ಬಿಗ್ ಬಾಸ್ ಸೀಸನ್ 12 ರಲ್ಲಿ, ಕಾಕ್ರೋಚ್ ಸುಧಿಗೆ ಅಸುರರ ರಾಜನ ವಿಶೇಷ ಅಧಿಕಾರ ಸಿಕ್ಕಿದೆ. ಅಸುರನಂತೆ ಸಿದ್ಧವಾಗುತ್ತಿದ್ದ ಸುಧಿಗೆ ಇಂದು ಡ್ಯಾನ್ಸ್ ಉಂಟಾ ಎಂದು ಕರಾವಳಿ ಸ್ಟೈಲ್‌ನಲ್ಲಿ ಗೇಲಿ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸುಧಿ ರಕ್ಷಿತಾ ಶೆಟ್ಟಿಗೆ ಊಟ ಕೊಡದಂತೆ ಸಹಾಯಕರಿಗೆ ಆದೇಶಿಸಿದ್ದಾರೆ.

ಬಿಗ್ ಬಾಸ್ ಸೀಸನ್ 12 ರಿಯಾಲಿಟಿ ಶೋ ಮನೆಯಲ್ಲಿ ಇದೀಗ 17 ಜನ ಕಂಟೆಸ್ಟೆಂಟ್‌ಗಳಿದ್ದಾರೆ. ಎಲ್ಲ ಕಂಟೆಸ್ಟೆಂಟ್‌ಗಳನ್ನು ಜಂಟಿ ಮತ್ತು ಒಂಟಿಗಳನ್ನಾಗಿ ಮಾಡಿ ಟಾಸ್ಕ್ ಮಾಡಿಸಲಾಗುತ್ತಿದೆ. ಇದರಲ್ಲಿ ಒಂಟಿಗಳಲ್ಲಿ ಇರುವ ಅರಸ ಕಾಕ್ರೋಚ್ ಸುಧಿಗೆ ವಿಶೇಷ ಅಧಿಕಾರವೊಂದನ್ನು ನೀಡಲಾಗಿದೆ. ಎಲ್ಲ ಜಂಟಿಗಳನ್ನು ಅಸುರರೆಂದು ವಿಭಾಗ ಮಾಡಲಾಗಿದ್ದು, ಎಲ್ಲ ಅಸುರರಿಗೆ ನಾಯಕನಾಗಿ ಒಂಟಿ ತಂಡದಲ್ಲಿರುವ ಕಾಕ್ರೋಚ್ ಸುಧಿಯನ್ನು ಅಸುರರ ರಾಜನೆಂದು ನೇಮಿಸಲಾಗಿದೆ.

ಅಸುರರ ರಾಜನಂತೆ ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡು ರೆಡಿ ಆಗುವಾಗ ಅಲ್ಲಿಗೆ ಬಂದ ತುಳು ನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಕರಾವಳಿ ಭಾಷೆ ಸ್ಟೈಲ್‌ನಲ್ಲಿ 'ಇವತ್ತು ಇದೀ ಎಲ್ಲ ಹಾಕಿ ಡ್ಯಾನ್ಸ್ ಉಂಟಾ..? ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಅಸುರ ರಾಜನ ಸೇವಕರಾದ ಜಾಹ್ನವಿ ಮತ್ತು ಧ್ರುವಂತ್ ನಗಾಡುತ್ತಾರೆ. ಆಗ ಸಿಟ್ಟಿಗೆದ್ದ ಅಸುರರ ರಾಜ ಸುಧೀ ಇವಳಿಗೆ ಇವತ್ತು ಊಟ ಕೊಡಬೇಡಿ ಎಂದು ಆದೇಶ ಹೊರಡಿಸುತ್ತಾನೆ. ಧ್ರವಾ ಮಧ್ಯಾಹ್ನ ಆ ಹುಡುಗಿಗೆ ಊಟ ಕೊಡದಂತೆ ಮತ್ತೊಮ್ಮೆ ನಿರ್ದೇಶನ ನೀಡುತ್ತಾರೆ.

ಕಾಕ್ರೋಚ್ ಸುಧಿ ಮಾತು ಅರ್ಥೈಸಿಕೊಳ್ಳದ ರಕ್ಷಿತಾ ಶೆಟ್ಟಿ:

ಆಗಲೂ ಕಾಕ್ರೋಚ್ ಸುಧಿಯ ಮಾತನ್ನು ಅರ್ಥ ಮಾಡಿಕೊಳ್ಳದ ರಕ್ಷಿತಾ ಶೆಟ್ಟಿ, ಊಟ ಕೊಡಬೇಕಾ ಇಲ್ಲವಾ? ಎಂದು ಪ್ರಶ್ನೆ ಮಾಡುತ್ತಾರೆ. ಆಗ ನೀವು ಮಧ್ಯಾಹ್ನ ಊಟ ಮಾಡಬೇಡಿ ಎಂದು ಧೃವಂತ್ ಹೇಳುತ್ತಾರೆ. ಇದೇ ವೇಳೆ ಗಾರ್ಡನ್ ಏರಿಯಾದಲ್ಲಿ ನಿಂತಿದ್ದ ಅಸುರರಾದ ಜಂಟಿಗಳು ಗಿಲ್ಲಿ ನಟ ಹಾಗೂ ಕಾವ್ಯ ಶೈವ ಇರುವ ಜಾಗಕ್ಕೆ ಅಭಿಷೇಕ್ ಮತ್ತು ಅಶ್ವಿನಿ ಅವರು ಬರುತ್ತಾರೆ. ಆಗ ಕಾವ್ಯಾಳ ಗಲ್ಲವನ್ನು ಮುಟ್ಟಿದ ಅಭಿಷೇಕ್ ಕಿಚಾಯಿಸುತ್ತಾನೆ. ಆಗ ಗಿಲ್ಲಿ ನಟ ಸುಮ್ಮನೆ ಹೋಗು, ಇಲ್ಲದಿದ್ದರೆ ಅಸುರ ನಾಯಕನಿಗೆ ಕಂಪ್ಲೇಂಟ್ ಮಾಡುವುದಾಗಿ ಹೇಳುತ್ತಾನೆ.

ಅಭಿಷೇಕ್ ಹೇಳ್ಕೋ ಹೋಗು ಎಂದಿದ್ದಕ್ಕೆ, ಗಿಲ್ಲಿ ನಟ ಲೇ ಸುಧಿ ಬಾಲಾ.. ಇಲ್ಲಿ..., ನೋಡು ಎಂದು ಕರೆಯುತ್ತಾನೆ. ಮುಂದುವರೆದು ನಿಂಗೆ ಸುಧಿ ಕರಿತಾ ಇರೋದು. ಪ್ರಡ್ಯೂಸರ್‌ಗೆ ಹಾಕಿಕೊಟ್ಟುಬಿಡ್ತೀನಿ ಬಂದಿಲ್ಲಾ ಅಂದ್ರೆ. ಸಿನಿಮಾ ಒಪ್ಕೊಂಡು ಇಲ್ಲಿಗೆ ಓಡಿ ಬಮದಿದ್ದೀಯಾ ಅಂತಾ ಪ್ರಡ್ಯೂಸರ್‌ಗೆ ಹಾಕಿಕೊಡ್ತೀನಿ. ಸುಧೀ...., ಎಂದು ಜೋರಾಗಿ ಕೂಗುತ್ತಾನೆ. ಇದಕ್ಕೆ ಗಾರ್ಡನ್ ಏರಿಯಾದಲ್ಲಿದ್ದ ಎಲ್ಲರೂ ನಗಾಡುತ್ತಾರೆ.