Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಅಧರ್ಮದ ಹಾದಿ ಹಿಡಿದಿದ್ದ ಜಯದೇವ್, ಶಕುಂತಲಾಗೆ ಈಗ ಸರಿಯಾದ ಶಿಕ್ಷೆ ಆಗುತ್ತಿದೆ. ಈ ಧಾರಾವಾಹಿಯು ಮುಂಬರುವ ಎಪಿಸೋಡ್‌ಗಳು ಒಂದು ಸಿನಿಮಾದ ಕ್ಲೈಮ್ಯಾಕ್ಸ್ ಥರ ಆಗಬಹುದಾ ಎಂಬ ಡೌಟ್ ಶುರುವಾಗಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ಆದಷ್ಟು ಬೇಗ ಸಾಲ ತೀರಿಸಬೇಕು, ಇಲ್ಲ ಅಂದರೆ ನೀವು ಸಾಲಕ್ಕೋಸ್ಕರ ಅಡವಿಟ್ಟ ಆಸ್ತಿಯನ್ನು ಅವರು ಮುಟ್ಟುಗೋಲು ಹಾಕಿಕೊಳ್ತಾರೆ. ಬೇರೆ ಪ್ರಾಪರ್ಟಿಯನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಸಾಲ ತೀರಿಸಬೇಕು. ಪ್ರಾಪರ್ಟಿ ಮಾರಲು ಕೂಡ ಒಂದು ಸಮಸ್ಯೆ ಇದೆ.
ವಕೀಲರು ಹೇಳಿದ್ದೇನು?
ಸಾಲದ ಸಮಸ್ಯೆ ಇರೋದಿಕ್ಕೆ ಜಯದೇವ್ ವಕೀರನ್ನು ಭೇಟಿ ಮಾಡಿದ್ದಾನೆ. ಆಗ ವಕೀಲರು “ಮೊದಲು ಗೌತಮ್ ಹಾಗೂ ಭೂಮಿಕಾ, ಮಗುವನ್ನು ಹುಡುಕಬೇಕು. ಇದು ಪಿತ್ರಾರ್ಜಿತ ಆಸ್ತಿ ಆಗಿರೋದರಿಂದ ಈ ಆಸ್ತಿಯಲ್ಲಿ ಭೂಮಿಕಾ ಹಾಗೂ ಮಗುಗೆ ಅಧಿಕಾರ ಇದೆ. ನಾಳೆ ಬಂದು ಅವರೆಲ್ಲ ಕೇಳಿದರೆ ತುಂಬ ಕಷ್ಟ ಆಗುವುದು. ಅವರೇನಾದರೂ ಕೇಸ್ ಹಾಕಿದರೆ, ತುಂಬ ವರ್ಷಗಳು ಕೋರ್ಟ್‌ನಲ್ಲಿ ಸಮಯ ಕಳೆಯಬೇಕಾಗಿ ಬರುವುದು. ಕೇಸ್ ಮುಗಿಯಬೇಕಿದ್ರೆ ತುಂಬ ವರ್ಷ ಆಗುವುದು, ಆಮೇಲೆ ಇನ್ನೊಂದು ತಿರುವು ಪಡೆದುಕೊಳ್ಳಬೇಕು. ನಿಮ್ಮ ಆಸ್ತಿಯನ್ನು ಮಾರಲು ಮಲ್ಲಿಯ ಸಹಿ ಬೇಕು” ಎಂದು ಹೇಳಿದ್ದಾರೆ.
ಯಾಕೆ ನನ್ನ ಆಸ್ತಿಯನ್ನು ಮಾರಾಟ ಮಾಡಲಿ?
ಇನ್ನೊಂದು ಕಡೆ ಜಯದೇವ್ ಹೆಸರಿನಲ್ಲಿರುವ ಆಸ್ತಿಯನ್ನು ಮಾರಾಟ ಮಾಡು ಎಂದು ತಾಯಿ ಸಲಹೆ ನೀಡಿದ್ದಾಳೆ. ಆಗ ಜಯದೇವ್ ಸಿಡಿದೆದ್ದು, “ನನ್ನ ಆಸ್ತಿ ತಂಟೆಗೆ ಬರಬೇಡಿ. ಅವನು ಮಾಡಿರೋ ಸಾಲಕ್ಕೆ ನಾನು ಯಾಕೆ ನನ್ನ ಆಸ್ತಿಯನ್ನು ಮಾರಾಟ ಮಾಡಲಿ?” ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಜಯದೇವ್ ಕೂಡ ತಾಯಿಗೆ ಬೈಯ್ದಿದ್ದಾನೆ.
