- Home
- Entertainment
- TV Talk
- ನಾನೇನೆಂದು ತೋರಿಸ್ತೇನೆ, ಈ ಡ್ರೆಸ್ ಅಷ್ಟೇ ನೋಡ್ಬೇಡಿ ಎನ್ನುತ್ತಲೇ ಲೈವ್ಗೆ ಬಂದ Bigg Boss ಜಾಹ್ನವಿ ಹೇಳಿದ್ದೇನು?
ನಾನೇನೆಂದು ತೋರಿಸ್ತೇನೆ, ಈ ಡ್ರೆಸ್ ಅಷ್ಟೇ ನೋಡ್ಬೇಡಿ ಎನ್ನುತ್ತಲೇ ಲೈವ್ಗೆ ಬಂದ Bigg Boss ಜಾಹ್ನವಿ ಹೇಳಿದ್ದೇನು?
ಬಿಗ್‌ಬಾಸ್ ಸ್ಪರ್ಧಿ, ನಿರೂಪಕಿ ಜಾಹ್ನವಿ ಅವರು ತಮ್ಮ ಡಿವೋರ್ಸ್ ವಿಚಾರವಾಗಿ ಮನೆಯೊಳಗೆ ಮತ್ತು ಹೊರಗೆ ಸದ್ದು ಮಾಡುತ್ತಿದ್ದಾರೆ. ಇದರ ನಡುವೆಯೇ, ಅವರು ದೊಡ್ಮನೆಗೆ ಹೋಗುವ ಮುನ್ನ ತಮ್ಮ ಆಟದ ಲೆಕ್ಕಾಚಾರ, 'ನನ್ನ ಜೀವನ, ನನ್ನ ನಿಯಮ' ಎಂಬ ನಿಲುವಿನ ಬಗ್ಗೆ ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ.

ಬಿಗ್ಬಾಸ್ನಲ್ಲಿ ಜಾಹ್ನವಿ ಹವಾ
ಆ್ಯಂಕರ್ ಜಾಹ್ನವಿ ಸದ್ಯ ಬಿಗ್ಬಾಸ್ನಲ್ಲಿ (Bigg Boss Jhanvi) ಹವಾ ಸೃಷ್ಟಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಅಲ್ಲದಿದ್ದರೂ ಅವರು ಇಲ್ಲಿ ಹೋದಾಗಿನಿಂದಲೂ ಹೊರಗಡೆ ಅವರ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಅವರು ತಮ್ಮ ಡಿವೋರ್ಸ್ ಕುರಿತು ಬಿಗ್‌ಬಾಸ್ ಮನೆಯಲ್ಲಿ ಮಾತನಾಡಿದ್ದಾಗಿ. ಇಲ್ಲಿ ಅವರು ತಮ್ಮ ಪತಿ ಮತ್ತೊಂದು ಮದುವೆಯಾಗಿದ್ದರು ಎಂದೆಲ್ಲಾ ಹೇಳಿದರೆ, ಅತ್ತ ಅವರ ಮಾಜಿ ಪತಿ, ಮೀಡಿಯಾಗಳ ಮುಂದೆ ಬಂದು ಇವರ ವಿರುದ್ಧ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತಿ್ದಾರೆ.
