Published : Nov 30, 2025, 06:54 AM ISTUpdated : Dec 01, 2025, 12:07 AM IST

Karnataka News Live: ಇದು ಬೆಂಗಳೂರಾ ಅಥವಾ 'ಲಂಡನ್ನಾ'? ವಿಡಿಯೋದಲ್ಲಿ ಈ ದೃಶ್ಯ ನೋಡಿ ದಂಗಾದ ಜನ!

ಸಾರಾಂಶ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಚರ್ಚೆಯ ವೇಳೆ ರಾಹುಲ್‌ ಗಾಂಧಿ ಅವರು, ರಾಜ್ಯದ ವಿದ್ಯಮಾನಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದ್ದಾರೆ. ಸೋನಿಯಾ ಗಾಂಧಿ ಅವರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡೋಣ ಎಂದು ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೇವಲ ಸಿಎಂ- ಡಿಸಿಎಂ ಬದಲಾವಣೆ ಮಾತ್ರ ಅಲ್ಲ, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗಳ ಬಗ್ಗೆ ರಾಹುಲ್‌ ಗಾಂಧಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ಸೋನಿಯಾ ಗಾಂಧಿ ಜೊತೆ ಚರ್ಚೆ ನಡೆಸಿ ಬಳಿಕ ಸಿಎಂ- ಡಿಸಿಎಂ ಅವರಿಗೆ ಮಾಹಿತಿ ನೀಡಿ ಒಂದೆರಡು ದಿನದಲ್ಲೇ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಐಸಿಸಿ ಉನ್ನತ ಮೂಲಗಳು ಮಾಹಿತಿ ನೀಡಿವೆ.

Bengaluru Weather Turns London Like Viral Foggy Video Stuns Residentsf

12:07 AM (IST) Dec 01

ಇದು ಬೆಂಗಳೂರಾ ಅಥವಾ 'ಲಂಡನ್ನಾ'? ವಿಡಿಯೋದಲ್ಲಿ ಈ ದೃಶ್ಯ ನೋಡಿ ದಂಗಾದ ಜನ!

ಬೆಂಗಳೂರು ಸಾಮಾನ್ಯವಾಗಿ ಚಳಿಗಾಲದಲ್ಲೂ ಬೆಚ್ಚಗಿರುತ್ತದೆ. ಆದರೆ ಈ ಬಾರಿ ಚಳಿ ಹೆಚ್ಚಾಗಿದೆ. ಭಾನುವಾರ, ನವೆಂಬರ್ 30 ರಂದು, ಇಲ್ಲಿ ಅತಿ ಹೆಚ್ಚು ಚಳಿಯ ದಿನ ದಾಖಲಾಗಿದೆ. ಈ ನಡುವೆ, ಬಳಕೆದಾರರು   'ಫ್ರಿಡ್ಜ್‌ನೊಳಗಿನ ಬೆಂಗಳೂರು' ಎಂದು ಕರೆದಿದ್ದಾರೆ. ಲಂಡನ್‌ನ ವಾತಾವರಣಕ್ಕೆ ಹೋಲಿಸಿದ್ದಾರೆ. 

Read Full Story

11:42 PM (IST) Nov 30

ಕೊಡಗು - ಕರ್ತವ್ಯದ ಒತ್ತಡ ಬಿಟ್ಟು ಕ್ರೀಡೆಯಲ್ಲಿ ಮಿಂದೆದ್ದ ಪೊಲೀಸರು!

ಕರ್ತವ್ಯದ ಒತ್ತಡದಿಂದ ಹೊರಬರಲು ಕೊಡಗು ಜಿಲ್ಲಾ ಪೊಲೀಸರಿಗಾಗಿ ಮಡಿಕೇರಿಯಲ್ಲಿ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ವಾಲಿಬಾಲ್, ಕಬ್ಬಡಿ, ಹಗ್ಗಜಗ್ಗಾಟದಂತಹ ವಿವಿಧ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
Read Full Story

11:02 PM (IST) Nov 30

ಮೆದುಳಿನ ಆರೋಗ್ಯಕ್ಕೆ ನೀವು ತಿನ್ನಬೇಕಾದ 6 ಸೂಪರ್ ಫುಡ್ಸ್ ಇಲ್ಲಿವೆ ನೋಡಿ!

ನೆನಪಿನ ಶಕ್ತಿ ಹೆಚ್ಚಿಸಲು ಮತ್ತು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್‌ಗಳು, ಖನಿಜಗಳು, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಒಮೆಗಾ 3 ಫ್ಯಾಟಿ ಆಸಿಡ್‌ ಇರುವ ಆಹಾರಗಳನ್ನು ತಿನ್ನಬೇಕು.

