾಸಂತಿ ಭಟ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಾವಿನ ಹಿಂದೆ ಖಳನಾಯಕ ನಟನ ಸಹೋದರ ಪೀಟರ್ ರೈ ಕೈವಾಡವಿದೆ ಎಂದು ವಾಸಂತಿ ಸಹೋದರ ವಿಜಯ್ ಆರೋಪಿಸಿದ್ದಾರೆ. ವಾಸಂತಿ ಪತಿ ಶ್ರೀವತ್ಸನ ಸ್ನೇಹಿತನಾಗಿದ್ದ ಪೀಟರ್ ರೈಗೆ ಎಸ್‌ಐಟಿ ನೋಟಿಸ್ ನೀಡಿದ್ದು, ಆತನ ಮೇಲೆ ಅನುಮಾನ ವ್ಯಕ್ತವಾಗಿದೆ.
07:03 PM (IST) Oct 07
ಎರಡನೇ ಬಾರಿಗೆ ಕನ್ನಡ ಬಿಗ್ ಬಾಸ್ ಶೋ ಅರ್ಧಕ್ಕೆ ಸ್ಥಗಿತ, ಈ ಮೊದಲು ಯಾವಾಗ? 12ನೇ ಆವೃತ್ತಿ ಶೋ ಆರಂಭಗೊಂಡ ಒಂದೇ ವಾರಕ್ಕೆ ಸ್ಥಿಗತಗೊಂಡಿದೆ. ಈ ಬಾರಿ ನಿಯಮ ಉಲ್ಲಂಘನೆ ಪ್ರಕರಣ ಗಂಭೀರವಾಗಿದೆ. ಇದಕ್ಕೂ ಮೊದಲು ಬಿಗ್ ಬಾಸ್ ಸ್ಥಗಿತಗೊಂಡಿತ್ತು.
06:54 PM (IST) Oct 07
Old Zomato bill comparison: ಆನ್‌ಲೈನ್ ಫುಡ್ ಆರ್ಡರ್‌ಗಳು ದುಬಾರಿಯಾಗಿವೆ. 7 ವರ್ಷಗಳ ಹಿಂದಿನ ಜೊಮ್ಯಾಟೋ ಬಿಲ್ ಒಂದನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಅಂದಿನ ಮತ್ತು ಇಂದಿನ ಆನ್‌ಲೈನ್ ಫುಡ್ ಆರ್ಡರ್ ದರಗಳ ನಡುವಿನ ದೊಡ್ಡ ವ್ಯತ್ಯಾಸವನ್ನು ತೋರಿಸುತ್ತದೆ.
06:45 PM (IST) Oct 07
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಅಧರ್ಮದ ಹಾದಿ ಹಿಡಿದಿದ್ದ ಜಯದೇವ್, ಶಕುಂತಲಾಗೆ ಈಗ ಸರಿಯಾದ ಶಿಕ್ಷೆ ಆಗುತ್ತಿದೆ. ಈ ಧಾರಾವಾಹಿಯು ಮುಂಬರುವ ಎಪಿಸೋಡ್‌ಗಳು ಒಂದು ಸಿನಿಮಾದ ಕ್ಲೈಮ್ಯಾಕ್ಸ್ ಥರ ಆಗಬಹುದಾ ಎಂಬ ಡೌಟ್ ಶುರುವಾಗಿದೆ.
06:35 PM (IST) Oct 07
ದಾವಣಗೆರೆಯಲ್ಲಿ ನಡೆಯುತ್ತಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ತಾಂತ್ರಿಕ ದೋಷವೊಂದು ಬೆಳಕಿಗೆ ಬಂದಿದೆ. ವೈದ್ಯರೊಬ್ಬರ ಆಧಾರ್ ಸಂಖ್ಯೆ ನಮೂದಿಸಿದಾಗ, ಅವರ ಕುಟುಂಬದ ಪಟ್ಟಿಯಲ್ಲಿ ಅನ್ಯಕೋಮಿನ ವ್ಯಕ್ತಿಗಳ ಹೆಸರುಗಳು ಕಾಣಿಸಿಕೊಂಡು ಗೊಂದಲ ಸೃಷ್ಟಿಸಿತು.
