2019ರ ಜೊಮ್ಯಾಟೋ ಬಿಲ್ ಫೋಟೋ ವೈರಲ್; 3-4 ಸಾವಿರ ಸೇವ್ ಆಗ್ತಿತ್ತು ಎಂದ ನೆಟ್ಟಿಗರು
Old Zomato bill comparison: ಆನ್‌ಲೈನ್ ಫುಡ್ ಆರ್ಡರ್‌ಗಳು ದುಬಾರಿಯಾಗಿವೆ. 7 ವರ್ಷಗಳ ಹಿಂದಿನ ಜೊಮ್ಯಾಟೋ ಬಿಲ್ ಒಂದನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಅಂದಿನ ಮತ್ತು ಇಂದಿನ ಆನ್‌ಲೈನ್ ಫುಡ್ ಆರ್ಡರ್ ದರಗಳ ನಡುವಿನ ದೊಡ್ಡ ವ್ಯತ್ಯಾಸವನ್ನು ತೋರಿಸುತ್ತದೆ.

ಆನ್‌ಲೈನ್ ಫುಡ್ ಆರ್ಡರ್ ಮಾಡುವ ಆಪ್‌ಗಳು
ಟೈಯರ್ 1, ಟೈಯರ್ 2 ಸಿಟಿಗಳಲ್ಲಿ ಆನ್‌ಲೈನ್ ಫುಡ್ ಆರ್ಡರ್ ಮಾಡುವ ಆಪ್‌ಗಳು ಸಕ್ರಿಯವಾಗಿವೆ. ಮನೆಯಲ್ಲಿಯೇ ಕುಳಿತು ನೆಚ್ಚಿನ ಹೋಟೆಲ್‌ನಿಂದ ಇಷ್ಟವಾದ ಆಹಾರ ಆರ್ಡರ್ ಮಾಡಬಹುದು. ಈ ರೀತಿಯಾಗಿ ಆರ್ಡರ್ ಮಾಡುವ ಆಹಾರದ ಬೆಲೆ ಸಾಮಾನ್ಯ ದರಕ್ಕಿಂತ ಅಧಿಕವಾಗಿರುತ್ತದೆ.
ಆನ್‌ಲೈನ್ ಫುಡ್ ಬಿಲ್
ಆನ್‌ಲೈನ್ ಫುಡ್ ಬಿಲ್ ಡೆಲಿವಿರಿ ಚಾರ್ಜ್, ಪ್ಲಾಟ್‌ಫಾರ್ಮ್ ಶುಲ್ಕ, ರೆಸ್ಟೋರೆಂಟ್ ಪ್ಯಾಕೇಜಿಂಗ್ ಶುಲ್ಕ ಮತ್ತು ಜಿಎಸ್‌ಟಿಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಹೋಟೆಲ್‌ನಲ್ಲಿ ದೋಸೆ ಬೆಲೆ 75 ರೂಪಾಯಿ ಆಗಿದ್ರೆ, ಆನ್‌ಲೈನ್‌ನಲ್ಲಿ ಇದರ ದರ 180 ರೂ. ಆಗುತ್ತದೆ. ಈ ರೀತಿ ಆರ್ಡರ್ ಮಾಡೋದರಿಂದ ಸಮಯ ಉಳಿತಾಯವಾಗುತ್ತದೆ ಎಂದು ಹೇಳಲಾಗುತ್ತದೆ.
ಜೊಮ್ಯಾಟೋ ಬಿಲ್ ಫೋಟೋ ಶೇರ್
ವ್ಯಕ್ತಿಯೊಬ್ಬರು ಏಳು ವರ್ಷಗಳ ಹಿಂದಿನ ಜೊಮ್ಯಾಟೋ ಬಿಲ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಬಿಲ್ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಬಿಲ್‌ನಲ್ಲಿ ಆಹಾರದ ಬೆಲೆ ಹೊರತುಪಡಿಸಿ ಬೇರೆ ಯಾವ ಶುಲ್ಕಗಳನ್ನು ಸೇರ್ಪಡೆ ಮಾಡಿಲ್ಲ. ಇಂದಿನ ಬಿಲ್‌ನಲ್ಲಿ ಮಳೆ ಬಂದ್ರೆ ರೇನ್ ಚಾರ್ಜ್ ಸಹ ಸೇರ್ಪಡೆ ಮಾಡಲಾಗುತ್ತದೆ. ಹೋಟೆಲ್‌ನಲ್ಲಿ ಪಾವತಿಸುವ ಹಣಕ್ಕಿಂತ ದುಪ್ಪಟ್ಟ ಹಣವನ್ನು ಆನ್‌ಲೈನ್ ಆರ್ಡರ್ ಮಾಡಿದಾಗ ಪಾವತಿಸಬೇಕಾಗುತ್ತದೆ.
7 ವರ್ಷಗಳ ಹಿಂದಿನ ಬಿಲ್‌ನಲ್ಲಿ ಏನಿದೆ?