Read Full Story

10:42 PM (IST) Nov 30

ಕಾಯುವಿಕೆ ಮುಗಿತ್ತು - ಡೆವಿಲ್ ಸಿನಿಮಾ ಬಗ್ಗೆ ಜೈಲಿನಿಂದಲೇ ಟ್ವಿಟ್ ಮಾಡಿದ್ರಾ ದರ್ಶನ್?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಎಕ್ಸ್ ಖಾತೆಯಿಂದ 'ದಿ ಡೆವಿಲ್' ಚಿತ್ರದ ಟ್ರೈಲರ್ ಘೋಷಣೆ ಪೋಸ್ಟ್ ವೈರಲ್ ಆಗಿದೆ. ದರ್ಶನ್ ಜೈಲಿನಿಂದಲೇ ಪೋಸ್ಟ್ ಮಾಡಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟುಹಾಕಿದೆ. 

Read Full Story

10:18 PM (IST) Nov 30

'ಪ್ರಲ್ಹಾದ್ ಜೋಶಿ ಅವರು ಏನು ನಮ್ಮ ಪಕ್ಷದವರಾ?' ಅವರಿಗೆ ಯಾಕೆ ಉತ್ತರ ಕೊಡಬೇಕು? ಗೃಹ ಸಚಿವ

G Parameshwara on cabinet reshuffle: ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಅಥವಾ ಸಂಪುಟ ಪುನಾರಚನೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

Read Full Story

10:04 PM (IST) Nov 30

ರಾಂಚಿಯಲ್ಲಿ ವಿರಾಟ್ ಕೊಹ್ಲಿ ದರ್ಬಾರ್ - ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ರೋಚಕ ಜಯ

ವಿರಾಟ್ ಕೊಹ್ಲಿಯವರ ಭರ್ಜರಿ ಶತಕ (135) ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 350 ರನ್‌ಗಳ ಗುರಿ ಬೆನ್ನತ್ತಿದ ಹರಿಣಗಳ ಪಡೆ 332 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

Read Full Story

09:41 PM (IST) Nov 30

ಚಾಮರಾಜನಗ - ತಂದೆಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಮಲಗಿದ್ದ ಮಗನೂ ಸಾವು!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಣಗಳ್ಳಿದೊಡ್ಡಿ ಗ್ರಾಮದಲ್ಲಿ, ತಂದೆಯ ಅಂತ್ಯಕ್ರಿಯೆ ಮುಗಿಸಿದ ಮರುದಿನವೇ ಶಿಕ್ಷಕ ಮಗ ಸಾವನ್ನಪ್ಪಿದ್ದಾರೆ. ತಂದೆ ದೊಡ್ಡಲಿಂಗಯ್ಯ ಅವರ ನಿಧನದ ದುಃಖದಲ್ಲಿದ್ದ ಮಗ ಮಲ್ಲಣ್ಣ ಅವರೂ ಸಾವನ್ನಪ್ಪಿದ್ದು, ಈ ಹೃದಯವಿದ್ರಾವಕ ಘಟನೆಯಿಂದ ಇಡೀ ಗ್ರಾಮ ಮರುಗಿದೆ.

Read Full Story

08:39 PM (IST) Nov 30

ಕರ್ನಾಟಕ ಹೈಕೋರ್ಟ್‌ನಲ್ಲಿ ಕ್ಲಾಸಿಕ್ ಲೆಜೆಂಡ್ಸ್‌ಗೆ ಜಯ! 'Yezdi' ಟ್ರೇಡ್‌ಮಾರ್ಕ್ ಹಕ್ಕು ಬೊಮನ್ ಇರಾನಿ ಪರ ತೀರ್ಪು

'ಯೆಜ್ಡಿ' ಟ್ರೇಡ್‌ಮಾರ್ಕ್ ಹಕ್ಕು ವಿವಾದದಲ್ಲಿ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಕ್ಲಾಸಿಕ್ ಲೆಜೆಂಡ್ಸ್ ಕಂಪನಿಗೆ 'ಯೆಜ್ಡಿ' ಬ್ರಾಂಡ್ ಬಳಸಲು ಅನುಮತಿ ನೀಡಿದೆ. ಈ ಮೂಲಕ, ಏ ಸಹ-ಸಂಸ್ಥಾಪಕ ಬೊಮನ್ ಇರಾನಿ ಅವರ ಪರಂಪರೆಯ ಹಕ್ಕನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Read Full Story

08:09 PM (IST) Nov 30

ದೆಹಲಿ ದೇವಾಲಯ ಕೆಡವಿದರೆ, RSSಗೆ ₹300 ಕೋಟಿ ಎಲ್ಲಿಂದ ಬಂತೆಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ!

ದೆಹಲಿಯ ಜಂಡೇವಾಲನ್‌ನಲ್ಲಿರುವ 1500 ವರ್ಷಗಳಷ್ಟು ಹಳೆಯ ಗೋರಖನಾಥ್ ದೇವಾಲಯವನ್ನು ಸರ್ಕಾರಿ ಅಧಿಕಾರಿಗಳ ಪಾರ್ಕಿಂಗ್‌ಗಾಗಿ ನೆಲಸಮಗೊಳಿಸಲಾಗುತ್ತಿದೆ ಎಂಬ ಆರೋಪ. ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ₹300 ಕೋಟಿ ಮೌಲ್ಯದ RSS ಕಚೇರಿ ಹಣಕಾಸಿನ ಮೂಲ ಪ್ರಶ್ನಿಸಿದ್ದಾರೆ.

