ಬಿಗ್‌ಬಾಸ್ ಕನ್ನಡ ಸೀಸನ್ 12 ಪುನಾರಂಭ ಯಾವಾಗ? ಬುಧವಾರದ ಸಂಚಿಕೆ ಪ್ರಸಾರವಾಗುತ್ತಾ?
Bigg Boss Re Start Date: ಬಿಗ್‌ಬಾಸ್ ಕನ್ನಡದ ಸೆಟ್‌ಗೆ ಬೀಗ ಜಡಿಯಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮಂಗಳವಾರದ ಸಂಚಿಕೆ ಪ್ರಸಾರವಾಗಿದ್ದರೂ, ನ್ಯಾಯಾಲಯದ ಮುಂದಿನ ತೀರ್ಮಾನದವರೆಗೆ ಶೋನ ಭವಿಷ್ಯ ಅನಿಶ್ಚಿತವಾಗಿದೆ.

ಬಿಗ್‌ಬಾಸ್ ಸೆಟ್‌ಗೆ ಬೀಗ
ಮಂಗಳವಾರ ಸಂಜೆ 7 ಗಂಟೆಗೆ ಬಿಗ್‌ಬಾಸ್ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಹೊರ ಬಂದಿದ್ದಾರೆ. ಬಿಗ್‌ಬಾಸ್ ಸೆಟ್ ಸೇರಿದಂತೆ ಇಡೀ ಜಾಲಿವುಡ್ ಸ್ಟುಡಿಯೋ ಸೀಜ್ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮಂಗಳವಾರ ಬಿಗ್‌ಬಾಸ್ ಸಂಚಿಕೆ ಪ್ರಸಾರವಾಗಿದೆ.
ಬುಧವಾರದ ಸಂಚಿಕೆ ಪ್ರಸಾರ ಆಗುತ್ತಾ?
ಕೆಲ ಮಾಹಿತಿಗಳ ಪ್ರಕಾರ, ಬುಧವಾರದ ಸಂಚಿಕೆಯೂ ನಿಗಧಿತ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ನಾಳೆಯೇ ನ್ಯಾಯಾಲಯದಿಂದ ರಿಲೀಫ್ ಸಿಕ್ಕರೆ ಮುಂದಿನ ಸಂಚಿಕೆಗಳು ಪ್ರಸಾರವಾಗಲಿವೆ. ನ್ಯಾಯಾಲಯದಿಂದ ಯಾವುದೇ ರಿಲೀಫ್ ಸಿಗದಿದ್ದರೆ ಬುಧವಾರದ ಸಂಚಿಕೆ ಪ್ರಸಾರವಾಗೋದು ಬಹುತೇಕ ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರಗೊಂಡು ರಾತ್ರಿ 11 ಗಂಟೆಗೆ ಮುಕ್ತಾಯವಾಗುತ್ತದೆ. ಶನಿವಾರ ಮತ್ತು ಭಾನುವಾರ ಸುದೀಪ್ ನಿರೂಪಣೆಯಲ್ಲಿ ಎರಡು ಗಂಟೆ ಪ್ರಸಾರವಾಗುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಆರಂಭವಾಗಿ ರಾತ್ರಿ 11 ಗಂಟೆಗೆ ಕೊನೆಯಾಗುತ್ತದೆ.
ಇದನ್ನೂ ಓದಿ: ಅತಿದೊಡ್ಡ ರಿಯಾಲಿಟಿ ಶೋಗೆ ಬೀಗ: ಬಿಗ್‌ಬಾಸ್ ಕಣ್ಣಿಗೆ ಮಣ್ಣೆರಚಿತಾ ಜಾಲಿವುಡ್ ಸ್ಟುಡಿಯೋ?
ಬಿಡದಿಯ ಈಗಲ್ ಟನ್ ರೆಸಾರ್ಟ್
ಈಗಾಗಲೇ ಎಲ್ಲಾ 17 ಸ್ಪರ್ಧಿಗಳನ್ನು ಬಿಗ್‌ಬಾಸ್ ಸೆಟ್‌ನಿಂದ ಬಿಡದಿಯ ಈಗಲ್ ಟನ್ ರೆಸಾರ್ಟ್‌ಗೆ ಕರೆದುಕೊಂಡು ಹೋಗಲಾಗಿದೆ. ಮುಂದಿನ ತೀರ್ಮಾನದವರೆಗೂ ಎಲ್ಲಾ ಸ್ಪರ್ಧಿಗಳು ಇಲ್ಲಿಯೇ ಉಳಿಯಲಿದ್ದಾರೆ. ಬಿಗ್‌ಬಾಸ್ ಶೋಗೆ ಅಡ್ಡಿಯುಂಟಾಗಿದ್ದಕ್ಕೆ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: BBK 12, Exclusive video: ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳ ದೃಶ್ಯ
11 ಸೀಸನ್ ಗಳು ಸೆಟ್ ಮಾಹಿತಿ
ಕನ್ನಡದ ಎರಡು ಬಿಗ್‌ಬಾಸ್ ಶೋಗಳನ್ನು ಮಹಾರಾಷ್ಟ್ರದ ಲೋನಾವಾಲದಲ್ಲಿ ನಡೆಸಲಾಗಿತ್ತು. ಬೆಂಗಳೂರಿನಿಂದ ಲೋನಾವಾಲ ಪ್ರಯಾಣ ದೀರ್ಘವಾಗಿದ್ದರಿಂದ 3ನೇ ಸೀಸನ್ ಬಿಡದಿಯ ಇನ್ನೋವೇಟಿವ್ ಪಿಲಂ ಸಿಟಿಯಲ್ಲಿ ನಡೆದಿತ್ತು. ಬಿಗ್‌ಬಾಸ್ ಕನ್ನಡದ ಮೊದಲ ಒಟಿಟಿ ಶೋಗೆ ಇಲ್ಲಿಯೇ ಸೆಟ್ ಹಾಕಲಾಗಿತ್ತು. ನಂತರ ತಾವರೆಕೆರೆ ಮತ್ತು ದೊಡ್ಡ ಆಲದ ಮರದ ಬಳಿ ಸೆಟ್ ಹಾಕಿ ಎರಡು ಸೀಸನ್ ನಡೆಸಲಾಗಿತ್ತು. ಈ ಬಾರಿ ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಸೆಪ್ಟೆಂಬರ್ 28ರಿಂದ 11ನೇ ಸೀಸನ್ ಆರಂಭಿಸಲಾಗಿತ್ತು.
ಇದನ್ನೂ ಓದಿ: ರಾಜ್ಯ, ರಾಷ್ಟ್ರ ರಾಜಕಾರಣದ ನೆಚ್ಚಿನ ಐಷಾರಾಮಿ ಕೇಂದ್ರಕ್ಕೆ ಸೇರಿದ 17 ಬಿಗ್‌ಬಾಸ್ ಸ್ಪರ್ಧಿಗಳು!