ಬೆಂಗಳೂರು: ನೈಸ್ ರಸ್ತೆಯನ್ನು ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್)ಗೆ ಸಂಪರ್ಕಿಸುವ ಪ್ರಸ್ತಾವಿತ ನೈಸ್-ಪಿಆರ್‌ಆರ್ ಇಂಟಿಗ್ರೇಶನ್ ಲಿಂಕ್ ರಸ್ತೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಮಾದಾವರ, ಶ್ರೀಕಂಠ ಪುರ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ ಹಾಗೂ ತಮ್ಮೇನಹಳ್ಳಿ ಭಾಗದ ನಿವಾಸಿಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದರು.
ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ನೂರಾರು ನಿವಾಸಿಗಳು ಪಾಲ್ಗೊಂಡು, ಪ್ರಸ್ತಾವಿತ ರಸ್ತೆ ಯೋಜನೆಯಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಲಿಂಕ್ ರಸ್ತೆ ನಿರ್ಮಾಣದಿಂದ ಈಗಾಗಲೇ ಅಭಿವೃದ್ಧಿಯಾಗಿರುವ ವಸತಿ ಬಡಾವಣೆ ಗಳು ಹಾಗೂ ಸಾವಿರಾರು ಮನೆ, ನಿವೇಶನಗಳು ಹಾನಿಗೊಳ ಗಾಗುವ ಸಾಧ್ಯತೆ ಇದೆ. ಯೋಜನೆ ಜಾರಿ ಯಾದರೆ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮನೆ, ನಿವೇಶನ ಮತ್ತು ಭೂಮಿ ಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಈ.ಕೃಷ್ಣಪ್ಪ, ಜವರಾಯಿಗೌಡ, ಅಂದಾನಪ್ಪ, ರಮೇಶ್‌ಗೌಡ, ಮುನಿಸ್ವಾಮಪ್ಪ, ವೇಣುಗೋಪಾಲ್, ಕಿರಣ್ ಕುಮಾರ್, ವೇಣು ಕುಮಾರ್, ಅಪ್ಪಿರಾಜು, ಶ್ರೀನಿವಾಸ್, ಚಂದ್ರಶೇಖರ್, ಮಂಜುನಾಥ್ ಸೇರಿ ಹಲವರು ಇದ್ದರು.
08:31 AM (IST) Sep 28
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಓಎಂಆರ್ ಶೀಟ್ ಟ್ಯಾಂಪರಿಂಗ್ ತಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತ್ರಿಪಲ್ ಲೇಯರ್ OMR ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಒಂದು ಕೆಇಎಗೆ, ಇನ್ನೊಂದು ಅಭ್ಯರ್ಥಿಗೆ, 3ನೇಯದ್ದು ಯಾರಿಗೆ? ಇದರ ಸಂಪೂರ್ಣ ವಿವರ ಇಲ್ಲಿದೆ.
08:29 AM (IST) Sep 28
ಬಿಗ್‌ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಗಾನವಿ ಗೌಡ ಇಬ್ಬರು ಸ್ಪರ್ಧಿಗಳ ಸ್ಥಾನವನ್ನು ಹೈಜಾಕ್ ಮಾಡಿದ್ದಾರೆ. ಗಾನವಿ ತಮ್ಮ ಅಧಿಕಾರ ಬಳಸಿ ಇಬ್ಬರು ಸ್ಪರ್ಧಿಗಳನ್ನು ಮತ್ತೆ ವಿಮಾನಕ್ಕೆ ಕಳುಹಿಸಿದ್ದಾರೆ.
08:03 AM (IST) Sep 28
08:01 AM (IST) Sep 28
ನಟ ವಿಷ್ಣುವರ್ಧನ ಅವರ 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ಪತ್ರಕರ್ತರು ಅವರ ಒಡನಾಟವನ್ನು ಸ್ಮರಿಸಿದರು. ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿಯಿದ್ದರೂ, ಅಭಿಮಾನಿಗಳು ಮತ್ತು ಸಿನಿಮಾವನ್ನು ಕಳೆದುಕೊಳ್ಳುವ ಭೀತಿಯಿಂದ ಆ ಕ್ಷೇತ್ರಕ್ಕೆ ಬರಲಿಲ್ಲ. ಬದಲಾಗಿ ಅವರು ಲೌಕಿಕ ಮತ್ತು ದೈವಿಕ ವಿಚಾರಗಳತ್ತ ವಾಲಿದರು ಎಂದು ಸಂಪಾದಕರು ತಿಳಿಸಿದರು.
07:46 AM (IST) Sep 28
07:39 AM (IST) Sep 28
ಕೇರಳದ ಮಾದರಿಯಲ್ಲಿ ಕರ್ನಾಟಕ ಕರಾವಳಿಯಲ್ಲೂ ವಾಟರ್ ಮೆಟ್ರೋ ಆರಂಭಿಸಲು ಸರ್ಕಾರ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜೊತೆಗೆ, ಕರಾವಳಿ ಅಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾವಣೆ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ.
07:38 AM (IST) Sep 28
ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣದ ಮೂಲಕ ಜಲಸಂರಕ್ಷಣೆಯಲ್ಲಿ ಮಾದರಿಯಾಗಿದೆ. ಕೆರೆ ಪುನಃಶ್ಚೇತನ, ಇಂಗುಕೆರೆ ಹಾಗೂ ಮರುಪೂರಣ ಗುಂಡಿಗಳ ಮೂಲಕ 1,000 ಲಕ್ಷ ಲೀಟರ್‌ಗೂ ಅಧಿಕ ನೀರನ್ನು ಸಂರಕ್ಷಿಸಿದೆ.
07:26 AM (IST) Sep 28
07:24 AM (IST) Sep 28
ಬೆಂಗಳೂರಿನ ವಿಜಯನಗರದ ಮಾರುತಿ ಮಂದಿರದ ಬಸ್ ನಿಲ್ದಾಣಗಳು ಸಂಜೆಯಾಗುತ್ತಿದ್ದಂತೆ ಫುಡ್‌ಸ್ಟ್ರೀಟ್ ಆಗಿ ಮಾರ್ಪಡುತ್ತಿದ್ದು, ಪ್ರಯಾಣಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ. ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ, ಸಾರ್ವಜನಿಕರು ಪರದಾಡುವಂತಾಗಿದೆ.