Read Full Story

07:08 PM (IST) Nov 30

ಉಡುಪಿ ಸಮೀಪ ಭೀಕರ ಅಪಘಾತ - ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಪಲ್ಟಿ, ಮೃತರ ಸಂಖ್ಯೆ 5ಕ್ಕೆ ಏರಿಕೆ

ಉಡುಪಿ ಜಿಲ್ಲೆಯ ಕಾಪು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದಿಂದ ಬಂದ ಟೆಂಪೋ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಐವರು ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
Read Full Story

06:50 PM (IST) Nov 30

Bigg Boss ಮನೆಗೆ ಐಶ್ವರ್ಯ ಸಿಂಧೋಗಿ ವೈಲ್ಡ್​ ಕಾರ್ಡ್​ ಎಂಟ್ರಿ? ನಟಿ ಕೊಟ್ಟ ಹಿಂಟ್​ ಏನು ಕೇಳಿ!

ಬಿಗ್‌ ಬಾಸ್‌ 11ರ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ ಅವರ ಸ್ನೇಹದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚೆಗೆ ಶಿಶಿರ್ ಅವರ ತಂದೆಯ ಹುಟ್ಟುಹಬ್ಬದ ಡಿನ್ನರ್ ಪಾರ್ಟಿಯಲ್ಲಿ ಐಶ್ವರ್ಯ ಪಾಲ್ಗೊಂಡಿದ್ದು, ಇವರಿಬ್ಬರ ಮದುವೆಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.
Read Full Story

06:39 PM (IST) Nov 30

ತಾಳಿ ಕಟ್ಟುವ ಶುಭ ವೇಳೆ ಹಾರ್ಟ್ ಅಟ್ಯಾಕ್‌; ಅಪ್ಪನ ಸಾವಿನಿಂದ ಸೂತಕದ ಮನೆಯಾದ ಮದುವೆ ಮಂಟಪ!

ರಾಯಚೂರಿನ ಸಿಂಧನೂರಿನಲ್ಲಿ, ಮಗನ ಮದುವೆಯ ಸಂಭ್ರಮದಲ್ಲಿದ್ದ ತಂದೆ ಶರಣಯ್ಯಸ್ವಾಮಿ (55) ಅವರು ಮಾಂಗಲ್ಯ ಧಾರಣೆಗೆ ಕೆಲವೇ ಗಂಟೆಗಳಿರುವಾಗ ಹೃದಯಾಘಾತದಿಂದ ನಿಧನರಾದರು. ಈ ದುರಂತದಿಂದಾಗಿ, ಅದ್ದೂರಿಯಾಗಿ ನಡೆಯಬೇಕಿದ್ದ ಮದುವೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.
Read Full Story

05:55 PM (IST) Nov 30

ರಾಜ್ಯ ಸರ್ಕಾರದ ಪರಿಸ್ಥಿತಿ ಬಹಳ ಚೆನ್ನಾಗಿದೆ - ದಿನೇಶ್ ಗುಂಡೂರಾವ್,! ಕೇಂದ್ದ! ವಿರುದ್ಧ ವಾಗ್ದಾಳಿ

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಮೆಕ್ಕೆಜೋಳ ನೀತಿಯನ್ನು ಟೀಕಿಸಿದ ಅವರು, ಮಂಗನ ಕಾಯಿಲೆಗೆ ಲಸಿಕೆ ಅಭಿವೃದ್ಧಿ, ಬಾಣಂತಿ ಸಾವು ಪ್ರಕರಣ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Read Full Story

05:53 PM (IST) Nov 30

ಸಂಬಳ ಕೊಡದ ಮಾಲೀಕನಿಗೆ ಬುದ್ಧಿ ಕಲಿಸಲು, ಅನ್ನ ಹಾಕಿದ ಲಾರಿಗೆ ಬೆಂಕಿ ಇಟ್ಟ ಚಾಲಕ!

ಕಳೆದ ಎರಡು-ಮೂರು ತಿಂಗಳುಗಳಿಂದ ಸಂಬಳ ನೀಡದ ಕಾರಣಕ್ಕೆ ಕುಪಿತಗೊಂಡ ಲಾರಿ ಚಾಲಕನೊಬ್ಬ, ಬೆಂಗಳೂರಿನ ಸೋಮನಹಳ್ಳಿ ಟೋಲ್ ಬಳಿ ತನ್ನ ಮಾಲೀಕನ ಲಾರಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story

05:36 PM (IST) Nov 30

ಶೇಷಾದ್ರಿಪುರಂ ಕೊಲೆ ಪ್ರಕರಣ - ತಂಗಿಗಾಗಿ ಅಕ್ಕನ ಹತ್ಯೆಗೈದ ಆರೋಪಿ ಬಂಧನ

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದ ಶರಣಮ್ಮ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮದುವೆ ಪ್ರಸ್ತಾಪಕ್ಕೆ ಸಂಬಂಧಿಸಿದ ಆಘಾತಕಾರಿ ಕಾರಣವನ್ನು ಪತ್ತೆಹಚ್ಚಿದ್ದಾರೆ. ಮೃತಳ ತಂಗಿಯನ್ನು ಪ್ರೀತಿಸುತ್ತಿದ್ದ ಆರೋಪಿ, ಆಕೆಯ ವಿಳಾಸ ನೀಡದಿದ್ದಕ್ಕೆ ಅಕ್ಕ ಶರಣಮ್ಮಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 

Read Full Story

05:25 PM (IST) Nov 30

Bigg Bossನಲ್ಲಿ ರಕ್ಷಿತಾ ಶೆಟ್ಟಿಗೆ ಕನ್ನಡ ಪರೀಕ್ಷೆ - ​ಸಿಂಹದ ಬಗ್ಗೆ ಮಾತನಾಡಿ ಸುದೀಪ್​ರನ್ನೂ ಸುಸ್ತು ಮಾಡಿದ ಪುಟ್ಟಿ!

ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿಯವರ ಕನ್ನಡ ಭಾಷೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ, ಮನೆಯಲ್ಲಿ ಅವರಿಗೆ ಸಿಂಹದ ಬಗ್ಗೆ ಓದುವ ಟಾಸ್ಕ್ ನೀಡಲಾಯಿತು, ಅವರ ಓದುವ ಶೈಲಿ ಮತ್ತು ತಡಬಡಾಯಿಸುವಿಕೆ ಎಲ್ಲರಿಗೂ, ವಿಶೇಷವಾಗಿ ಸುದೀಪ್ ಅವರಿಗೂ ನಗುವಿನ ಹೊನಲು ಹರಿಸಿತು.

Read Full Story

05:13 PM (IST) Nov 30

ಸಿಎಂ-ಡಿಸಿಎಂ 'ಬ್ರೇಕ್ ಫಾಸ್ಟ್' ಮಾಡಿ, ಎಲ್ಲ ಬ್ರೇಕ್ ಮಾಡಿದ್ದಾರೆ! ಅಭಿವೃದ್ಧಿ ಕಡೆ ಗಮನ ಕೊಡಿ - ವಚನಾನಂದ ಶ್ರೀ ಚಾಟಿ ಏಟು

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರಿಗೆ ಆಂತರಿಕ ಸಂಘರ್ಷ ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಗಮನ ನೀಡುವಂತೆ ಸಲಹೆ ನೀಡಿದ್ದಾರೆ. ಜೊತೆಗೆ, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿದರು..

Read Full Story

04:52 PM (IST) Nov 30

ಸಿಂಧನೂರು ಬಳಿ ಭೀಕರ ಅಪಘಾತ - ಹುಲ್ಲು ತುಂಬಿದ ಟ್ರಾಕ್ಟರ್‌ಗೆ ಕಾರು ಡಿಕ್ಕಿ, ಉಪನ್ಯಾಸಕಿ ಸಾವು!

ರಾಯಚೂರು ಜಿಲ್ಲೆಯ ಸಿಂಧನೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪನ್ಯಾಸಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದುವೆ ಮುಗಿಸಿ ವಾಪಸಾಗುತ್ತಿದ್ದಾಗ ಹುಲ್ಲು ತುಂಬಿದ ಟ್ರ್ಯಾಕ್ಟರ್‌ಗೆ ಅವರ ಕಾರು ಡಿಕ್ಕಿ ಹೊಡೆದಿದ್ದು, ಪತಿ ಮತ್ತು ಮಕ್ಕಳು ಗಾಯಗೊಂಡಿದ್ದಾರೆ. 

Read Full Story

04:40 PM (IST) Nov 30

Amruthadhaare - ಮನೆಬಿಟ್ಟು ಬಂದ ಭಾಗ್ಯಮ್ಮ ಮೊಮ್ಮಕ್ಕಳ ಕಣ್ಣಿಗೆ ಬೀಳ್ತಾಳಾ? ಗೌತಮ್​-ಭೂಮಿಕಾ ಒಂದಾಗಲು ಕೈಜೋಡಿಸ್ತಾಳಾ?

ಗೌತಮ್ ಮತ್ತು ಭೂಮಿಕಾಳ ರಹಸ್ಯವನ್ನು ಆನಂದ್ ದಂಪತಿ ಮಾತನಾಡುತ್ತಿರುವುದನ್ನು ಭಾಗ್ಯಮ್ಮ ಕೇಳಿಸಿಕೊಂಡು ಮನೆ ಬಿಟ್ಟಿದ್ದಾಳೆ. ಇತ್ತ ಮಿಂಚು ಮತ್ತು ಆಕಾಶ್​ ಅಪ್ಪ-ಅಮ್ಮನನ್ನು ಹೇಗೆ ಒಂದು ಮಾಡುವುದು ಎಂದು ನೋಡುತ್ತಿದ್ದಾರೆ. ಭಾಗ್ಯಮ್ಮ ಮಕ್ಕಳ ಕಣ್ಣಿಗೆ ಬೀಳ್ತಾಳಾ? 

Read Full Story

04:09 PM (IST) Nov 30

Bigg Boss - ಹೀಗೆಲ್ಲಾ ಮಾಡಲು ಇಷ್ಟವಿಲ್ಲ, ನಾನೇ ಬಿಗ್​ಬಾಸ್​ ಮನೆಯಿಂದ ಹೊರ ಹೋಗ್ತೇನೆ - ಸ್ಪರ್ಧಿಯ ಶಾಕಿಂಗ್​ ಹೇಳಿಕೆ

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ, ಸ್ಪರ್ಧಿ ಒಬ್ಬರು ಅವರು ನಿಂದನೀಯ ಪದ ಬಳಕೆಯ ಆರೋಪ ಮತ್ತು ಇತರ ಸ್ಪರ್ಧಿಗಳೊಂದಿಗೆ ತೀವ್ರ ಜಗಳದ ನಂತರ ತಾವೇ ಶೋ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಅವರ ಈ ವರ್ತನೆಯು ಮನೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಯಾರವರು?

 

Read Full Story

03:59 PM (IST) Nov 30

ಚಿಕ್ಕಮಗಳೂರು ದತ್ತ ಜಯಂತಿ ಸಂಭ್ರಮಕ್ಕೆ ಕತ್ತರಿ - ಬ್ಯಾನರ್‌ಗಳನ್ನು ಕತ್ತರಿಸಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು!

ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಪ್ರಯುಕ್ತ ಹಿಂದೂ ಸಂಘಟನೆಗಳು ಅಳವಡಿಸಿದ್ದ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಹರಿದು ಹಾನಿಗೊಳಿಸಿದ್ದಾರೆ. ಈ ಘಟನೆಯು ನಗರದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದು, ಧಾರ್ಮಿಕ ಸೌಹಾರ್ದತೆ ಕದಡುವ ಯತ್ನದ ವಿರುದ್ಧ ಪೊಲೀಸರು ಸುಮೋಟೋ  ಕೇಸು ದಾಖಲಿಸಿದ್ದಾರೆ.

Read Full Story

03:28 PM (IST) Nov 30

ಗೆಳೆಯರೊಂದಿಗೆ ಟ್ರಿಪ್ ಹೋಗಿದ್ದಕ್ಕೆ ಬುದ್ಧಿವಾದ ಹೇಳಿದ ಅಣ್ಣ; ಭೀಷ್ಮ ಕೆರೆಗೆ ಹಾರಿ ಪ್ರಾಣಬಿಟ್ಟ ಚಂದ್ರಿಕಾ!

ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದಕ್ಕೆ ಮನೆಯವರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು, ಗದಗಿನ ಖಾಸಗಿ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಚಂದ್ರಿಕಾ ನಡುವಿನಮನಿ ಭೀಷ್ಮ ಕೆರೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸಹೋದರನ ಬುದ್ಧಿವಾದದಿಂದ ನೊಂದ ಯುವತಿ ಈ ದುಡುಕಿನ ನಿರ್ಧಾರ.

Read Full Story

03:06 PM (IST) Nov 30

ಫಿನಾಲೆಗೆ ಮುನ್ನವೇ Bigg Boss ಮನೆಗೆ ನಗುವಿನ ಹೊಳೆ ಹರಿಸಿದ ಸ್ಪರ್ಧಿಯೇ ಹೊರಬಿದ್ದಾಯ್ತು!

Bigg Boss ಮನೆಯಲ್ಲಿ ಕಾಮಿಡಿ ಮಾಡುವವರು ಇರಲೇಬೇಕು. ಯಾವಾಗಲೂ ಜಗಳ ಆಗುತ್ತಿದ್ದರೆ, ವೀಕ್ಷಕರಿಗೆ ನೋಡಲು ಬೇಸರ ಆಗುವುದು. ಆದರೆ ಈ ಬಾರಿ ಕಾಮಿಡಿ ಮಾಡುತ್ತಿರುವವರನ್ನೇ ಹೊರಗಡೆ ಕಳಿಸಿದ್ದಾರೆ. 

Read Full Story

02:49 PM (IST) Nov 30

ಕೋಟ್ಯಾಂತರ ರೂ. ಖರ್ಚು ಮಾಡಿ ಮದುವೆಯಾಗೋ ಟೈಮ್‌; ಸಾಮೂಹಿಕ ಮದುವೆಯಲ್ಲಿ ಮಗನ ಮದುವೆ ಮಾಡಿದ ಸಿಎಂ!

CM Mohan Yadav Son Abhimanyu Marraige: ಇಂದು ಮದುವೆಗೋಸ್ಕರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಬ್ಬ ಸಿಎಂ ಮಾತ್ರ ಸಾಮೂಹಿಕ ಮದುವೆಯಲ್ಲಿ ತಮ್ಮ ಮಗನ ಮದುವೆ ಮಾಡಿಸಿ, ಎಲ್ಲರಿಗೂ ಮಾದರಿ ಆಗಿದ್ದಾರೆ.

 

Read Full Story

02:29 PM (IST) Nov 30

BBK 12 - ಮನದಾಳದ ನೋವು ಹಂಚಿಕೊಳ್ಳುತ್ತಾ ಮನೆಯಲ್ಲಿನ ರಾಜಕೀಯ ರಿವೀಲ್ ಮಾಡಿದ ರಾಶಿಕಾ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಪ್ರಬಲ ಸ್ಪರ್ಧಿ ರಾಶಿಕಾ ಶೆಟ್ಟಿ, ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗುಳಿದಿದ್ದಾರೆ. ಮನೆಯೊಳಗಿನ ರಾಜಕೀಯದಿಂದಾಗಿ ಇತರ ಸ್ಪರ್ಧಿಗಳು ಸ್ಪಂದನಾಗೆ ಪಾಯಿಂಟ್ಸ್ ನೀಡಿದ್ದರಿಂದ ತಮಗೆ ಅವಕಾಶ ತಪ್ಪಿತು ಎಂದು ರಾಶಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story

01:55 PM (IST) Nov 30

ಇದ್ದಕ್ಕಿದ್ದಂತೆ ನಟ ಅಜಿತ್ ಯಾರ ಕಾಲಿಗೆ ಬಿದ್ರು ಗೊತ್ತಾ? ಏರ್‌ಪೋರ್ಟ್‌ನಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ!

ತಮಿಳು ಚಿತ್ರರಂಗದ ಪ್ರಮುಖ ನಟ ಅಜಿತ್ ಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ವಯಸ್ಸಾದವರೊಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read Full Story

01:25 PM (IST) Nov 30

ಹುಟ್ಟಿನಿಂದ ಶ್ರೀಮಂತಿಕೆಯನ್ನೇ ನೋಡದ ಉಮೇಶಣ್ಣನ ಕ್ಯಾಸೆಟ್‌ ನಾನು ರಿಲೀಸ್ ಮಾಡ್ತೇನೆ; ಗಿರಿಜಾ ಲೋಕೇಶ್

ಹಿರಿಯ ನಟ ಉಮೇಶ್ ಅವರ ನಿಧನಕ್ಕೆ ನಟಿ ಗಿರಿಜಾ ಲೋಕೇಶ್ ಸಂತಾಪ ಸೂಚಿಸಿದ್ದು, ಅವರ ಕಷ್ಟದ ಜೀವನವನ್ನು ಸ್ಮರಿಸಿದ್ದಾರೆ. ಜೀವನದುದ್ದಕ್ಕೂ ಆರ್ಥಿಕ ಸಂಕಷ್ಟದಲ್ಲಿದ್ದ ಉಮೇಶ್, ಕೊನೆಯ ದಿನಗಳಲ್ಲಿ ಚಿತ್ರರಂಗದಿಂದ ನಿರ್ಲಕ್ಷಿಸಲ್ಪಟ್ಟಿದ್ದರು ಎಂದು ಅವರ ಒಡನಾಡಿಗಳು ನೋವು ಹಂಚಿಕೊಂಡಿದ್ದಾರೆ.
Read Full Story

01:24 PM (IST) Nov 30

ಪ್ರಭಾಸ್ 'ಸ್ಪಿರಿಟ್' ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟನ ಪತ್ನಿ? ವಂಗಾ ಪ್ಲಾನಿಂಗ್ ನೆಕ್ಸ್ಟ್ ಲೆವೆಲ್!

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ 'ಸ್ಪಿರಿಟ್' ಸಿನಿಮಾ ಸೆಟ್ಟೇರಿದೆ. ಈ ಬೃಹತ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟಿಯೊಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯಿರಿ.

Read Full Story

12:56 PM (IST) Nov 30

ಕೊನೆಗೂ ರಾಜಮೌಳಿ 'ವಾರಣಾಸಿ' ಚಿತ್ರದ ಹೆಸರು ಬದಲು, ಹೊಸ ಟೈಟಲ್ ಇದೇ.. ಇಲ್ಲಿದೆ 2 ಭಾಗಗಳ ಬಗ್ಗೆ ಅಪ್‌ಡೇಟ್!

ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ವಾರಣಾಸಿ' ಚಿತ್ರದ ಟೈಟಲ್ ಬದಲಾಗಿದೆ. ಇತ್ತೀಚೆಗೆ ಹೆಸರಿನ ಬಗ್ಗೆ ವಿವಾದ ಎದ್ದಿದ್ದರಿಂದ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ.

Read Full Story

12:36 PM (IST) Nov 30

ನಿಮಗೆ ಬೇಕಾದ ಉತ್ತರ ಬೇಕಿದ್ರೆ ಪ್ರಶ್ನೆ ಯಾಕೆ ಕೇಳಬೇಕು? ಕಾವ್ಯಾ ಅಭಿಪ್ರಾಯ ಬದಲಿಸಿದ್ರಾ ಸುದೀಪ್?