ಸುದ್ದಿ ನಿರೂಪಕಿಯಾಗಿ ವೃತ್ತಿಜೀವನ
ಸುದ್ದಿ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ ಜಾಹ್ನವಿ, `ಗಿಚ್ಚಿ ಗಿಲಿಗಿಲಿ' ಮತ್ತು ನನ್ನಮ್ಮ ಸೂಪರ್ ಸ್ಟಾರ್' ನಂತಹ ಜನಪ್ರಿಯ ರಿಯಾಲಿಟಿ ಶೋ ನಂತರ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಆದರೆ ಅವರು ಈಚೆಗೆ ತಮ್ಮ ಡಿವೋರ್ಸ್ ಕುರಿತು ಕೆಲವು ಮಾಧ್ಯಮಗಳಲ್ಲಿ ಮಾತನಾಡಿದ್ದರು. 10 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿರುವುದಕ್ಕೆ ಅವರು ಕಾರಣ ನೀಡಿದ್ದರು. ಈ ಮೂಲಕ ಸದ್ದು ಮಾಡುತ್ತಿರುವಾಗಲೇ ಅವರಿಗೆ ಬಿಗ್ಬಾಸ್ನಿಂದ ಕರೆ ಬಂದಿದ್ದು ಕೂಡ ಕಾಕತಾಳಿಯವೋ ಗೊತ್ತಿಲ್ಲ. ಆದರೆ ಇದೇ ವಿಷಯವನ್ನು ಬಿಗ್‌ಬಾಸ್ ಮನೆಯಲ್ಲಿಯೂ ಹೇಳುವ ಮೂಲಕ, ಹೊರ ಪ್ರಪಂಚದಲ್ಲಿ ಅವರು ಸದ್ದು ಮಾಡುತ್ತಿದ್ದಾರೆ.
ನೇರಪ್ರಸಾರದಲ್ಲಿ ಮಾತು
ಇದರ ನಡುವೆಯೇ, ಅವರು ಬಿಗ್ಬಾಸ್ಗೂ ಹೋಗುವ ಮುನ್ನ ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಗ್‌ಬಾಸ್ ಒಳಗೆ ಹೋಗುವ ಪೂರ್ವದಲ್ಲಿ ತಮ್ಮ ಸೋಷಿಯಲ್ ಮೀಡಿಯಾ ಅನ್ನು ಹ್ಯಾಂಡಲ್ ಮಾಡಲು ಸ್ಪರ್ಧಿಗಳು ತಮ್ಮವರಿಗೆ ಕೊಟ್ಟು ಹೋಗಬೇಕು. ಆಗಾಗ್ಗೆ ಅವರು, ಖುದ್ದು ಸ್ಪರ್ಧಿಗಳೇ ಮಾತನಾಡಿದಂತೆ ವಿಡಿಯೋ ಮಾಡಿ ವೋಟ್ ಕೇಳುವುದು ಇದೆ. ಅದೇ ರೀತಿ ದೊಡ್ಮನೆಗೂ ಹೋಗುವ ಪೂರ್ವದಲ್ಲಿ ಜಾಹ್ನವಿ ಮಾತನಾಡಿರುವ ವಿಡಿಯೋ ಇದಾಗಿದೆ.
ನನ್ನದೇ ರೂಲ್ಸ್ ಇರುತ್ತದೆ
ಇಲ್ಲಿ ನನ್ನದೇ ಇಷ್ಟಕಷ್ಟ ಇರುತ್ತೆ. ನನ್ನದೇ ರೂಲ್ಸ್ ಇರುತ್ತದೆ. ಅವೆಲ್ಲವೂ ನನಗೆ ಒಳ್ಳೆಯದ್ದನ್ನೇ ಮಾಡುತ್ತದೆ ಎಂದು ಭಾವಿಸಿದ್ದೇನೆ. ಬಿಗ್‌ಬಾಸ್ ಎನ್ನೋದು ವ್ಯಕ್ತಿತ್ವದ ಆಟ. ಈ ರೀತಿ ನಾನು ಪಾಷ್ ಆಗಿ ಕಾಣಿಸಿಕೊಳ್ಳುವುದರಿಂದ ಜಾಹ್ನವಿ ಎಂದರೆ ಬೇರೆಯದ್ದೇ ಎಂದು ಕೆಲವು ಅರ್ಥೈಸಿಕೊಂಡಿದ್ದಾರೆ. ಆದರೆ ನನ್ನ ವ್ಯಕ್ತಿತ್ವ ಏನು ಎಂದು ಬಿಗ್‌ಬಾಸ್ ಮೂಲಕ ತಿಳಿದು ಇಷ್ಟಪಡ್ತೀರಾ ಎಂದುಕೊಳ್ಳುತ್ತೇನೆ. ಈ ಬಟ್ಟೆ ನೋಡುವ ಬದಲು ವ್ಯಕ್ತಿತ್ವ ನೋಡಿ ಎಂದು ಅವರು ತಿಳಿಸಿದ್ದಾರೆ.
ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ
ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ. ಲೆಕ್ಕಾಚಾರ ಇಟ್ಟುಕೊಂಡೇ ಹೋಗಿದ್ದೇನೆ. ಎಲ್ಲಾ ಪ್ರಿಪರೇಷನ್ ಮಾಡಿಕೊಂಡೇ ಹೋಗಿದ್ದೇನೆ. ನಿಮ್ಮ ಸಪೋರ್ಟ್ ನನಗೆ ಬೇಕು. ಕೊನೆಯವರೆಗೂ ಸಪೋರ್ಟ್ ಮಾಡಿ ಎಂದು ಜಾಹ್ನವಿ ಕೇಳಿಕೊಂಡಿದ್ದಾರೆ.
ನನ್ನ ಎಂಟ್ರಿ ನಿಮಗೆಲ್ಲಾ ತುಂಬಾ ಇಷ್ಟ ಆಗಿದೆ
ನನ್ನ ಎಂಟ್ರಿ ನಿಮಗೆಲ್ಲಾ ತುಂಬಾ ಇಷ್ಟ ಆಗಿದೆ ಎಂದುಕೊಳ್ಳುತ್ತೇನೆ. ಇದು ಬಹಳ ದಿವಸಗಳ ವಿಷ್. ಅದೀಗ 12ನೇ ಸೀಸನ್ನಲ್ಲಿ ಫುಲ್ಫಿಲ್ ಆಗಿದೆ. ನಾನು ಹುಟ್ಟಿರೋದು ಸೆಪ್ಟೆಂಬರ್ 21. ಅದಕ್ಕಾಗಿಯೇ 12 ಮತ್ತು 21 ನನ್ನ ಲಕ್ಕಿ ನಂಬರ್ ಆಗಿದೆ ಎಂದಿದ್ದಾರೆ ಜಾಹ್ನವಿ.
ಸೀಸನ್ ಬಿಗ್‌ಬಾಸ್ ತುಂಬಾನೇ ವಿಶೇಷ
ಈ ಸೀಸನ್ ಬಿಗ್‌ಬಾಸ್ ತುಂಬಾನೇ ವಿಶೇಷವಾಗಿರುತ್ತದೆ. ಈ ಸೀಸನ್ನಲ್ಲಿ ನಾನು ಎಂಟ್ರಿ ಕೊಡ್ತಿರೋದು ನಿಮಗೆ ಖುಷಿಯಾಗಿದೆ ಎಂದುಕೊಂಡಿದ್ದೇನೆ. ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತಿದ್ದೇನೆ. ನನ್ನ ಜೀವನ, ನನ್ನ ನಿಯಮ (My life, my rules) ಎಂದುಕೊಂಡು ಒಳಗೆ ಹೋಗುತ್ತಿದ್ದೇನೆ. ಇದ್ಯಾವುದು ಜಂಬದ ಮಾತಲ್ಲ. ಆದರೆ ನನ್ನ ಬದುಕಿನಲ್ಲಿ ಹೊಸ ಹೆಜ್ಜೆ ಶುರುವಾಗಿ ಎಂದು ಅರ್ಥ ಎಂದಿದ್ದಾರೆ ನಿರೂಪಕಿ. ಎಲ್ಲರೂ ಕೊನೆಯವರೆಗೂ ಸಪೋರ್ಟ್ ಮಾಡಿ ಎಂದು ಕೋರಿಕೊಂಡಿದ್ದಾರೆ.