06:25 PM (IST) Oct 07
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ಇದೀಗ 'ಶ್ರೀಗಂಧದ ಗುಡಿ' ಎಂಬ ಹೊಸ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡು, ಸೀರಿಯಲ್‌ನ ಕಥೆ ಮತ್ತು ಬಿಗ್ ಬಾಸ್ ಪ್ರವೇಶದ ಬಗ್ಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
06:14 PM (IST) Oct 07
ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಡದಿಯಲ್ಲಿರುವ 'ಬಿಗ್ ಬಾಸ್ ಕನ್ನಡ ಸೀಸನ್ 12' ಶೂಟಿಂಗ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಸಂಜೆಯೊಳಗೆ ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲು ಸೂಚನೆ ನೀಡಲಾಗಿದೆ.
06:11 PM (IST) Oct 07
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಹಾಗೂ ಶಕುಂತಲಾಗೆ ಲಡ್ಡು ಬಂದರೂ ಬಾಯಿಗಿಡೋಕೆ ಆಗ್ತಿಲ್ಲ. ಈ ರೀತಿ ಪರಿಸ್ಥಿತಿ ಬಂದಿದೆ. ಗೌತಮ್‌ಗೆ ಮೋಸ ಮಾಡಿದ ಇವರಿಗೆ ಹೀಗೆ ಆಗಬೇಕು ಅಂತ ವೀಕ್ಷಕರು ಕೂಡ ಬಯಸುತ್ತಿದ್ದಾರೆ.
05:30 PM (IST) Oct 07
Suniel Shetty Rich Story: 'ಸೀತಾ ರಾಮ' ಖ್ಯಾತಿಯ ನಟ ಗಗನ್ ಚಿನ್ನಪ್ಪ, 'ದಢಕನ್' ಚಿತ್ರದ ಪ್ರಸಿದ್ಧ ಡೈಲಾಗ್ ಕೇಳಿ ಅಚ್ಚರಿಗೊಂಡಿದ್ದಾರೆ. 50 ರೂ.ನಿಂದ 500 ಕೋಟಿ ಸಂಪಾದಿಸಿದ ಸುನಿಲ್ ಶೆಟ್ಟಿ ಪಾತ್ರದ ಕಥೆಗೆ ಅವರು ತಮಾಷೆಯಾಗಿ ಪ್ರತಿಕ್ರಿಯಿಸಿದ ವಿಡಿಯೋ ವೈರಲ್ ಆಗಿದೆ.
05:26 PM (IST) Oct 07
04:52 PM (IST) Oct 07
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಜಾತಿಗಣತಿ ಪ್ರಶ್ನಾವಳಿಯಲ್ಲಿ ದೋಷಗಳಿವೆ ಎಂದು ಗಣತಿದಾರರನ್ನು ವಾಪಸ್ ಕಳುಹಿಸಿದ್ದಾರೆ. ಈ ಘಟನೆಯು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಹಿಂದುಳಿದ ವರ್ಗಗಳ ಆಯೋಗವು ಇದನ್ನು ಅಸಹಕಾರ ಎಂದು ಕರೆದಿದೆ.
04:50 PM (IST) Oct 07
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಕಾರಣದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಸರಾ ರಜೆ ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ. ಆದರೆ, ಖಾಸಗಿ ಶಾಲಾ ಸಿಬ್ಬಂದಿ ಈ ಸಮೀಕ್ಷೆಯಲ್ಲಿ ಭಾಗಿಯಾಗದ ಕಾರಣ, ರಾಜ್ಯಾದ್ಯಂತ ಖಾಸಗಿ ಶಾಲೆಗಳು ಅಕ್ಟೋಬರ್ 8 ರಿಂದ ಎಂದಿನಂತೆ ಪುನರಾರಂಭಗೊಳ್ಳಲಿವೆ.
04:21 PM (IST) Oct 07
ಬಿಗ್ ಬಾಸ್ ಸೀಸನ್ 12 ರಲ್ಲಿ, ಕಾಕ್ರೋಚ್ ಸುಧಿಗೆ ಅಸುರರ ರಾಜನ ವಿಶೇಷ ಅಧಿಕಾರ ಸಿಕ್ಕಿದೆ. ಅಸುರನಂತೆ ಸಿದ್ಧವಾಗುತ್ತಿದ್ದ ಸುಧಿಗೆ ಇಂದು ಡ್ಯಾನ್ಸ್ ಉಂಟಾ ಎಂದು ಕರಾವಳಿ ಸ್ಟೈಲ್‌ನಲ್ಲಿ ಗೇಲಿ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸುಧಿ ರಕ್ಷಿತಾ ಶೆಟ್ಟಿಗೆ ಊಟ ಕೊಡದಂತೆ ಸಹಾಯಕರಿಗೆ ಆದೇಶಿಸಿದ್ದಾರೆ.
