- Home
- Entertainment
- TV Talk
- Karna Serial: 'ನಿಮಗೆ ನಮ್ರತಾ ಗೌಡ, ಭವ್ಯಾ ಗೌಡ ನಡುವೆ ಯಾರಿಷ್ಟ?'- Kiran Raj ಉತ್ತರಕ್ಕೆ ಹುಬ್ಬೇರಿಸಿದ ಹೀರೋಯಿನ್ಸ್!
Karna Serial: 'ನಿಮಗೆ ನಮ್ರತಾ ಗೌಡ, ಭವ್ಯಾ ಗೌಡ ನಡುವೆ ಯಾರಿಷ್ಟ?'- Kiran Raj ಉತ್ತರಕ್ಕೆ ಹುಬ್ಬೇರಿಸಿದ ಹೀರೋಯಿನ್ಸ್!
ಕರ್ಣ ಧಾರಾವಾಹಿಯಲ್ಲಿ ಕರ್ಣನಾಗಿ ಕಿರಣ್ ರಾಜ್, ನಿಧಿಯಾಗಿ ಭವ್ಯಾ ಗೌಡ, ನಿತ್ಯಾ ಆಗಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ನಮ್ರತಾ ಗೌಡ, ಭವ್ಯಾ ಗೌಡ ನಡುವೆ ಯಾರು ಇಷ್ಟ ಎಂದು ಕಿರಣ್ ರಾಜ್‌ಗೆ ಪ್ರಶ್ನೆ ಮಾಡಲಾಗಿತ್ತು. ಆಗ ಕಿರಣ್ ರಾಜ್ ನೀಡಿದ ಉತ್ತರ ಮಾತ್ರ..

ಇಬ್ಬರು ನಾಯಕಿಯರು
ಕರ್ಣ ಧಾರಾವಾಹಿಯಲ್ಲಿ ಹೀರೋ ಕಿರಣ್ ರಾಜ್ ಅವರಿಗೆ ನಮ್ರತಾ ಗೌಡ, ಭವ್ಯಾ ಗೌಡ ಹೀರೋಯಿನ್. ಈ ಹಿಂದೆ ನಮ್ರತಾ ಗೌಡ ಅವರು ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಧಾರಾವಾಹಿಯಲ್ಲಿ ನಟಿಸಿದ್ದರು. ಭವ್ಯಾ ಗೌಡ ಅವರು ‘ಗೀತಾ’ ಧಾರಾವಾಹಿಯಲ್ಲಿ ನಟಿಸಿದ್ದರು. ಕಿರಣ್ ರಾಜ್ ಅವರು ಕನ್ನಡ, ಹಿಂದಿ ಧಾರಾವಾಹಿಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಯಾರ ಜೊತೆ ಮದುವೆ ಆಗತ್ತೆ?
ಕರ್ಣ ಧಾರಾವಾಹಿಯಲ್ಲಿ ಕಿರಣ್ ರಾಜ್‌ಗೆ ಘಟಾನುಘಟಿಗಳೇ ಹೀರೋಯಿನ್ ಆಗಿದ್ದಾರೆ. ಹೀಗಾಗಿ ಕಿರಣ್ ರಾಜ್ ಅವರಿಗೆ ಸೀರಿಯಲ್‌ನಲ್ಲಿ ಯಾರ ಜೊತೆ ಮದುವೆ ಆಗಲಿದೆ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ನಿತ್ಯಾ, ಕರ್ಣ ಮದುವೆ ವಿಡಿಯೋ ಪ್ರಸಾರ
ಕೆಲವರು ಕರ್ಣನಿಗೆ ನಿತ್ಯಾ ಜೊತೆ ಮದುವೆ ಆಗಲಿ ಎಂದು ಬಯಸಿದರೆ, ಇನ್ನೂ ಕೆಲವರು ಕರ್ಣ, ನಿಧಿ ಮದುವೆ ಆಗಲಿ ಎಂದು ಬಯಸುತ್ತಿದ್ದಾರೆ. ಕರ್ಣ ಹಾಗೂ ನಿತ್ಯಾ ಮದುವೆ ಆಗುವ ವಿಡಿಯೋ ಪ್ರಸಾರ ಆಗಿದ್ದು, ಸಾಕಷ್ಟು ಜನರು ನಿತ್ಯಾ-ಕರ್ಣ ಜೋಡಿ ಬೇರೆ ಬೇರೆ ಆಗಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ.
ಕಿರಣ್ ರಾಜ್‌ಗೆ ಕೇಳಿದ ಪ್ರಶ್ನೆ ಏನು?
ಅಂದಹಾಗೆ ಇತ್ತೀಚೆಗೆ ಜೀ ಕುಟುಂಬ ಅವಾರ್ಡ್ಸ್ ಫಂಕ್ಷನ್ ನಡೆಯಿತು. ಅಲ್ಲಿ ಡ್ಯಾನ್ಸ್, ಒಂದಿಷ್ಟು ಆಟಗಳು, ಮಾತು ಎಲ್ಲವೂ ಇತ್ತು. ಹೀಗಿರುವಾಗ ಕರ್ಣ ಧಾರಾವಾಹಿ ನಟ ಕಿರಣ್ ರಾಜ್‌ಗೆ “ನಿಮಗೆ ನಮ್ರತಾ ಗೌಡ ಹಾಗೂ ಭವ್ಯಾ ಗೌಡ ನಡುವೆ ಯಾರು ಇಷ್ಟ?” ಎಂದು ನಿರಂಜನ್ ದೇಶಪಾಂಡೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಕಿರಣ್ ರಾಜ್ ಉತ್ತರ ನೀಡಿದ್ದಾರೆ.
ಕಿರಣ್ ರಾಜ್ ಏನು ಹೇಳಿದ್ರು?
ಕಿರಣ್ ರಾಜ್ ಅವರು, “ಸ್ಕ್ರಿಪ್ಟ್ ಅಲ್ಲಿ ಯಾರ ಹೆಸರು ಇರತ್ತೋ ಅವರೇ ಇಷ್ಟ” ಎಂದು ಹೇಳಿದ್ದರು. ಈ ಉತ್ತರ ಕೇಳಿ ಭವ್ಯಾ ಗೌಡ, ನಮ್ರತಾ ಗೌಡ ಅವರೇ ಸರ್ಪ್ರೈಸ್ ಆಗಿದ್ದಾರೆ. ಒಟ್ಟಿನಲ್ಲಿ ಸದಾ ಮಾತಿನಲ್ಲೇ ಪಂಚ್ ಕೊಡುವ ಕಿರಣ್ ರಾಜ್, ಈಗ ಮತ್ತೆ ಸಖತ್ ಉತ್ತರ ಕೊಟ್ಟು ಎಲ್ರ ಮನಸ್ಸು ಗೆದ್ದಿದ್ದಾರೆ.