ತಾಯಿಗೆ ಬೈದ ಜಯದೇವ್
“ನೀನು ಭೂಮಿಕಾಳನ್ನು ಮನೆಯಿಂದ ಕಳಿಸುವಾಗ, ಎಲ್ಲ ಪೇಪರ್‌ಗೆ ಸಹಿ ಹಾಕಿಸಿಕೊಂಡು ಕಳಿಸಬೇಕಿತ್ತು, ನೀನೆ ತಪ್ಪು ಮಾಡಿರೋದು, ನಿನ್ನಿಂದಲೇ ಎಲ್ಲ ಆಗಿರೋದು” ಎಂದು ಜಯದೇವ್, ತಾಯಿಗೆ ಬೈದಿದ್ದಾನೆ. ಈಗ ಎಲ್ಲ ವಿಷಯಕ್ಕೂ ತಾಯಿಯನ್ನು ದೂಷಿಸುತ್ತಿರೋ ಜೈ, ಮುಂದಿನ ದಿನಗಳಲ್ಲಿ ತಾಯಿಯನ್ನು ಮನೆಯಿಂದ ಹೊರಗಡೆ ಹಾಕಿದರೂ ಆಶ್ಚರ್ಯವಿಲ್ಲ.
ಅಣ್ಣಯ್ಯ ಸಿನಿಮಾದಂತೆ ಆಗತ್ತಾ?
ಅಣ್ಣಯ್ಯ ಸಿನಿಮಾದಲ್ಲಿ ಅಣ್ಣಯ್ಯನನ್ನು ಮಲತಾಯಿ ಸಾಕುತ್ತಾಳೆ. ಮಲತಾಯಿಗೆ ತನ್ನ ಆಸ್ತಿ ಮೇಲೆ ಕಣ್ಣಿದೆ ಅಂತ ಅಣ್ಣಯ್ಯನಿಗೆ ಗೊತ್ತಿರೋದಿಲ್ಲ. ಇನ್ನೊಂದು ಕಡೆ ಅವಳ ಸ್ವಂತ ಮಗ ಮದುವೆಯಾಗುತ್ತಾನೆ, ಅಣ್ಣಯ್ಯನ ಹೆಂಡ್ತಿ ಎಲ್ಲ ಸತ್ಯವನ್ನು ಹೇಳಿದರೂ ಕೂಡ ಅವನು ಒಪ್ಪೋದಿಲ್ಲ. ಆಮೇಲೆ ಮಲತಾಯಿಗೆ ಅವಳ ಸ್ವಂತ ಮಗನೆ ಬೈದು ಹೊರಗಡೆ ಹಾಕುತ್ತಾನೆ, ಆಗ ಅಣ್ಣಯ್ಯ ಹೋಗಿ ಅವಳನ್ನು ಕಾಪಾಡ್ತಾನೆ.
ಈಗ ಜಯದೇವ್ ಕೂಡ ಶಕುಂತಲಾಳನ್ನು ಹೊರಗಡೆ ಹಾಕಿದರೂ ಕೂಡ ಆಶ್ಚರ್ಯವಿಲ್ಲ. ಆಗ ಗೌತಮ್, ಶಕುಂತಲಾಳನ್ನು ಕಾಪಾಡಲೂಬಹುದು. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಯಾವ ರೀತಿಯ ಟ್ವಿಸ್ಟ್ ಎದುರಾಗಬಹುದು ಎಂದು ಕಾದು ನೋಡಬೇಕಿದೆ. ಇನ್ನು ಜಯದೇವ್, ಶಕುಂತಲಾ ಸೇರಿಕೊಂಡು ಭೂಮಿಕಾ, ಗೌತಮ್, ಆಕಾಶ್, ಮಲ್ಲಿಯನ್ನು ಹುಡುಕಬೇಕಿದೆ. ಆನಂತರ ಏನಾಗುವುದು ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಮಲ್ಲಿ ಪಾತ್ರದಲ್ಲಿ ಅನ್ವಿತಾ ಸಾಗರ್, ಆಕಾಶ್ ಪಾತ್ರದಲ್ಲಿ ದುಷ್ಯಂತ್ ಚಕ್ರವರ್ತಿ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ಅವರು ನಟಿಸುತ್ತಿದ್ದಾರೆ.