04:13 PM (IST) Oct 07
2 ವರ್ಷದ ಪುಟ್ಟ ಕಂದನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದ ಪೋಷಕರು ನಂತರ ವಿಷ ಸೇವಿಸಿ ಸಾವಿಗೆ ಶರಣಾದ ಆಘಾತಕಾರಿ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ. 35 ವರ್ಷದ ಅಜಿತ್ ಹಾಗೂ ಅವರ ಪತ್ನಿ 27 ವರ್ಷದ ಶ್ವೇತಾ ಮೃತಪಟ್ಟವರು. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
04:07 PM (IST) Oct 07
HD Devegowda Admitted Hospital ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇವೇಗೌಡರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
04:02 PM (IST) Oct 07
DCM DK Shivakumar Tries to Board CM Siddaramaiah's Car at Vidhana Soudha ವಿಧಾನಸೌಧದಲ್ಲಿ ಸಭೆ ಮುಗಿಸಿ ಹೊರಬಂದ ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರನ್ನು ತಮ್ಮದೆಂದು ಭಾವಿಸಿ ಏರಲು ಮುಂದಾದರು.
03:53 PM (IST) Oct 07
'ಕಾಂತಾರ: ಅಧ್ಯಾಯ 1' ಚಿತ್ರತಂಡವು ನಟ-ನಿರ್ದೇಶಕ ರಿಷಭ್ ಶೆಟ್ಟಿ ನೇತೃತ್ವದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಭೇಟಿಯಾಯಿತು. ಈ ಸಂದರ್ಭದಲ್ಲಿ, ಚಿತ್ರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಮುಖ್ಯಮಂತ್ರಿ ಶ್ಲಾಘಿಸಿದರು.
03:53 PM (IST) Oct 07
ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಕರಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಸಮೀಕ್ಷೆ ವೇಳೆ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ₹20 ಲಕ್ಷ ಪರಿಹಾರ, ಗೌರವಧನವನ್ನು ₹20 ಸಾವಿರಕ್ಕೆ ಹೆಚ್ಚಳ ಮಾಡಿದೆ.
03:14 PM (IST) Oct 07
Janvi statement on Rakshitha: ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ, ತನ್ನನ್ನು ಅಂಡರ್‌ಎಸ್ಟಿಮೇಟ್ ಮಾಡಿ ನೀಡಿದ್ದ ಹಳೆಯ ಹೇಳಿಕೆಗಾಗಿ ರಕ್ಷಿತಾ ಶೆಟ್ಟಿ, ಜಾನ್ವಿಯನ್ನು ಪ್ರಶ್ನಿಸಿದ್ದಾರೆ. ರಕ್ಷಿತಾ ಅವರ ಖಡಕ್ ಉತ್ತರಕ್ಕೆ ಮನೆಯ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
03:12 PM (IST) Oct 07
ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆಯನ್ನು ಅ.18 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಸಮೀಕ್ಷೆಯಲ್ಲಿ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
02:31 PM (IST) Oct 07
ಬಿಗ್ ಬಾಸ್ ಮನೆಯಲ್ಲಿ ಅರಸಿಯಾಗಿ ದಬ್ಬಾಳಿಕೆ ಮಾಡುತ್ತಿದ್ದ ನಿರೂಪಕಿ ಜಾಹ್ನವಿಗೆ ಇದೀಗ ಸಂಕಷ್ಟ ಎದುರಾಗಿದೆ. ಧ್ರುವಂತ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಸೇರಿದಂತೆ ಹಲವು ಸ್ಪರ್ಧಿಗಳು ಆಕೆಯನ್ನು ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದಾರೆ. ಈ ಕಾರಣದಿಂದ ಜಾಹ್ನವಿ ಡೇಂಜರ್ ಜೋನ್‌ಗೆ ತಲುಪಿದ್ದಾರೆ.
02:31 PM (IST) Oct 07
Priyank Kharge on BR Gavai incident: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲಿನ ಶೂ ಎಸೆತ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರ ವಿಳಂಬ ಪ್ರತಿಕ್ರಿಯೆಯನ್ನು ಟೀಕಿಸಿದ್ದಾರೆ.
02:26 PM (IST) Oct 07