ಬಿಗ್‌ಬಾಸ್ ವೀಕೆಂಡ್ ಸಂಚಿಕೆಯಲ್ಲಿ, ಅತಿಥಿಗಳು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದರು ಎಂಬ ಕಾವ್ಯಾ ಅವರ ಅಭಿಪ್ರಾಯವನ್ನು ಸುದೀಪ್ ಪ್ರಶ್ನಿಸಿದ್ದಾರೆ. ಸುದೀಪ್ ಅವರ ಮಧ್ಯಪ್ರವೇಶದಿಂದ ಕಾವ್ಯಾ ತಮ್ಮ ಹೇಳಿಕೆಯನ್ನು ಬದಲಿಸಿದರೇ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

Read Full Story

12:28 PM (IST) Nov 30

ನಿಮ್ಮ ಆಯ್ಕೆಯ ಪಾರ್ಟ್ನರ್ 'ಮೇಕ್ ಯೂ or ಬ್ರೇಕ್‌ ಯೂ' ಎಂದ ರಶ್ಮಿಕಾ ಮಂದಣ್ಣ; ನೆಟ್ಟಿಗರು ಏನಂದ್ರು?

ಈ ಮೊದಲೊಮ್ಮೆ ಅವರು ತಮ್ಮ ತಂಗಿಯ ಬಗ್ಗೆ ಮಾತನ್ನಾಡಿದ್ದು ಭಾರೀ ವೈರಲ್ ಆಗಿತ್ತು. ಇದೀಗ ಅವರು ಪ್ರತಿಯೊಬ್ಬರ 'ಲೈಫ್ ಪಾರ್ಟ್ನರ್' ಬಗ್ಗೆ ಮಾತನ್ನಾಡಿದ್ದಾರೆ. ಅದೀಗ ಸಖತ್ ವೈರಲ್ ಆಗಿದೆ. ಹಾಗಿದ್ದರೆ ರಶ್ಮಿಕಾ ಮಂದಣ್ಣ ಅವರು ಜೀವನದಲ್ಲಿ 'ಪಾರ್ಟ್ನರ್' ಪ್ರಾಮುಖ್ಯತೆ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..

Read Full Story

12:25 PM (IST) Nov 30

ಮೆಡಿಕಲ್‌ ಸಿಬ್ಬಂದಿಗಳ ವೈಯಕ್ತಿಕ ಕಥೆ; ಒಳ್ಳೆಯ ರೇಟಿಂಗ್‌ ಪಡೆದು, ಕನ್ನಡದಲ್ಲಿ ರಿಲೀಸ್‌ ಆದ Heart Beat Series;

OTT Release This Week: ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿರೀಸ್‌ಗಳು ಮೂಡಿ ಬರುತ್ತಿವೆ. ಅದರಂತೆ ಹಾರ್ಟ್‌ಬೀಟ್‌ ಎನ್ನುವ ಸಿರೀಸ್‌ ಕೂಡ ಪ್ರಸಾರ ಆಗಿದೆ, ಇದರಲ್ಲಿ ಮೆಡಿಕಲ್‌ ಲೋಕ ಹಾಗೂ ಅಲ್ಲಿನ ಸಿಬ್ಬಂದಿಗಳ ಕುರಿತ ಕಥೆಯಿದೆ.

Read Full Story

12:23 PM (IST) Nov 30

ಸೀತೆ ಪಾತ್ರದ ನಂತರ ಸಾಯಿ ಪಲ್ಲವಿ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.. ರಜನಿಕಾಂತ್ ಚಿತ್ರಕ್ಕೆ ಇಷ್ಟೊಂದಾ?

ಸದ್ದಿಲ್ಲದೆ ಚಿತ್ರರಂಗದಲ್ಲಿ ಸಾಯಿ ಪಲ್ಲವಿ ಮುನ್ನುಗ್ಗುತ್ತಿದ್ದಾರೆ. ಯಾವುದೇ ಅಬ್ಬರವಿಲ್ಲದೆ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ. ತಂಡೇಲ್ ಬೆಡಗಿ ತನ್ನ ಸಂಭಾವನೆಯನ್ನು ಕೂಡ ಅತಿಯಾಗಿ ಹೆಚ್ಚಿಸಿದ್ದಾರಂತೆ. ರಜನಿಕಾಂತ್ ಸಿನಿಮಾಗೆ ಎಷ್ಟು ತೆಗೆದುಕೊಳ್ಳುತ್ತಿದ್ದಾರೆ ಗೊತ್ತಾ?

