ಬಿಗ್ ಬಾಸ್ ಮನೆಯಲ್ಲಿ ಅರಸಿಯಾಗಿ ದಬ್ಬಾಳಿಕೆ ಮಾಡುತ್ತಿದ್ದ ನಿರೂಪಕಿ ಜಾಹ್ನವಿಗೆ ಇದೀಗ ಸಂಕಷ್ಟ ಎದುರಾಗಿದೆ. ಧ್ರುವಂತ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಸೇರಿದಂತೆ ಹಲವು ಸ್ಪರ್ಧಿಗಳು ಆಕೆಯನ್ನು ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದಾರೆ. ಈ ಕಾರಣದಿಂದ ಜಾಹ್ನವಿ ಡೇಂಜರ್ ಜೋನ್‌ಗೆ ತಲುಪಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಿರೂಪಕಿ ಜಾಹ್ನವಿ ಅವರು ಒಂಟಿಗಳ ತಂಡದಲ್ಲಿ ಅರಸಿಯಾಗಿದ್ದಾರೆ. ಆದರೆ, ಎಲ್ಲ ಸಹ ಸ್ಪರ್ಧಿಗಳಿಗೆ ತುಂಬಾ ದಬ್ಬಾಳಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇನ್ನು ತಮಗೆ ಗೊತ್ತಿಲ್ಲದ ವಿಚಾರಗಳಿಗೂ ಸುಖಾಸುಮ್ಮನೆ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದಾರೆ. ಇದೀಗ ಎಲ್ಲರೂ ಟಾರ್ಗೆಟ್ ಮಾಡಿ ನಿರೂಪಕಿ ಜಾಹ್ನವಿಯನ್ನು ಹೊರಗೆ ಕಳುಹಿಸಲು ನಾಮಿನೇಟ್ ಮಾಡಿ ಡೇಂಜರ್ ಜೋನ್‌ಗೆ ಕಳಿಸುತ್ತಿದ್ದಾರೆ.

ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆ ಮಾಡಲಾದ ಪ್ರೋಮೋದಲ್ಲಿ ನಟ ಧ್ರುವಂತ್ ಜಾಹ್ನವಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದಾದ ನಂತರ ಗಿಲ್ಲಿ ನಟ ಮತ್ತು ಕಾವ್ಯ ಶೈವ ಜೋಡಿ ಬಂದು ಜಾಹ್ನವಿಯವರನ್ನೇ ಎಲಿಮಿನೇಷನ್‌ಗೆ ನಾಮಿನೇಟ್ ಮಾಡುತ್ತಾರೆ. ಇದಕ್ಕೆ ಗಿಲ್ಲಿ ನಟ ಕಾರಣ ಕೊಡುವಾಗ ಯಾವಾಗ ಬೇಕೋ ಅವಾಗ ಜಾಹ್ನವಿ ಚೇಂಜ್ ಆಗುತ್ತಾರೆ ಎಂದು ಹೇಳುತ್ತಾರೆ. ಆಗ ನೀವು ಎಷ್ಟು ಸಾರಿ ಬೇಕೋ ಅಷ್ಟು ಚೇಂಜ್ ಆಗಿ. ಚೇಂಜ್ ಆಗೋದನ್ನು ನೀವು ಹೇಳೋದು ಬೇಡವೆಂದು ಹೇಳುತ್ತಾರೆ. ಇದಾದ ನಂತರ ಗಿಲ್ಲಿ ನಟ ನೀವು ಬೇಕಾದರೆ ಚೇಂಜ್ ಆಗಿ ನಾನು ಆಗೋದಿಲ್ಲ ಎಂದು ಹೇಳಿ ತಿರುಗೇಟು ಕೊಡುತ್ತಾರೆ.

ಜಾಹ್ನವಿ ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿ:

ಇದಾದ ನಂತರ ರಕ್ಷಿತಾ ಶೆಟ್ಟಿ ಬಂದು ಜಾಹ್ನವಿ ಅವರನ್ನೇ ನಾಮಿನೇಟ್ ಮಾಡುತ್ತಾರೆ. ಇದಕ್ಕೆ ಕಾರಣ ಕೊಡುವಾಗ, ಜಾಹ್ನವಿ ಅವರು ಹೇಳಿಕೆ ನೀಡಿದ್ದನ್ನು ಇಲ್ಲಿ ಮುನ್ನೆಲೆಗೆ ತಂದಿದ್ದಾರೆ. ರಕ್ಷಿತಾ ಶೆಟ್ಟಿ ತಪ್ಪು ತಪ್ಪಾಗಿ ಕನ್ನಡವನ್ನು ಮಾತನಾಡಿ ಫೇಮಸ್ ಆಗಿ, ಇದೀಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಹೀಗಾಗಿ ಎಲಿಮಿನೇಟ್ ಮಾಡಿ ಬಿಗ್ ಬಾಸ್ ಮನೆಯಿಂದ ಸ್ಪಂದನಾ, ಮಾಳು ಹಾಗೂ ರಕ್ಷಿತಾ ಶೆಟ್ಟಿ ಮೂವರ ಪೈಕಿ ರಕ್ಷಿತಾ ಅವರನ್ನು ಹೊರಗೆ ಕಳಿಸುವಂತೆ ನಾಮಿನೇಟ್ ಮಾಡಿದ್ದರು. ಇದನ್ನು ನೆನಪಿಸಿಕೊಂಡು ರಕ್ಷಿತಾ ಶೆಟ್ಟಿ ಆಕ್ರೋ ಹೊರಹಾಕಿ ಇದೀಗ ಜಾಹ್ನವಿ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಎಲ್ಲರ ಪರ್ಸನಲ್ ಲೈಫ್ ಗೌರವಿಸಿ:

ಇದಕ್ಕೆ ಜಾಹ್ನವಿ ಅವರು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ರಕ್ಷಿತಾ ನಮ್ಮ ಬ್ಯಾಕ್ ಸ್ಟೋರಿ ಏನಿದೆ ಎಂಬುದು ನಿಮಗೆ ಗೊತ್ತಿಲ್ಲ. ನೀವು ಕೂಡ ಏನೋ ಮಾಡಿ ವೈರಲ್ ಆಗಬಹುದು. ತಪ್ಪು , ತಪ್ಪು ಮಾತನಾಡುವುದಕ್ಕೂ ಕೂಡ ಟ್ಯಾಲೆಂಟ್ ಇರಬೇಕು. ಟ್ಯಾಲೆಂಟ್ ಇಲ್ಲಿದೆ ಯಾರೂ ಫೇಮಸ್ ಆಗುವುದಿಲ್ಲ. ಎಲ್ಲರ ಪರ್ಸನಲ್ ಲೈಫ್‌ ಬಗ್ಗೆ ನೀವು ಗೌರವ ಕೊಡುವುದನ್ನು ಕಲಿಯಬೇಕು ಎಂದು ಹೇಳಿದರು. ಇದಕ್ಕೆ ಮನೆ ಮಂದಿಯೆಲ್ಲಾ ಚಪ್ಪಾಳೆ ತಟ್ಟಿದರು. ಆಗ ಜಾಹ್ನವಿಗೆ ತನ್ನ ತಪ್ಪಿನ ಅರಿವಾದಂತಾಗಿ ಸುಮ್ಮನೆ ಕುಳಿತುಕೊಂಡರು.