MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಆಶಿಕಾ ರಂಗನಾಥ್ ಸಂಬಂಧಿ ಅಚಲಾ ಆತ್ಮ*ಹತ್ಯೆ; ಪ್ರೇಮಿಯಿಂದ ದೈಹಿಕ ಸಂಪರ್ಕ ಒತ್ತಡಕ್ಕೆ ಬೇಸತ್ತು ಸಾವು!

ಆಶಿಕಾ ರಂಗನಾಥ್ ಸಂಬಂಧಿ ಅಚಲಾ ಆತ್ಮ*ಹತ್ಯೆ; ಪ್ರೇಮಿಯಿಂದ ದೈಹಿಕ ಸಂಪರ್ಕ ಒತ್ತಡಕ್ಕೆ ಬೇಸತ್ತು ಸಾವು!

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ, ಇಂಜಿನಿಯರಿಂಗ್ ಪದವೀಧರೆ ಅಚಲಾ ಬೆಂಗಳೂರಿನಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಯುವಕ ಮಯಾಂಕ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

2 Min read
Author : Sathish Kumar KH
Published : Nov 30 2025, 12:15 PM IST
Share this Photo Gallery
  • FB
  • TW
  • Linkdin
  • Whatsapp
16
ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ
Image Credit : Asianet News

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ

ಹಾಸನ/ಬೆಂಗಳೂರು (ನ.30): ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿಯಾಗಿರುವ ಯುವತಿಯೊಬ್ಬಳು ಪ್ರೀತಿಸಿದ ಯುವಕನಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ವರದಿಯಾಗಿದೆ. ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದಿರುವುದು ಯುವತಿಯ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

26
ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ
Image Credit : Asianet News

ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ

ಹಾಸನ ಮೂಲದ, ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾದ ಅಚಲಾ (22) ಆತ್ಮ*ಹತ್ಯೆಗೆ ಶರಣಾದ ಯುವತಿ. ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದ ಅಚಲಾ, ನವೆಂಬರ್ 21ರಂದು ಬೆಂಗಳೂರಿನ ಪಾಂಡುರಂಗ ನಗರದ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Related image1
Now Playing
ಗತವೈಭವ ಸಾಂಗ್ ಮೆಚ್ಚಿದ ಶಿವರಾಜ್‌ಕುಮಾರ್ – ದುಷ್ಯಂತ್-ಆಶಿಕಾ ಜೋಡಿ ಹಾಡಿಗೆ ಶಿವಣ್ಣನಿಂದ ಶ್ಲಾಘನೆ!
Related image2
ಪೌರಾಣಿಕ ಪಾತ್ರ ಮಾಡಬೇಕೆಂಬ ಕನಸು ಈ ಸಿನಿಮಾದಲ್ಲಿ ನನಸಾಯಿತು: ಆಶಿಕಾ ರಂಗನಾಥ್‌ ಸಂದರ್ಶನ
36
ದೈಹಿಕ ಸಂಬಂಧಕ್ಕೆ ಪೀಡಿಸಿ ಮೋಸ
Image Credit : Asianet News

ದೈಹಿಕ ಸಂಬಂಧಕ್ಕೆ ಪೀಡಿಸಿ ಮೋಸ

ಅಚಲಾ ಅವರು ತಮ್ಮ ದೂರದ ಸಂಬಂಧಿ, ಹಾಸನ ನಗರದ ನಿವಾಸಿಯಾದ ಮಯಾಂಕ್ ಎಂಬಾತನೊಂದಿಗೆ ಸ್ನೇಹ ಹೊಂದಿದ್ದರು. ಮಯಾಂಕ್ ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ಅಚಲಾ ಅವರನ್ನು ಸುತ್ತಾಡಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಮದುವೆಗೂ ಮುನ್ನವೇ ದೈಹಿಕ ಸಂಬಂಧಕ್ಕೆ ಪದೇ ಪದೇ ಪೀಡಿಸಿದ್ದಾನೆ ಎನ್ನಲಾಗಿದೆ.