ಏಳು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಜೊಮ್ಯಾಟೋ ಪ್ಲಾಟ್‌ಫಾರಂನಿಂದ ಪನೀರ್ ಮಲೈ ಟಿಕ್ಕಾ ಆರ್ಡರ್ ಮಾಡಿದ್ದಾರೆ. ಇದರ ಬೆಲೆ 160 ರೂಪಾಯಿ ಆಗಿದ್ದು, ಹೋಟೆಲ್‌ನಿಂದ 9.6 ಕಿ.ಮೀ ದೂರವಿರುವ ಸ್ಥಳಕ್ಕೆ ತಲುಪಿಸಬೇಕಾಗಿರುತ್ತದೆ. ಗ್ರಾಹಕ ಕೂಪನ್ ಕೋಡ್ ಬಳಕೆ ಮಾಡಿರೋದರಿಂದ ಆರ್ಡರ್ ಬೆಲೆ 92 ರೂಪಾಯಿ ಆಗಿದೆ. ಈ ಬಿಲ್‌ನಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಸೇರ್ಪಡೆ ಮಾಡಲಾಗಿಲ್ಲ.
2019ರ ಆರ್ಡರ್ ಬಿಲ್
2019ರ ಈ ಆರ್ಡರ್ ಬಿಲ್ ನೋಡಿ, ಅಂದು ಕೈಗೆಟುಕುವ ದರದಲ್ಲಿ ಆಹಾರವನ್ನು ಆರ್ಡರ್ ಮಾಡಲಾಗುತ್ತಿತ್ತು. ಅಂದು ಸಾಮಾನ್ಯವಾಗಿ ಹೋಟೆಲ್ ದರದಲ್ಲಿಯೇ ಆನ್‌ಲೈನ್ ಆರ್ಡರ್ ದರ ಇರುತ್ತಿತ್ತು. ಇಂದು ಆಹಾರದ ಬೆಲೆಗಿಂತ ಅದರ ಮೇಲೆ ವಿಧಿಸಲಾಗುವ ಶುಲ್ಕಗಳು ಅಧಿಕವಾಗಿರುತ್ತವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹಬ್ಬದಂದು ಕುಟುಂಬದಿಂದ ದೂರ ಉಳಿದು ರಾತ್ರಿ 11ರವರೆಗೂ ಕೆಲಸ ಮಾಡಿದ್ದ Zomato ಡೆಲಿವರಿ ಬಾಯ್‌ಗೆ ಸಿಕ್ಕ ಹಣ ಎಷ್ಟು?
ಪನೀರ್ ಮಲೈ ಟಿಕ್ಕಾ ಆರ್ಡರ್
ಇಂದು ಜೊಮ್ಯಾಟೋ ಸೇರಿದಂತೆ ಯಾವುದೇ ಪ್ಲಾಟ್‌ಫಾರಂ ಮೂಲಕ ಆಹಾರ ಆರ್ಡರ್ ಮಾಡೋದು ತುಂಬಾ ದುಬಾರಿಯಾಗುತ್ತಿದೆ. ಇಂದು ಇದೇ ಪನೀರ್ ಮಲೈ ಟಿಕ್ಕಾ ಆರ್ಡರ್ ಮಾಡಿದ್ರೆ ಕನಿಷ್ಠ 300 ರೂಪಾಯಿ ಆಗುತ್ತದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಹೋಟೆಲ್ ಸಮೀಪದಲ್ಲಿದ್ದರೂ ಯಾವುದೇ ರಿಯಾಯ್ತಿಗಳು ಗ್ರಾಹಕರಿಗೆ ಸಿಗುತ್ತಿಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೈಕಲ್ ಮೇಲೆ ಬಂದ ಫುಡ್ ಡೆಲಿವರಿ ಬಾಯ್ ಅದೃಷ್ಟ ಖುಲಾಯಿಸಿದ್ದೇಗೆ? ವಿಡಿಯೋ ನೋಡಿ
ಇಂದು ಎಲ್ಲವೂ ದುಬಾರಿ
ನೆಟ್ಟಿಗರೊಬ್ಬರು 2019ರ ಬಿಲ್ ನೋಡಿ ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಈ ರೀತಿಯಾಗಿ ಬಿಲ್ ಇರುತ್ತಿದ್ರೆ ತಿಂಗಳಿಗೆ ನಾನು 3 ರಿಂದ 4 ಸಾವಿರ ರೂಪಾಯಿ ಉಳಿತಾಯ ಮಾಡುತ್ತದೆ. ಕೆಲಸದ ಒತ್ತಡದಿಂದಾಗಿ ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಇದೇ ಪೋಸ್ಟ್‌ಗೆ ಇಂದು ಎಲ್ಲವೂ ದುಬಾರಿಯಾಗುತ್ತಿದೆ. ಅದೇ ರೀತಿ ಈ ಕಡಿಮೆ ದರವನ್ನ ಈ ಬಿಲ್ ನೋಡಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಹೃದಯ ಗೆದ್ದ ಜೊಮ್ಯಾಟೋ ಬಾಯ್, ₹500 ಸ್ವೀಕರಿಸಲು ನಿರಾಕರಿಸಿದ ಕಾರಣ ಕೇಳಿ ಜನ ಭಾವುಕ!