Read Full Story

12:21 PM (IST) Nov 30

Bigg Boss - ಶನಿವಾರ ಕಮ್ಮಿ ಬಟ್ಟೆ ಹಾಕೋದಾ? ಮೋಕ್ಷಿತಾ ಪೈಯನ್ನು ತಬ್ಬಿಬ್ಬು ಮಾಡಿದ Rakshita Shetty

ಬಿಗ್‌ಬಾಸ್ ಮನೆಯಲ್ಲಿ ಜನಪ್ರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದಲೇ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಸಹ ಸ್ಪರ್ಧಿ ಮೋಕ್ಷಿತಾ ಪೈ ಅವರೊಂದಿಗೆ ವಾರಾಂತ್ಯದ ಉಡುಗೆಯ ಬಗ್ಗೆ ಮಾತನಾಡುತ್ತಾ, 'ಕಡಿಮೆ ಡ್ರೆಸ್' ಎಂದು ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story

12:15 PM (IST) Nov 30

ಆಶಿಕಾ ರಂಗನಾಥ್ ಸಂಬಂಧಿ ಅಚಲಾ ಆತ್ಮ*ಹತ್ಯೆ; ಪ್ರೇಮಿಯಿಂದ ದೈಹಿಕ ಸಂಪರ್ಕ ಒತ್ತಡಕ್ಕೆ ಬೇಸತ್ತು ಸಾವು!

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ, ಇಂಜಿನಿಯರಿಂಗ್ ಪದವೀಧರೆ ಅಚಲಾ ಬೆಂಗಳೂರಿನಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಯುವಕ ಮಯಾಂಕ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

Read Full Story

11:57 AM (IST) Nov 30

December Release - ವರ್ಷಾಂತ್ಯದಲ್ಲಿ ರಿಲೀಸ್‌ ಆಗುತ್ತಿರುವ ಭರ್ಜರಿ ಮನರಂಜನೆ ಕೊಡುವ ಸಿನಿಮಾಗಳು

Movies Release List: 2025ರ ಡಿಸೆಂಬರ್ ಬಂದಿದೆ. ಈ ಬಾರಿ ವರ್ಷದ ಅಂತ್ಯ ಧಮಾಕಾದಿಂದ ಕೂಡಿರಲಿದೆ. ಹೌದು, ಒಂದಕ್ಕಿಂತ ಒಂದು ಸೂಪರ್ ಸಿನಿಮಾಗಳು ರಿಲೀಸ್ ಆಗಲಿವೆ. ಡಿಸೆಂಬರ್‌ನಲ್ಲಿ ಮೊದಲು ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ಜೊತೆಗೆ ಕೆಲವು ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗಳು ಕೂಡಾ ಬರ್ತಿವೆ.

Read Full Story

11:50 AM (IST) Nov 30

ನಾಯಕತ್ವ ಗೊಂದಲ - ಸೋನಿಯಾ ಗಾಂಧಿ ಓಕೆ ಎಂದರೆ ಸಿದ್ದು, ಡಿಕೆಶಿಗೆ ದೆಹಲಿಗೆ ಬುಲಾವ್‌?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಶರತ್‌ ಬಚ್ಚೇಗೌಡ ಅವರೊಂದಿಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸಭೆ ನಡೆಸಿದ್ದಾರೆ.

Read Full Story

11:47 AM (IST) Nov 30

ಕೊನೆಗೂ ಸೀರೆ ಬದಲಿಸಿ, ಆಭರಣ ಧರಿಸಿ ಬಂದ ಕ್ಯೂಟ್​ ದೆವ್ವ - ಭೂತದ ಫೋಟೋಶೂಟ್​ ನೋಡಿರುವಿರಾ?

'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಕ್ಯೂಟ್ ದೆವ್ವ ಅಂಬಿಕಾ ಪಾತ್ರದಿಂದ ಖ್ಯಾತರಾದವರು ನಟಿ ನೀತಾ ಅಶೋಕ್. 'ವಿಕ್ರಾಂತ್ ರೋಣ' ಚಿತ್ರದ ಮೂಲಕ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿರುವ ಇವರು, ಇತ್ತೀಚೆಗೆ ಸತೀಶ್ ಎಂಬುವವರನ್ನು ವಿವಾಹವಾಗಿದ್ದಾರೆ.  

Read Full Story

11:41 AM (IST) Nov 30

ಧರ್ಮಾಧಿಕಾರಿಗಳು ಒಬ್ಬರ ಪರ ಅಭಿಪ್ರಾಯ ನೀಡಬಾರದು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ರಾಜಕಾರಣಿಗಳಷ್ಟೇ ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Read Full Story

11:15 AM (IST) Nov 30

Liver cancerನಿಂದ ಹಿರಿಯ ನಟ ಉಮೇಶ್ ನಿಧನ; ನಿರ್ಲಕ್ಷಿಸಬಾರದ ಲಿವರ್ ಕ್ಯಾನ್ಸರ್‌ನ 5 ಆರಂಭಿಕ ಲಕ್ಷಣಗಳಿವು

Umesh liver cancer:  ಹಿರಿಯ ನಟ ಉಮೇಶ್ ಭಾನುವಾರ ಬೆಳಗ್ಗೆ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅವರು 4 ನೇ ಹಂತದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆದ್ದರಿಂದ ಎಂದಿಗೂ ನಿರ್ಲಕ್ಷಿಸಬಾರದ ಲಿವರ್ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳನ್ನು ನೋಡೋಣ. 

Read Full Story

More Trending News