46
ಈತ ಡ್ರಗ್ ಅಡಿಕ್ಟ್ ಕೂಡ ಆಗಿದ್ದ
Image Credit : Asianet News

ಈತ ಡ್ರಗ್ ಅಡಿಕ್ಟ್ ಕೂಡ ಆಗಿದ್ದ

ಪ್ರೇಮಿಯಿಂದ ದೈಹಿಕ ಸಂಪರ್ಕದ ಒತ್ತಾಯಕ್ಕೆ ಅಚಲಾ ಒಪ್ಪದಿದ್ದಾಗ, ಆರೋಪಿ ಮಯಾಂಕ್ ಆಕೆಗೆ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈತ ಡ್ರಗ್ ಅಡಿಕ್ಟ್ ಕೂಡ ಆಗಿದ್ದ ಎಂದು ಆರೋಪಿಸಲಾಗಿದ್ದು, ಪದೇ ಪದೇ ಫೋನ್‌ಮಾಡಿ ಕಿರುಕುಳ ನೀಡುತ್ತಿದ್ದರಿಂದಲೇ ಮಗಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ತಾಯಿ ಕಣ್ಣೀರು ಹಾಕಿದ್ದಾರೆ.

56
ಆರೋಪಿಗಳ ಬಂಧನಕ್ಕೆ ಆಗ್ರಹ
Image Credit : Asianet News

ಆರೋಪಿಗಳ ಬಂಧನಕ್ಕೆ ಆಗ್ರಹ

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಯಾಂಕ್ ಹಾಗೂ ಆತನ ತಾಯಿ ಮೈನಾ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 'ಘಟನೆ ನಡೆದು 10 ದಿನಗಳೇ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ನನ್ನ ಮಗಳ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು' ಎಂದು ಅಚಲಾ ಅವರ ಪೋಷಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

66
ನಟಿ ಆಶಿಕಾ ರಂಗನಾಥ್ ಸಂಬಂಧಿ
Image Credit : Asianet News

ನಟಿ ಆಶಿಕಾ ರಂಗನಾಥ್ ಸಂಬಂಧಿ

ಮೃತ ಅಚಲಾ ಅವರು ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾಗಿದ್ದರಿಂದ, ಈ ಪ್ರಕರಣವು ಮತ್ತಷ್ಟು ಮಹತ್ವ ಪಡೆದಿದೆ. ಅಮಾಯಕ ಯುವತಿಯ ಸಾವಿಗೆ ನ್ಯಾಯ ಒದಗಿಸಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಪ್ರೀತಿಯ ಹೆಸರಿನಲ್ಲಿ ವಂಚಿಸಿ, ಯುವತಿಯ ಜೀವಕ್ಕೆ ಕುತ್ತು ತಂದಿರುವ ಆರೋಪಿಗಳ ಬಂಧನ ಯಾವಾಗ ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಹಾಸನ
ಕರ್ನಾಟಕ ಸುದ್ದಿ
ಆಶಿಕಾ ರಂಗನಾಥ್
ಕ್ರೈಮ್ ನ್ಯೂಸ್
ಪ್ರೀತಿ

Latest Videos
Recommended Stories
Recommended image1
ಪ್ರತ್ಯೇಕ ಪ್ರಕರಣ: ಕೆರೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಶವ ಪತ್ತೆ; ಅಪಘಾತದಲ್ಲಿ ಬೈಕ್ ಸವಾರ ಸಾವು
Recommended image2
ಚನ್ನಪಟ್ಟಣ ತಾಲೂಕಿನಲ್ಲಿ ಸಂಜೆ ಆದ್ರೆ ಸಾಕು ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟೋ ತಹಶೀಲ್ದಾರ್!
Recommended image3
ಪ್ರತಿ ಮಂಗಳವಾರ ಇಡೀ ಊರಿಗೆ ಊರೇ ಖಾಲಿ ಖಾಲಿ; ಮನೆ, ಅಂಗಡಿ-ಮುಗ್ಗಟ್ಟುಗಳಿಗೆ ಬೀಗ!
Related Stories
Recommended image1
Now Playing
ಗತವೈಭವ ಸಾಂಗ್ ಮೆಚ್ಚಿದ ಶಿವರಾಜ್‌ಕುಮಾರ್ – ದುಷ್ಯಂತ್-ಆಶಿಕಾ ಜೋಡಿ ಹಾಡಿಗೆ ಶಿವಣ್ಣನಿಂದ ಶ್ಲಾಘನೆ!
Recommended image2
ಪೌರಾಣಿಕ ಪಾತ್ರ ಮಾಡಬೇಕೆಂಬ ಕನಸು ಈ ಸಿನಿಮಾದಲ್ಲಿ ನನಸಾಯಿತು: ಆಶಿಕಾ ರಂಗನಾಥ್‌ ಸಂದರ್ಶನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved